Thursday, September 29, 2022

ಮುಸ್ಲಿಂ ಸಮುದಾಯದ ಕಸೂತಿ: ಮಂಗಳೂರು ಶಾರದೆಗೆ ಸ್ವರ್ಣ ಜರಿ ಸೀರೆ

ಮಂಗಳೂರು: ಮೈಸೂರಿನ ಬಳಿಕ ಮಂಗಳೂರು ದಸರಾ ಎಂದರೆ ಅತ್ಯಂತ ಸಂಭ್ರಮ. ದೇಶವಿದೇಶದ ನೂರಾರು ಮಂದಿ ಇಲ್ಲಿಗೆ ಆಗಮಿಸಿ ಇಲ್ಲಿನ ದಸರಾ ಸಂಭ್ರಮವನ್ನು ಕಣ್ತುಂಬಿಕೊಳ್ಳುತ್ತಾರೆ.

ಕರಾವಳಿಯಲ್ಲಿ ಅಷ್ಟೇ ಪ್ರಸಿದ್ಧವಾಗಿರುವುದು ಮಂಗಳೂರು ಶಾರದೆ ಕೂಡಾ.
ಈ ಬಾರಿ ರಥಬೀದಿಯ ಉತ್ಸವದ ಮಂಗಳೂರು ಶಾರದೆ ಸ್ವರ್ಣ ಜರಿಸೀರೆಯಲ್ಲಿ ಕಂಗೊಳಿಸಲಿದ್ದಾಳೆ. ವಾರಣಾಸಿ ಕಾಶಿ ವಿಶ್ವನಾಥ ಕ್ಷೇತ್ರದಲ್ಲಿ ಶೆಹನಾಯಿ ವಾದನದ ಮೂಲಕ ಉಸ್ತಾದ್ ಬಿಸ್ಮಿಲ್ಲಾ ಖಾನ್ ದೇಶಾದ್ಯಂತ ಮನೆ ಮಾತಾದವರು.


ಅದೇ ಪರಿವಾರಕ್ಕೆ ಸಂಬಂಧಪಟ್ಟ ವಾರಣಾಸಿಯ ಜ್ಞಾನವ್ಯಾಪಿ ಸಮೀಪ ಮಂಗಳೂರು ಶಾರದೆಗೆ 8 ಲಕ್ಷ ರೂಪಾಯಿ ಮೌಲ್ಯದ ಸ್ವರ್ಣ ಜರಿ ಸೀರೆ ತಯಾರಿಸಲಾಗುತ್ತಿದ್ದು, ಕುಸುರಿ ಕೆಲಸ ಕೊನೆ ಹಂತದಲ್ಲಿದೆ.

ಪ್ರತಿ ವರ್ಷ ಮಂಗಳೂರು ಶಾರದೆಗೆ ಉತ್ಸವದ ಕೊನೇ ದಿನ ಬೆಳ್ಳಿಯ ಜರಿಯಿರುವ ರೇಷ್ಮೆ ಸೀರೆಯನ್ನು ಉಡಿಸಲಾಗುತ್ತಿದ್ದು, ನಗರದ ದಾನಿಯೊಬ್ಬರು ಈ ಸೀರೆಯನ್ನು ಕೊಡುಗೆಯಾಗಿ ನೀಡುತ್ತಿದ್ದಾರೆ.


ಬನಾರಸ್ ಸೀರೆಗಳು ಸೇರಿದಂತೆ ಇತರ ಸೀರೆಗಳಿಗೆ ಬೆಳ್ಳಿ, ಚಿನ್ನದಿಂದ ರಚಿಸುವ ಸೂಕ್ಷ್ಮ ಕಸೂತಿ ಕಲೆಗಳು ಗೊತ್ತಿರುವುದು ವಾರಣಾಸಿಯಲ್ಲಿ ಈ ಸಮುದಾಯಕ್ಕೆ ಮಾತ್ರ.

ಆದುದರಿಂದ ದೇಶಾದ್ಯಂತ ದೇವರ ಸೀರೆ, ದೇವರ ಪಲ್ಲಕ್ಕಿಯ ಮೇಲೆ ಹಾಕುವ ವಜ್ರ ತಟ್ಟಿ ಸೇರಿದಂತೆ ಇತರ ಸೊತ್ತುಗಳನ್ನು ಇವರಿಂದಲೇ ರಚಿಸಲಾಗುತ್ತಿದೆ.


