Sunday, December 4, 2022

SSLC ಪಠ್ಯಪುಸ್ತಕದಲ್ಲಿ ನಾರಾಯಣ ಗುರುಗಳ ಪಾಠಕ್ಕೆ ಕತ್ತರಿ: ಬಿಲ್ಲವ ಸಮುದಾಯದ ಆಕ್ರೋಶ

ಮಂಗಳೂರು: ಎಸ್ಎಸ್‌ಎಲ್‌ಸಿ ಶಾಲಾ ಪಠ್ಯದಲ್ಲಿ ಆರೆಸ್ಸೆಸ್‌ ಸಂಸ್ಥಾಪಕ ಕೆಬಿ ಹೆಡ್ಗೆವಾರ್ ಭಾಷಣ ಸೇರಿಸಿರುವ ವಿವಾದ ಹಸಿಯಾಗಿರುವಾಗಲೇ ಈ ಮಧ್ಯೆ ದಕ್ಷಿಣ ಭಾರತದ ಆದರ್ಶವಾಗಳು ಹಾಗೂ ಸಮಾಜ ಸುಧಾರಕರಾದ ನಾರಾಯಣ ಗುರುಗಳ ಪಠ್ಯಕ್ಕೆ ಕೊಕ್‌ ನೀಡಿರುವುದು ನಾರಾಯಣ ಗುರುಗಳ ಅನುಯಾಯಿಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಕರ್ನಾಟಕ ಸರಕಾರ ಮುದ್ರಿಸುವ 10ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದ ಅಧ್ಯಾಯ 5ರಲ್ಲಿ ಸಾಮಾಜಿಕ ಮತ್ತು ಧಾರ್ಮಿಕ ಚಳುವಳಿ ವಿಭಾಗದಲ್ಲಿ ಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಯೋಗಂ ಶಿರೋನಾಮೆಯೊಂದಿಗೆ ನಾರಾಯಣ ಗುರುಗಳ ಜೀವನ ಚರಿತ್ರೆಯ ಪಠ್ಯವನ್ನು ಮುದ್ರಿತವಾಗಿತ್ತು.


ಈ ಪಠ್ಯದಲ್ಲಿ ‘ನಾರಾಯಣ ಗುರುಗಳ ಒಂದೇ ಜಾತಿ, ಒಂದೇ ಧರ್ಮ ಮತ್ತು ಒಬ್ಬನೇ ದೇವರು ತತ್ವಗಳ ಬಗ್ಗೆ ವಿವರಣೆ ನೀಡಲಾಗಿತ್ತು.

ಇದರ ಜೊತೆ ಪೆರಿಯಾರ್‌ ಬಗ್ಗೆ ಇನ್ನೊಂದು ಪಠ್ಯವಿತ್ತು. ಈ ಎರಡು ಮಹಾನ್‌ ವ್ಯಕ್ತಿಗಳ ಜೀವನ ಚರಿತ್ರೆಯನ್ನು ಎಸ್ಸೆಸ್ಸೆಲ್ಸಿ ಪಠ್ಯದಿಂದ ತೆಗೆದು ಹಾಕಲಾಗಿದೆ ಎಂಬ ಆರೋಪಗಳು ವ್ಯಕ್ತವಾಗಿದೆ.

ಎಸ್ಸೆಸ್ಸೆಲ್ಸಿ ಸಮಾಜ ವಿಜ್ಞಾನದ 2020ನೇ ಸಾಲಿನ ಪಠ್ಯಪುಸ್ತಕದ ಪಿಡಿಎಫ್‌ ಕಾಪಿಯನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಮಾಡಲಾಗುತ್ತಿದ್ದು, ಇದರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಕೂಡಲೇ ರಾಜ್ಯ ಸರಕಾರ ಈ ಪಠ್ಯವನ್ನು ಪರಿಷ್ಕರಿಸಿ ನಾರಾಯಣ ಗುರುಗಳು ಮತ್ತು ಪೆರಿಯಾರ್‌ ಪಠ್ಯ ಸೇರ್ಪಡೆಗೊಳಿಸಬೇಕು ಎಂದು ನಾರಾಯಣ ಗುರುಗಳ ಅನುಯಾಯಿ ಸಂಘಟನೆಗಳು ಆಗ್ರಹ ವ್ಯಕ್ತಪಡಿಸಿವೆ.

1 COMMENT

  1. ಯಾರು ಇದನ್ನು ಆದೇಶಿಸಿದ್ದರೋ ಅವರನ್ನು ಯಾವದೇ ಹುದ್ದೆಯಿಂದ ತೆಗೆದು ಹಾಕಬೇಕು.

LEAVE A REPLY

Please enter your comment!
Please enter your name here

Hot Topics