Tuesday, January 31, 2023

ರಿಲಯನ್ಸ್ ರೀಟೇಲ್ ನಲ್ಲಿ 6,247.5 ಕೋಟಿ ರೂ. ಹೂಡಿಕೆಗೆ ಮುಂದಾದ ಅಬುಧಾಬಿ ಮೂಲದ ಮುಬದಾಲ..!

ರಿಲಯನ್ಸ್ ರೀಟೇಲ್ ನಲ್ಲಿ 6,247.5 ಕೋಟಿ ರೂ. ಹೂಡಿಕೆಗೆ ಮುಂದಾದ ಅಬುಧಾಬಿ ಮೂಲದ ಮುಬದಾಲ..!

ಮುಂಬೈ: ಅಬುಧಾಬಿ ಮೂಲದ ಹೂಡಿಕೆದಾರ ಮುಬದಾಲ ಇನ್‌ ವೆಸ್ಟ್ ಮೆಂಟ್ ಕಂಪೆನಿ ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ ನಲ್ಲಿ 6,247.5 ಕೋ ರೂಪಾಯಿ ಹೂಡಿಕೆಗೆ ಮುಂದಾಗಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಹಾಗೂ ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ ಘೋಷಣೆ ಮಾಡಿದೆ.

ಈ ಹೊಸ ಹೂಡಿಕೆಯು ರಿಲಯನ್ಸ್ ರೀಟೇಲ್ ಪ್ರೀ ಮನಿ ಈಕ್ವಿಟಿ ಮೌಲ್ಯವನ್ನು 4.285 ಲಕ್ಷ ಕೋಟಿ ರುಪಾಯಿ ಮಾಡಿದೆ. ಇಷ್ಟು ಮೊತ್ತಕ್ಕೆ ಫುಲ್ಲಿ ಡೈಲ್ಯೂಟೆಡ್ ಆಧಾರದಲ್ಲಿ ರಿಲಯನ್ಸ್ ರೀಟೇಲ್ ವೆಂಚರ್ಸ್ ನ ಶೇ.1.40ರಷ್ಟು ಈಕ್ವಿಟಿ ಪಾಲು ಖರೀದಿಯನ್ನು ಮುಬದಾಲ ಮಾಡಿದಂತಾಗುತ್ತದೆ.

ಈ ವರ್ಷದ ಆರಂಭದಲ್ಲಿ ಮುಬದಾಲದಿಂದ ಜಿಯೋ ಪ್ಲಾಟ್ ಫಾರ್ಮ್ಸ್ ನಲ್ಲಿ 1.2 ಬಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆಯ ಘೋಷಣೆ ಮಾಡಲಾಗಿತ್ತು. ಜಿಯೋ ಪ್ಲಾಟ್ ಫಾರ್ಮ್ಸ್ ನಂತರ ರಿಲಯನ್ಸ್ ಇಂಡಸ್ಟ್ರೀಸ್ ನ ಮತ್ತೊಂದು ಅಂಗಸಂಸ್ಥೆಯಾದ ರಿಲಯನ್ಸ್ ರೀಟೇಲ್ ವೆಂಚರ್ಸ್ ನಲ್ಲಿ ಮುಬದಾಲ ಮಾಡುತ್ತಿರುವ ಅತಿ ಮುಖ್ಯವಾದ ಹೂಡಿಕೆ ಇದಾಗಿದೆ.

