Sunday, May 22, 2022

‘ಪುಷ್ಪ’ ಸಿನಿಮಾ ನೋಡಿ ಅಪ್ರಾಪ್ತರಿಂದ ಯುವಕನ ಬರ್ಬರ ಹತ್ಯೆ- ಕೃತ್ಯದ ವೀಡಿಯೋ ಚಿತ್ರೀಕರಣ

ನವದೆಹಲಿ: ಟಾಲಿವುಡ್‌ನ ಅಲ್ಲು ಅರ್ಜುನ್‌ ನಟನೆಯ ಸೂಪರ್‌ ಹಿಟ್‌ ‘ಪುಷ್ಪ’ ಸಿನಿಮಾ ನೋಡಿ ಅದರಿಂದ ಪ್ರಭಾವಿತರಾಗಿ ಯುವಕನನ್ನು ಮೂವರು ಆರೋಪಿಗಳು ಬರ್ಬರವಾಗಿ ಥಳಿಸಿ ಹತ್ಯೆ ಮಾಡಿದ ಆಘಾತಕಾರಿ ಘಟನೆ ದೆಹಲಿಯಲ್ಲಿ ನಡೆದಿದೆ.


ಕೊಲೆಗೀಡಾದ ಯುವಕ ಪಾರ್ಕ್‍ನಲ್ಲಿ ಗಿಲ್ಲಿ ದಾಂಡು ಆಡುತ್ತಿದ್ದ. ಆದರೆ ಆಟವಾಡುವುದನ್ನು ವಿರೋಧಿಸಿ ಆರೋಪಿಗಳು ಯುವಕನ ಜೊತೆ ಜಗಳವಾಡಿದ್ದಾರೆ.

ಆದರೆ ಗಲಾಟೆ ಅತಿರೇಕಕ್ಕೆ ಹೋಗಿ ಯುವಕನನ್ನು ಮೂವರು ಪಾರ್ಕ್‍ನಲ್ಲೇ ಕೊಲೆ ಮಾಡಿದ್ದಾರೆ. ಆರೋಪಿಗಳು ಜನಪ್ರಿಯವಾಗಲು ಕೃತ್ಯದ ವೀಡಿಯೋವನ್ನು ರೆಕಾರ್ಡ್ ಮಾಡಿದ್ದು, ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಲು ಯತ್ನಿಸಿದ್ದಾರೆ.


ಆರೋಪಿಗಳು ಕಳೆದ ತಿಂಗಳು ತೆಲುಗು ಸಿನಿಮಾ ‘ಪುಷ್ಪ – ದಿ ರೈಸ್’ ನೋಡಿ ಕೃತ್ಯ ಮಾಡಲು ಪ್ರೇರೇಪಣೆಗೊಂಡಿದ್ದಾರೆ. ಅಲ್ಲು ಅರ್ಜುನ್ ಅವರ ಪಾತ್ರದ ನಡವಳಿಕೆಯನ್ನು 10-15 ಯುವಕರ ಗುಂಪು ಅನುಕರಿಸಿ ‘ಬದ್ನಾಮ್’ ಎಂಬ ಗ್ಯಾಂಗ್ ರಚಿಸಿದ್ದಾರೆ.

ಈ ಹಿನ್ನೆಲೆ ಆ ಗುಂಪಿನ ಮೂವರು ಜ.19ರಂದು ಕ್ಷುಲ್ಲಕ ಕಾರಣಕ್ಕೆ ಯುವಕನ ಜೊತೆ ಜಗಳವಾಡಿದ್ದು, ಆತನನ್ನು ಕೊಂದಿದ್ದಾರೆ. ಮೃತ ವ್ಯಕ್ತಿಯನ್ನು ಶಿಬು ಹುಸೇನ್ ಎಂದು ಪೊಲೀಸರು ಗುರುತಿಸಿದ್ದಾರೆ.


ಘಟನೆ ಬಗ್ಗೆ ಮಾಹಿತಿ ನೀಡಿದ ಡಿಸಿಪಿ ಉಷಾ ರಂಗಾನಿ, ಆಸ್ಪತ್ರೆಯಿಂದ ಮೃತ ಶಿಬುವಿನ ದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ.

ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಲಾಗಿದ್ದು, ಕೃತ್ಯ ನಡೆದ 12 ಗಂಟೆಯೊಳಗೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಕೃತ್ಯದ ವೀಡಿಯೋವನ್ನು ಯುವಕರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲು ಯತ್ನಿಸಿದ್ದರು ಎಂದು ತಿಳಿಸಿದ್ದಾರೆ.

ನಾವು ಸರಿಯಾದ ಸಮಯಕ್ಕೆ ತಲುಪಿದ್ದೇವೆ. ಆರೋಪಿಗಳು ಕೃತ್ಯದ ಕ್ರೂರ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲು ಹೊರಟಿದ್ದರು.

ನಾವು ಅದನ್ನು ನೋಡಿದ್ದು, ಪೋಸ್ಟ್ ಮಾಡುವುದನ್ನು ತಡೆದಿದ್ದೇವೆ. ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಫಾಲೋವರ್ಸ್ ಮಾಡಿಕೊಳ್ಳಲು ಈ ರೀತಿ ಕೃತ್ಯವನ್ನು ಮಾಡಿದ್ದಾರೆ. ಈ ಕೃತ್ಯವನ್ನು ಪೋಸ್ಟ್ ಮಾಡಿ ಇತರರನ್ನು ಪ್ರೇರೇಪಿಸಲು ಆರೋಪಿಗಳು ಬಯಸಿದ್ದರು ಎಂದು ವಿವರಿಸಿದರು.

