ಮಂಗಳೂರು: ಮೈಸೂರಿನ ಪಿರಿಯಾ ಪಟ್ಟಣದಲ್ಲಿ ಸಂಭವಿಸಿದ ಅಪಘಾತದಲ್ಲಿ ಬಂಟ್ವಾಳ ನಗರದ ಕೆಳಗಿನ ಪೇಟೆಯ ಇಬ್ಬರು ಗಾಯಗೊಂಡಿರುವ ಘಟನೆ ನಿನ್ನೆ ನಡೆದಿದೆ.
ಅಪಘಾತದಲ್ಲಿ ಕೆಳಗಿನ ಪೇಟೆಯ ನಿವಾಸಿ ಶಂಶುದ್ದೀನ್ ಮತ್ತು ಮೆಲ್ಕಾರ್ ಬೋಗೋಡಿ ನಿವಾಸಿ ಫಯಾಝ್ ಎಂಬವರು ಗಾಯಗೊಂಡಿದ್ದಾರೆ.
ಗಾಯಳುಗಳು ತೆರಳುತ್ತಿದ್ದ ಇನ್ನೋವ ಕಾರಿಗೆ ಸರಕಾರಿ ಬಸ್ಸು ಢಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದ್ದು ಇಬ್ಬರೂ ಪ್ರಾಣಪಾಯದಿಂದ ಪಾರಾಗಿದ್ದಾರೆ.
ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿದೆ.