ಹೊಸದಿಲ್ಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಪ್ರಧಾನಿ ಮೋದಿ ಇಂದು 71ನೇ ವಸಂತಕ್ಕೆ ಕಾಲಿಡುತ್ತಿದ್ದು, ಈ ಹಿನ್ನೆಲೆ ಹಲವು ಗಣ್ಯರು ಅವರಿಗೆ ಶುಭ ಕೋರಿದ್ದಾರೆ.
ಮೋದಿಯವರ ಜನ್ಮ ದಿನವನ್ನು ಐತಿಹಾಸಿಕ ದಿನವನ್ನಾಗಿಸಲು ಬಿಜೆಪಿ ಇಂದಿನಿಂದ 21 ದಿನಗಳ ಕಾಲ ‘ಸೇವೆ ಮತ್ತು ಸಮರ್ಪಣಾ ಅಭಿಯಾನ’ ಆರಂಭಿಸಿದೆ.
ಇನ್ನು ಈ ವಿಶೇಷ ಸಂದರ್ಭವನ್ನು ಮತ್ತಷ್ಟು ವಿಶಿಷ್ಟಗೊಳಿಸುವ ಸಲುವಾಗಿ ಯುಪಿ ಬಿಜೆಪಿ ಕಾಶಿಯಲ್ಲಿರುವ ವಾರಣಾಸಿಯ ಭಾರತ ಮಾತಾ ದೇವಸ್ಥಾನದಲ್ಲಿ 71,000 ದಿಯಾಗಳನ್ನು (ಮಣ್ಣಿನ ದೀಪಗಳನ್ನು) ಬೆಳಗಿಸಲಾಗುತ್ತದೆ.
ದೀಪಗಳನ್ನು ಬೆಳಗಿಸುವುದರ ಜೊತೆಗೆ, ಭಾರತೀಯ ಜನತಾ ಪಕ್ಷವು (ಬಿಜೆಪಿ) 14 ಕೋಟಿ ಪಡಿತರ ಕಿಟ್ಗಳನ್ನು ವಿತರಿಸಲು ಯೋಜಿಸಿದೆ.
ಇನ್ನು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿ ಶುಭಾಶಯ ಕೋರಿರುವ ರಾಮನಾಥ್ ಕೋವಿಂದ್,
ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಜನ್ಮದಿನದ ಶುಭಾಶಯಗಳು. ನಾನು ನಿಮ್ಮ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯವನ್ನು ಬಯಸುತ್ತೇನೆ.
ನಿಮ್ಮಲ್ಲಿರುವ ಸೇವಾ ಮನೋಭಾವದಿಂದ ರಾಷ್ಟ್ರ ಸೇವೆಯನ್ನು ಮುಂದುವರೆಸಿ ಎಂದು ಶುಭ ಹಾರೈಸಿದ್ದಾರೆ.