ಆರೋಪಿಗಳನ್ನು ಎಸಿಪಿ ತಿಲಕ್ ಚಂದ್ರ ಬಿಷ್ತ್ ಅವರ ತಂಡ ಬಂಧಿಸಿದ್ದು, ಕೃತ್ಯಕ್ಕೆ ಬಳಸಲಾಗಿದ್ದ ಆಯುಧಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಈ ಆರೋಪಿಗಳ ವಯಸ್ಸು ಕ್ರಮವಾಗಿ 15, 16 ಮತ್ತು 17 ವರ್ಷ ಎಂದು ಗುರುತಿಸಲಾಗಿದ್ದು, ಇವರು ‘ಪುಷ್ಪಾ’ ಮತ್ತು ‘ಭೌಕಾಲ್’ ಸಿನಿಮಾ ವೀಕ್ಷಿಸಿ ಅದರಿಂದ ಪ್ರೇರಣೆಗೊಂಡು ಈ ಕೃತ್ಯ ಮಾಡಿದ್ದೇವೆ ಎಂದು ಒಪ್ಪಿಕೊಂಡಿದ್ದಾರೆ.


ಆರೋಪಿಗಳು ಇನ್‍ಸ್ಟಾಗ್ರಾಮ್‍ನಲ್ಲಿ ಸಕ್ರಿಯರಾಗಿದ್ದಾರೆ.

ಇವರು ಆಗಾಗ್ಗೆ ರೀಲ್‍ಗಳು ಮತ್ತು ವೀಡಿಯೋಗಳನ್ನು ಲಿಪ್ ಸಿಂಕ್ ಮಾಡಿ ಅಥವಾ ಬಾಲಿವುಡ್ ಹಾಡುಗಳಿಗೆ ನೃತ್ಯ ಮಾಡಿ ಪೋಸ್ಟ್ ಮಾಡುತ್ತಿದ್ದರು.

ಆರೋಪಿಗಳು ಹಿಂಸೆಗೆ ಸಂಬಂಧಿಸಿದ ವೀಡಿಯೋಗಳನ್ನು ಹೆಚ್ಚು ಪೋಸ್ಟ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here

Hot Topics

ಮನಪಾ ವ್ಯಾಪ್ತಿಯಲ್ಲಿ 1 ಕೋಟಿ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ

ಮಂಗಳೂರು: ಮಹಾನಗರ ಪಾಲಿಕೆಯ ಕದ್ರಿ ದಕ್ಷಿಣ ವಾರ್ಡಿನಲ್ಲಿ 1 ಕೋಟಿ ವೆಚ್ಚದಲ್ಲಿ ರಾಜಕಾಲುವೆಯ ಆಯ್ದ ಭಾಗಗಳಲ್ಲಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ವೇದವ್ಯಾಸ್ ಕಾಮತ್ ಅವರು ಭೂಮಿಪೂಜೆ ನೆರವೇರಿಸಿದರು.ಈ ಕುರಿತು ಮಾತನಾಡಿದ ಅವರು, ಕದ್ರಿ...

ಕಾಂಗ್ರೆಸ್ ನಾರಾಯಣ ಗುರು ಹೆಸರಲ್ಲಿ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದೆ: ಬಿಜೆಪಿ

ಮಂಗಳೂರು: ಕಾಂಗ್ರೆಸ್ ಮತ್ತು ಮಾಜಿ ಶಾಸಕ ಜೆ ಆರ್ ಲೋಬೋ ಅವರು ಗೊಂದಲ ಸೃಷ್ಟಿಸಿ ನಾರಾಯಣ ಗುರುಗಳ ಹೆಸರಿನಲ್ಲಿ ರಾಜಕೀಯ ಲಾಭ ಪಡೆದುಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸುದರ್ಶನ್...

ಏಕಲವ್ಯ ಪ್ರಶಸ್ತಿ ವಿಜೇತ ಕಬಡ್ಡಿ ಆಟಗಾರ ಉದಯ್ ಚೌಟ ಇನ್ನಿಲ್ಲ

ಬಂಟ್ವಾಳ: ಏಕಲವ್ಯ ಪ್ರಶಸ್ತಿ ವಿಜೇತ ಕಬಡ್ಡಿ ಆಟಗಾರ, ಉದಯ್ ಚೌಟ ಅನಾರೋಗ್ಯದಿಂದ ಇಂದು ನಿಧನರಾಗಿದ್ದಾರೆ.ಬಂಟ್ವಾಳ ತಾಲೂಕು ಮಾಣಿಯ ಬದಿಗುಡ್ಡೆ ನಿವಾಸಿಯಾಗಿರುವ ಉದಯ್ ಚೌಟ ಕಬಡ್ಡಿ ಕ್ಷೇತ್ರದಲ್ಲಿ ತಮ್ಮದೇ ಆದ ಹೆಸರು ಮಾಡಿದ್ದರು.ಅಲ್ಲದೇ ದ.ಕ...