DAKSHINA KANNADA
ಎಂ ಆರ್ ಪಿ ಎಲ್ ಉದ್ಯೋಗ ವಂಚನೆ, ಜೂನ್ 5 ರಂದು ಮನೆ ಮನೆ ಪ್ರತಿಭಟನೆ..
ಮಂಗಳೂರು :ದೇಶದ ಪ್ರತಿಷ್ಟಿತ ಸಾರ್ವಜನಿಕ ಸಂಸ್ಥೆಗಳಲ್ಲಿನ ಒಂದಾದ ಮಂಗಳೂರಿನ ಎಂ ಆರ್ ಪಿ ಎಲ್ ನಲ್ಲಿ ನಡೆದಿದೆ ಎನ್ನಲಾದ ಉದ್ಯೋಗ ವಂಚನೆ ಕುರಿತು ಜೂನ್ 5 ರಂದು ಜಿಲ್ಲೆಯಲ್ಲಿ ಮನೆ ಮನೆ ಪ್ರತಿಭಟನೆ ನಡೆಸಲು ಉದ್ದೇಶಿಸಲಾಗಿದೆ ಎಂದು ಡಿವೈಎಫ್ ಐ ರಾಜ್ಯಾಧ್ಯಕ್ಷರಾದ ಮುನೀರ್ ಕಾಟಿಪಳ್ಳ ಅವರು ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟನೆ ಹೊರಡಿಸಿರುವ ಅವರು ಎಂ ಆರ್ ಪಿ ಎಲ್ ಕಂಪೆನಿಯು 233 ಹುದ್ದೆಗಳ ನೇಮಕಾತಿಯಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗಳು ಸೇರಿದಂತೆ ಕರ್ನಾಟಕ ರಾಜ್ಯದ ಅರ್ಹ ಉದ್ಯೋಕಾಂಕ್ಷಿಗಳನ್ನು ಹೊರಗಿಟ್ಟು ಮಾಡಿರುವ ವಂಚನೆಯ ವಿರುದ್ದ ನಾಡಿನ ಜನತೆ ಒಕ್ಕೊರಲ ವಿರೋಧ ದಾಖಲಿಸಿದ್ದರು.
ಸಾಮಾಜಿಕ ಜಾಲತಾಣಗಳಲ್ಲಿ ಪಕ್ಷ ರಾಜಕಾರಣದ ಮಿತಿಗಳನ್ನು ದಾಟಿ ತುಳುನಾಡಿನ ಜನತೆ ನಡೆಸಿದ ವ್ಯಾಪಕ ಪ್ರತಿರೋಧ ಸತತವಾಗಿ ಚುನಾವಣೆಯಲ್ಲಿ ಗೆಲ್ಲುತ್ತಾ, ಬರೀ ಭರವಸೆಯಲ್ಲೇ ಕಾಲ ತಳ್ಳುತ್ತಾ ಬಂದಿರುವ ಆಳುವವರ ನಿದ್ದೆಗೆಡಿಸುವಲ್ಲಿ ಯಶಸ್ವಿಯಾಗಿತ್ತು.
ಇದೀಗ ನಮ್ಮ ಉದ್ಯೋಗದ ಹಕ್ಕಿನ ಧ್ವನಿಯನ್ನು ಕುಗ್ಗಿಸುವ ಪ್ರಯತ್ನ ವ್ಯವಸ್ಥಿತವಾಗಿ ನಡೆಯುತ್ತಿದೆ. ಸರಕಾರದ ಭಾಗ (ತುಳುನಾಡಿಗೆ ಇವರೇ ಸರಕಾರ)ವಾಗಿರುವ ಸಂಸದರು, ಉಸ್ತುವಾರಿ ಸಚಿವರು, ಶಾಸಕರುಗಳು ಕಂಪೆನಿಯ ಆಡಳಿತದ ಪ್ರಮುಖರ ಜೊತೆ ಮಾತುಕತೆಯ ನಾಟಕ ನಡೆಸಿ “ನೇಮಕಾತಿ ಪ್ರಕ್ರಿಯೆಗೆ ತಡೆ ಹೇರಲಾಗಿದೆ, ಹೊಸ ಪ್ರಕ್ರಿಯೆ ಜನಪ್ರತಿನಿಧಿಗಳ ಉಪಸ್ಥಿತಿಯಲ್ಲಿ ನಡೆಯಲಿದೆ’ ಎಂದು ಪ್ರಕಟಿಸಿದರು.
ಅದರೆ, ಸಚಿವರು, ಸಂಸದ, ಶಾಸಕರ ಪ್ರಕಟನೆ ಹೊರಟು ಇದೀಗ ಹತ್ತು ದಿನಗಳು ಕಳೆದಿವೆ. ಕಂಪೆನಿಯ ಒಳಗಡೆ ನೇಮಕಾತಿ ಗೊಂಡ ಹೊರ ರಾಜ್ಯದವರು ಉದ್ಯೋಗದಲ್ಲಿ ತೊಡಗಿಸಿಕೊಳ್ಳುವ ಅಂತಿಮ ಹಂತದ ಪ್ರಕ್ರಿಯೆ ಭರದಿಂದ ಮುಂದುವರಿದಿದೆ. ಭರವಸೆ ನೀಡಿದ್ದ ಜನಪ್ರತಿನಿಧಿಗಳ ತಮ್ಮ ಮಾತುಗಳನ್ನೇ ಮರೆತು ಈಗ ಮೌನಕ್ಕೆ ಶರಣಾಗಿದ್ದಾರೆ.
ನಾವೀಗ ಮತ್ತೆ ಮಾತಾಡಲೇ ಬೇಕಿದೆ. ಮೂರು ದಶಕಗಳಲ್ಲಿ ಮೊದಲ ಬಾರಿಗೆ ತುಳುನಾಡು ತನಗಾಗುತ್ತಿರುವ ವಂಚನೆಯ ವಿರುದ್ದ ಧ್ವನಿ ಎತ್ತಿದೆ. ಅಭಿವೃದ್ದಿಯಲ್ಲಿ ತನಗೆ ಸಿಕ್ಕಿರುವ ಪಾಲೇನು ? ಎಂದು ಚರ್ಚೆಗಿಳಿದಿದೆ. ಜಾಗೃತಿಗೊಂಡಿದೆ. ಇದು ವ್ಯರ್ಥವಾಗಲು ಬಿಡಬಾರದು. ಈ ಬಾರಿ ನಾವು ಸೋತರೆ , ಮುಂದೆ ಮತ್ತಷ್ಟು ವಂಚನೆಗಳು ನಡೆಯಲಿದೆ. ಕೈಗಾರಿಕೆಗಳ ಪಾಲಿನ ಹಿರಿಯಣ್ಣ MRPL ಸ್ಥಳೀಯರಿಗೆ ಉದ್ಯೋಗ ನೀಡದಿದ್ದಲ್ಲಿ, ಉಳಿದ ಕಂಪೆನಿಗಳು ಅದನ್ನೆ ಅನುಸರಿಸಲಿದೆ. ಈ ಹಿನ್ನಲೆಯಲ್ಲಿ ನಮ್ಮ ಧ್ವನಿಯನ್ನು ಮತ್ತಷ್ಟು ಎತ್ತರಿಸಬೇಕಿದೆ. “ತುಳುನಾಡ ಅಭಿವೃದ್ಧಿಡ್ ತುಳುವಪ್ಪೆ ಜೋಕುಲೆಗ್ ಮಲ್ಲಪಾಲ್” ಎಂದು ಜೋರು ಧ್ವನಿಯಲ್ಲಿ ಹೇಳಬೇಕಿದೆ. ಅದು ಮಾತ್ರ ತುಳುನಾಡಿನ ನೆಲ ಜಲ ಬಳಸಿ ಸಾಮ್ರಾಜ್ಯ ಸ್ಥಾಪಿಸಿರುವ, ವಿಸ್ತರಿಸುತ್ತಿರುವ, ಸ್ಥಾಪಿಸಲಿರುವ ಕೈಗಾರಿಗೆಗಳ ಉದ್ಯೋಗವಕಾಶಗಳಲ್ಲಿ ನಮ್ಮ ನ್ಯಾಯಯುತ ಪಾಲನ್ನು ನಮಗೆ ದೊರಕಿಸಿಕೊಡಲಿದೆ.
ಈ ಹಿನ್ನಲೆಯಲ್ಲಿ MRPL ಈಗ ನಡೆದಿರುವ ನೇಮಕಾತಿಯನ್ನು ರದ್ದುಗೊಳಿಸಬೇಕು, ಸಂಸದರು, ಶಾಸಕರುಗಳು ತಮ್ಮ ಮಾತನ್ನು ಉಳಿಸಿಕೊಳ್ಳಬೇಕು, ಸರೋಜಿನಿ ಮಹಿಷಿ ವರದಿಯ ಶಿಫಾರಸ್ಸುಗಳ ಅಧಾರದಲ್ಲಿ ಸ್ಥಳೀಯರಿಗೆ ಉದ್ಯೋಗಗಳನ್ನು ಒದಗಿಸಿಕೊಡಬೇಕು, ಎಲ್ಲಾ ಕೈಗಾರಿಕೆ, ಉದ್ದಿಮೆಗಳಲ್ಲಿ ಸ್ಥಳೀಯರಿಗೆ ನೇಮಕಾತಿಯಲ್ಲಿ ಪ್ರಾಧಾನ್ಯತೆ, ಸಿಂಹಪಾಲು ದೊರಕಬೇಕು ಎಂದು ಒತ್ತಾಯಿಸಿ ಜೂನ್ 5, 2021 ರಂದು ತುಳುನಾಡು ಜಿಲ್ಲೆಗಳಲ್ಲಿ “ಸ್ಥಳೀಯರ ಉದ್ಯೋಗದ ಹಕ್ಕಿಗಾಗಿ” ಧ್ವನಿ ಎತ್ತಲು ಬಯಸುವ ಸಮಾನ ಮನಸ್ಕ ಸಂಘಟನೆಗಳೆಲ್ಲ ಜೊತೆ ಸೇರಿ “ಮನೆ ಮನೆ ಪ್ರತಿಭಟನೆ”ಯನ್ನು ಆಯೋಜಿಸಿದ್ದೇವೆ. ನಮ್ಮ ಬೇಡಿಕೆಯ ಕುರಿತು ಸಹಮತವುಳ್ಳ ಸಂಘಟನೆಗಳು, ಸಂಸ್ಥೆಗಳು, ವ್ಯಕ್ತಿಗಳು ಈ ಮಹತ್ವದ ಹೋರಾಟದ ಭಾಗವಾಗಬಹುದು. ಜೂನ್ 5 ರಂದು ತುಳುನಾಡಿನ ಜನತೆ ಈ ಕೆಳಗಿನ ಬೇಡಿಕೆಗಳ ಪೋಸ್ಟರ್ ಗಳನ್ನು ಬರೆದು, ಅಥವಾ ಪ್ರಿಂಟ್ ತೆಗದು ತಮ್ಮ ಮನೆಗಳ ಮುಂಭಾಗ ಏಕಾಂಗಿಯಾಗಿ/ ಕುಟುಂಬ ಸಮೇತರಾಗಿ ಹಿಡಿದು ಪ್ರತಿಭಟನೆ ನಡೆಸಬೇಕು. ಅದರ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಬೇಕು, ನಿಮ್ಮ ಪರಿಚಿತರು, ನೆರೆಹೊರೆಯವರೂ ಈ ಪ್ರತಿಭಟನೆಯಲ್ಲಿ ಭಾಗಿಯಾಗುವಂತೆ ಮನವೊಲಿಸಬೇಕು. (ಎಲ್ಲಿಯೂ ಕೋವಿಡ್ ಮಾರ್ಗ ಸೂಚಿ ಉಲ್ಲಂಘನೆಯಾಗದಂತೆ ಎಚ್ಚರ ವಹಿಸಬೇಕು) ಆ ಮೂಲಕ ತುಳುನಾಡಿನಾದ್ಯಂತ ಇದು ಒಕ್ಕೊರಲಿನ ಹಕ್ಕಿನ ಧ್ವನಿಯಾಗಿ, ಸ್ವಾಭಿಮಾನದ ಕೂಗಾಗಿ ಮಾರ್ಪಾಡಾಗುವಂತೆ, ಅಭಿವೃದ್ದಿಯಲ್ಲಿ ನಮ್ಮ ನ್ಯಾಯಯುತ ಪಾಲು ಮುಂದೆ ಯಾವತ್ತೂ ನಿರಾರಣೆಯಾಗದಂತೆ ಪ್ರಬಲ ಕಾಯ್ದೆ ರಚನೆಗೆ ಇದು ನಾಂದಿಯಾಗಲು ಜೊತೆಗೂಡಬೇಕು ಎಂದು ಮನವಿ ಮಾಡುತ್ತಿದ್ದೇವೆ ಎಂದು ಮುನೀರ್ ಕಾಟಿಪಳ್ಳ ಅವರು ಹೇಳಿದ್ದಾರೆ.
