ಮೈಸೂರು:ಒಂದು ತಿಂಗಳ ಹಿಂದಷ್ಟೇ ಮದುವೆ ಆಗಿದ್ದ ಯುವತಿಯೊಬ್ಬಳು ಅನುಮಾನಾಸ್ಪದ ರೀತಿಯಲ್ಲಿ ಸಾವಿಗೀಡಾಗಿರುವ ಘಟನೆ ಮೈಸೂರಿನ ಶ್ರೀರಾಂಪುರ ಎಸ್.ಬಿ.ಎಂ ಕಾಲನಿಯಲ್ಲಿ ನಡೆದಿದೆ. ಆಶಾರಾಣಿ ಎನ್ನುವಾಕೆಯೇ ಮೃತ ದುರ್ದೈವಿ. ಮೂಲತಃ ನಂಜನಗೂಡು ತಾಲೂಕಿನ ಸರಗೂರು ಗ್ರಾಮದ ನಿವಾಸಿ. ಕೇವಲ ಒಂದು ತಿಂಗಳ ಹಿಂದಷ್ಟೇ ಟಿಕ್ಕಿ ಪ್ರದೀಪ್ ಎಂಬಾತನ ಜತೆ ವಿವಾಹವಾಗಿತ್ತು.ಸದ್ಯ ಸಾವಿಗೀಡಾದ ಯುವತಿ ಪೋಷಕರು ಇದೊಂದು ಕೊಲೆ ಎಂಬ ಆರೋಪ ಮಾಡಿದ್ದು, ಕುವೆಂಪುನಗರ ಪೊಲೀಸ್ ಠಾಣೆಗೆ ದೂರನ್ನು ಕೊಟ್ಟಿದ್ದಾರೆ.
ವರದಕ್ಷಿಣೆ ತರುವಂತೆ ಮಾನಸಿಕ, ದೈಹಿಕ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆಂದು ಪ್ರದೀಪ್ ವಿರುದ್ಧ ದೂರು ನೀಡಲಾಗಿದೆ.5 ಲಕ್ಷ ರೂ. ನಗದು ಮತ್ತು 130 ಗ್ರಾಂ ಚಿನ್ನ ವರದಕ್ಷಿಣೆಯಾಗಿ ನೀಡಲಾಗಿತ್ತು.
ಆದರೆ, ಮತ್ತಷ್ಟು ವರದಕ್ಷಿಣೆಗಾಗಿ ಪ್ರದೀಪ್ ಮತ್ತವರ ಕುಟುಂಬದ ಬೇಡಿಕೆ ಇಟ್ಟಿತ್ತು ಎಂದು ಆಶಾರಾಣಿ ಕುಟುಂಬ ಆರೋಪಿಸಿದೆ. ಪ್ರದೀಪ್ನನ್ನು ಪೊಲೀಸರ ವಶಕ್ಕೆ ಪಡೆದುಕೊಂಡಿದ್ದಾರೆ.
ಮಂಗಳೂರು : ವೆಣೂರಿನ ಬರ್ಕಜೆ ಸಮೀಪದಲ್ಲಿರುವ ಸ್ನೇಹಿತನ ಮನೆಗೆ ತೆರಳಿದ್ದ ಮೂವರು ನರ್ಸಿಂಗ್ ವಿದ್ಯಾರ್ಥಿಗಳು ನೀರು ಪಾಲಾಗಿದ್ದಾರೆ. ಮದ್ಯಾಹ್ನದ ಊಟ ಮುಗಿಸಿ ಸಮೀಪದ ನದಿಗೆ ಈಜಲು ತೆರಳಿದ್ದ ಮೂವರು ನೀರಿನ ಸೆಳೆತಕ್ಕೆ ಸಿಲುಕಿ ಪ್ರಾ*ಣ ಕಳೆದುಕೊಂಡಿದ್ದಾರೆ.
