Sunday, November 27, 2022

ಆತಂಕ ತಂದ ನಟ- ನಟಿಯರ ಸರಣಿ ಆತ್ಮಹತ್ಯೆಗಳು : ಮತ್ತೋರ್ವ ಕಿರುತೆರೆ ನಟಿ ವೈಶಾಲಿ ಠಕ್ಕರ್ ನೇಣಿಗೆ ಶರಣು…!

ಭೋಪಾಲ್ : ಕಿರುತೆರೆ ನಟಿಯರ ಆತ್ಮಹತ್ಯೆ ಸರಣಿ ಮತ್ತೆ ಮುಂದುವರೆದಿದ್ದು, ಇದೀಗ ಖ್ಯಾತ ಕಿರುತೆರೆ ನಟಿ ಬಿಗ್ ಬಾಸ್ ಸ್ಪರ್ಧಿ ವೈಶಾಲಿ ಠಕ್ಕರ್ (26)​ ಅವರು ಮಧ್ಯಪ್ರದೇಶದ ಇಂದೋರ್​ನಲ್ಲಿರುವ ತಮ್ಮ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ.

ವೈಶಾಲಿ ಅವರು ತಂದೆ ಮತ್ತು ಸಹೋದರನೊಂದಿಗೆ ಇಂದೋರ್‌ನಲ್ಲಿ ನೆಲೆಸಿದ್ದರು. ಸಸುರಾಲ್​ ಸಿಮರ್​ ಕಾ’ ಧಾರಾವಾಹಿ ಮೂಲಕ ಹಿಂದಿ ಕಿರುತೆರೆಗೆ ಕಾಲಿಟ್ಟ ವೈಶಾಲಿ, ಸಾಕಷ್ಟು ಖ್ಯಾತಿ ಗಳಿಸಿದ್ದರು. ‘ಸೂಪರ್​ ಸಿಸ್ಟರ್ಸ್​’, ‘ಮನಮೋಹಿನಿ 2’ ಧಾರಾವಾಹಿಯಲ್ಲಿ ಬಣ್ಣ ಹಚ್ಚಿದ್ದರು.

ಇತ್ತೀಚೆಗೆ ‘ಯೇ ರಿಷ್ತಾ ಕ್ಯಾ ಕೆಹಲಾತಾ ಹೈ’, ‘ಯೇ ಹೈ ಆಶಿಕಿ’, ‘ರಕ್ಷಾ ಬಂಧನ್​’ ಮುಂತಾದ ಧಾರಾವಾಹಿಗಳಲ್ಲಿ ವೈಶಾಲಿ ನಟಿಸಿದ್ದರು. ಘಟನಾ ಸ್ಥಳದಲ್ಲಿ ಡೆತ್‌ ನೋಟ್​ ಕೂಡ ಸಿಕ್ಕಿದ್ದು, ಘಟನೆಗೆ ಸಂಬಂಧಿಸಿ ತೇಜಾಜಿ ನಗರ್​ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಉಡುಪಿ: ಹೊಟೇಲ್‌ನಲ್ಲಿ ಗ್ಯಾಸ್ ಸೋರಿಕೆಯಾಗಿ ಬೆಂಕಿ ಅನಾಹುತ….

ಉಡುಪಿ: ಹೊಟೇಲ್‌ವೊಂದರಲ್ಲಿ ಗ್ಯಾಸ್ ಸೋರಿಕೆಯಾಗಿ ಬೆಂಕಿ ಅನಾಹುತ ಸಂಭವಿಸಿದ್ದು, ಅಗ್ನಿಶಾಮಕದಳದ ಸಿಬ್ಬಂದಿ ಸಕಾಲಿಕ ಕಾರ್ಯಾಚರಣೆಯಿಂದ ಸಂಭಾವ್ಯ ಅವಘಡವೊಂದು ತಪ್ಪಿದ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ.ಇಲ್ಲಿನ ಸಿಟಿ ಬಸ್ ನಿಲ್ದಾಣ ಸಮಿಪದಲ್ಲಿರುವ ಟಾಪ್ ಟೌನ್...

ಕುಕ್ಕೆ ಕ್ಷೇತ್ರದಲ್ಲಿ 116 ಮಂದಿ ಭಕ್ತರಿಂದ ಎಡೆಮಡೆ ಸ್ನಾನ..

ಸುಬ್ರಹ್ಮಣ್ಯ: ದಕ್ಷಿಣ ಕನ್ನಡ ಜಿಲ್ಲೆಯ ಪುರಾಣ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿರುವ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾಷಷ್ಠಿ ಉತ್ಸವದ ಪ್ರಯುಕ್ತ 116 ಮಂದಿ ಭಕ್ತರಿಂದ ಇಂದು ಎಡೆಮಡೆ ಸ್ನಾನ ನಡೆಯಿತು.ದೇವರ ನೈವೇದ್ಯದ ಮೇಲೆ...

ಉಡುಪಿಯ ಮಂದಾರ್ತಿಯಲ್ಲೂ ಸ್ಯಾಟ್‌ಲೈಟ್ ಫೋನ್ ಸಕ್ರಿಯ-ಉಗ್ರ ಕೃತ್ಯಕ್ಕೆ ಸಂಚು ಶಂಕೆ..?

ಉಡುಪಿ: ಇದುವರೆಗೆ ಕೇವಲ ದಕ್ಷಿಣ ಕನ್ನಡ ಜಿಲ್ಲೆಯಲ್ಲಷ್ಟೇ ಕೇಳಿ ಬರುತ್ತಿದ್ದ ಸ್ಯಾಟಲೈಟ್‌ ಫೋನ್‌ ಕರೆ ಈಗ ದೇವಾಲಯಗಳ ನಗರಿ ಉಡುಪಿ ಜಿಲ್ಲೆಯಲ್ಲೂ ಮೊಳಗಿದೆ. ಉಡುಪಿಯಲ್ಲೂ ಉಗ್ರರ ಕರಿನೆರಳು ಕಾಣಿಸಿದೆ.ಉಡುಪಿಯ ಮಂದಾರ್ತಿ ಸಮೀಪದ ಅರಣ್ಯ...