Friday, July 1, 2022

ಹೃದಯಾಘಾತದಿಂದ ತಹಸೀಲ್ದಾರ್ ನಿಧನ

ಬಾಗಲಕೋಟೆ: ಹೃದಯಾಘಾತದಿಂದ ಮುಧೋಳ ತಹಸೀಲ್ದಾರ್ ಸಂಗಮೇಶ್ ಬಾಡಗಿ(38) ಮೃತಪಟ್ಟಿದ್ದಾರೆ.


ನಿನ್ನೆ ಮಧ್ಯರಾತ್ರಿ ಮುಧೋಳ ನಗರದ ಮನೆಯಲ್ಲಿ ಮಲಗಿದ್ದ ವೇಳೆ ತಹಸೀಲ್ದಾರ್​ಗೆ ಹೃದಯಾಘಾತವಾಗಿದೆ. ಪುತ್ರಿ ಮತ್ತು ಪತ್ನಿಯನ್ನು ಅಗಲಿದ್ದಾರೆ. ಅಥಣಿ ತಾಲೂಕಿನ ಜನವಾಡ ಮೂಲದ ಸಂಗಮೇಶ್ ಬಾಡಗಿ ಅವರು ಮೂರು ವರ್ಷದಿಂದ ಮುಧೋಳ ತಹಸೀಲ್ದಾರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.
ಸಂಗಮೇಶ್ ಬಾಡಗಿ ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಮುಧೋಳ‌ ನಿವಾಸಕ್ಕೆ ಜಮಖಂಡಿ ಎಸಿ ಸಿದ್ದು ಹುಲ್ಲಳ್ಳಿ ಸೇರಿದಂತೆ ಅನೇಕ ಅಧಿಕಾರಿಗಳು, ಕಂದಾಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.

LEAVE A REPLY

Please enter your comment!
Please enter your name here

Hot Topics

ಮಂಗಳೂರು ನಗರ ಡಿಸಿಪಿಯಾಗಿ ಆಂಶು ಕುಮಾರ್ ನೇಮಕ

ಬೆಂಗಳೂರು: ಮಂಗಳೂರು ನಗರ ಪೊಲೀಸ್‌ ಕಮೀಷನರೇಟ್‌ ವ್ಯಾಪ್ತಿಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿಯಾಗಿ ಆಂಶು ಕುಮಾರ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.2018ರ ಐಪಿಎಸ್‌ ಬ್ಯಾಚ್‌ನ ಅಧಿಕಾರಿಯಾದ ಇವರು ಕರಾವಳಿ ಭದ್ರತಾ...

ಬೆಳ್ತಂಗಡಿ: ಬೀದಿ ಬದಿ ಅಂಗಡಿ ತೆರವು ಪ್ರಕರಣದ ವಿರುದ್ಧ ಪ್ರತಿಭಟನೆ

ಬೆಳ್ತಂಗಡಿ: ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಿಂದ ಕೊಕ್ಕಡ ಸಂಪರ್ಕಿಸುವ ನಿಡ್ಲೆ ಪಂಚಾಯತ್‌ ವ್ಯಾಪ್ತಿಯ ಪಾರ್ಪಿಕಲ್‌ ರಸ್ತೆಯಲ್ಲಿರುವ ಬೀದಿ ಬದಿ ವ್ಯಾಪಾರಸ್ಥರನ್ನು PWD ತೆರವುಗೊಳಿಸಿರುವ ವಿರುದ್ಧ ಬೃಹತ್ ಪ್ರತಿಭಟನೆ ಇಂದು ಬೆಳ್ತಂಗಡಿಯ ಪಿಡಬ್ಲ್ಯೂಡಿ...

ಉಳ್ಳಾಲ: ಮಳೆ ನೀರು ಬ್ಲಾಕ್‌ ಆಗಿದ್ದನ್ನು ತೆಗೆಯಲು ಹೋಗಿದ್ದ ವ್ಯಕ್ತಿ ಟೆರೇಸ್‌ನಿಂದ ಜಾರಿ ಬಿದ್ದು ಕೊನೆಯುಸಿರು

ಉಳ್ಳಾಲ: ಮನೆಯ ಟೆರೇಸ್‌ನಲ್ಲಿ ಮಳೆ ನೀರು ಬ್ಲಾಕ್‌ ಆಗಿದನ್ನು ತೆಗೆಯಲು ಹೋಗಿ‌ ಜಾರಿ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಕೊಣಾಜೆ‌ ಠಾಣಾ ವ್ಯಾಪ್ತಿಯ ದಾಸರಮೂಲೆ ಎಂಬಲ್ಲಿ ನಡೆದಿದೆ.ಮೃತ ವ್ಯಕ್ತಿಯನ್ನು...