ಬೆಳ್ತಂಗಡಿ ತಾಲೂಕಿನ ವೇಣೂರಿನ ಮೂಡಕೋಡಿ ಗ್ರಾಮದ ವಾಲ್ಟರ್ ಎಂಬವರ ಮನೆಗೆ ಮೂಡಬಿದ್ರೆಯ ಲಾರೆನ್ಸ್ 20 ವರ್ಷ, ಬೆಳ್ತಂಗಡಿ ತಾಲೂಕಿನ ಪಾರೆಂಕಿ ಗ್ರಾಮದ ಸೂರಜ್ 19 ವರ್ಷ, ಹಾಗೂ ಬಂಟ್ವಾಳದ ವಗ್ಗ ಗ್ರಾಮದ ಜೈಸನ್ 19 ವರ್ಷ ಈ ಮೂವರು ಹೋಗಿದ್ದಾರೆ. ಮದ್ಯಾಹ್ನದ ಊಟವನ್ನು ಮುಗಿಸಿದ ಇವರು ಜೊತೆಯಾಗಿ ಬರ್ಕಜೆ ಸಮೀಪದ ಡ್ಯಾಂ ಬಳಿ ನದಿಯಲ್ಲಿ ಈಜಲು ಹೋಗಿದ್ದಾರೆ. ನದಿಯಲ್ಲಿ ಈಜಾಡುತ್ತಿದ್ದ ವೇಳೆ ನೀರಿನ ಸೆಳೆತಕ್ಕೆ ಮೂವರೂ ನೀರುಪಾಲಾಗಿದ್ದು, ವಿಷಯ ತಿಳಿಯುತ್ತಿದ್ದಂತೆ ಸ್ಥಳಿಯರು ರಕ್ಷಣೆಗೆ ನದಿಗೆ ದುಮಿಕಿದ್ದಾರೆ. ಆದ್ರೆ ಮೂವರನ್ನು ನದಿಯಿಂದ ಮೇಲೆತ್ತುವ ಮೊದಲೇ ಇ*ಹಲೋಕ ತ್ಯಜಿಸಿದ್ದಾರೆ. ಮೂವರೂ ಮಂಗಳೂರಿನ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳಾಗಿದ್ದಾರೆ.
ಮಂಗಳೂರು/ಕಲಬುರಗಿ : ಕಲಬುರಗಿ ಜಿಲ್ಲಾಸ್ಪತ್ರೆಯಲ್ಲಿ ಅಪಹರಣಕ್ಕೊಳಗಾಗಿದ್ದ ನವಜಾತ ಶಿಶುವನ್ನು 36 ಗಂಟೆಗಳಲ್ಲಿ ರಕ್ಷಿಸಿ, ಮತ್ತೆ ತಾಯಿಯ ಮಡಿಲು ಸೇರಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮಗುವನ್ನು ಅಪಹರಣ ಮಾಡಿದ್ದ ಇಬ್ಬರು ಮಹಿಳೆಯರನ್ನು ಬಂಧಿಸಲಾಗಿದೆ. ಹೆಚ್.ನಸ್ರೀನ್ ಮತ್ತು ಫಾತೀಮಾ ಬಂಧಿತ ಆರೋಪಿಗಳು.
ಸೋಮವಾರ(ನ.25)ಮುಂಜಾನೆ ಮಹಿಳೆಯರಿಬ್ಬರು ಜಿಮ್ ಆಸ್ಪತ್ರೆಯ ತಾಯಿ ಮತ್ತು ಮಕ್ಕಳ ಚಿಕಿತ್ಸಾ ವಿಭಾಗದಲ್ಲಿ ನವಜಾತ ಶಿಶುವನ್ನು ಅಪಹರಿಸಿ ಪರಾರಿಯಾಗಿದ್ದರು. ಈ ಘಟನೆ ರಾಜ್ಯದ್ಯಂತ ಭಾರಿ ಸುದ್ದಿಯಾಗಿದ್ದು, ಕ್ಷಿಪ್ರ ಕಾರ್ಯಾಚರಣೆ ನಡೆಸುವ ಮೂಲಕ ಪೊಲೀಸರು ಕಳ್ಳಿಯರನ್ನು ಬಂಧಿಸಿದ್ದಾರೆ.
