Thursday, September 29, 2022

ತಿರುಪತಿ ದೇಗುಲಕ್ಕೆ ಕೋಟ್ಯಾಂತರ ರೂ. ದೇಣಿಗೆ ನೀಡಿದ ಮುಸ್ಲಿಂ ದಂಪತಿ..!

ತಿರುಪತಿ: ಮುಸ್ಲಿಂ ಸಮುದಾಯದ ಕುಟುಂಬವೊಂದು ತಿರುಪತಿ ದೇವಸ್ಥಾನಕ್ಕೆ ನಿನ್ನೆ ಕೋಟ್ಯಾಂತರ ರೂಪಾಯಿ ದೇಣಿಗೆ ನೀಡಿದೆ.

ತಿರುಪತಿ ವೆಂಕಟೇಶನ ಪರಮ ಭಕ್ತರಾಗಿರುವ ಚೆನ್ನೈ ಮೂಲದ ಮುಸ್ಲಿಂ ದಂಪತಿಗಳಾದ ಅಬ್ದುಲ್ ಘನಿ ಮತ್ತು ಅವರ ಪತ್ನಿ ಸುಬೀನಾ ಬಾನು ಟಿಟಿಡಿಗೆ ತಮ್ಮ ಬೆಂಬಲ ನೀಡುವ ಸಲುವಾಗಿ ಈ ದೊಡ್ಡ ಮೊತ್ತದ ದೇಣಿಗೆ ನೀಡಿದ್ದಾರೆ.


ಇವರು ಒಟ್ಟು 1.02 ಕೋಟಿ ದೇಣಿಗೆಯಲ್ಲಿ 15 ಲಕ್ಷ ರೂಪಾಯಿ ಹಣವನ್ನು ಡಿಮ್ಯಾಂಡ್ ಟ್ರಾಫ್ಟ್ ರೂಪದಲ್ಲಿ ಟಿಟಿಡಿಯ ಶ್ರೀ ವೆಂಕಟೇಶ್ವರ ನಿತ್ಯ ಅನ್ನಪ್ರಸಾದಂ ಟ್ರಸ್ಟ್‌ಗೆ ನೀಡಲಾಗಿದೆ.

ಇನ್ನು 87 ಲಕ್ಷ ರೂಪಾಯಿ ಹಣವು ಹೊಸದಾಗಿ ನಿರ್ಮಿಸಲಾಗಿರುವ ಪದ್ಮಾವತಿ ವಿಶ್ರಾಂತಿ ನಿವಾಸಕ್ಕೆ (ಅತಿಥಿಗೃಹ) ಪೀಠೋಪಕರಣ ಹಾಗೂ ಪಾತ್ರೆಗಳ ರೂಪದಲ್ಲಿದೆ. ಅಬ್ದುಲ್ ಘನಿ ಅವರ ಕುಟುಂಬದಿಂದ ದೇಣಿಗೆಯ ಹಣದ ಚೆಕ್ ಅನ್ನು ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಎವಿ ಧರ್ಮ ರೆಡ್ಡಿ ಅವರು ಸ್ವೀಕರಿಸಿದರು.

ತಿರುಮಲದಲ್ಲಿ ಭಕ್ತಾದಿಗಳಿಗೆ ನೀಡುತ್ತಿರುವ ಅತ್ಯಂತ ಗುಣಮಟ್ಟದ ಸೇವೆಯನ್ನು ಕಂಡು ಮೆಚ್ಚಿಕೊಂಡಿರುವ ವೆಂಕಟೇಶ್ವರ ದೇವರ ಆರಾಧಕರಾದ ಘನಿ ಅವರು ಚೆನ್ನೈ ಮೂಲದ ಉದ್ಯಮಿಯಾಗಿದ್ದಾರೆ. ಮುಸ್ಲಿಂ ಸಮುದಾಯದ ಅವರು ವೆಂಕಟೇಶ್ವರ ದೇವರನ್ನು ಆರಾಧಿಸುವುದು ಕುತೂಹಲ ಮೂಡಿಸಿದೆ.

ಈ ಬಗ್ಗೆ ಮಾಧ್ಯಮಗಳ ಜತೆ ಮಾತನಾಡಿರುವ ಘನಿ, ‘ನಾನು ವೆಂಕಟೇಶ, ಅಲ್ಲಾ ಹಾಗೂ ಜೀಸಸ್ ಒಂದೇ ಎಂದು ನಂಬಿದ್ದೇನೆ. ಈ ಸರಳ ವಿಚಾರವನ್ನು ಜನರು ಅರ್ಥ ಮಾಡಿಕೊಳ್ಳುತ್ತಿಲ್ಲ ಎನ್ನುವುದು ನಾವು ಎದುರಿಸುತ್ತಿರುವ ಪ್ರಮುಖ ಸವಾಲಾಗಿದೆ. ತಾವು 25ಕ್ಕೂ ಹೆಚ್ಚು ವರ್ಷಗಳಿಂದ ದೇವಸ್ಥಾನಕ್ಕೆ ಭೇಟಿ ನೀಡುತ್ತಿರುವುದಾಗಿ ತಿಳಿಸಿದ್ದಾರೆ.

