ಮಂಗಳೂರು: ಗಣರಾಜ್ಯೋತ್ಸವಕ್ಕೆ ಕೇರಳ ಸರ್ಕಾರ ಕಳುಹಿಸಿದ್ದ ನಾರಾಯಣ ಗುರು ಸ್ತಬ್ಧಚಿತ್ರ ಪ್ರಸ್ತಾವನೆ ತಿರಸ್ಕಾರದ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯಿಸಿದ್ದಾರೆ.
ಟ್ವಿಟ್ಟರ್‌ನಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿ, ಪ್ರಜಾಪ್ರಭುತ್ವ ದಿನದಂದು ದೆಹಲಿಯ ರಾಜಪಥದಲ್ಲಿ ಚಲಿಸುವ ಟ್ಯಾಬ್ಲೋಗಳಿಗೆ ಕೆಲವು ಮಾರ್ಗದರ್ಶಿ ಸೂತ್ರಗಳಿವೆ. ಕೇಂದ್ರ ಕಳುಹಿಸಿದ ಮಾರ್ಗದರ್ಶಿ ಸೂತ್ರಗಳನ್ನು ಕೇರಳ ನಿರ್ಲಕ್ಷ್ಯ ಮಾಡಿದೆ. ಕೇರಳ ಸರಕಾರದ ಧೋರಣೆಯಿಂದ ರದ್ದಾಗಿದೆ. ವಿನ: ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರ ಎನ್ನುವ ಕಾರಣಕ್ಕೆ ಕೇಂದ್ರ ಸರಕಾರ ರದ್ದು ಮಾಡಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಬಿಗ್ಬಾಸ್ ಮನೆಯಿಂದ ಚೈತ್ರಾ ಕುಂದಾಪುರ ತಮ್ಮ ಜರ್ನಿ ಮುಗಿಸಿ ನಿನ್ನೆ ಆಚೆ ಬಂದಿದ್ದಾರೆ. ಬರೋಬ್ಬರಿ 106 ದಿನಗಳ ಕಾಲ ಬಿಗ್ಬಾಸ್ ಮನೆಯಲ್ಲಿದ್ದ ಚೈತ್ರಾ ಅವರು, ವೀಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.
ಮನೆಯಿಂದ ಹೊರಬಿದ್ದ ಬೆನ್ನಲ್ಲೇ ಬಿಗ್ಬಾಸ್ ವೇದಿಕೆಯಲ್ಲಿ ಕಿಚ್ಚ ಸುದೀಪ್ ಅವರಿಗೆ ಎದುರಾದರು. ಈ ವೇಳೆ ಸುದೀಪ್, ಚೈತ್ರಾ ಅವರ ಬಿಗ್ಬಾಸ್ ಜರ್ನಿಯ ವಿಟಿ ತೋರಿಸಿದರು. ಇದನ್ನು ನೋಡಿದ ಚೈತ್ರಾ ಕುಂದಾಪುರ ತುಂಬಾನೇ ಭಾವುಕರಾದರು. ಅದನ್ನು ಗಮನಿಸಿದ ಕಿಚ್ಚ ಸುದೀಪ್, ಚೈತ್ರಾ ಅವರ ಬಳಿ ಬಂದು ಕಣ್ಣೀರು ಒರೆಸಿದರು. ಕಿಚ್ಚ ಸುದೀಪ್ ಅವರ ಈ ದೊಡ್ಡ ಗುಣವನ್ನು ಕಂಡ ಅಭಿಮಾನಿಗಳು ಖುಷಿಯಾಗಿದ್ದಾರೆ.
ಬಳಿಕ ಮಾತನಾಡಿದ ಸುದೀಪ್, ನೀವು ತುಂಬಾ ಚೆನ್ನಾಗಿ ಆಡಿದ್ದೀರಿ. ನಿಮಗೆ ನಾವು ತೋರಿಸಿರುವ ವಿಡಿಯೋದಲ್ಲಿ ಒಂದು ಅದ್ಭುತ ಇದೆ. ಎಷ್ಟು ಸಲ ನೀವು ಕಳಪೆ ತೆಗೆದುಕೊಂಡಿದ್ದೀರಿ ಅನ್ನೋದು ಇಂಪಾರ್ಟೆಂಟ್ ಅಲ್ಲ. ವಿಡಿಯೋ ಫಿನಿಶ್ ಆಗಿರೋದು ಉತ್ತಮದೊಂದಿಗೆ. ಬಿಗ್ಬಾಸ್ನಿಂದ ನಿಮಗೆ ಒಳ್ಳೆಯದಾಗಿದೆ ಅಂದುಕೊಳ್ತೀನಿ ಎಂದರು.
