Monday, January 24, 2022

MAAM ನೂತನ ಅಧ್ಯಕ್ಷರಾಗಿ ನವೀನ್ ಅಮ್ಮೆಂಬಳ, ಪ್ರ.ಕಾರ್ಯದರ್ಶಿಯಾಗಿ ಡಾ.ಸಫಿಯಾ ಆಯ್ಕೆ

ಮಂಗಳೂರು: ಮೀಡಿಯಾ ಅಲ್ಯೂಮ್ನಿ ಅಸೋಸಿಯೇಶನ್ ಆಫ್ ಮಂಗಳಗಂಗೋತ್ರಿ(ಮಾಮ್) ಇದರ ವಾರ್ಷಿಕ ಮಹಾಸಭೆ ಇತ್ತೀಚೆಗೆ ನಡೆದಿದ್ದು,

ಸಭೆಯಲ್ಲಿ ಮುಂದಿನ ಎರಡು ವರ್ಷಗಳ ಅವಧಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.


ಮಾಮ್ ನೂತನ ಅಧ್ಯಕ್ಷರಾಗಿ ನವೀನ್ ಅಮ್ಮೆಂಬಳ ಅವರು ಸರ್ವಾನುಮತದಿಂದ ಆಯ್ಕೆಯಾದರು. ಅಲ್ಲದೆ ಗೌರವಾಧ್ಯಕ್ಷರಾಗಿ ವೇಣು ಶರ್ಮ, ಪ್ರಧಾನ ಕಾರ್ಯದರ್ಶಿಯಾಗಿ ಡಾ.ಸಫಿಯಾ, ಕೋಶಾಧಿಕಾರಿಯಾಗಿ ಕೃಷ್ಣ ಕಿಶೋರ್,

ಉಪಾಧ್ಯಕ್ಷರಾಗಿ ಚಂದ್ರಶೇಖರ ಕುಳಮರ್ವ, ಕಾರ್ಯದರ್ಶಿಗಳಾಗಿ ಹರೀಶ್ ಮೋಟುಕಾನ ಮತ್ತು ಪ್ರಶಾಂತ್ ಸುವರ್ಣ, ಕಾರ್ಯಕ್ರಮ ಸಂಯೋಜಕರಾಗಿ ತಾರಾ ಆಯ್ಕೆಯಾದರು.


ಇನ್ನುಳಿದಂತೆ ಮಾಮ್ ಇನ್‌ಸ್ಪೈರ್ ಅವಾರ್ಡ್ ಸಂಚಾಲಕರಾಗಿ ಶರತ್ ಹೆಗ್ಡೆ ಕಡ್ತಲ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ವೇಣು ವಿನೋದ್ ಕೆ.ಎಸ್., ಸುರೇಶ್ ಪುದುವೆಟ್ಟು, ಕೃಷ್ಣ ಮೋಹನ ತಲೆಂಗಳ, ಸುರೇಶ್ ಡಿ. ಪಳ್ಳಿ, ಹರೀಶ ಕುಲ್ಕುಂದ, ವಿನೋದ್ ರಾಜ್ ಕೆ., ಮೇಘಲಕ್ಷ್ಮೀ, ಸಂತೋಷ್ ವರ್ಕಾಡಿ, ಅಹಮದ್ ಬಾವಾ, ಮಹಾಂತೇಶ್ ಹಿರೇಮಠ, ರಾಜೇಶ್ ಫೆರಾವೊ, ಧೀರಜ್ ಪೊಯ್ಯೆಕಂಡ ಆಯ್ಕೆಯಾದರು.

Hot Topics

ಕಿನ್ನಿಗೋಳಿ ಶಾಂಭವಿ ನದಿಯಲ್ಲಿನ ಅಕ್ರಮ ಮರಳುಗಾರಿಕೆ ಅಡ್ಡೆಗೆ ಅಧಿಕಾರಿಗಳ ದಾಳಿ..!

ಮಂಗಳೂರು : ಮಂಗಳೂರು ಹೊರವಲಯದ ಕಿನ್ನಿಗೋಳಿ ಸಮೀಪದ ಏಳಿಂಜೆ ಪಟ್ಟೆಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ಗಣಿಗಾರಿಕೆಗೆ ಮಂಗಳೂರು ಗಣಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.ಇಲ್ಲಿನ ಶಾಂಭವಿ ನದಿಯಲ್ಲಿ ಕಳೆದ ಹಲವು ವರ್ಷಗಳಿಂದ ರಾತ್ರಿ ಹಗಲೆನ್ನದೆ...

ಮಂಗಳೂರಿನ ಕುವರಿ ರೆಮೊನಾ ಇವೆಟ್ಟಾ ಪಿರೇರಾಗೆ ರಾಷ್ಟ್ರೀಯ ಬಾಲಪುರಸ್ಕಾರ ಪ್ರಶಸ್ತಿ

ಮಂಗಳೂರು: ಈ ಬಾರಿಯ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲಪುರಸ್ಕಾರ ಪ್ರಶಸ್ತಿ ಮಂಗಳೂರಿನ ರೆಮೊನಾ ಇವೆಟ್ಟಾ ಪಿರೇರಾ ಅವರಿಗೆ ದೊರೆತಿದೆ.ಸಾಂಸ್ಕೃತಿಕ ರಂಗದಲ್ಲಿ ಮಾಡಿದ ಸಾಧನೆಗೆ ಈ ಗೌರವ ಲಭಿಸಿದ್ದು, ಪುರಸ್ಕಾರವು ಒಂದು ಲಕ್ಷ ಮೊತ್ತ,...

ದಕ್ಷಿಣ ಕನ್ನಡ ಉಸ್ತುವಾರಿ ಸಚಿವರಾಗಿ ಸುನೀಲ್‌ ಕುಮಾರ್‌-ಉಡುಪಿಗೆ ಅಂಗಾರ ನೇಮಕ

ಮಂಗಳೂರು: ದಕ್ಷಿಣ ಕನ್ನಡ ಉಸ್ತುವಾರಿ ಸಚಿವರಾಗಿ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಸುನೀಲ್‌ ಕುಮಾರ್‌ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಲ್ಲಾ ಜಿಲ್ಲೆಗಳ...