ಎಂ ಆರ್ ಪಿ ಎಲ್ ಸಿಐಎಸ್‌ಎಫ್ ಅಧಿಕಾರಿ ಕೊರೊನಾಕ್ಕೆ ಬಲಿ..!
ಮಂಗಳೂರು : ಇದೇ ಮೊದಲ ಬಾರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾದಿಂದ ಭದ್ರತಾ ಅಧಿಕಾರಿ ಸಾವನ್ನಪ್ಪಿದ್ದಾರೆ. ಮಂಗಳೂರಿನ ಎಂ ಆರ್ ಪಿ ಎಲ್ ನಲ್ಲಿ ಕರ್ತವ್ಯ ದಲ್ಲಿದ್ದ ಈ ಅಧಿಕಾರಿ ಮಧು ಮೇಹ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.
ಎಂಆರ್‌ಪಿ ಎಲ್ ನ CISF ಕ್ಯಾಂಪ್ ನಲ್ಲಿ ಸಹಾಯಕ ಇನ್ಸ್ ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಇದೀಗ ಮಂಗಳೂರಿನ ಖಾಸಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಲಕರಿಯಾಗದೇ ಸಾವನ್ನಪ್ಪಿದ್ದಾರೆ. ಅಧಿಕಾರಿ ಸಾವಿನ ಬಗ್ಗೆ ಸಿಐಎಸ್‌ಎಫ್ ಅಧಿಕೃತವಾಗಿ ಟ್ವೀಟ್ ಮಾಡಿದ್ದಾರೆ.
ಮಂಗಳೂರು/ಪ್ರಯಾಗ್‌ರಾಜ್ : ಮಹಾ ಕುಂಭಮೇಳವು ಉತ್ತರ ಪ್ರದೇಶದ ಪ್ರಯಾದ್ ನಲ್ಲಿ ನಡೆಯುತ್ತಿದ್ದು, ಬಹಳ ಅಟ್ರ್ಯಾಕ್ಟಿವ್ ಆಗಿದ್ದ ಸುಂದರ ಸಾಧ್ವಿ ಹರ್ಷ ರಿಚಾರಿಯಾ ಕಣ್ಣೀರು ಹಾಕುತ್ತಾ ಮಹಾ ಕುಂಭದಿಂದ ಹೊರ ಬಂದಿದ್ದಾರೆ.
ಮಹಾಕುಂಭ ಮೇಳದಲ್ಲಿ ಲಕ್ಷಗಟ್ಟಲೆ ಭಕ್ತಾದಿಗಳು, ಸಾಧು-ಸಂತರು ಪಾಲ್ಗೊಂಡು ಪುನೀತರಾಗುತ್ತಿದ್ದಾರೆ. ಅಲ್ಲದೆ ಇದು ಅನೇಕ ವಿಶೇಷತೆಗಳಿಗೆ ಕಾರಣವಾಗಿದೆ. ಹಲವು ವಿಶೇಷತೆಗಳನ್ನು ಮೆರೆಯುವಂತಹ ಸಾಧು ಸಂತರು, ನಾಗಸಾಧುಗಳು ಕಂಡು ಬರುತ್ತಿದ್ದಾರೆ. ಇದರೆಡೆಯಲ್ಲಿ ಬಹಳ ಪ್ರಮುಖ ಆಕರ್ಷಣೆಯಾಗಿ ಕಂಡುಬಂದದ್ದು ಸುರಸುಂದರಿಯಾದ ಸಾಧ್ವಿ ಹರ್ಷ ರಿಚಾರಿಯಾ. ಆದರೆ ಈ ಸಾಧ್ವಿ ಇದೀಗ ಅಳುತ್ತಾ ಕುಂಭಮೇಳದಿಂದ ಹೊರ ಬಂದಿದ್ದಾರೆ. ರಿಚಾರಿಯಾ ಅಚಾನಕ್ ಕುಂಭಮೇಳವನ್ನು ಅರ್ಧದಲ್ಲಿಯೇ ತೊರೆಯುವುದಾಗಿ ಘೋಷಣೆ ಮಾಡಿದ್ದಾರೆ. ಕಣ್ಣೀರು ಹಾಕುತ್ತಾ ಗಂಭೀರ ಆರೋಪ ಮಾಡಿದ್ದಾರೆ. ‘ನಾಚಿಕೆ ಆಗಬೇಕು ಆ ಜನಕ್ಕೆ, ನಾನು ಇಲ್ಲಿ ಮಹಾಕುಂಭದಲ್ಲಿ ಇರೋಕೆ ಬಿಡಲಿಲ್ಲ. ಈ ಕುಂಭಮೇಳ ನಮ್ಮ ಜೀವನದಲ್ಲಿ ಒಮ್ಮೆ ಬರುತ್ತೆ, ನೀವು ಅದನ್ನ ನನ್ನಿಂದ ಕಸಿದುಕೊಂಡಿದ್ದೀರಿ. ಈಗ ನಾನು ಏನೋ ದೊಡ್ಡ ತಪ್ಪು ಮಾಡಿದಂಗೆ ಅನಿಸುತ್ತಿದೆ. ನನ್ನದು ಯಾವ ತಪ್ಪೂ ಇಲ್ಲದಿದ್ದರೂ ನನ್ನ ಮೇಲೆ ಟೀಕೆ ಮಾಡ್ತಿದ್ದಾರೆ. ಇನ್ನು ಇಲ್ಲಿ ನಿಲ್ಲೋಕೆ ಆಗಲ್ಲ’ ಎಂದು ಹರ್ಷ ರಿಚಾಯಿಯಾ ಸಾರ್ವಜನಿಕರ ವಿದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ವಿವಾದ:
ಮಹಾಕುಂಭಮೇಳ ಆರಂಭದಿಂದಲೂ ಹರ್ಷ ರಿಚಾರಿಯಾ ಭಾರೀ ಚರ್ಚೆಯಲ್ಲಿದ್ದಾರೆ. ಮಹಿಳಾ ವರದಿಗಾರ್ತಿಯೊಬ್ಬರು “ಇಷ್ಟು ನೀವು ಸುಂದರಿಯಾಗಿದ್ದರೂ ಏಕೆ ಸಾಧ್ವಿ ಆಗಿದ್ದೀರಿ?” ಎಂದು ಪ್ರಶ್ನಿಸಿದ್ದರು. ಆಗ ಹರ್ಷಾ ರಿಚಾರಿಯಾ, “ಧರ್ಮದ ಜೊತೆ ಇದ್ದಾಗ ನೆಮ್ಮದಿ ಸಿಗುತ್ತದೆ. ನಾನೀಗ 30 ವರ್ಷದವಳು, ಕಳೆದ 2 ವರ್ಷದ ಹಿಂದೆ ಸನ್ಯಾಸತ್ವ ಸ್ವೀಕರಿಸಿದ್ದೇನೆ” ಎಂದಿದ್ದ ವಿಡಿಯೋ ವೈರಲ್ ಆದ ನಂತರ ಟ್ರೋಲ್‌ರ್‌ಗಳು ಸಾಧ್ವಿ ಹರ್ಷಾ ರನ್ನು ಟಾರ್ಗೆಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸಿದ್ದಾರೆ. ಮಾಡೆಲಿಂಗ್ ಮೂಲಕ ತಮ್ಮ ವೃತ್ತಿ ಶುರು ಮಾಡಿದ್ದ ಹರ್ಷ ಆರು ವರ್ಷಗಳ ನಂತ್ರ ಆಧ್ಯಾತ್ಮಿಕದತ್ತ ಒಲವು ತೋರಿಸಿದ್ದರು. ನಿರೂಪಕಿಯಾಗಿ ಕೆಲಸ ಮಾಡ್ತಿದ್ದ ಹರ್ಷ, ಕಳೆದ ಎರಡು ವರ್ಷಗಳಿಂದ ಮಾಡೆಲಿಂಗ್ ಮತ್ತು ನಿರೂಪಣೆಯಿಂದ ದೂರವಿದ್ದಾರೆ. ಅಲ್ಲದೆ ಇನ್ಸ್ಟಾಗ್ರಾಂ ನಲ್ಲಿ ಸುಮಾರು ಹನ್ನೆರಡು ಲಕ್ಷ ಫಾಲೋವರ್ಸ್‌ಗಳನ್ನೂ ಹೊಂದಿದ್ದಾರೆ. ತಾನು ‘ಆಚಾರ್ಯ ಮಹಾಮಂಡಲೇಶ್ವರನ ಶಿಷ್ಯೆ’ ಎಂದು ಹೇಳಿಕೊಂಡಿದ್ದಾರೆ. ಸಧ್ಯ ಕಂಡು ಕೇಳರಿಯದ ಜನಸಾಗರದ ಮಧ್ಯೆ, ರಿಚಾರಿಯಾ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದ್ದಾರೆ.
