Connect with us

KADABA

ಬೆಳ್ತಂಗಡಿ: ಜೈಲಿನಿಂದ ಹೊರಬಂದು ಸ್ಕೂಟರ್ ಕದ್ದು ಮತ್ತೆ ಪೊಲೀಸ್ ಅತಿಥಿಯಾದ ಭೂಪ

Published

on

ಬೆಳ್ತಂಗಡಿ: ಹತ್ಯೆ ಆರೋಪದಲ್ಲಿ ಜೈಲಿನಿಂದ ಬಿಡುಗಡೆಗೊಂಡಿದ್ದ ಕೇರಳ ಮಲಪ್ಪುರಂ ಮೂಲದ ವ್ಯಕ್ತಿಯೋರ್ವ ಕರ್ನಾಟಕಕ್ಕೆ ಬಂದು ಮಹಿಳೆಯೊಬ್ಬರ ಸ್ಕೂಟರ್ ಕಳ್ಳತನ ಮಾಡಿ ಮತ್ತೆ ಪೊಲೀಸರ ಅತಿಥಿಯಾದ ಘಟನೆ ಜಿಲ್ಲೆಯ ಗುಂಡ್ಯ ಎಂಬಲ್ಲಿ ನಡೆದಿದೆ.

ಬಂಧಿತನನ್ನು ವಿನೀಶ್ (21) ಎಂದು ಗುರುತಿಸಲಾಗಿದೆ. ಈತ ಕೋಯಿಕೋಡ್ ಮಾನಸಿಕ ಆಸ್ಪತ್ರೆಯಿಂದ ತಪ್ಪಿಸಿಕೊಂಡು ಬಂದಿರುವುದಾಗಿ ಹೇಳಲಾಗಿದೆ.


ಬಂಧಿತನನ್ನು ಕೊಲೆಯೊಂದರ ಆರೋಪಿ ಎನ್ನಲಾಗಿದ್ದು, ಈತ ಸ್ವಾತಂತ್ರ್ಯ ದಿನಾಚರಣೆಯಂದು ಕೇರಳದ ಕಣ್ಣೂರು ಜೈಲಿನಿಂದ ಬಿಡುಗಡೆಯಾಗಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

ಅದೇ ದಿನ ಈತ ಕರ್ನಾಟಕಕ್ಕೆ ಬಂದು ಕಾಲೇಜೊಂದರ ಉಪನ್ಯಾಸಕಿಯ ದ್ವಿಚಕ್ರ ವಾಹನವನ್ನು ಕಳ್ಳತನ ಮಾಡಿದ್ದು, ಸದ್ಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿನ ಎಂಜಿರ ಮಲ್ನಾಡ್ ಢಾಬಾದ ಸಮೀಪದಲ್ಲಿ ದಿನಸಿ ಖರೀದಿಸಲು ಹೋಗಿದ್ದ ಉಪನ್ಯಾಸಕಿಯ ಸ್ಕೂಟಿಯನ್ನು ಎಗರಿಸಿದ್ದ ಆರೋಪಿ, ಅಲ್ಲಿಂದ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾನೆ ಎನ್ನಲಾಗಿದೆ.

ಬಳಿಕ ಅಂಗಡಿಯಿಂದ ವಾಪಸ್​ ಬಂದ ಉಪನ್ಯಾಸಕಿ ಸ್ಕೂಟಿ ಕಾಣಿಸದಿದ್ದಾಗ ಈ ವಿಚಾರವನ್ನು ಸ್ಥಳೀಯರಿಗೆ ತಿಳಿಸಿದ್ದಾರೆ.

ಸ್ಥಳೀಯರು ಈ ವಿಚಾರವನ್ನು ವಾಟ್ಸ್​ಆ್ಯಪ್​ ಗ್ರೂಪ್ ಗಳಲ್ಲಿ ಶೇರ್ ಮಾಡಿದ್ದು, ಇದರಿಂದಾಗಿ ಗುಂಡ್ಯ ಚೆಕ್ ಪೋಸ್ಟ್ ನಲ್ಲಿ ಆರೋಪಿ ವಿನೀಶ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸ್ಕೂಟಿ ಕಳ್ಳತನವಾದ ಪ್ರದೇಶ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವುದರಿಂದ ಧರ್ಮಸ್ಥಳ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಈತ ಮಾನಸಿಕ ಅಸ್ವಸ್ಥನಂತೆ ವರ್ತನೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಧರ್ಮಸ್ಥಳ ಪೊಲೀಸರು ಕೇರಳ ಪೊಲೀಸರಿಗೆ ಮಾಹಿತಿ ಕೊಟ್ಟು, ಕೇರಳದ ಪೊಲೀಸರು ಧರ್ಮಸ್ಥಳಕ್ಕೆ ಬಂದು ವಿನೀಶ್ ನನ್ನು ಕೇರಳಕ್ಕೆ ಕರೆದುಕೊಂಡು ಹೋಗಿದ್ದಾರೆ ಎಂದು ತಿಳಿದುಬಂದಿದೆ

