bangalore
‘ನಾನು ಮತ್ತು ಗುಂಡ’ ಖ್ಯಾತಿಯ ಸಿಂಬು ಇನ್ನಿಲ್ಲ…
ಬೆಂಗಳೂರು: ಹಾಸ್ಯ ನಟ ಶಿವರಾಜ್ ಕೆ.ಆರ್ ಪೇಟೆ ನಾಯಕರಾಗಿ ಅಭಿನಯಿಸಿದ ‘ನಾನು ಮತ್ತು ಗುಂಡ’ ಚಿತ್ರದಲ್ಲಿ ಗುಂಡನ ಪಾತ್ರ ಅಚ್ಚುಕಟ್ಟಾಗಿ ನಿರ್ವಹಿಸಿದ ನಾಯಿ ಮೃತಪಟ್ಟಿದೆ.
ಈ ಚಿತ್ರದಲ್ಲಿ ಗುಂಡನ ಪಾತ್ರ ನಿರ್ವಹಿಸಿದ್ದ ಸಿಂಬು ಅಗಲಿರುವುದರ ಕುರಿತು ನಟ ಶಿವರಾಜ್ ಕೆ ಆರ್ ಪೇಟೆ ಅವರು ಭಾವುಕರಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಬಗ್ಗೆ ಭಾವುಕರಾಗಿ ಬರೆದುಕೊಂಡಿರುವ ಅವರು ‘ಪ್ರತಿಯೊಂದು ಜೀವಿಗೂ ಹುಟ್ಟು-ಸಾವು ಎರಡು ಇರುತ್ತದೆ.
ಆದರೆ ನಾವು ಹೇಗೆ ಬದುಕುತ್ತೇವೆ ಅನ್ನೋದು ಜೀವನ. ನಾನು ಮತ್ತು ಗುಂಡ ಚಿತ್ರದಲ್ಲಿ ಸಿಂಬು ಆಕ್ಟ್ ಮಾಡಿಲ್ಲ, ಬದಲಾಗಿ ಅವನ ಜೊತೆ ನಾನು ಆಕ್ಟ್ ಮಾಡಿದ್ದೇನೆ.
ಅವನಿಂದ ತುಂಬಾ ಕಲಿತಿದ್ದೇನೆ ಈಗವನು ಇಲ್ಲ ಎನ್ನುವ ಸುದ್ದಿ ನಂಬುವುದಕ್ಕೆ ಆಗುತ್ತಿಲ್ಲ. ಮನುಷ್ಯರಿಗೆ ಎಷ್ಟೇ ಮಾಡಿದರೂ ಮರೆತು ಹೋಗುತ್ತಾರೆ.
ಆದರೆ ಪ್ರಾಣಿಗಳು ಹಾಗಲ್ಲ ಒಂದು ತುಂಡು ರೊಟ್ಟಿಯನ್ನು ಹಾಕಿದರೂ ದಿನ ನಮ್ಮ ಹಿಂದೆನೇ ಬರುತ್ತದೆ ಅದು ಪ್ರಾಣಿಗಳಿಗಿರುವ ಪ್ರಾಮಾಣಿಕತೆ.
ಆದರೆ ಸಿಂಬು ನಮ್ಮಲ್ಲಿ ಒಬ್ಬ ಎನ್ನುವ ಹಾಗೆ ಇದ್ದ ಇವತ್ತು ಅವನಿಲ್ಲ ಎಂದು ಬರೆದುಕೊಂಡಿದ್ದಾರೆ.ಅವನು ನಮ್ಮ ಜೊತೆಯಲ್ಲಿ ಸದಾ ಜೀವಂತವಾಗಿರುತ್ತಾನೆ.
ಸಿಂಬು ಲವ್ ಯು ಕಣೋ ಎಂದು ಭಾವುಕರಾಗಿದ್ದಾರೆ.