ನರ್ಸ್ ವೇಷದಲ್ಲಿ ಬಂದಿದ್ದ ಕಳ್ಳಿಯರು :
ಕಸ್ತೂರಿ ಎಂಬವರು ಸೋಮವಾರ ನಸುಕಿನ ಜಾವ 4 ಗಂಟೆಗೆ ಗಂಡು ಮಗುವಿಗೆ ಜನ್ಮ ನೀಡಿದ್ದರು. ತಾಯಿ ಮಗು ಆರೋಗ್ಯವಾಗಿದ್ದರು. ಆದರೆ, ನರ್ಸ್ ವೇಷದಲ್ಲಿ ಬಂದ ಮಹಿಳೆಯರು, ರಕ್ತ ಪರೀಕ್ಷೆ ಮಾಡಬೇಕು, ಮಗುವನ್ನು ಕರೆ ತನ್ನಿ ಎಂದು ಹೇಳಿದ್ದಾರೆ. ಇದನ್ನು ನಂಬಿ ಕಸ್ತೂರಿ ಅವರ ಸಂಬಂಧಿ ರಕ್ತ ತಪಾಸಣೆಗಾಗಿ ಮಗುವಿನೊಂದಿಗೆ ಹೋಗಿದ್ದರು. ಈ ವೇಳೆ ಮಹಿಳೆಯರು ಮಗುವನ್ನು ನಮಗೆ ಕೊಡಿ ಎಂದಿದ್ದಾರೆ. ಅದರಂತೆ ಮಹಿಳೆ ಮಗುವನ್ನು ಅವರಿಗೆ ಕೊಟ್ಟಿದ್ದಾರೆ. ಮಗು ಪಡೆದ ಕಳ್ಳಿಯರು ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಮಂಗಳೂರು : ಭಾರತದಲ್ಲಿ ಕ್ರಿಕೆಟ್ ಗೆ ಎಷ್ಟು ಕ್ರೇಜ್ ಇದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಬಾಲ್ಯದಲ್ಲಿ ಕ್ರಿಕೆಟ್ ಆಡುವ ಪ್ರತಿಯೊಬ್ಬರು ಕೂಡ ಭಾರತದ ಪರ ಆಡುವ ಕನಸನ್ನು ಕಾಣುತ್ತಾರೆ. ಆದರೆ ಎಲ್ಲರಿಗೂ ಇದು ಸಾಧ್ಯವಾಗುವುದಿಲ್ಲ. ಆದರೆ ನಿಮ್ಮ ಕನಸು ಈಡೇರದಿದ್ದರೂ ನೀವು ಅಂಪೈರ್ ಆಗುವ ಮೂಲಕ ನಿಮ್ಮ ಕನಸನ್ನು ಸಾಕಾರಗೊಳಿಸಬಹುದು.
ಕೆಲವೇ ಕೆಲವು ಜನರಿಗೆ ಮಾತ್ರ ಅಂಪೈರ್ ಆಗುವುದು ಹೇಗೆಂದು ಗೊತ್ತಿದೆ. ಕ್ರಿಕೆಟ್ ಅಂಪೈರ್ ಆಗಲು ಕೆಲವೊಂದು ಪ್ರಕ್ರಿಯೆಗಳಿವೆ. ಕ್ರಿಕೆಟ್ ಕೌಶಲ್ಯವನ್ನು ಮಾತ್ರವಲ್ಲದೇ ದೈಹಿಕ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಕೂಡ ಮುಖ್ಯವಾಗಿರುತ್ತದೆ.
ಅಂಪೈರ್ ಆಗಲು ಆಯ್ಕೆ ಪ್ರಕ್ರಿಯೆ ಹೇಗಿರುತ್ತೆ ?
