ಸುರತ್ಕಲ್: ಎಂಆರ್‌ಪಿಎಲ್‌ನಲ್ಲಿ ಎಂಜಿನಿಯರ್ ಆಗಿದ್ದ ಸಕಲೇಶಪುರ ಮೂಲದ ಕಾಟಿಪಳ್ಳ ಶಾರದಾ ನಗರ ನಿವಾಸಿ ರಾಘವೇಂದ್ರ ಕೆ.ಆರ್ (52) ಎಂಬವರು ಮೇ 16ರಿಂದ ನಾಪತ್ತೆಯಾಗಿದ್ದಾರೆ.
‘ಫ್ಲೀಸ್ ತನ್ನನ್‌ನು ಹುಡುಕಬೇಡಿ’ ಎಂದು ಚೀಟಿ ಬರೆದಿಟ್ಟು ಹೋಗಿದ್ದಾರೆ.
ಹೋಗುವಾಗ ಬಟ್ಟೆ, ಆಧಾರ್ ಕಾರ್ಡ್, ಎಟಿಎಂ ಕಾರ್ಡ್, ಕೀಪ್ಯಾಡ್, ಮೊಬೈಲ್ ತೆಗೆದುಕೊಂಡು ಹೋಗಿದ್ದಾರೆ ಎಂದು ಅವರ ಪತ್ನಿ ಸುರತ್ಕಲ್ ಠಾಣೆಗೆ ದೂರು ನೀಡಿದ್ದಾರೆ.
ಅವರು ಕಂಪೆನಿಯಲ್ಲಿ ಮೂರು ದಿನಗಳ ರಜೆ ಹಾಕಿ ಹೋಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.