DAKSHINA KANNADA
Sullia : ಕಂಠಪೂರ್ತಿ ಕುಡಿದು ಅಡ್ಡಾದಿಡ್ಡಿ ಕಾರು ಚಲಾಯಿಸಿದ ಸರ್ಕಾರಿ ಅಧಿಕಾರಿ
ಸುಳ್ಯ : ಸರ್ಕಾರಿ ಅಧಿಕಾರಿಯೊಬ್ಬರು ಮದ್ಯದ ನಶೆಯಲ್ಲಿ ಅಡ್ಡಾದಿಡ್ಡಿ ವಾಹನ ಚಲಾಯಿಸಿ ಸಾರ್ವಜನಿಕರಿಂದ ಬೈಗುಳ ತಿಂದ ಸುಳ್ಯದ ಅರಂಬೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ನವೀನ್ ಕುಮಾರ್ ಎಂಬವರು ಕಂಠಪೂರ್ತಿ ಕುಡಿದ ಮದ್ಯದ ಮತ್ತಿನಲ್ಲಿ ಸುಳ್ಯ ಅರಂಬೂರು ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಾಯಕಾರಿಯಾಗಿ, ರಸ್ತೆಯಲ್ಲಿ ಅಡ್ಡಾದಿಡ್ಡಿ ವಾಹನ ಚಲಾಯಿಸಿ ಹಲವಾರು ವಾಹನಗಳಿಗೆ ಢಿಕ್ಕಿ ಆಗುವಂತಹ ಸಂಭಾವ್ಯ ದುರಂತವೊಂದು ಸಾರ್ವಜನಿಕರ ಸಮಯ ಪ್ರಜ್ಞೆಯಿಂದ ತಪ್ಪಿದೆ. ರಸ್ತೆಯುದ್ದಕ್ಕೂ ವಿರುದ್ಧ ದಿಕ್ಕಿನಲ್ಲಿ, ಅಡ್ಡಾದಿಡ್ಡಿ ವಾಹನ ಚಲಾಯಿಸಿ ಅಪಘಾತ ಸಂಭವಿಸುವ ಸಾಧ್ಯತೆಯನ್ನು ಮನಗಂಡ ಕೆಲವು ವಾಹನ ಸವಾರರು ಸಾರ್ವಜನಿಕರ ಸಹಕಾರದಿಂದ ಅಡ್ಡಗಟ್ಟಿದ್ದಾರೆ. ಸರ್ಕಾರಿ ಅಧಿಕಾರಿಯ ಈ ವರ್ತನೆ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
DAKSHINA KANNADA
ಉಪ್ಪಿನಂಗಡಿ:12 ಅಡಿ ಉದ್ದದ ಕಾಳಿಂಗ ಸರ್ಪ ಹಿಡಿಯೋಕು ಮೀಟ್ರು ಬೇಕು
ಉಪ್ಪಿನಂಗಡಿ : ದಕ್ಷಿಣ ಕನ್ನಡ ಜಿಲ್ಲೆಯ ನೆಲ್ಯಾಡಿಯ ಸೈಂಟ್ ಜೋಸೆಫ್ ಮಲಂಕರ ಚರ್ಚ್ ಪರಿಸರದಲ್ಲಿ 12 ಅಡಿ ಉದ್ದದ ಕಾಳಿಂಗ ಸರ್ಪ ಪ್ರತ್ಯಕ್ಷಗೊಂಡಿತು. ಇದನ್ನು ಸೆರೆ ಹಿಡಿದ ಉರಗ ತಜ್ಞ ಕೆ. ಝಕರಿಯ್ಯ ಎಂಬುವವರು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.
ಎರಡು- ಮೂರು ದಿನಗಳಿಂದ ಸುಮಾರು 12 ಅಡಿ ಉದ್ದದ ಕಾಳಿಂಗ ಸರ್ಪವೊಂದು ನೆಲ್ಯಾಡಿಯ ಸೈಂಟ್ ಜೋಸೆಫ್ ಮಲಂಕರ ಚರ್ಚ್ ಪರಿಸರದಲ್ಲಿ ಸುತ್ತಾಡಿಕೊಂಡಿತ್ತು.
