Home ಪ್ರಮುಖ ಸುದ್ದಿ ಮುಲ್ಕಿ ಉದ್ಯಮಿ ಹತ್ಯೆ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ದಾಖಲು..! ಆರೋಪಿಗಳು ಎರೆಸ್ಟ್..!

ಮುಲ್ಕಿ ಉದ್ಯಮಿ ಹತ್ಯೆ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ದಾಖಲು..! ಆರೋಪಿಗಳು ಎರೆಸ್ಟ್..!

ಮುಲ್ಕಿ ಉದ್ಯಮಿ ಹತ್ಯೆ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ದಾಖಲು..! ಆರೋಪಿಗಳು ಎರೆಸ್ಟ್..!

ಮಂಗಳೂರು : ಮಂಗಳೂರಿನ ಮುಲ್ಕಿಯಲ್ಲಿ ನಡೆದಿದ್ದ ಉದ್ಯಮಿಯ ಬರ್ಬರ ಹತ್ಯೆ ಪ್ರಕರಣ ಇಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮೆರಾದಲ್ಲಿ ಹಂತಕರ ಕೃತ್ಯ ದಾಖಲಾಗಿದೆ.

ಕಾರು ಮತ್ತೂ ಬೈಕ್ನಲ್ಲಿ ಬಂದಿದ್ದ 9 ಮಂದಿ ದುಷ್ಕರ್ಮಿಗಳು ಹಾಡು ಹಗಲಲ್ಲೇ ಅಬ್ದುಲ್ ಲತೀಫ್ ಎಂಬವರನ್ನು ಚೂರಿಯಿಂದ ಇರಿದು ಕೊಲೆಗೈದು ಪರಾರಿಯಾಗಿದ್ದರು.

ಅವರನ್ನು ಇರಿಯುತ್ತಿರುವ ಅಮಾನುಷ ಕೃತ್ಯ ಇಲ್ಲಿ ಅಳವಡಿಸಿದ್ದ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಇರಿತದ ಬಳಿಕ ಪ್ರಾಣ ರಕ್ಷಣೆಗೆ ಬ್ಯಾಂಕ್ ಒಳಗೆ ಬರಲು ಪ್ರಯತ್ನಿಸಿದ್ದರು.

ಮೂಡುಬಿದ್ರೆಯಲ್ಲಿ ಉದ್ಯಮಿಯಾಗಿರುವ ಅಬ್ದುಲ್ ಲತೀಫ್ರನ್ನು ಸಾರ್ವಜನಿಕರ ಎದುರಿನಲ್ಲೇ ಭೀಭತ್ಸವಾಗಿ ಹತ್ಯೆ ಮಾಡಲಾಗಿದ್ದು, ಇದು ವೈಯಕ್ತಿಕ ದ್ವೇಷದಿಂದಲೇ ಕೊಲೆ ಮಾಡಲಾಗಿದೆ ಎಂದು ತನಿಖೆಯಿಂದ ತಿಳಿದು ಬಂದಿದೆ.

ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮುಲ್ಕಿ ನಿವಾಸಿ ಮೊಹಮ್ಮದ್ ಹಾಸಿಮ್, ನಿಸಾರ್, ಮೊಹಮ್ಮದ್ ರಾಝಿಂ, ಉಡುಪಿಯ ಉಚ್ಚಿಲ ನಿವಾಸಿ ಅಬೂಬಕ್ಕರ್ ಸಿದ್ದಿಕ್ ಎಂಬವರನ್ನು ಬಂಧಿಸಲಾಗಿದ್ದು,

ಕೃತ್ಯಕ್ಕೆ ಬಳಸಿದ ಮಾರಕಾಸ್ತ್ರ, ವಾಹನ ವಶ ಪಡಿಸಿಕೊಂಡಿದ್ದು ತನಿಖೆ ಮುಂದುವರೆದಿದೆ ಎಂದು ಪೋಲಿಸರು ತಿಳಿಸಿದ್ದಾರೆ.

