ಮಹಾರಾಷ್ಟ್ರದ ಮುಂಬೈನ ಜುಹು ಫೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜುಲೈ ,30 ರಂದು ಅಪ್ರಾಪ್ತ ಬಾಲಕಿಯ ಅತ್ಯಾಚಾರ ನಡೆಸಿ ನೇಪಾಳಕ್ಕೆ ಪರಾರಿಯಾಗಲೆತ್ನಿಸಿದ್ದ ಆರೋಪಿಯನ್ನು ಮುಂಬೈ ಕ್ರೈಮ್ ಬ್ರಾಂಚ್ ಪೊಲೀಸರು ಬಂಧಿಸಿದ್ದಾರೆ.
ಮುಂಬೈ : ಮಹಾರಾಷ್ಟ್ರದ ಮುಂಬೈನ ಜುಹು ಫೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜುಲೈ ,30 ರಂದು ಅಪ್ರಾಪ್ತ ಬಾಲಕಿಯ ಅತ್ಯಾಚಾರ ನಡೆಸಿ ನೇಪಾಳಕ್ಕೆ ಪರಾರಿಯಾಗಲೆತ್ನಿಸಿದ್ದ ಆರೋಪಿಯನ್ನು ಮುಂಬೈ ಕ್ರೈಮ್ ಬ್ರಾಂಚ್ ಪೊಲೀಸರು ಬಂಧಿಸಿದ್ದಾರೆ.
ಮುಂಭೈ ಕ್ರೈಂ ಬ್ರಾಂಚ್
ಹಿರಿಯ ಪೊಲೀಸ್ ಅಧಿಕಾರಿ ದಯಾ ನಾಯಕ್ ತಂಡ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದು ಇದೀಗ ಪೊಲೀಸರ ವಶಕ್ಕೆ ನೀಡಲಾಗಿದೆ.
ಆರೋಪಿ ಸುರತ್ ಚುಫೆ ಬುಲ್ @ ಸಂದೀಪ್ ಕಾಳು ಸಿಂಗ್ ಬುಲ್ (30 ವರ್ಷ) ಎಂದು ಗುರುತ್ತಿಸಲಾಗಿದೆ.
ಈತ ಜುಲೈ 30 ರಂದು ಜುಹು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಪರಾರಿಯಾಗಿದ್ದ ಎನ್ನಲಾಗಿದೆ.
ಆತನ ಮೇಲೆ ಪೊಸ್ಕೋ ಕಾನೂನಿನನ್ವಯ ಕ್ರೈ ನಂ. 453/33 ಸೆಕ್ಷನ್ 376 ಐಪಿಸಿ 4,8 ಮತ್ತು 12 ರಂತೆ ಪ್ರಕರಣ ದಾಖಲಾಗಿತ್ತು.
ತಲೆ ಮರೆಸಿಕೊಂಡಿದ್ದ ಆರೋಪಿಯ ಬಂಧನಕ್ಕಾಗಿ ತಾಂತ್ರಿಕ ತಂತ್ರಜ್ಞಾನ ಬಳಸಿಕೊಂಡು ಕ್ರೈಮ್ ಯುನಿಟ್ 9 ರ ತಂಡ ಮುಂದಾಗಿತ್ತು.ಈಗ ಬಾಂದ್ರಾ ಪೊಲೀಸ್ ಅಧಿಕಾರಿ ದಯಾ ನಾಯಕ್ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಆರೋಪಿ ಮುಂಬೈನ ನಾಲಸೋಪರ್, ನವದೆಹಲಿ ಮತ್ತು ಉತ್ತರಾಕಾಂಡ ರಾಜ್ಯಗಳಲ್ಲಿ ಓಡಾಟ ನಡೆಸಿರುವುದನ್ನು ಪತ್ತೆ ಹಚ್ಚಿದ್ದ ತಂಡ ಬಳಿಕ ಉತ್ತರಾಕಾಂಡ ರಾಜ್ಯದ ಪೌದಿಗಢ್ ವಾಲ್ ಎಂಬಲ್ಲಿ ಬಂಧಿಸಿದ್ದು, ಆತ ಅಲ್ಲಿಂದ ನೇಪಾಳಕ್ಕೆ ಪರಾರಿಯಾಗುವ ಯತ್ನದಲ್ಲಿದ್ದ ಎಂದು ತಿಳಿದು ಬಂದಿದೆ.