DAKSHINA KANNADA

ಬೀದಿ ನಾಯಿಯನ್ನು ರಕ್ಷಿಸಲು ಹೋಗಿ ಉರುಳಿ ಬಿದ್ದ ಆಟೋ..!! ಚಾಲಕ ಗಂಭೀರ

Published

on

ಕಡಬ: ನಾಯಿ ಒಂದು ಸಡನ್ ಆಗಿ ರಸ್ತೆಗೆ ಅಡ್ಡ ಬಂದ ಕಾರಣ ಅದೇ ರಸ್ತೆಯಲ್ಲಿ ಬರುತ್ತಿದ್ದ ಅಟೋ, ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿ ನಡೆದಿದೆ. ಅಟೋ ಉರುಳಿ ಬಿದ್ದ ಕಾರಣ ಅಟೋ ಚಾಲಕ ಗಂಭೀರ ಗಾಯಗೊಂಡಿದ್ದಾರೆ. ಅಲಂಕಾರು ಗ್ರಾಮದ ಸುರುಳಿ ಎಂಬಲ್ಲಿ ಈ ಅಪಘಾತ ನಡೆದಿದ್ದು, ಅಟೋ ಚಾಲಕ ಸುಬ್ರಹ್ಮಣ್ಯ ನಾಯ್ಕ ಎಂಬವರು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸುಬ್ರಹ್ಮಣ್ಯ ನಾಯ್ಕ ಅವರು ಅಟೋ ಚಲಾಯಿಸಿಕೊಂಡು ಆಲಂಗಾರು ಕಡೆ ಬರುತ್ತಿದ್ದಾಗ ಇಕ್ಕಟ್ಟಾದ ರಸ್ತೆಯಲ್ಲಿ ನಾಯಿ ಒಂದು ಧಿಡೀರ್ ಆಗಿ ರಸ್ತೆಗೆ ಎಂಟ್ರಿ ಕೊಟ್ಟಿದೆ. ಈ ವೇಳೆ ನಾಯಿಯನ್ನು ರಕ್ಷಿಸಲು ತಕ್ಷಣ ಅಟೋದ ಬ್ರೇಕ್‌ ಹಿಡಿದಾಗ ಅಟೋ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ. ಅದೃಷ್ಟವಶಾತ್ ಅಟೋದಲ್ಲಿ ಯಾವುದೇ ಪ್ರಯಾಣಿಕರು ಇಲ್ಲದ ಕಾರಣ ದೊಡ್ಡ ಅನಾಹುತ ನಡೆದಿಲ್ಲ. ಚಾಲಕ ಸುಬ್ರಹ್ಮಣ್ಯ ನಾಯ್ಕ ಅವರು ಕಾಲು ಮುರಿತಕ್ಕೆ ಒಳಗಾಗಿದ್ದಲ್ಲದೆ ಗಂಭೀರ ಗಾಯಗೊಂಡಿದ್ದಾರೆ. ತಕ್ಷಣ ಪುತ್ತೂರು ಆಸ್ಪತ್ರೆಗೆ ರವಾನಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

Continue Reading

DAKSHINA KANNADA

ಕಡಬ ತಾಲೂಕು ಪಂಚಾಯತ್ ಕಚೇರಿಗೆ ಲೋಕಾಯುಕ್ತ ದಾಳಿ!

Published

on

ಕಡಬ : ಕೊಡಗು ಜಿಲ್ಲೆಯ ಲೋಕಾಯುಕ್ತ ಪೊಲೀಸರು ಕಡಬದಲ್ಲಿ ದಾಳಿ ನಡೆಸಿ ಆಶ್ಚರ್ಯ ಮೂಡಿಸಿದ್ದಾರೆ. ಕಡಬ ತಾಲೂಕು ಪಂಚಾಯತ್ ಇಒ ಬಿ.ವಿ ಜಯಣ್ಣ ಅವರ ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತರು ದಾಳಿ ನಡೆಸಿದ್ದಾರೆ. ಕಡಬ ತಾಲೂಕು ಪಂಚಾಯತ್ ಇಒ ಆಗಿ ಜಯಣ್ಣ ಇತ್ತೀಚೆಗಷ್ಟೇ ಅಧಿಕಾರ ವಹಿಸಿಕೊಂಡಿದ್ದರು.