 

RECENT NEWS

ದ.ಕ-ಉಡುಪಿ ಜಿಲ್ಲೆಯಾದ್ಯಂತ ಭಾರಿ ಮಳೆ: ಆರೆಂಜ್ ಅಲರ್ಟ್ ಘೋಷಣೆ…

ದ.ಕ-ಉಡುಪಿ ಜಿಲ್ಲೆಯಾದ್ಯಂತ ಭಾರಿ ಮಳೆ: ಆರೆಂಜ್ ಅಲರ್ಟ್ ಘೋಷಣೆ… ಮಂಗಳೂರು/ಉಡುಪಿ: ಕರಾವಳಿ ಜಿಲ್ಲೆಗಳಲ್ಲಿ ಕಳೆದ ಒಂದು ವಾರದಿಂದ ಭಾರಿ ಮಳೆಯಾಗುತ್ತಿದೆ. ದಕ್ಷಿಣಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ, ಪುತ್ತೂರು, ಬೆಳ್ತಂಗಡಿ ಭಾಗದಲ್ಲಿ ಹೆಚ್ಚಿನ ಮಳೆಯಾಗುತ್ತಿದ್ದು, ಕಳೆದ ಎರಡು...

ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿಗೆ ಕೊರೊನಾ ಪಾಸಿಟಿವ್..!!

ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿಗೆ ಕೊರೊನಾ ಪಾಸಿಟಿವ್..!! ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಸೂರಜ್ ಜೈಬ್ ಅವರಿಗೂ ಕೋವಿಡ್ 19 ಸೋಂಕು...

ಉಳ್ಳಾಲ ನಗರಸಭೆಗೂ ವಕ್ಕರಿಸಿದ ವೈರಸ್: ರ್ಯಾಂಡಮ್ ಟೆಸ್ಟ್ ನಲ್ಲಿ 28 ಮಂದಿಗೆ ಪಾಸಿಟಿವ್ ಪತ್ತೆ..!!

ಉಳ್ಳಾಲ ನಗರಸಭೆಗೂ ವಕ್ಕರಿಸಿದ ವೈರಸ್: ರ್ಯಾಂಡಮ್ ಟೆಸ್ಟ್ ನಲ್ಲಿ 28 ಮಂದಿಗೆ ಪಾಸಿಟಿವ್ ಪತ್ತೆ..!! ಮಂಗಳೂರು: ಉಳ್ಳಾಲದಲ್ಲಿ ಬುಧವಾರ ನಡೆಸಲಾದ ರ್ಯಾಂಡಮ್ ಟೆಸ್ಟ್ ವರದಿ ನಿನ್ನೆ (ಜುಲೈ 3) ಬಂದಿದ್ದು ಮತ್ತೆ 28 ಮಂದಿಯಲ್ಲಿ...

ಉಡುಪಿಯಲ್ಲಿ ಇಂದು 14 ಮಂದಿಗೆ ಪಾಸಿಟಿವ್ ಪತ್ತೆ: ಪೀಡಿತರ ಸಂಖ್ಯೆ 1242ಕ್ಕೆ ಏರಿಕೆ..!!

ಉಡುಪಿಯಲ್ಲಿ ಇಂದು 14 ಮಂದಿಗೆ ಪಾಸಿಟಿವ್ ಪತ್ತೆ: ಪೀಡಿತರ ಸಂಖ್ಯೆ 1242ಕ್ಕೆ ಏರಿಕೆ..!! ಉಡುಪಿ: ಉಡುಪಿಯಲ್ಲಿ ಇಂದು 14 ಕೊರೊನಾ ಪಾಸಿಟಿವ್ ವರದಿಯಾಗಿದೆ. ಮಹಾರಾಷ್ಟ್ರ4, ಕೇರಳ ರಾಜ್ಯದ 1 ಕೇಸ್ ಪತ್ತೆಯಾಗಿದೆ. ಬೆಂಗಳೂರಿಂದ ಬಂದ ನಾಲ್ವರಲ್ಲಿ...
error: Content is protected !!