ಮುಲ್ಕಿ: ಮುಲ್ಕಿ ತಾಲ್ಲೂಕಿನ ಕಿನ್ನಿಗೋಳಿ ಕೊಡೆತ್ತೂರು ನಿವಾಸಿ, ಹಿರಿಯ ಲೇಖಕಿಯೋರ್ವರು ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಗಾಯತ್ರಿ ಉಡುಪ (62) ನಿಧನರಾದ ಹಿರಿಯ ಲೇಖಕಿ.
ಅವರು ಮೂಲ್ಕಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷೆಯಾಗಿ, ನಿವೃತ್ತ ಶಿಕ್ಷಕಿಯಾಗಿ, ಕಿನ್ನಿಗೋಳಿ ಅನಂತ ಪ್ರಕಾಶದ ನಿರ್ದೇಶಕರಾಗಿ ಉತ್ತಮ ಲೇಖಕಿಯಾಗಿ , ಸಾಮಾಜಿಕ ಕಾರ್ಯಕರ್ತೆಯಾಗಿ ಜನಾನುರಾಗಿಯಾಗಿದ್ದರು.
ಅವರು ಪತಿ ಹಾಗೂ ಮೂವರು ಪುತ್ರರನ್ನು ಅಗಲಿದ್ದಾರೆ.