ಮಲಯಾಳಂ ಬ್ಯಾಂಗಲೂರ್ ಡೇಸ್, ಐರಾವತ ಚಿತ್ರದಲ್ಲಿ ಗುಂಡ್ ಉರ್ಫ್ ಸಿನಿಮಾದಲ್ಲಿ ಸಿಂಬಾ ಕಾಣಿಸಿಕೊಂಡಿದ್ದಾನೆ.
bangalore
ಕ್ಷೀಣಿಸುತ್ತಿದೆ ಹಿರಿಯ ನಟಿ ಲೀಲಾವತಿ ಆರೋಗ್ಯ-ಡಿಕೆಶಿ, ನಟ ಶಿವಣ್ಣ ಆರೋಗ್ಯ ವಿಚಾರಣೆ
ಬೆಂಗಳೂರು: ವಯೋಸಹಜ ಅನಾರೋಗ್ಯದಿಂದ ಹಿರಿಯ ನಟಿ ಲೀಲಾವತಿ ಹಾಸಿಗೆ ಹಿಡಿದಿದ್ದು ಅವರ ಆರೋಗ್ಯ ವಿಚಾರಿಸುವುದಕ್ಕಾಗಿ ಅನೇಕ ನಟ ನಟಿಯರು ಲೀಲಾವತಿ ಅವರ ಮನೆಗೆ ತೆರಳಿ ಆರೋಗ್ಯ ವಿಚಾರಿಸಿದ್ದಾರೆ.ಜೊತೆಗೆ ನಿನ್ನೆ ನಟ ಶಿವಣ್ಣ ದಂಪತಿ ಕೂಡ ಮನೆಗೆ ಭೆಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.
ಮನೆಗೆ ಆಗಮಿಸಿದ ಶಿವಣ್ಣ ಅವರನ್ನು ವಿನೋದ್ ರಾಜ್‌ಕುಮಾರ್ ಹೆಚ್ಚು ಆತ್ಮೀಯವಾಗಿ ಬರಮಾಡಿಕೊಂಡು ತಾಯಿಯ ಆರೋಗ್ಯದ ಕುರಿತು ವಿವರಣೆ ನೀಡಿದ್ದಾರೆ..
ಇನ್ನು ಮೊನ್ನೆಯಷ್ಟೇ ನಟ ಅರ್ಜುನ್ ಸರ್ಜಾ ಲೀಲಾವತಿ ಅವರ ಮನೆಗೆ ತೆರಳಿ ಅವರ ಆರೋಗ್ಯ ವಿಚಾರಸಿದ್ದರು.. ಅಲ್ಲದೇ ದರ್ಶನ್ ಸಹ ಅವರ ಮನೆಗೆ ಭೇಟಿ ನೀಡಿದ್ದರು.. ಡಿಕೆಶಿ ಕೂಡ ಆರೋಗ್ಯ ವಿಚಾರಿಸಿದ್ದಾರೆ.
ವಯೋಸಹಜ ಅನಾರೋಗ್ಯದಿಂದ ಹಾಸಿಗೆ ಹಿಡಿದಿರುವ ಲೀಲಾವತಿ ಅವರ ಆರೋಗ್ಯ ವಿಚಾರಿಸಲು ಅನೇಕ ಕಲಾವಿದರು ಮತ್ತು ತಂತ್ರಜ್ಞರು ಸೋಲದೇವನಹಳ್ಳಿಯಲ್ಲಿನ ಅವರ ಮನೆಗೆ ಭೇಟಿ ನೀಡುತ್ತಿದ್ದಾರೆ..
