ಮಂಗಳೂರು: ಗಣರಾಜ್ಯೋತ್ಸವಕ್ಕೆ ಕೇರಳ ಸರ್ಕಾರ ಕಳುಹಿಸಿದ್ದ ನಾರಾಯಣ ಗುರು ಸ್ತಬ್ದಚಿತ್ರ ಪ್ರಸ್ತಾವನೆ ತಿರಸ್ಕಾರ ವಿವಾದವೇ ಅಲ್ಲ ಎಂದಿದೆ.
ಈ ಬಗ್ಗೆ ಬಿಜೆಪಿ ಕರ್ನಾಟಕ ಟ್ವೀಟ್ ಮಾಡಿ, ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವರು ವಿವಾದವೇ ಅಲ್ಲದ ವಿಚಾರವನ್ನು ವಿವಾದಗೊಳಿಸಲು ಹೊರಟಿದ್ದಾರೆ. ಬ್ರಹ್ಮಶ್ರೀ ನಾರಾಯಣ ಗುರುಗಳ ಬಗ್ಗೆ ಬಿಜೆಪಿ ಪಕ್ಷ ಅಪಾರ ಗೌರವ ಹೊಂದಿದೆ.
ಪಕ್ಷದ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ಪ್ರತಿ ವರ್ಷ ನಾರಾಯಣ ಗುರು ಜಯಂತಿ ಆಚರಿಸಿ ಮಹಾನ್ ಸಮಾಜ ಸುಧಾರಕರಿಗೆ ಹೃದಯಪೂರ್ವಕ ಗೌರವ ನೀಡುತ್ತಿದ್ದೇವೆ.