ಗದಗ: ಆತ ಮುಸ್ಲಿಂ ಯುವಕ, ಅವಳು ಹಿಂದು ಯುವತಿ. ಇಬ್ಬರದ್ದೂ ಬಿಟ್ಟಿರಲಾರದ ಪ್ರೀತಿ. ಈ ಪ್ರೀತಿಗೆ ಯುವತಿಯ ಕುಟುಂಬಸ್ಥರ ವಿರೋಧದ ಇದ್ದರೂ ಮದುವೆ ಕೂಡಾ ಆಗಿದ್ದರು. ಮುದ್ದಾದ ಮಗು ಕೂಡಾ ಆಗಿತ್ತು. ಈ ಮಧ್ಯೆ ಒಂದು ಸತ್ಯ ಬಯಲಾಗಿದೆ.
ಆ ಯುವಕನಿಗೆ ಮೊದಲೇ ಒಂದು ಮದುವೆಯಾಗಿತ್ತು. ಆಗ ಯುವತಿ ವಿಚ್ಛೇದನಕ್ಕೆ ಮುಂದಾಗುತ್ತಾಳೆ. ಅದಕ್ಕೆ ವಿರೋಧ ವ್ಯಕ್ತಪಡಿಸಿದ ಪತಿ ಆಕೆಯ ಮೇಲೆ ಮಚ್ಚಿನಿಂದ ಡೆಡ್ಲಿ ಅಟ್ಯಾಕ್ ಮಾಡಿದ್ದಾನೆ. ಪತ್ನಿ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾಳೆ.
ಯುವತಿಯ ಹೆಸರು ಅಪೂರ್ವಾ ಪುರಾಣಿಕ. ಯುವಕನ ಹೆಸರು ಇಜಾಜ್ ಶಿರೂರು ಎಂದು. 2018 ರಲ್ಲಿ ಅಪೂರ್ವಾ ಕುಟುಂಬಸ್ಥರ ವಿರೋಧದ ನಡುವೆ ಇಜಾಜ್ ಶಿರೂರು ಜೊತೆ ಮದುವೆಯಾಗಿದ್ದಾಳೆ. ಈಗ ಎರಡು ವರ್ಷದ ಮುದ್ದಾದ ಮಗು ಕೂಡಾ ಇದೆ.
ಮದುವೆಯಾದ ನಂತರ ಆತನ ಅಸಲಿ ಆಟ ಶುರುವಿಟ್ಟುಕೊಂಡಿದ್ದಾನೆ. ಅಪೂರ್ವಾಳನ್ನು ಮುಸ್ಲಿಂ ಸಂಪ್ರದಾಯದಂತೆ ಅರ್ಪಾ ಬಾನು ನಾಮಕರಣ ಮಾಡಿ ಮುಸ್ಲಿಂ ಆಗಿ ಇರುವಂತೆ ಕಿರುಕುಳ ನೀಡಲು ನೀಡಿದ್ದಾನೆ.
ಇದರೆಲ್ಲದರ ಮಧ್ಯೆ ಗಂಡ ಇಜಾಜ್ ಶಿರೂರು ಮೊದಲು ಒಂದು ಮದುವೆಯಾಗಿದ್ದಾನೆ ಅನ್ನುವ ಸತ್ಯ ಪತ್ನಿಗೆ ತಿಳಿದಿತ್ತು. ಆಗ ಈಕೆ ಗಂಡನಿಗೆ ವಿಚ್ಛೇದನ ನೀಡಲು ಮುಂದಾಗಿದ್ದಾಳೆ. ಗಂಡನನ್ನು ಬಿಟ್ಟು ಆಕೆ ಹುಬ್ಬಳ್ಳಿಯಿಂದ ಗದಗದಲ್ಲಿ ಬಂದು ವಾಸ ಮಾಡುತ್ತಿರುತ್ತಾಳೆ.
ಅಲ್ಲಿಗೆ ಬಂದ ಕಿರಾತಕ ಪತಿ ಇಜಾಜ್ ಅವಳ ಮೇಲೆ ಮಚ್ಚಿನಿಂದ 23 ಕ್ಕೂ ಹೆಚ್ಚು ಬಾರಿ ಚುಚ್ಚಿದ್ದಾನೆ. ಗಂಭೀರವಾಗಿ ಗಾಯಗೊಂಡ ಅರ್ಪಾ ಬಾನುರನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ.
ಮೋಸಗಾರ ಪತಿ ಇಜಾಜ್ ಸಹವಾಸ ಬೇಡ ಎಂದು ಗದಗ ತಾಯಿಯ ಮನೆಯಲ್ಲಿ ಅಪೂರ್ವಾ ಹಾಗೂ ಎರಡು ವರ್ಷದ ಮಗು ಕಳೆದ ನಾಲ್ಕು ತಿಂಗಳಿಂದ ವಾಸವಾಗಿದ್ದಳು.
ಗುರುವಾರ ಮುಂಜಾನೆ ಬೈಕ್ ಕಲಿಯಲು ಅಪೂರ್ವಾ ಹಾಗೂ ಪಕ್ಕದ ಮನೆಯ ರವಿ ಎನ್ನುವ ಹುಡುಗನ ಜೊತೆಗೆ ಗದಗ ನಗರದ ಲಯನ್ ಸ್ಕೂಲ್ ಗ್ರೌಂಡ್ ನಲ್ಲಿ ಬೈಕ್ ಕಲಿಯುವಾಗ ಏಕಾಏಕಿ ಪ್ರತ್ಯಕ್ಷವಾದ ಇಜಾಜ್ ಶಿರೂರು ಅಪೂರ್ವಾ ಮೇಲೆ ಡೆಡ್ಲಿ ಅಟ್ಯಾಕ್ ಮಾಡಿದ್ದಾನೆ.
ರಕ್ತದ ಮಡುವಿನಲ್ಲಿ ಬಿದ್ದಾಗ ಆತನ ಜೊತೆಗೆ ಇದ್ದ ಹುಡುಗ ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಅವಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಗದಗ ಎಸ್ಪಿ ಶಿವಪ್ರಕಾಶ್ ದೇವರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆ ಯತ್ನ ಮಾಡಿದ ಆರೋಪಿಯನ್ನು ಕೂಡಲೇ ಬಂಧಿಸಲಾಗುವುದು ಎಂದಿದ್ದಾರೆ.