ಈ ಬಗ್ಗೆ ಮಾಹಿತಿ ಪಡೆದ ಉಪ್ಪಿನಂಗಡಿಯ ಕೆ. ಝಕರಿಯಾ ಅವರು ಅಲ್ಲಿಗೆ ತೆರಳಿ ಸುಮಾರು ಒಂದು ಗಂಟೆಯಷ್ಟು ಕಾರ್ಯಾಚರಣೆಯ ಬಳಿಕ ಕಾಳಿಂಗ ಸರ್ಪವನ್ನು ಹಿಡಿದು ಸುರಕ್ಷಿತವಾಗಿ ಗುಂಡ್ಯ ಬಳಿ ದಟ್ಟಾರಣ್ಯಕ್ಕೆ ಬಿಟ್ಟಿದ್ದಾರೆ.
DAKSHINA KANNADA
ಅತ್ತಾವರ ಅಪಾರ್ಟ್‌ಮೆಂಟ್‌ನಲ್ಲಿ ಆಕಸ್ಮಿಕ ಬೆಂಕಿ – ವೃದ್ಧೆ ಸಾವು..!
ಮಂಗಳೂರು: ಮಂಗಳೂರಿನ ಅತ್ತಾವರದ ಅಪಾರ್ಟ್ ಮೆಂಟ್‌ವೊಂದರಲ್ಲಿ ಇಂದು ಬೆಳಗ್ಗೆ ನಡೆದ ಆಕಸ್ಮಿಕ ಬೆಂಕಿ ಅನಾಹುತದಲ್ಲಿ ಗಂಭೀರ ಗಾಯಗೊಂಡಿದ್ದ ವೃದ್ಧೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಶಾಹಿನಾ ನುಸ್ಬಾ(58) ಸಾವನ್ನಪ್ಪಿದ ವೃದ್ಧೆ ಎಂದು ಗುರುತಿಸಲಾಗಿದೆ. ಶಾರ್ಟ್ ಸರ್ಕ್ಯೂಟ್ ನಿಂದಾಗಿ ಮುಂಜಾನೆ 4 ಗಂಟೆಯ ಹೊತ್ತಿಗೆ ಬೆಂಕಿ ಕಾಣಿಸಿಕೊಂಡಿದ್ದು, ಐವರು ಮಕ್ಕಳ ಸಹಿತ ಎಂಟು ಮಂದಿ ಅಪಾಯದಿಂದ ಪಾರಾಗಿದ್ದಾರೆ.
ಅನಾರೋಗ್ಯದಿಂದಾಗಿ ಬೆಡ್ ರೂಮ್ ನಲ್ಲೇ ಇದ್ದ ವೃದ್ಧ ಮಹಿಳೆ ದಟ್ಟ ಹೊಗೆಯಿಂದಾಗಿ ತಕ್ಷಣ ಹೊರಬರಲಾಗದೇ ಉಸಿರುಗಟ್ಟಿ ಚಿಂತಾಜನಕ ಸ್ಥಿತಿಯಲ್ಲಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
- FILM7 days ago
ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ ನೋಡಿ ‘ಕತ್ತೆ’ ಎಂದ ಕಿಚ್ಚ ಸುದೀಪ
- bengaluru6 days ago
ಇನ್ಸ್ಟಾಗ್ರಾಂನಲ್ಲಿ 11 ಸಾವಿರ ಫಾಲೋವರ್ಸ್ ಕಳೆದುಕೊಂಡ ಬಿಗ್ ಬಾಸ್ ಸ್ಪರ್ಧಿ ಸಂಗೀತಾ
- bengaluru6 days ago
ಬೆಂಗಳೂರು ಕಂಬಳಕ್ಕೆ ಕ್ಷಣಗಣನೆ-ಉಪ್ಪಿನಂಗಡಿಯಿಂದ ಬೆಂಗಳೂರಿಗೆ ಕೋಣಗಳ ಪ್ರಯಾಣ
- DAKSHINA KANNADA6 days ago
Breaking news :ಮಂಗಳೂರಿನ ಹೊಟೇಲ್ ರೂಂನಲ್ಲಿ ಬೆಂಕಿ-ಒಳಗಿದ್ದ ವ್ಯಕ್ತಿ ಸಾವು