LATEST NEWS
ನಾರಾಯಣ ಗುರು ಟ್ಯಾಬ್ಲೋ ತಿರಸ್ಕರಿಸಿದ್ದನ್ನು ಖಂಡಿಸಿದ ದ.ಕ. ಜಿಲ್ಲಾ ಮುಸ್ಲಿಮ್ ಒಕ್ಕೂಟ
Published
3 years agoon
By
Adminಮಂಗಳೂರು: ಮಹತ್ವ ಪೂರ್ಣ ಜನವರಿ 26 ನೇ ದಿನದ ರಾಷ್ಟ್ರೀಯ ಹಬ್ಬವಾದ ಗಣ ರಾಜ್ಯೋತ್ಸವ ಸಮಾರಂಭದಲ್ಲಿ, ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧ ಚಿತ್ರದ ಟ್ಯಾ ಬ್ಲೋ ವಾಹನ ಸಂಚಲನ ಪ್ರದರ್ಶನವನ್ನು, ಪೆರೇಡ್‌ನಿಂದ ಅನರ್ಹಗೊಳಿಸಿದ ಕೇಂದ್ರ ಸರಕಾರದ ನಡೆ ತೀವ್ರ ವಿಷಾದನೀಯ.
ನಾರಾಯಣ ಗುರುಗಳು ದಕ್ಷಿಣ ಭಾರತದಲ್ಲಿ ಹಿಂದುಳಿದ ಜನತೆಗೆ ಧಾರ್ಮಿಕ,ಆದ್ಯಾತ್ಮಿಕ ಮತ್ತು ಆರಾಧನಾ ಕೇಂದ್ರಗಳ ಪ್ರವೇಶ ಹಕ್ಕುಗಳನ್ನು ಸ್ಥಾಪಿಸಿದ ಓರ್ವ ಸಮುದಾಯ ಮಹಾತ್ಮ ಮೇರು ವ್ಯಕ್ತಿ ಯಾಗಿದ್ದಾರೆ. ಅವರ ಒಂದೇ ಮತ, ಕುಲ, ದೇವ ಪ್ರತಿಪಾದನೆ ಜಾಗತಿಕ ಮನ್ನಣೆ ಹೊಂದಿದ ಒಂದು ಪ್ರಭಲ ಸಿದ್ಧಾಂತವಾಗಿದೆ.
ಆದುದರಿಂದ ನಾರಾಯಣ ಗುರುಗಳ ಸ್ತಬ್ಧ ಚಿತ್ರ ಗಣ ರಾಜ್ಯೋತ್ಸವ ಸಮಾರಂಭದಲ್ಲಿ ಸರ್ವ ರೀತಿಯಲ್ಲೂ ಕೂಡಾ ಅರ್ಹತೆ ಪಡೆಯಬೇಕಿತ್ತು. ಅವರು ಭಾರತದ ಆಧ್ಯಾತ್ಮಿಕ ಚರಿತ್ರೆಯ ಆಸ್ತಿ ಆಗಿದ್ದಾರೆ.
ಅವರ ಪ್ರತಿಪಾದನೆಯ ಮೌಲ್ಯಗಳು ಎಂದೆಂದಿಗೂ ಶಾಶ್ವತ. ಅವರ ಸ್ತಬ್ಧ ಚಿತ್ರ ಪ್ರದರ್ಶನ ಅರ್ಹತೆ ಪಡೆಯಲೇ ಬೇಕಾಗಿದೆ.
ಈ ಹಿಂದೆ ಚಾರಿತ್ರಿಕ ಸ್ವಾತಂತ್ರ ಹೋರಾಟಗಾರ ಹಜ್ರತ್ ಟಿಪ್ಪು ಸುಲ್ತಾನರ ಸ್ತಬ್ಧ ಚಿತ್ರ ಪ್ರದರ್ಶನ ಚಾಲನೆಯಲ್ಲಿ ಇತ್ತು, ಕ್ರಮೇಣ ಅಂತಹ ಪ್ರದರ್ಶನಗಳನ್ನೂ ಕೇಂದ್ರ ಸರಕಾರ ಇದೇ ರೀತಿ ಕೈಬಿಟ್ಟಿತ್ತು.