ಇದಕ್ಕೂ ಮೊದಲು ಸೋಮವಾರ ಪೇಟೆ ತಾಲೂಕ ಪಂಚಾಯತ್ ನಲ್ಲಿ ಅವರು ಇಒ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಅಲ್ಲಿರುವಾಗಲೇ ಇವರ ವಿರುದ್ಧ ಅಕ್ರಮ ಆಸ್ತಿಗಳಿಕೆಯ ದೂರು ದಾಖಲಾಗಿದ್ದು, ಆ ವಿಚಾರದ ತನಿಖೆಗೆ ಇಂದು ಕಡಬದಲ್ಲಿ ವಿಚಾರಣೆ ನಡೆಸಿದ್ದಾರೆ.
ಸೋಮವಾರಪೇಟೆಯ ಮನೆ, ಕಡಬದ ಕಚೇರಿ ಹಾಗೂ ಕಡಬದಲ್ಲೇ ಇರುವ ಜಯಣ್ಣ ಅವರ ಬಾಡಿಗೆ ಮನೆ ಮೇಲೆ ಏಕ ಕಾಲಕ್ಕೆ ದಾಳಿ ಮಾಡಲಾಗಿದೆ.

ಕೊಡಗು ಲೋಕಾಯುಕ್ತ ಡಿವೈಎಸ್ಪಿ ಪವನ್ ಕುಮಾರ್, ಇನ್ಸ್ ಪೆಕ್ಟರ್ ಲೋಕೇಶ್ ನೇತೃತ್ವದಲ್ಲಿ ದಾಳಿ ನಡೆದಿದ್ದು, ಇನ್ಸ್ ಪೆಕ್ಟರ್ ಶಶಿಕುಮಾರ್ ಹಾಗೂ ಸಿಬ್ಬಂದಿ ಜಯಣ್ಣ ಅವರ ವಿಚಾರಣೆ ನಡೆಸುತ್ತಿದ್ದಾರೆ.

Continue Reading

DAKSHINA KANNADA

KADABA : ಆ್ಯಸಿಡ್ ದಾಳಿ ಪ್ರಕರಣ; ಸಹಕರಿಸಿದ ಇಬ್ಬರು ವಶಕ್ಕೆ

Published

on

ಕಡಬ : ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರ ಮೇಲೆ ನಡೆದ ಆ್ಯಸಿಡ್ ದಾಳಿ ಪ್ರಕರಣದಲ್ಲಿ ಮತ್ತಿಬ್ಬರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕೇರಳದಲ್ಲಿ ಇಬ್ಬರನ್ನು ವಶಕ್ಕೆ ಪಡೆದಿರುವ ಪೊಲೀಸರು ಆರೋಪಿಗಳನ್ನು ಕಡಬಕ್ಕೆ ಕರೆತಂದಿದ್ದಾರೆ.

ಮಾರ್ಚ್ 5 ರಂದು ಕಡಬದ ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಮೇಲೆ ಕೇರಳ ಮೂಲದ ಅಬೀನ್  ಎಂಬ ಎಂಬಿಎ ವಿದ್ಯಾರ್ಥಿ ಆಸಿಡ್ ಎರಚಿ ಬಂಧಿತನಾಗಿದ್ದ. ಆರೋಪಿಗೆ ಅಸಿಡ್ ಎಲ್ಲಿಂದ ಸಿಕ್ಕಿತು ಅನ್ನೋ ವಿಚಾರವಾಗಿ ತನಿಖೆ ನಡೆಸಿದ ಪೊಲೀಸರು ಕೇರಳದ ಎರ್ನಾಕುಲಂ ಹಾಗೂ ತಮಿಳುನಾಡಿನ ಕೊಯಮತ್ತೂರಿನಲ್ಲಿ ಕಾರ್ಯಾಚರಣೆ ನಡೆಸಿದ್ದರು.

ಪೊಲೀಸರು ವಶಕ್ಕೆ ಪಡೆದಿರುವವರಲ್ಲಿ ಒಬ್ಬಾತ ಆ್ಯಸಿಡ್ ಪೂರೈಕೆ ಮಾಡಿದ್ದರೆ, ಮತ್ತೋರ್ವ ವ್ಯಕ್ತಿ ಆರೋಪಿಗೆ ಸಮವಸ್ತ್ರ ಹೊಲಿದು ಕೊಟ್ಟಿದ್ದಾನೆ ಎನ್ನಲಾಗಿದೆ. ಇಬ್ಬರನ್ನೂ ಕಡಬಕ್ಕೆ ಕರೆ ತರಲಾಗಿದ್ದು, ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

Continue Reading

LATEST NEWS

Trending