bangalore
ನ. 29ಕ್ಕೆ ಮಳೆ ಹುಡುಗಿ ಪೂಜಾ ಗಾಂಧಿ ಮದುವೆ…
ಬೆಂಗಳೂರು : ಮಳೆ ಹುಡುಗಿ ಪೂಜಾ ಗಾಂಧಿ ಕೊನೆಗೂ ಮದುವೆ ಆಗುತ್ತಿದ್ದಾರೆ. ಬಹು ದಿನಗಳ ಗೆಳೆಯ ಉದ್ಯಮಿ ವಿಜಯ್ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಮದುವೆ, ಮಕ್ಕಳು, ಸಂಸಾರ ಅನ್ನುವ ವಿಚಾರದ ಬಗ್ಗೆ ಪೂಜಾ ಯೋಚನೆ ಮಾಡಿದ್ದರು. ಆದರೆ ಅದು ಈಗಲೇ ಅಲ್ಲ ಅನ್ನುವ ಮಾತನ್ನು ಹೇಳಿಕೊಳ್ಳುತ್ತಿದ್ದರು. ಅದರ ಮಧ್ಯೆ ಆನಂದ್ ಗೌಡ ಜೊತೆಗೆ ನಿಶ್ಚಿತಾರ್ಥವೂ ಆಗಿತ್ತು. ಅದು ಅಷ್ಟೇ ಬೇಗ ಮುರಿದು ಬಿತ್ತು. ಆದರೆ ಇದೀಗ ಪೂಜಾ ಗಾಂಧಿ ದಾಂಪತ್ಯ ಜೀವನಕ್ಕೆ ಕಾಲಿಡಲು ಡಿಸೈಡ್ ಮಾಡಿದ್ದಾರೆ.
ಇದೇ ನವೆಂಬರ್ 29ರಂದು ಬೆಂಗಳೂರಿನ ಯಲಂಹಕದ ಸಮೀಪ ನಟಿ ಪೂಜಾ ಗಾಂಧಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ವಿಶೇಷ ಅಂದರೆ, ಮಂತ್ರ ಮಾಂಗಲ್ಯ ಪದ್ಧತಿಯ ಪ್ರಕಾರ ಈ ಮದುವೆ ನಡೆಯಲಿದೆ ಎಂದು ವರದಿಯಾಗಿದೆ.ಪೂಜಾಗಾಂಧಿ ಮೂಲತ: ಉತ್ತರ ಪ್ರದೇಶದ ಮೀರತ್‌ನವರು. ಪಂಜಾಬಿ ಕುಟುಂಬದಲ್ಲಿ ಜನಿಸಿದ್ದ ಪೂಜಾ ಗಾಂಧಿ ದೆಹಲಿಯಲ್ಲಿ ನೆಲೆಸಿದ್ದರು. ಜಾಹೀತಾರು ಹಾಗೂ ಮಾಡಲಿಂಗ್ ಮೂಲಕ ಜನಪ್ರಿಯರಾಗಿದ್ದ ನಟಿ ‘ಮುಂಗಾರು ಮಳೆ’ ಮೂಲಕ ಕನ್ನಡಕ್ಕೆ ಪಾದಾರ್ಪಣೆ ಮಾಡಿದ್ದರು. ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಂತೆ ಒಂದರ ಹಿಂದೊಂದರಂತೆ ಯಶಸ್ಸು ಇವರನ್ನು ಹಿಂಬಾಲಿಸಿಕೊಂಡು ಬಂದಿತ್ತು.