ಭಾರತದ ಮಹತ್ವ ಪೂರ್ಣ ಚಾರಿತ್ರಿಕ ಮತ್ತು ಆಧ್ಯಾತ್ಮೀಕ ವ್ಯಕ್ತಿಗಳ ಕಡೆಗಣನೆ ಈ ದೇಶದ ಜಾತ್ಯಾತೀತ ವೈಭವತೆಯನ್ನು ನಾಶ ಪಡಿಸುವ ಒಂದು ಷಡ್ಯಂತ್ರವಾಗಿದೆ. ಅದರ ಭಾಗವೇ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧ ಚಿತ್ರ ಪ್ರದರ್ಶನವನ್ನು ಪೆರೇಡ್ ನಿಂದ ಅನರ್ಹತೆ ಗೊಳಿಸಿ ಹೊರ ಹಾಕಲಾಗಿದೆ.
ಕೇಂದ್ರ ಸರಕಾರದ ಈ ನಡೆ ಜಾತ್ಯಾತೀತ ಮೌಲ್ಯಗಳ ಅವಹೇಳನವಾಗಿದೆ, ಮತ್ತು ಈ ವರ್ತನೆ ಖಂಡನೀಯ ಎಂದು ದ.ಕ. ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಕೆ.ಅಶ್ರಫ್ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.
DAKSHINA KANNADA
ಗೋವುಗಳ ಮೇಲಿನ ಪೈಶಾಚಿಕ ಕೃ*ತ್ಯ ಖಂಡಿಸಿ ಮಂಗಳೂರಿನಲ್ಲಿ ಪ್ರತಿಭಟನೆ
Published
29 minutes agoon
21/01/2025By
NEWS DESK4ಮಂಗಳೂರು : ಬೆಂಗಳೂರಿನ ಚಾಮರಾಜನಗರದಲ್ಲಿ ಹಿಂದುಗಳು ಆರಾಧಿಸುವ ಗೋಮಾತೆಯ ಕೆಚ್ಚಲನ್ನು ಕತ್ತರಿಸಿ ವಿ*ಕೃತಿ ಮೆರೆದಿರುವುದು ಹಾಗೂ ನಂಜನಗೂಡಿನಲ್ಲಿ ಭಕ್ತಾದಿಗಳು ದೇವಸ್ಥಾನಕ್ಕೆ ದಾನವಾಗಿ ನೀಡಿದ್ದ ಹಸುವಿನ ಮೇಲೆ ದುಷ್ಟರು ಮಾ*ರಕಾಸ್ತ್ರದಿಂದ ದಾ*ಳಿ ಮಾಡಿ ಹಸುವಿನ ಬಾಲವನ್ನು ಕತ್ತರಿಸಿ ಪೈಶಾಚಿಕ ಕೃ*ತ್ಯ ನಡೆಸಿರುವುದನ್ನು ಖಂಡಿಸಿ ಮಂಗಳೂರಿನಲ್ಲಿ ಗೋ ಸಂರಕ್ಷಣಾ ಸಂವರ್ಧನಾ ಸಮಿತಿಯಿಂದ ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.
ಪ್ರತಿಭಟನೆಗೆ ವಿಶ್ವ ಹಿಂದು ಪರಿಷತ್ ಸೇರಿದಂತೆ ಹಲವು ಹಿಂದು ಪರ ಸಂಘಟನೆಗಳು ಸಾಥ್ ನೀಡಿದ್ದವು. ಮೊದಲಿಗೆ ಗೋವಿಗೆ ವಿಶೇಷ ಪೂಜೆ ಮಾಡುವ ಮೂಲಕ ಗೋವನ್ನು ಪೂಜಿಸಲಾಯಿತು.
