ಮಂಗಳೂರು:ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್(92) ಡಿ.26 ರ ರಾತ್ರಿ ವಿಧಿವಶರಾಗಿದ್ದಾರೆ. ರಾತ್ರಿ 8 ಗಂಟೆಗೆ ಏಮ್ಸ್ ಆಸ್ಪತ್ರೆಗೆ ದಾಖಲಾದ ಮನಮೋಹನ್ ಸಿಂಗ್ ಅವರು ರಾತ್ರಿ 9.30 ರ ಸುಮಾರಿಗೆ ಇಹಲೋಕ ತ್ಯಜಿಸಿದ್ದಾರೆ. 2004 ರಿಂದ 2014 ರ ವರೆಗೆ ಎರಡು ಅವಧಿಗೆ ದೇಶದ ಮೊದಲ ಸಿಕ್ ಪ್ರಧಾನಿಯಾಗಿದ್ದರು. ನೆಹರು ಇಂದಿರಾ ಗಾಂಧಿ ಮತ್ತು ಮೋದಿ ಬಳಿಕ ಹೆಚ್ಚು ಕಾಲ ದೇಶದ ಪ್ರಧಾನಿಯಾಗಿದ್ದ ಹೆಗ್ಗಳಿಕೆ ಇವರದು.
1932 ರ ಸೆಪ್ಟಂಬರ್ 26 ರಲ್ಲಿ ಪಶ್ಚಿಮ ಪಂಜಾಬ್ ನಲ್ಲಿ ಜನಿಸಿದ್ದ ಮನಮೋಹನ್ ಸಿಂಗ್
ಅಮೃತಸರ ಹಿಂದೂ ಕಾಲೇಜಿನಲ್ಲಿ ಅದ್ಯಯನ ಮಾಡಿದ್ದು ಉನ್ನತ ವ್ಯಾಸಂಗವನ್ನು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದ ಟ್ರೈಪೋಸ್ ಪೂರ್ಣ ಮಾಡಿದ್ದರು.
ಖ್ಯಾತ ಅರ್ಥ ಶಾಸ್ತ್ರಜ್ಞರಾಗಿ, ಶಿಕ್ಷಣ ತಜ್ಞರಾಗಿ ಮನಮೋಹನ್ ಸಿಂಗ್ ಆರ್ಥಿಕ ಕ್ರಾಂತಿಯನ್ನು ದೇಶದಲ್ಲಿ ಮಾಡಿದ್ದರು. ದೇಶದ ಪ್ರಧಾನಿಯಾಗುವ ಮೊದಲು ಹಲವು ದೇಶಗಳ ಆರ್ಥಿಕ ಸಲಹೆಗಾರರಾಗಿ ಆ ದೇಶಗಳನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಿದ್ದರು.
ಮಿತಭಾಷಿಯಾಗಿದ್ದ ಅವರು ತಮ್ಮ ಕೆಲಸದ ಮೂಲಕವೇ ಎಲ್ಲದಕ್ಕೂ ಉತ್ತರ ನೀಡುತ್ತಿದ್ದರು.
ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ದೇಶದ ಜಿಡಿಪಿ ಶೇಖಡಾ9 ರಲ್ಲಿ ಇದ್ದು ಅಭಿವೃದ್ಧಿಶೀಲ ದೇಶಗಳ ಸಾಲಿನಲ್ಲಿ ದೇಶವನ್ನು ಗುರುತಿಸುವಂತೆ ಮಾಡಿದ್ದರು.
ಮಾಜಿ ಪ್ರಧಾನಿ ಅಗಲುವಿಕೆಯ ಸುದ್ದಿ ಕೇಳಿ ಸೋನಿಯಾ ಗಾಂಧಿ ಆದಿಯಾಗಿ ಕಾಂಗ್ರೆಸ್ ನಾಯಕರ ದಂಡು ಏಮ್ಸ್ ಆಸ್ಪತ್ರೆಗೆ ದಾವಿಸಿದ್ದಾರೆ. ಅಗಲಿದ ನಾಯಕನಿಗೆ ಪ್ರಧಾನಿ ಮೋದಿ ಸಹಿತ ಪ್ರಮುಖ ನಾಯಕರು ಶೃದ್ದಾಂಜಲಿ ಸಲ್ಲಿಸಿದ್ದಾರೆ.