ರಿಲಯನ್ಸ್ ಇಂಡಸ್ಟ್ರೀಸ್ ಅಂಗಸಂಸ್ಥೆಯಾದ ರಿಲಯನ್ಸ್ ರೀಟೇಲ್ ಲಿಮಿಟೆಡ್  ಭಾರತದ ಅತಿ ದೊಡ್ಡ ಹಾಗೂ ವೇಗವಾಗಿ ಬೆಳೆಯುತ್ತಿರುವ ಮತ್ತು ಲಾಭದಾಯಕವಾದ ಉದ್ಯಮವಾಗಿದೆ. ದೇಶದಾದ್ಯಂತ 12 ಸಾವಿರ ಮಳಿಗೆಗಳನ್ನುಇದು ಹೊಂದಿದೆ. ಭಾರತದ ರೈತರು, ಎಂಎಸ್ ಎಂಇ ವಲಯ ಬಲಪಡಿಸುವ ಮೂಲಕ ಲಕ್ಷಾಂತರ ಗ್ರಾಹಕರಿಗೆ ಸೇವೆ ಸಲ್ಲಿಸುವ ಉದ್ದೇಶ ಇದಕ್ಕಿದೆ.

ಈ ಬಗ್ಗೆ ಪ್ರತಿಕ್ರೀಯಿಸಿರುವ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿಯವರು , ರಿಲಯನ್ಸ್ ರೀಟೇಲ್ ವೆಂಚರ್ಸ್ ನ ಮೌಲ್ಯಯುತ ಹೂಡಿಕೆದಾರರಾಗಿ ಮುಬದಾಲವನ್ನು ಸ್ವಾಗತಿಸಲು ಸಂತೋಷವಾಗುತ್ತದೆ. ಜ್ಞಾನ ಶ್ರೀಮಂತಿಕೆಯಿಂದ ಕೂಡಿರುವ ಮುಬದಾಲದಂಥ ಸಂಸ್ಥೆ ಜತೆಗೆ ಸಹಭಾಗಿತ್ವ ವಹಿಸಿರುವುದನ್ನು ನಾವು ಗೌರವಿಸುತ್ತೇವೆ ಎಂದಿದ್ದಾರೆ.

ಭಾರತದ ರೀಟೇಲ್ ವಲಯವನ್ನು ಬಲಪಡಿಸಬೇಕು ಎಂದಿರುವ ನಮ್ಮ ಗುರಿಯ ಮೇಲೆ ಮುಬದಾಲ ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳುತ್ತೇವೆ. ಅದು ಕೂಡ ಲಕ್ಷಾಂತರ ಸಣ್ಣ ಪ್ರಮಾಣದ ಚಿಲ್ಲರೆ ಮಾರಾಟಗಾರರು, ವರ್ತಕರು- ತಂತ್ರಜ್ಞಾನದ ಶಕ್ತಿಯ ಮೂಲಕ. ಮುಬದಾಲದ ಹೂಡಿಕೆ ಮತ್ತು ಮಾರ್ಗದರ್ಶನವು ಈ ಪ್ರಯಾಣದಲ್ಲಿ ಬೆಲೆಯೇ ಕಟ್ಟಲಾಗದ ಬೆಂಬಲ ಆಗಲಿದೆ ಎಂದಿದ್ದಾರೆ.

ಮುಬದಾಲ ಇನ್ವೆಸ್ಟ್ ಮೆಂಟ್ ಕಂಪೆನಿ ಸಮೂಹದ ಸಿಇಒ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ಖಲ್ದೂನ್ ಅಲ್ ಮುಬಾರಕ್ ಮಾತನಾಡಿ, ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ ನಲ್ಲಿ ಹೂಡಿಕೆ ಮಾಡುವ ಮೂಲಕ ರಿಲಯನ್ಸ್ ಇಂಡಸ್ಟ್ರೀಸ್ ಜತೆಗೆ ಬಾಂಧವ್ಯ ಗಟ್ಟಿಯಾಗುತ್ತಿರುವುದಕ್ಕೆ ಸಂತೋಷವಾಗುತ್ತಿದೆ ಎಂದು ಹೇಳಿದ್ದಾರೆ.