ಬಳಿಕ ನಡೆದ ಸಭೆಯಲ್ಲಿ ಸಂಸದ ಬ್ರಿಜೇಶ್ ಚೌಟ ಮಾತನಾಡಿ, ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಹಿಂದುಗಳು ಪವಿತ್ರ ಎಂದು ಪೂಜಿಸುವ ಗೋವಿನ ಮೇಲೆ ನಿರಂತರವಾಗಿ ದೌರ್ಜ*ನ್ಯ ದಬ್ಬಾಳಿಕೆ ನಡೆಯುತ್ತಿದೆ. ಯಾವುದೇ ಜನಪ್ರತಿನಿಧಿಗಳು ಕೂಡ ಈ ಬಗ್ಗೆ ಚಕಾರ ಎತ್ತುತ್ತಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ನಾಯಕರು ಇಲ್ಲಿ ದೇವಸ್ಥಾನಕ್ಕೆ ಹೋಗಿ ಗಂಧಪ್ರಸಾದ ಸ್ವೀಕರಿಸುತ್ತಾರೆ. ಆದರೆ ಗೋವಿನ ಮೇಲೆ ದೌರ್ಜ*ನ್ಯ ನಡೆದಾಗ ತಮ್ಮ ಬಾಯಿ ಬಿಚ್ಚುತ್ತಿಲ್ಲ ಎಂದು ಟೀಕಿಸಿದರು.
ಪ್ರತಿಭಟನೆಯಲ್ಲಿ ವಿಶ್ವ ಹಿಂದು ಪರಿಷತ್ ಮುಖಂಡರಾದ ಎಂ.ಬಿ.ಪುರಾಣಿಕ್, ಶರಣ್ ಪಂಪ್‌ವೆಲ್, ಶಿವಾನಂದ ಮೆಂಡನ್, ಗೋಪಾಲ್ ಕುತ್ತಾರ್ ಮೊದಲಾದವರು ಭಾಗಿಯಾಗಿದ್ದರು.
LATEST NEWS
ಬಾಣಂತನಕ್ಕೆ ಹೋಗಿ ಬಾಯ್‌ಫ್ರೆಂಡ್ ಜೊತೆ ಪರಾರಿಯಾದ ಖತರ್ನಾಕ್ ಲೇಡಿ
Published
37 minutes agoon
21/01/2025ಬಡ ಕುಟುಂಬ ಮೂಲದ ಮಹಿಳೆಯೊಬ್ಬಳಿಗೆ ತಾಯಿ ಶ್ರೀಮಂತ ಹುಡುಗನ ಜೊತೆಗೆ ಮದುವೆ ಮಾಡಿಸಿದ್ದರು. ಕೇವಲ ಮೂರು ವರ್ಷ ಗಂಟನ ಜೊತೆ ಸಂಸಾರ ನಡೆಸಿದ್ದಾಳೆ. ಎರಡನೇ ಮಗುವಿನ ಬಾಣಂತನಕ್ಕೆಂದು ತವರುಮನೆಗೆ ಹೋಗಿದ್ದ ಮಹಿಳೆ ಮತ್ತೆ ವಾಪಸ್ಸಾಗಲೇ ಇಲ್ಲ. ಗಂಡ ಎಷ್ಡೇ ಒತ್ತಾಯಿಸಿದರೂ ಕೇಳಲಿಲ್ಲ. ಪತಿ ವಿರುದ್ಧವೇ ಇಲ್ಲ ಸಲ್ಲದ ಕೇಸ್‌ಗಳನ್ನು ಹಾಕಿದ್ದಾಳೆ.
ಇದನ್ನೂ ಓದಿ : ಛತ್ತೀಸ್‌ಗಢದಲ್ಲಿ ಎನ್*ಕೌಂಟರ್; 10ಕ್ಕೂ ಅಧಿಕ ನಕ್ಸಲರ ಹ*ತ್ಯೆ
ಅತ್ತ ಗಂಡ ಕೋರ್ಟು, ಕೇಸು ಎಂದು ಅಲೆಯುತ್ತಾ ಇದ್ರೆ, ಇತ್ತ ಈಕೆ ಸಿಕ್ಕ ಸಿಕ್ಕವರಿಗೆಲ್ಲಾ ಪ್ರೀತಿ ಪಾಠ ಮಾಡುತ್ತಿದ್ದಾಳೆ. ಗಂಡನನ್ನು ತೊರೆದು ಬಾಯ್‌ಫ್ರೆಂಡ್ಸ್ ಜೊತೆ ಲೈಫ್ ಎಂಜಾಯ್ ಮಾಡ್ತಾ ಇದ್ದಾಳೆ. ಅಷ್ಟೇ ಅಲ್ಲದೇ ಇತ್ತೀಚಿಗೆ ಬಾಯ್‌ಫ್ರೆಂಡ್‌ನಿಂದ ಮೂರನೇ ಮಗುವನ್ನೂ ಪಡೆದಿದ್ದಾಳೆ. ಗಂಡ ಈ ಕುರಿತು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ತನಿಖೆ ಖತರ್‌ನಾಕ್ ಲೇಡಿ ವಿರುದ್ಧ ತನಿಖೆ ನಡೆಸುತ್ತಿದ್ದಾರೆ.
