ಮಂಗಳೂರು: ಮೊನ್ನೆ ನಾಗನ ವಿಗ್ರಹವನ್ನು ದುಷ್ಕರ್ಮಿಗಳು ಎಸೆದು ದುಷ್ಕೃತ್ಯ ಮೆರೆದ ಸ್ಥಳಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿ ಭೇಟಿ ನೀಡಿದರು.
ನಾಗನ ವಿಗ್ರಹವನ್ನು ಯಾರೋ ದುಷ್ಕರ್ಮಿಗಳು ಎಸೆದು ದುಷ್ಕೃತ್ಯ ಮೆರೆದಿದ್ದು ಕೂಡಲೇ ಆರೋಪಿಗಳನ್ನು ಬಂಧಿಸಿ ಇಂತಹ ಕೃತ್ಯಗಳನ್ನು ಇನ್ನು ಜಿಲ್ಲೆಯಲ್ಲಿ ನಡೆಯದಂತೆ ಸೂಕ್ತ ಕ್ರಮಕೈಗೊಳ್ಳಲು ಗ್ರಾಮಸ್ಥರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಶ್ರೀ ಸುದರ್ಶನ್ ಮೂಡಬಿದ್ರಿ, ಮನಪಾ ಸದಸ್ಯರಾದ ಶ್ರೀ ಕಿರಣ್ ಕುಮಾರ್ ಕೋಡಿಕಲ್ ಮತ್ತಿತರರಿದ್ದರು.