ಈ ಮೂಲಕ ಶಾರದೆ ಸೌಹಾರ್ದತೆಯ ಕಲೆಯ ಕೊಂಡಿಯಾಗಿಯೂ ಭಕ್ತರನ್ನು ಬೆಸೆದಿದ್ದಾಳೆ.
ಮಂಗಳೂರು ಶಾರದಾ ಮಹೋತ್ಸವಕ್ಕೆ ಈ ಬಾರಿ ಶತಮಾನೋತ್ಸವ ಸಂಭ್ರಮವಾಗಿದ್ದು, 8 ಲಕ್ಷ ರೂಪಾಯಿ ವೌಲ್ಯದ ಝರಿ ಸೀರೆಯ ಜೊತೆಗೆ ರಥಬೀದಿಯ ಶಾರದೋತ್ಸವ ಸಮಿತಿ ಮತ್ತು ಭಕ್ತಾದಿಗಳು ಒಟ್ಟು ಸೇರಿ 200 ಪವನ್ ತೂಕದ ಚಿನ್ನಾಭರಣಗಳನ್ನು ದೇವಿಗೆ ಸಮರ್ಪಿಸಲಿದ್ದಾರೆ.

 

LEAVE A REPLY

Please enter your comment!
Please enter your name here

Hot Topics

ವಿಧ್ವಂಸಕ ಕೃತ್ಯಗಳಿಗೆ ಈ ದೇಶದಲ್ಲಿ ಎಂದಿಗೂ ಅವಕಾಶವಿಲ್ಲ-CM ಬೊಮ್ಮಾಯಿ

ಬೆಂಗಳೂರು: ವಿಧ್ವಂಸಕ ಕೃತ್ಯಗಳಿಗೆ ಈ ದೇಶದಲ್ಲಿ ಅವಕಾಶವಿಲ್ಲ. ಅದೂ ನರೇಂದ್ರ ಮೋದಿಯವರು ಹಾಗೂ ಅಮಿತ್ ಶಾ ಅವರ ನಾಯಕತ್ವದಲ್ಲಿ ಇಂಥವುಗಳಿಗೆ ಎಡೆಯಿಲ್ಲ ಎಂಬ ನಿರ್ಣಯ ಸ್ಪಷ್ಟವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.ಅವರು...

5 ವರ್ಷ PFI ಬ್ಯಾನ್ : ಮಂಗಳೂರಿನ ಕಚೇರಿಗಳಿಗೆ ಬೀಗ ಜಡಿದು ಸೀಲ್ ಡೌನ್ ಮಾಡಿದ ಪೊಲೀಸರು..!

ಮಂಗಳೂರು : ಪಿಎಫ್‌ಐ ಮತ್ತು ಅದರ ಅಂಗ ಸಂಘಟನೆಗಳನ್ನು 5 ವರ್ಷ ಕೇಂದ್ರ ಸರ್ಕಾರ ನಿಷೇಧ ಹೇರಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಕೇಂದ್ರ ಸರ್ಕಾರದ ನಿರ್ದೇಶನದ ಮೇಲೆ ಪಿಎಫ್‌ಐ ಕಚೇರಿಗಳನ್ನು ಸೀಲ್ ಡೌನ್...

‘ಪುರಾಣ ಜ್ಞಾನ ನೀಡುವ ಅದ್ಭುತವಾದ ಕಲೆ ಯಕ್ಷಗಾನ’

ಮಂಗಳೂರು: ಶ್ರೀ ವಾಗೀಶ್ವರಿ ಯಕ್ಷಗಾನ ಕಲಾವರ್ಧಕ ಸಂಘದ ಶತಮಾನೋತ್ಸವದ 29 ನೆಯ ಸರಣಿ ಕಾರ್ಯಕ್ರಮದಲ್ಲಿ ಲೆಕ್ಕ ಪರಿಶೋಧಕ CA ಗಿರಿಧರ ಕಾಮತ್ ಯಕ್ಷಗಾನ ಕಲೆಯು ಪುರಾಣ ಜ್ಞಾನ ನೀಡುವಷ್ಟು ಬೇರೆ ಯಾವ ಮಾಧ್ಯಮವೂ...