FILM
ಅಬ್ಬಬ್ಬಾ! 31 ಕೋಟಿಗೆ ಅಪಾರ್ಟ್ಮೆಂಟ್ ಖರೀದಿಸಿದ್ದ ಅಮಿತಾಬ್ ಬಚ್ಚನ್ ಮಾರಿದ್ದೆಷ್ಟು ರೇಟ್‌ಗೆ ಗೊತ್ತಾ!?
Published
55 minutes agoon
21/01/2025By
NEWS DESK4ಮಂಗಳೂರು/ಮುಂಬೈ : ಬಿಗ್ ಬಿ ಅಮಿತಾಬ್ ಬಚ್ಚನ್ ಮುಂಬೈನ ಓಶಿವಾರಾದಲ್ಲಿರುವ ತಮ್ಮ ಡುಪ್ಲೆಕ್ಸ್ ಅಪಾರ್ಟ್ಮೆಂಟ್ ಅನ್ನು ಮಾರಾಟ ಮಾಡಿದ್ದಾರೆ. ಭಾರೀ ಮೊತ್ತಕ್ಕೆ ಅಪಾರ್ಟ್ಮೆಂಟ್ ಮಾರಾಟವಾಗಿದೆ. ಹೌದು, 31 ಕೋಟಿ ಕೊಟ್ಟು ಅಪಾರ್ಟ್ಮೆಂಟ್ ಖರೀದಿಸಿದ್ದ ಬಿಗ್ ಬಿ ಈಗ ಲಾಭ ಪಡೆದಿದ್ದಾರೆ.
ಓಶಿವಾರಾದಲ್ಲಿ ಕ್ರಿಸ್ಟಲ್ ಗ್ರೂಪ್‌ನ ವಸತಿ ಸಮುಚ್ಚಯವಾದ ‘ದಿ ಅಟ್ಲಾಂಟಿಸ್’ನಲ್ಲಿ ಅಮಿತಾಬ್ ಅಪಾರ್ಟ್ಮೆಂಟ್ ಇದೆ. 2021ರ ಎಪ್ರಿಲ್‌ನಲ್ಲಿ ಈ ಅಪಾರ್ಟ್ಮೆಂಟ್ ಅನ್ನು ಅಮಿತಾಬ್ ಖರೀದಿಸಿದ್ದರು. ಅವರು 31 ಕೋಟಿ ಕೊಟ್ಟಿದ್ದರು. ಅದೇ ವರ್ಷ ನವೆಂಬರ್‌ನಲ್ಲಿ ನಟಿ ಕೃತಿ ಸನೋನ್‌ಗೆ ಭದ್ರತಾ ಠೇವಣಿ 60 ಲಕ್ಷ ಮತ್ತು ಮಾಸಿಕ 10 ಲಕ್ಷ ರೂ. ಬಾಡಿಗೆಗೆ ನೀಡಿದ್ದರು ಎನ್ನಲಾಗಿದೆ.
ಇದನ್ನೂ ಓದಿ : ಮಹಿಳಾ ನಾಗಸಾಧ್ವಿಗಳು ಮುಟ್ಟಿನ ಸಮಯದಲ್ಲಿ ಏನು ಮಾಡುತ್ತಾರೆ ಗೊತ್ತಾ ?