ನಂತರ ಚೈತ್ರಾ ಕುಂದಾಪುರ ಮಾತನಾಡಿ.. ಮೊದಲನೇ ವಾರ ಬಿಗ್ಬಾಸ್ ಮನೆಯಿಂದ ಆಚೆ ಬರಬಾರದು ಅಂತ ಅಂದುಕೊಂಡಿದ್ದೆ. ಆದರೆ ಇಷ್ಟು ದಿನ ಬಿಗ್ಬಾಸ್ ಮನೆಯಲ್ಲಿ ಇರುತ್ತೇನೆ ಅಂತ ಅಂದುಕೊಂಡಿರಲಿಲ್ಲ. ಹೇಗೆ ಬದುಕಬಹುದು ಅನ್ನೋದನ್ನು ಬಿಗ್ಬಾಸ್ ಮನೆಯಲ್ಲಿ ಕಲಿತೆ. ಇಲ್ಲಿಗೆ ಬಂದು ಇಷ್ಟು ಜನರ ಜೊತೆಗೆ ಹೇಗೆ ಬದುಕಬೇಕು ಅಂತ ಕಲಿತ್ತಿದ್ದೇನೆ. 105 ದಿನದ ಸಾರ್ಥಕವಾಗಿ ಬದುಕಿದ್ದೇನೆ ಎಂದರು.
ತೆಂಗಿನಕಾಯಿ ಹಾಕಿ ಮಾಡುವ ಸಾಂಬಾರ್ ರುಚಿ ಎನಿಸಿದರೂ, ಕಾಯಿ ಒಡೆದು ಅದನ್ನು ತುರಿದು ಸಾಂಬಾರ್ ಮಾಡೋಕೆ ಹಲವರಿಗೆ ಬೇಸರ. ತೆಂಗಿನಕಾಯಿ ಒಡೆಯಲು ಸ್ವಲ್ಪ ಬಲ ಪ್ರಯೋಗ ಮಾಡಬೇಕು. ಆಗ ಅದು ಈಸಿಯಾಗಿ ತೆರೆದುಕೊಳ್ಳುತ್ತದೆ. ಇನ್ನೂ ಅದರ ಚಿಪ್ಪು (Coconut Shell) ಮತ್ತು ತಿರುಳನ್ನು ಬೇರ್ಪಡಿಸಲು ನೀವು ಬಲ ಪ್ರಯೋಗ ಮಾಡಬೇಕು ಅಂತಿಲ್ಲ, ಸ್ವಲ್ಪ ಬುದ್ಧಿ ಉಪಯೋಗಿಸಿ ಕೆಲ ವಿಧಾನಗಳನ್ನು ಅನುಸರಿಸಿದರೆ, ಸುಲಭವಾಗಿ ಚಿಪ್ಪಿನಿಂದ ಕಾಯಿ ಬಿಟ್ಟುಕೊಳ್ಳುತ್ತದೆ. ಹೀಗಾಗಿ ತೆಂಗಿನ ಚಿಪ್ಪಿನಿಂದ ಕಾಯಿ ಹೊರ ತೆಗೆಯಲು ಇಲ್ಲಿ ನಾವು ಹೇಳಿರೋ ಈ ಟಿಪ್ಸ್ ಫಾಲೋ ಮಾಡಿ ಸಾಕು.
ಶೆಲ್‌ನಿಂದ ತೆಂಗಿನಕಾಯಿ ತಿರುಳನ್ನು ಸುಲಭವಾಗಿ ತೆಗೆಯುವ ವಿಧಾನಗಳು:
ತೆಂಗಿನಕಾಯಿಯನ್ನು ಒಡೆಯಿರಿ:
ಮೊದಲನೇಯದಾಗಿ ತೆಂಗಿನ ಕಾಯಿಯನ್ನು ಅದರ ಮಧ್ಯಭಾಗದಲ್ಲಿ ಸುತ್ತಿಗೆಯಂತಹ ವಸ್ತು ಬಳಸಿ ಸರಿಯಾಗಿ ಭಾಗ ಮಾಡಿಕೊಳ್ಳಿ. ಆಗ ಇದು ಎರಡು ಭಾಗವಾಗುತ್ತದೆ. ನಂತರ ಈ ಕಾಯಿಯ ತಿರುಳನ್ನು ನಯವಾದ ಚಾಕುಗಳನ್ನು ಬಳಸುವ ಮೂಲಕ ಚಿಪ್ಪಿನಿಂದ ಬೇರ್ಪಡಿಸಬಹುದು. ತದನಂತರ ಇದನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳುವ ಮೊದಲು ಸಣ್ಣ, ಸಣ್ಣ ಪೀಸ್ ಮಾಡಿಕೊಂಡು ಮಸಾಲೆ ಹಾಕಿ ಮಿಶ್ರಣ ಮಾಡಿ. ಆಗ ನಿಮಗೆ ಕಾಯಿ ನಯವಾಗಿ ರುಬ್ಬಿಕೊಳ್ಳುತ್ತದೆ.
