ಮುಂಬೈ: ಡ್ರಗ್ ಕೇಸ್ನಲ್ಲಿ ಸಿಲುಕಿರುವ ಬಾಲಿವುಡ್ ನಟ ಆರ್ಯನ್ ಖಾನ್ ಅನ್ನು ಅಕ್ಟೋಬರ್ 7ರವರೆಗೆ ಎನ್‌ಸಿಬಿ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ.
ಎನ್‌ಸಿಬಿ ಅಧಿಕಾರಿಗಳು ಇಂದು ಮುಂಬೈ ಕಿಲ್ಲಾ ಕೋರ್ಟ್ ಎದುರು ಹಾಜರುಪಡಿಸಿದ್ದಾರೆ. ಈ ವೇಳೆ ಆರ್ಯನ್ ಕಸ್ಟಡಿ ಅವಧಿಯನ್ನು ಅಕ್ಟೋಬರ್ 13ರವರೆಗೆ ವಿಸ್ತರಿಸುವಂತೆ ಕೋರ್ಟ್ ಮುಂದೆ ಎನ್‌ಸಿಬಿ ಕೋರಿದೆ.
ಆದರೆ, ಅಕ್ಟೋಬರ್ 7ರವರೆಗೆ ಎನ್‌ಸಿಬಿ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ.
ಎನ್‌ಸಿಬಿ ಪರ ಎಎಸ್‌ಜಿ ಅನಿಲ್‌ಸಿಂಗ್ ವಾದ ಮಂಡನೆ ಮಾಡಿದರು. ‘ಶಿಪ್ ಮೇಲೆ ದಾಳಿ ಮಾಡಿದಾಗ ಮಾದಕ ವಸ್ತು ಜಪ್ತಿ ಮಾಡಿದ್ದೇವೆ. ಡ್ರಗ್ಸ್ ಪೆಡ್ಲರ್ ಜೊತೆ ಚಾಟ್ ಮಾಡಿರುವ ವಿವರ ಸಿಕ್ಕಿದೆ. ಡ್ರಗ್ಸ್ ಲಿಂಕ್ ಬಹಿರಂಗಗೊಳಿಸಲು ಕಸ್ಟಡಿಗೆ ನೀಡಬೇಕು.
ಅಂತಾರಾಷ್ಟ್ರೀಯ ಡ್ರಗ್ಸ್ ವ್ಯವಹಾರ ಬಗ್ಗೆಯೂ ಕಣ್ಣಿಟ್ಟಿದ್ದೇವೆ. ಅಂತಾರಾಷ್ಟ್ರೀಯ ಡ್ರಗ್ಸ್ ವ್ಯವಹಾರವೂ ನಡೆದಿರುವ ಶಂಕೆ ಇದೆ. ಇನ್ನೂ ಕೆಲವು ಆರೋಪಿಗಳ ಗುರುತು ಪತ್ತೆ ಹಚ್ಚಬೇಕಿದೆ. ವಾಟ್ಸ್ಆ್ಯಪ್ನಲ್ಲಿ ಕೋಡ್ ಪದಗಳನ್ನು ಬಳಸಿ ಚಾಟಿಂಗ್ ಮಾಡಲಾಗಿದೆ. ಮೊಬೈಲ್ನಲ್ಲಿ ಹಣ ವರ್ಗಾವಣೆ ಮಾಹಿತಿ ಕೂಡ ಸಿಕ್ಕಿದೆ’ ಎಂದರು ಅನಿಲ್‌ಸಿಂಗ್.
ಆದರೆ, ಆರ್ಯನ್ ಪರ ವಕೀಲ ಸತೀಶ್ ಮಾನೇಶಿಂದೆ ಇದನ್ನು ಅಲ್ಲಗಳೆದಿದ್ದಾರೆ. ‘ಆರ್ಯನ್ ಅಲ್ಲಿ ಅತಿಥಿ ಆಗಿದ್ದರು. ಹೀಗಾಗಿ, ಅವರಿಗೆ ಟಿಕೆಟ್ ಇರಲಿಲ್ಲ.
ಬೋರ್ಡಿಂಗ್ ಪಾಸ್ ಕೂಡ ಇರಲಿಲ್ಲ. ಅವರ ಬ್ಯಾಗ್ ಶೋಧ ಮಾಡಿದಾಗ ಅದರಲ್ಲಿ ಏನು ಪತ್ತೆ ಆಗಿಲ್ಲ’ ಎಂದು ಸತೀಶ್ ಮಾನೇಶಿಂದೆ ನ್ಯಾಯಾಲಯಕ್ಕೆ ತಿಳಿಸಿದರು.
ಮುಂಬೈನ ಸಮುದ್ರ ತೀರದ ಐಷಾರಾಮಿ ಹಡಗಿನಲ್ಲಿ ಶನಿವಾರ (ಅ.2) ರಾತ್ರಿ ನಡೆಯುತ್ತಿದ್ದ ರೇವ್ ಪಾರ್ಟಿಯಲ್ಲಿ ಆರ್ಯನ್ ಕೂಡ ಇದ್ದರು.