2012ರಲ್ಲಿ ಪೂಜಾ ಗಾಂಧಿ ಅವರಿಗೆ ಉದ್ಯಮಿ ಆನಂದ್ ಗೌಡ ಜತೆ ನಿಶ್ಚಿತಾರ್ಥವಾಗಿ, ನಂತರ ಮುರಿದು ಬಿದ್ದಿತ್ತು. ಆದರೆ, ಈಗ ಹರಿದಾಡುತ್ತಿರುವ ಮದುವೆ ವಿಷಯದ ಬಗ್ಗೆ ನಟಿ ಎಲ್ಲಿಯೂ ಮಾಹಿತಿ ಹಂಚಿಕೊಂಡಿಲ್ಲ.ಕನ್ನಡವನ್ನು ಕಲಿತು ಕನ್ನಡಿಗರಿಂದ ಬೇಷ್ ಎನಿಸಿಕೊಂಡಿರೋ ಮುಂಗಾರು ಮಳೆ ಬೆಡಗಿ ಹಾಗೂ ವಿಜಯ್ ಕೆಲವು ವರ್ಷಗಳಿಂದ ಪರಸ್ಪರ ಪ್ರೀತಿಯಲ್ಲಿದ್ದರು, ಇದೀಗ ಮದುವೆಗೆ ರೆಡಿ ಆಗಿದ್ದಾರೆ. ಕನ್ನಡ ಕಲಿತು ಕನ್ನಡಿಗನನ್ನು ಮದುವೆಯಾಗುವ ಮೂಲಕ ಕರ್ನಾಟಕದ ಸೊಸೆ ಆಗಲು ಪೂಜಾ ಸಿದ್ಧವಾಗುತ್ತಿದ್ದಾರೆ ಎನ್ನಲಾಗಿದೆ
bangalore
‘ಕಾಂತಾರ-1’ ಫಸ್ಟ್ ಲುಕ್ ಟೀಸರ್ 7 ಭಾಷೆಗಳಲ್ಲಿ ಬಿಡುಗಡೆ..!
ಕುಂದಾಪುರ: ತುಳುನಾಡ ಮಣ್ಣಿನ ಶಕ್ತಿ ದೈವಾರಾಧನೆ ಮಹತ್ವವನ್ನು ಇಡೀ ಜಗತ್ತಿಗೆ ತೋರಿಸಿದ ಚಿತ್ರ ಕಾಂತಾರ ನಟ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ಈ ಸೂಪರ್ ಹಿಟ್ ಸಿನಿಮಾದ ಪ್ರೀಕ್ವೆಲ್ ಅಂದರೆ ಎರಡನೇ ಭಾಗದ ಫಸ್ಟ್ ಲುಕ್ ಹಾಗೂ ಟೀಸರ್ ಸೋಮವಾರ ಬಿಡುಗಡೆಯಾಗಿದೆ.
ಇಂದು ಬೆಳಿಗ್ಗೆ ಕುಂದಾಪುರದ ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ಸನ್ನಿಧಿಯಲ್ಲಿ ಸಿನಿಮಾದ ಮೂಹೂರ್ತ ಕಾರ್ಯಕ್ರಮ ನೆರವೇರಿದೆ. ಮುಹೂರ್ತದ ಜೊತೆಗೆ ಫಸ್ಟ್ ಲುಕ್ ಹಾಗೂ ಟೀಸರ್ ನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಟೀಸರ್ ಕನ್ನಡ, ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಮಲಯಾಳಂ ಹಾಗೂ ಬಂಗಾಳಿ ಭಾಷೆಯಲ್ಲಿ ಬಿಡುಗಡೆಯಾಗಿದ್ದು, ಟೀಸರ್ ನ್ನು ಹೊಂಬಾಳೆ ಫಿಲ್ಮ್ಸ್ ತನ್ನ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಹಂಚಿಕೊಂಡಿದೆ. ಯುಟ್ಯೂಬ್‌ನಲ್ಲಿ ಟೀಸರ್ ಬಿಡುಗಡೆಯಾಗಿದ್ದು, ಕಾಂತಾರ ಪ್ರೀಕ್ವೆಲ್ ಕತೆ ಕದಂಬರ ಕಾಲಕ್ಕೆ ಕರೆದುಕೊಂಡು ಹೋಗಲಿದೆ ಎಂಬುದು ಬಹಿರಂಗವಾಗಿದೆ.