ಸ್ಥಳೀಯ ಮಟ್ಟದಲ್ಲಿ ನಡೆಯುವ ಪಂದ್ಯಗಳಲ್ಲಿ ಅಂಪೈರಿಂಗ್ ಮಾಡಬೇಕು. ಆ ಮೂಲಕ ಅಂಪೈರಿಂಗ್ ಮಾಡುವ ಅನುಭವವನ್ನು ಪಡೆದುಕೊಳ್ಳಬೇಕು. ಇಲ್ಲಿ ಸಿಗುವ ಅನುಭವ ಅಂಪೈರ್ ವಿಭಾಗದಲ್ಲಿ ನಿಮ್ಮನ್ನು ಎತ್ತರ ಮಟ್ಟಕ್ಕೆ ಕೊಂಡೊಯ್ಯಲು ಸಹಾಯ ಮಾಡುತ್ತದೆ. ನಂತರ ಕ್ರಿಕೆಟ್ ಅಂಪೈರ್ ಆಗಲು ಬಯಸಿದ ಅಭ್ಯರ್ಥಿಗಳು ತಮಗೆ ಸಂಬಂಧಿತ ‘ರಾಜ್ಯ ಕ್ರಿಕೆಟ್ ಸಂಸ್ಥೆ’ಯಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಇದಕ್ಕಾಗಿ ಸ್ಥಳೀಯ ಪಂದ್ಯಗಳಲ್ಲಿ ಅನುಭವ ಪಡೆಯುವುದು ಮುಖ್ಯವಾಗಿದೆ.
ಇದನ್ನೂ ಓದಿ: ತಂದೆ-ತಾಯಿಯನ್ನು ಕೂಡಿ ಹಾಕಿ ಮಗಳು ಪ್ರಿಯಕರನೊಂದಿಗೆ ಪರಾರಿ !!
ನೀವು ರಾಜ್ಯ ಕ್ರಿಕೆಟ್ ಸಂಸ್ಥೆಯೊಂದಿಗೆ ನೀವು ಸಾಕಷ್ಟು ಅನುಭವ ಪಡೆದ ನಂತರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ನಡೆಸುವ ಹಂತ-1 ಪರೀಕ್ಷೆಗೆ ಹೆಸರನ್ನು ಕಳುಹಿಸಲಾಗುತ್ತದೆ. ನಂತರ ಮೂರು ದಿನಗಳ ಕಾಲ ಬಿಸಿಸಿಐ ತರಬೇತಿ ನೀಡುತ್ತದೆ. ನಾಲ್ಕನೇ ದಿನ ಲಿಖಿತ ಪರೀಕ್ಷೆ ನಡೆಸುತ್ತದೆ. ಈ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳನ್ನು ಬಿಸಿಸಿಐ ಶಾರ್ಟ್ ಲಿಸ್ಟ್ ಮಾಡುತ್ತದೆ.
ಬಿಸಿಸಿಐ ಶಾರ್ಟ್ ಲಿಸ್ಟ್ ಮಾಡಿದ ಅಭ್ಯರ್ಥಿಗಳನ್ನು ವಿಶೇಷ ತರಬೇತಿಗೆ ಕರೆಯುತ್ತದೆ. ಅಲ್ಲಿ ಆಟದ ನಿಯಮಗಳು ಮತ್ತು ಇತರೆ ಪ್ರಮುಖ ವಿಷಯಗಳ ಬಗ್ಗೆ ತರಬೇತಿ ನೀಡುತ್ತದೆ. ನಂತರ ಅಭ್ಯರ್ಥಿಗಳು ಪ್ರಾಯೋಗಿಕ ಹಾಗೂ ಮೌಖಿಕ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ಈ ಎಲ್ಲಾ ಹಂತದ ಪರೀಕ್ಷೆಗಳಲ್ಲಿ ಯಶಸ್ವಿಯಾದರೆ ಮಾತ್ರ ಹಂತ-2 ಪರೀಕ್ಷೆಗೆ ಅರ್ಹರಾಗುತ್ತೀರಿ.