ಒಲೆಯನ್ನು ಬಳಸಿ:
ಶೆಲ್ ತುಂಬಾ ಗಟ್ಟಿ ಇದ್ದು, ಇವೆರೆಡನ್ನು ಬೇರ್ಪಡಿಸಲು ಕಷ್ಟವಾಗ್ತಿದ್ದರೆ ಒಲೆಯನ್ನು ಬಳಸಿ. ಒಲೆಯ ಶಾಖವು ಶೆಲ್ ಅನ್ನು ಸಡಿಲಗೊಳಿಸಲು ಸಹಾಯ ಮಾಡುತ್ತದೆ ಮತ್ತು ತೆಂಗಿನ ತಿರುಳನ್ನು ತೆಗೆಯಲು ಸುಲಭವಾಗುತ್ತದೆ. ಇಲ್ಲಿ ತೆಂಗಿನಕಾಯಿ ಕಣ್ಣುಗಳಲ್ಲಿ ರಂಧ್ರ ಮಾಡಿ, ನೀರನ್ನು ಹೊರ ತೆಗೆಯಿರಿ. ನಂತರ ತೆಂಗಿನಕಾಯಿಯನ್ನು ಬೇಕಿಂಗ್ ಶೀಟ್‌ನಲ್ಲಿ ಇರಿಸಿ. ತೆಂಗಿನಕಾಯಿಯನ್ನು ಪೂರ್ವಭಾವಿಯಾಗಿ ಕಾಯಿಸಲ್ಪಟ್ಟಿರುವ ಒಲೆಯಲ್ಲಿ ಹಾಕಿ ಮತ್ತು ಸುಮಾರು 10-15 ನಿಮಿಷಗಳ ಕಾಲ ಅದನ್ನು ಬಿಸಿ ಮಾಡಿ.
ಹೀಗೆ ಮಾಡೋದರಿಂದ ಚಿಪ್ಪು ಮತ್ತು ಕಾಯಿ ಸುಲಭವಾಗಿ ಬೇರ್ಪಡುತ್ತದೆ. ತೆಂಗಿನಕಾಯಿ ತಣ್ಣಗಾದ ನಂತರ ಅದರ ಮೇಲೆ ಸುತ್ತಿಗೆಯಿಂದ ಸ್ವಲ್ಪ ಟ್ಯಾಪ್ ಮಾಡುವ ಮೂಲಕವೂ ನೀವು ಚಿಪ್ಪಿನಿಂದ ಸುಲಭವಾಗಿ ಕಾಯಿಯನ್ನು ತೆಗೆದುಕೊಳ್ಳಬಹುದು.
ತೆಂಗಿನಕಾಯಿಯನ್ನು ಫ್ರೀಜ್ ಮಾಡಿ:
ತೆಂಗಿನ ಕಾಯಿಯನ್ನು ಅದರ ಚಿಪ್ಪಿನಿಂದ ಬೇರ್ಪಡಿಸಲು ಇದೊಂದು ಸುಲಭ ವಿಧಾನ. ಕಾಯಿಯನ್ನು ಒಡೆದ ನಂತರ ಸ್ವಲ್ಪ ಹೊತ್ತು ಆ ಹೋಳುಗಳನ್ನು ಡೀಪ್ ಫ್ರೀಜರ್‌ನಲ್ಲಿಡಿ. ಈ ತಂಪಾದ ತಾಪಮಾನವು ತೆಂಗಿನ ತಿರುಳನ್ನು ಸ್ವಲ್ಪಮಟ್ಟಿಗೆ ಸಂಕುಚಿತಗೊಳಿಸುತ್ತದೆ ಮತ್ತು ಶೆಲ್‌ನಿಂದ ತಿರುಳನ್ನು ಹೊರ ತೆಗೆಯಲು ಸುಲಭ ಮಾಡುತ್ತದೆ ಈ ವಿಧಾನಗಳು ನಿಮಗೆ ಕಾಯಿ ತುರಿಯುವ ತಾಪತ್ರಯವನ್ನು ಕಮ್ಮಿ ಮಾಡಿ, ನಿಮ್ಮ ಕೆಲಸವನ್ನು ಸುಲಭ ಮಾಡುತ್ತದೆ.