Sunday, March 26, 2023

ಮುಲ್ಕಿ ಕೋಲ್ನಾಡು ಕಟ್ಟಿಗೆ ಸಾಗಾಟದ ಟೆಂಪೋ ಪಲ್ಟಿ..! ಚಾಲಕ ಆಸ್ಪತ್ರೆಗೆ

ಮುಲ್ಕಿ :  ಮಂಗಳೂರು ಹೊರವಲಯದ ರಾಷ್ಟ್ರೀಯ ಹೆದ್ದಾರಿ 66ರ ಕೋಲ್ನಾಡು ಬಳಿ ಕಟ್ಟಿಗೆ ಸಾಗಾಟದ ಟೆಂಪೋ ಪಲ್ಟಿಯಾಗಿ ಚಾಲಕ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ.

ಗಾಯಾಳು ಚಾಲಕನನ್ನು ಪಡುಬಿದ್ರೆ ನಿವಾಸಿ ಇಕ್ಬಾಲ್ ( 45 )ಎಂದು ಗುರುತಿಸಲಾಗಿದೆ.

ಗಾಯಾಳು ಇಕ್ಬಾಲ್ ಪಡುಬಿದ್ರೆಯಿಂದ ಟೆಂಪೋದಲ್ಲಿ ಕಟ್ಟಿಗೆ ಹೇರಿಕೊಂಡು ಮುಲ್ಕಿ ಸಮೀಪದ ಕೋಲ್ನಾಡು ಸಮೀಪಿಸುತ್ತಿದ್ದಂತೆ ಟೆಂಪೋ ಹಿಂಬದಿಯ ಟಯರ್ ನ ಕಬ್ಬಿಣದ ರಾಡ್ ತುಂಡಾಗಿದ್ದು ಟೆಂಪೋ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.

ಈ ಸಂದರ್ಭ ಚಾಲಕ ಇಕ್ಬಾಲ್ ರವರಿಗೆ ಅಲ್ಪಸ್ವಲ್ಪ ಗಾಯಗಳಾಗಿದ್ದು ಮುಕ್ಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತದಿಂದ ಕೆಲವು ಹೊತ್ತು ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿದ್ದು  ಸ್ಥಳಕ್ಕೆ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಟೆಂಪೋ ವನ್ನು ಕ್ರೇನ್ ಮೂಲಕ ತೆರವುಗೊಳಿಸಿ ಸಂಚಾರ ಸುಗಮಗೊಳಿಸಿದ್ದಾರೆ.

ಕಳೆದ ಕೆಲ ದಿನಗಳಿಂದ ಅಪಘಾತ ವಲಯ ಕೊಲ್ನಾಡು ರಾಷ್ಟ್ರೀಯ ಹೆದ್ದಾರಿಯಲ್ಲಿ ದಾರಿದೀಪದ ಅವ್ಯವಸ್ಥೆ ಕಾಡುತ್ತಿದ್ದು ಕತ್ತಲೆಯಲ್ಲಿ ಸಂಚಾರ ದುಸ್ತರವಾಗಿ ಪರಿಣಮಿಸಿದ್ದು ಕಳೆದ ದಿನದ ಹಿಂದೆ ಬೈಕ್ ಸವಾರನೊಬ್ಬ ಅಪಘಾತದಲ್ಲಿ ಮೃತಪಟ್ಟಿದ್ದನು.

LEAVE A REPLY

Please enter your comment!
Please enter your name here

Hot Topics

ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಹಂತದ ಪಟ್ಟಿ: ಖಾದರ್, ರೈ ಸೇರಿದಂತೆ ದ.ಕ ಜಿಲ್ಲೆಯ 5 ಅಭ್ಯರ್ಥಿಗಳ ಹೆಸರು ಘೋಷಣೆ..!

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಈ ಹಿನ್ನೆಲೆಯಲ್ಲಿ ಚುನಾವಣೆಗೆ ಸಿದ್ಧತೆ ನಡೆಸಿರುವ ಕಾಂಗ್ರೆಸ್ 124 ಮಂದಿ ಅಭ್ಯರ್ಥಿಗಳ ಮೊದಲ ಹಂತದ ಪಟ್ಟಿಯನ್ನು ಶನಿವಾರ ಪ್ರಕಟಿಸಿದೆ.ಬೆಂಗಳೂರು :ರಾಜ್ಯ...

ಉಡುಪಿ ಪಡುಬಿದ್ರೆಯಲ್ಲಿ ಬೈಕಿಗೆ ಟ್ಯಾಂಕರ್ ಢಿಕ್ಕಿ; ಸವಾರರಿಬ್ಬರು ಮೃತ್ಯು..!

ಉಡುಪಿ : ಬೈಕ್‌ಗೆ ಟ್ಯಾಂಕರ್ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಉಡುಪಿ ಉಚ್ಚಿಲದಲ್ಲಿ ಶನಿವಾರ ಸಂಜೆ ನಡೆದಿದೆ.ಮೃತರನ್ನು ಫಲಿಮಾರು ಅವರಾಲುಮಟ್ಟುವಿನ ಅಡ್ಕ ಸುಬ್ರಹ್ಮಣ್ಯ (30)...

ಉಡುಪಿ: ದಾಖಲೆ ಇಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ 4 ಲಕ್ಷ ರೂ. ವಶ

ಉಡುಪಿ: ದಾಖಲೆ ಇಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ 4 ಲಕ್ಷ ರೂ. ಹಣವನ್ನು ಪೊಲೀಸರು ನಿನ್ನೆ ವಶಪಡಿಸಿಕೊಂಡ ಘಟನೆ ಉಡುಪಿಯ ಮೂಡುತೋನ್ಸೆ ಗ್ರಾಮದ ನೇಜಾರು ಚೆಕ್ ಪೋಸ್ಟ್‌ನಲ್ಲಿ ನಡೆದಿದೆ.ಉಡುಪಿ ಪೊಲೀಸ್ ಠಾಣೆಯ ಪಿಎಸ್‌ಐ ಸುಷ್ಮಾ...