ಎರಡನೇ ಹಂತದ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ವೈದ್ಯಕೀಯ ಪರೀಕ್ಷೆ ನಡೆಸುತ್ತದೆ. ಇದರಲ್ಲಿ ದೈಹಿಕ ಸಾಮರ್ಥ್ಯವನ್ನು ಪರಿಶೀಲಿಸಲಾಗುತ್ತದೆ. ಎಲ್ಲಾ ಹಂತಗಳನ್ನು ಯಶಸ್ವಿಯಾಗಿ ಮುಗಿಸಿದ ನಂತರ ಬಿಸಿಸಿಐ ನಿಮ್ಮನ್ನು ಅಂಪೈರ್ ಎಂದು ಪ್ರಕಟಿಸುತ್ತದೆ. ಈ ಎಲ್ಲಾ ಪ್ರಕ್ರಿಯೆಯನ್ನು ಅನುಸರಿಸುವ ಮೂಲಕ ನೀವು ಅರ್ಹ ಕ್ರಿಕೆಟ್ ಅಂಪೈರ್ ಆಗಬಹುದು. ವಿವಿಧ ಹಂತಗಳಲ್ಲಿ ಪಂದ್ಯಗಳನ್ನು ನಿರ್ವಹಿಸಬಹುದು.
ಅಂಪೈರ್ ಗೆ ಸಿಗುವ ಸಂಬಳ ಎಷ್ಟು :
ಅಂಪೈರ್ ಗಳ ವೇತನವು ಅವರ ದರ್ಜೆ, ಅನುಭವ ಮತ್ತು ಹಿರಿತನದ ಮೇಲೆ ಅವಲಂಬಿತವಾಗಿರುತ್ತದೆ. ಬಿಸಿಸಿಐನ ವರದಿಗಳ ಪ್ರಕಾರ ಎ+ ಮತ್ತು ಎ ಗ್ರೇಡ್ ಅಂಪೈರ್ ಗಳು ದೇಶಿಯ ಪಂದ್ಯಗಳಿಗೆ ದಿನಕ್ಕೆ 40,000 ರೂಪಾಯಿ ಪಡೆಯುತ್ತಾರೆ. ಬಿ ಮತ್ತು ಸಿ ದರ್ಜೆಯ ಅಂಪೈರ್ ಗಳಿಗೆ ದಿನಕ್ಕೆ 30,000 ರೂಪಾಯಿ ನೀಡಲಾಗುತ್ತದೆ.
ಅಂಪೈರ್ ನ ದಾಖಲೆ ಉತ್ತಮವಾಗಿದ್ದರೆ ಅವರನ್ನು ಐಸಿಸಿ ಪ್ಯಾನಲ್ ಗೆ ಸೇರಿಸಬಹುದು. ಐಸಿಸಿಯು ಪ್ರತಿ ಪಂದ್ಯಕ್ಕೆ 1.50 ರಿಂದ 2.20 ಲಕ್ಷ ರೂಪಾಯಿ ನೀಡುತ್ತದೆ. ವಾರ್ಷಿಕವಾಗಿ 75 ಲಕ್ಷಕ್ಕಿಂತ ಹೆಚ್ಚಾಗಿರುತ್ತದೆ.
ನಿಮಗೆ ಕ್ರಿಕೆಟ್ ನಲ್ಲಿ ಆಸಕ್ತಿ ಇದ್ದು, ಟೀಂ ಇಂಡಿಯಾದಲ್ಲಿ ಆಡಲು ಅವಕಾಶ ವಂಚಿತರಾದರೆ, ನಿಮಗೆ ಅಂಪೈರ್ ವೃತ್ತಿಯನ್ನು ಆಯ್ದುಕೊಳ್ಳಬಹುದು.