ಆದರೆ ತಮಗೆ ಗೋವಿಂದನ ಮೇಲೆ ಭಕ್ತಿ ಹೇಗೆ ಶುರುವಾಯ್ತು ಎಂಬ ರಹಸ್ಯ ಬಿಚ್ಚಿಡಲು ಅವರು ಒಪ್ಪಿಕೊಂಡಿಲ್ಲ. “ನಾನು ಗೋಪ್ಯವಾಗಿ ಇರಿಸಿಕೊಳ್ಳಲು ಬಯಸಿರುವ ಸಂಬಂಧವಿದು. ಇದು ನನ್ನ ಮತ್ತು ಆತನ ನಡುವಿನ ಪರಸ್ಪರ ಹೊಂದಾಣಿಕೆ” ಎಂದಿದ್ದಾರೆ.

ಅಧಿಕಾರಿಗಳು ಅಬ್ದುಲ್ ಘನಿ ಮತ್ತು ಅವರ ಕುಟುಂಬದ ಸದಸ್ಯರಿಗೆ ದೇವಸ್ಥಾನದ ಪ್ರಸಾದವನ್ನು ವಿತರಿಸಿದರು.

 

 

 

LEAVE A REPLY

Please enter your comment!
Please enter your name here

Hot Topics

ಪುತ್ತೂರು: PFI ಪ್ರಧಾನ ಕಛೇರಿಗೆ ಬೆಳಿಗ್ಗೆಯಿಂದಲೇ ಬೀಗ-ಗುಪ್ತಸಭೆ ನಡೆಸುತ್ತಿದ್ದ ಆರೋಪ

ಪುತ್ತೂರು: ದೇಶದಾದ್ಯಂತ ಪಿಎಫ್ಐ ಹಾಗೂ ಅದರ ಬೆಂಬಲಿತ ಸಂಘಟನೆಗಳಿಗೆ ಕೇಂದ್ರ ಗೃಹ ಸಚಿವಾಲಯ ನಿಷೇಧ ಹೇರಿರುವ ಮಧ್ಯೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಗರದ ಹೃದಯ ಭಾಗದಲ್ಲಿ ಕಾರ್ಯಾಚರಿಸುತ್ತಿರುವ ಪಿಎಫ್ಐ ನ ಪ್ರಧಾನ...

ಉಡುಪಿ: ಮೊಬೈಲ್‌ ಶಾಪ್‌ನಲ್ಲಿ 1 ಲಕ್ಷ ರೂ ಮೌಲ್ಯದ ಸೊತ್ತು ಕದ್ದ ಕಳ್ಳ-ಪ್ರಕರಣ ದಾಖಲು

ಉಡುಪಿ: ಮೊಬೈಲ್ ಅಂಗಡಿಗೆ ರಾತ್ರಿ ವೇಳೆ ನುಗ್ಗಿದ ಕಳ್ಳನೊಬ್ಬ ಮೊಬೈಲ್ ಮತ್ತಿತರ ವಸ್ತುಗಳನ್ನು ಕಳವುಗೈದ ಘಟನೆ ಉಡುಪಿಯ ಮಲ್ಪೆಯ ಬಸ್ ನಿಲ್ದಾಣ ಸಮೀಪದ ಅಂಗಡಿಯಲ್ಲಿ ನಡೆದಿದೆ.ಇತ್ತೀಚಿನ ದಿನಗಳಲ್ಲಿ ಉಡುಪಿಯಲ್ಲಿ ಕಳ್ಳಕಾಕರ ಹಾವಳಿ ಮತ್ತೆ...

‘ಪುರಾಣ ಜ್ಞಾನ ನೀಡುವ ಅದ್ಭುತವಾದ ಕಲೆ ಯಕ್ಷಗಾನ’

ಮಂಗಳೂರು: ಶ್ರೀ ವಾಗೀಶ್ವರಿ ಯಕ್ಷಗಾನ ಕಲಾವರ್ಧಕ ಸಂಘದ ಶತಮಾನೋತ್ಸವದ 29 ನೆಯ ಸರಣಿ ಕಾರ್ಯಕ್ರಮದಲ್ಲಿ ಲೆಕ್ಕ ಪರಿಶೋಧಕ CA ಗಿರಿಧರ ಕಾಮತ್ ಯಕ್ಷಗಾನ ಕಲೆಯು ಪುರಾಣ ಜ್ಞಾನ ನೀಡುವಷ್ಟು ಬೇರೆ ಯಾವ ಮಾಧ್ಯಮವೂ...