ಅವರ ದೃಷ್ಟಿಕೋನವು ಎಲ್ಲರನ್ನೂ ಒಳಗೊಂಡಂತೆ ಭಾರತದ ಗ್ರಾಹಕರ ಆರ್ಥಿಕತೆಯನ್ನು ಡಿಜಿಟೈಸೇಷನ್ ಶಕ್ತಿಯ ಮೂಲಕ ಬದಲಾವಣೆ ಮಾಡುತ್ತದೆ. ಅವಕಾಶಗಳನ್ನು ಸೃಷ್ಟಿಸುತ್ತದೆ. ದೇಶದಲ್ಲಿರುವ ಲಕ್ಷಾಂತರ ಮಂದಿ ಸಣ್ಣ ವ್ಯಾಪಾರಿಗಳಿಗೆ ಮಾರುಕಟ್ಟೆಗೆ ಸಂಪರ್ಕ ಪಡೆಯಲು ಸಹಾಯ ಮಾಡುತ್ತದೆ. ಕಂಪೆನಿಯ ನಿರಂತರ ಬೆಳವಣಿಗೆಗೆ ಬೆಂಬಲಿಸಲು ಬದ್ಧವಾಗಿದ್ದೇವೆ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಮಂಗಳೂರು : ಫಾರಿನ್ ಕರೆನ್ಸಿ ಕೊಡುವ ನೆಪದಲ್ಲಿ 4 ಲಕ್ಷ ಎಗರಿಸಿ  ಪರಾರಿ..!

ಮಂಗಳೂರು : ವಿದೇಶಿ ಕರೆನ್ಸಿ ಕೊಡುವ ನೆಪದಲ್ಲಿ ನಾಲ್ಕು ಲಕ್ಷ ಹಣವನ್ನು ಲಪಟಾಯಿಸಿ ವಂಚಕ ಪರಾರಿಯಾದ ಘಟನೆ ಮಂಗಳೂರು ನಗರದಲ್ಲಿ ನಡೆದಿದೆ.ಸೌದಿ ಅರೇಬಿಯಾದ ಕರೆನ್ಸಿ ಕೊಡುವುದಾಗಿ ನಂಬಿಸಿ 4 ಲಕ್ಷ ರೂ. ಪಡೆದುಕೊಂಡು...

ಮುಂಬೈ- ಅಹ್ಮದಾಬಾದ್ ಹೆದ್ದಾರಿಯಲ್ಲಿ ಬಸ್‌ ಗೆ ಕಾರು ಡಿಕ್ಕಿ : ನಾಲ್ವರು ಮೃತ್ಯು..!

ಮುಂಬೈ:ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ದಹಾನು ಎಂಬಲ್ಲಿ ಮುಂಬೈ-ಅಹ್ಮದಾಬಾದ್ ರಾಷ್ಟ್ರೀಯ ಹೆದ್ದಾರಿಯ ಚರೋಟಿಯಲ್ಲಿ  ಮುಂಜಾನೆ ಐಷಾರಾಮಿ ಬಸ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ.ಟಾಟಾ ಸನ್ಸ್ ಮಾಜಿ ಅಧ್ಯಕ್ಷ ಸೈರಸ್...

ಮಂಗಳೂರು ತಲಪಾಡಿ ಟೋಲ್ ಸಿಬ್ಬಂದಿ ಗೂಂಡಾಗಿರಿ :ಸಾಮಾಜಿಕ ಜಾಲತಾಣದಲ್ಲಿ ವೈರಲ್..!

ಉಳ್ಳಾಲ: ಟೋಲ್ ಸಿಬ್ಬಂದಿಗಳ ಗೂಂಡಾ ವರ್ತನೆಯಿಂದ ಕಾರು ಚಾಲಕನ ಮೇಲೆ ಹಲ್ಲೆ ನಡೆದ ಘಟನೆ ತಲಪಾಡಿ ಟೋಲ್ ಪ್ಲಾಜಾದಲ್ಲಿ ಭಾನುವಾರ ನಡೆದಿರುವುದು, ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತ ವೀಡಿಯೋ ವೈರಲ್ ಆಗಿದೆ.ಕೇರಳ ಗಡಿಭಾಗದ...