ಈಗ ಈ ಅಪಾರ್ಟ್ಮೆಂಟ್‌ನ್ನು ಅಮಿತಾಬ್ ಬಚ್ಚನ್ 83 ಕೋಟಿಗೆ ಮಾರಾಟ ಮಾಡಿದ್ದಾರೆ ಎಂದು ವರದಿಗಳು ಹೇಳಿವೆ. ನೋಂದಣಿ ಮಹಾಪರಿವೀಕ್ಷಕ ಹಾಗೂ ಮುದ್ರಾಂಕ ಆಯುಕ್ತರ(ಐಜಿಆರ್) ಪ್ರಕಾರ, ಈ ಅಪಾರ್ಟ್ಮೆಂಟ್ ಅನ್ನು 83 ಕೋಟಿ ರೂ. ಗೆ ಮಾರಾಟ ಮಾಡಲಾಗಿದೆ. ಈ ಮೂಲಕ ಅವರು ಶೇ.168ರಷ್ಟು ಲಾಭ ಪಡೆದಿದ್ದಾರೆ ಎಂದು ಹೇಳಲಾಗಿದೆ.
ಅಂದ್ಹಾಗೆ ಮುಂಬೈನ ಓಶಿವಾರಾವು ಉತ್ತಮ ಮೂಲಭೂತ ಸೌಕರ್ಯ ಹೊಂದಿರುವ ಪ್ರದೇಶ. ಆಧುನಿಕ ಜೀವನಶೈಲಿಗೆ ತಕ್ಕ ಜಾಗ. ಉತ್ತಮ ರಸ್ತೆಗಳು, ಮೆಟ್ರೋ ಸಂಪರ್ಕಗಳನ್ನು ಹೊಂದಿದೆ.
LATEST NEWS
ಮಹಿಳಾ ನಾಗಸಾಧ್ವಿಗಳು ಮುಟ್ಟಿನ ಸಮಯದಲ್ಲಿ ಏನು ಮಾಡುತ್ತಾರೆ ಗೊತ್ತಾ ?
ಚೂರಿ ಇರಿತ ಪ್ರಕರಣ : ಆಸ್ಪತ್ರೆಯಿಂದ ಸೈಫ್ ಆಲಿ ಖಾನ್ ಬಿಡುಗಡೆ
ಛತ್ತೀಸ್‌ಗಢದಲ್ಲಿ ಎನ್*ಕೌಂಟರ್; 10ಕ್ಕೂ ಅಧಿಕ ನಕ್ಸಲರ ಹ*ತ್ಯೆ
ಹೊಸ ಲುಕ್ನಲ್ಲಿ ಮಹಾಕುಂಭಮೇಳದ ಸುಂದರಿ ‘ಮೊನಾಲಿಸಾ’
ಪಪ್ಪಾಯ ತಿನ್ನುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ ??
ವಿಶ್ವ ಸಂಸ್ಥೆಗೆ ಗುಡ್ ಬೈ…ಅಧಿಕಾರಕ್ಕೇರುತ್ತಲೇ ಟ್ರಂಪ್ ಸಾಲು ಸಾಲು ಶಾ*ಕಿಂಗ್ ನಿರ್ಧಾರ!
Trending
- BIG BOSS1 day ago
ಬಿಗ್ ಬಾಸ್ ತೊರೆಯುವ ಬಗ್ಗೆ ಮತ್ತೊಮ್ಮೆ ಘೋಷಣೆ ಮಾಡಿದ ಕಿಚ್ಚ
- FILM1 day ago
ಕಾಂತಾರ ಚಿತ್ರತಂಡಕ್ಕೆ ಎಚ್ಚರಿಕೆ ಕೊಟ್ಟ ಗ್ರಾಮಸ್ಥರು
- BANTWAL6 days ago
ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಸಾಧಾರಣ ಮಳೆ
- DAKSHINA KANNADA5 days ago
ತುಳು ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ‘ಗೋಲ್ಡನ್ ಮೂವೀಸ್’; ಕುದ್ರೋಳಿ ಕ್ಷೇತ್ರದಲ್ಲಿ ‘ಪ್ರೊಡಕ್ಷನ್ ನಂ 1’ಗೆ ಅದ್ದೂರಿ ಚಾಲನೆ