ದೈವಿಕ ಭೂಮಿ ಕಡೆಗೆ ಹೆಜ್ಜೆ ಎಂದು ಕಾಂತಾರ ಪ್ರೀಕ್ವೆಲ್ ಅನ್ನು ಹೊಂಬಾಳೆ ಬಣ್ಣಿಸಿದೆ. ಟೀಸರ್ ಜೊತೆಗೆ ಚಿತ್ರದ ಫಸ್ಟ್ ಲುಕ್ ಕೂಡ ಇಂದು ಬಿಡುಗಡೆಯಾಗಿದ್ದು, ಫಸ್ಟ್ ಲುಕ್ ನಲ್ಲಿ ರಿಷಬ್ ಶೆಟ್ಟಿಯವರು ರೌದ್ರಾವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಅವತಾರ ಅಭಿಮಾನಿಗಳಲ್ಲಿ ಕುತೂಹಲವನ್ನು ಹೆಚ್ಚುವಂತೆ ಮಾಡಿದೆ. ಚಿತ್ರದಲ್ಲಿ ರಿಷಬ್ ಶೆಟ್ಟಿ ಅವರು ರೌದ್ರವತಾರದಲ್ಲಿ ಅಚ್ಚರಿ ಮೂಡುವಂತೆ ಕಂಡು ಬಂದಿದ್ದಾರೆ. ಶಿವನ ಅವತಾರದ ಮತ್ತೊಂದು ರೂಪವಾಗಿ ರಿಷಬ್ ಬದಲಾಗಿದ್ದಾರೆ. ಒಂದು ಕೈಯಲ್ಲಿ ತ್ರಿಶೂಲ ಮತ್ತೊಂದು ಕೈಯಲ್ಲಿ ಜಮದಗ್ನಿ ಕೊಡಲಿಯನ್ನು ಹಿಡಿದುಕೊಂಡಿರುವುದು ಕಂಡು ಬಂದಿದ್ದು, ಈ ಪೋಸ್ಟರ್ ಹಲವು ಕುತೂಹಲವನ್ನು ಸೃಷ್ಟಿಸಿದೆ. ಕಾಂತಾರ’ ಚಿತ್ರವನ್ನು ‘ಹೊಂಬಾಳೆ ಫಿಲ್ಮ್ಸ್’ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಾಣ ಮಾಡಿದ್ದರು. ಸಣ್ಣ ಬಜೆಟ್ನಲ್ಲಿ ಸಿದ್ಧವಾದ ಈ ಸಿನಿಮಾ, ದೊಡ್ಡ ಮಟ್ಟದಲ್ಲಿ ಗೆಲುವು ಕಂಡಿತು. ಈಗ ‘ಕಾಂತಾರ 2’ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡಲು ತಂಡ ನಿರ್ಧರಿಸಿದೆ. ರಿಷಬ್ ಶೆಟ್ಟಿ ಅವರು ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.
- FILM7 days ago
ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ ನೋಡಿ ‘ಕತ್ತೆ’ ಎಂದ ಕಿಚ್ಚ ಸುದೀಪ
- bengaluru6 days ago
ಇನ್ಸ್ಟಾಗ್ರಾಂನಲ್ಲಿ 11 ಸಾವಿರ ಫಾಲೋವರ್ಸ್ ಕಳೆದುಕೊಂಡ ಬಿಗ್ ಬಾಸ್ ಸ್ಪರ್ಧಿ ಸಂಗೀತಾ
- DAKSHINA KANNADA6 days ago
Breaking news :ಮಂಗಳೂರಿನ ಹೊಟೇಲ್ ರೂಂನಲ್ಲಿ ಬೆಂಕಿ-ಒಳಗಿದ್ದ ವ್ಯಕ್ತಿ ಸಾವು
- bengaluru6 days ago
ಬೆಂಗಳೂರು ಕಂಬಳಕ್ಕೆ ಕ್ಷಣಗಣನೆ-ಉಪ್ಪಿನಂಗಡಿಯಿಂದ ಬೆಂಗಳೂರಿಗೆ ಕೋಣಗಳ ಪ್ರಯಾಣ