ಕಡಬ : ಶಾಲೆಗೆ ಬೈಕ್ನಲ್ಲಿ ತೆರಳುತ್ತಿದ್ದ ಅಪ್ರಾಪ್ತ ಬಾಲಕ ಮೃತ ಪಟ್ಟ ಘಟನೆ ನಿನ್ನೆ ಕಡಬದಲ್ಲಿ ನಡೆದಿತ್ತು. ಕಡಬದ ಕಲ್ಲುಗುಡ್ಡೆ ನಿವಾಸಿ ಅಶೀಶ್ ಎಂಬ 16 ವರ್ಷದ ವಿದ್ಯಾರ್ಥಿ ಅಪಘಾತದಲ್ಲಿ ಮೃತ ಪಟ್ಟಿದ್ದ.
ಈ ಘಟನೆಯ ಬಳಿಕ ಕಡಬ ವ್ಯಾಪ್ತಿಯಲ್ಲಿ ಅನೇಕ ಅಪ್ರಾಪ್ತ ಯುವಕರು ಬೈಕ್ ಚಲಾಯಿಸುತ್ತಿದ್ದು ಇದಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯ ಕೇಳಿ ಬಂದಿತ್ತು. ಹೀಗಾಗಿ ಕಾರ್ಯಪ್ರವೃತ್ತರಾದ ಕಡಬ ತಾಲೂಕು ದಂಡಾಧಿಕಾರಿಯೂ ಆಗಿರುವ ತಹಶೀಲ್ದಾರರು ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ಆರ್‌ಟಿಒ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಪತ್ರ ಬರೆದು ಅಪ್ರಾಪ್ತರು ಹಾಗೂ ಪರವಾನಿಗೆ ಇಲ್ಲದೆ ಬೈಕ್ ಚಲಾಯಿಸುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಇಂತಹ ಘಟನೆಗಳಿಗೆ ಕಡಿವಾಣ ಹಾಕಲು ಅಪ್ರಾಪ್ತರ ಕೈಲಿ ಬೈಕ್ ನೀಡಿದ ಪೋಷಕರ ವಿರುದ್ಧ ಕ್ರಮ ಜರುಗಿಸುವಂತೆ ಸೂಚನೆ ನೀಡಿದ್ದಾರೆ.
ಅಷ್ಟೇ ಅಲ್ಲದೆ ಶಾಲಾ ಕಾಲೇಜುಗಳಿಗೆ ದ್ವಿಚಕ್ರ ವಾಹನ ಹಾಗೂ ನಾಲ್ಕು ಚಕ್ರದ ವಾಹನಗಳನ್ನು ವಿದ್ಯಾರ್ಥಿಗಳು ತಾರದಂತೆ ಶಾಲಾ ಮುಖ್ಯೋಪಾಧ್ಯಯರು ಮತ್ತು ಪ್ರಾಂಶುಪಾಲರು ಸೂಚನೆ ನೀಡಬೇಕು ಹಾಗೂ ಪೋಷಕರಿಗೆ ಈ ಬಗ್ಗೆ ಸೂಚನೆ ನೀಡಬೇಕು.
ಮತ್ತೊಮ್ಮೆ ಇಂತಹ ಘಟನೆ ಮರುಕಳಿಸಿದರೆ ಶಾಲೆಯ ಆಡಳಿತ ಹಾಗೂ ಮುಖ್ಯಸ್ಥರನ್ನೇ ಹೊಣೆಯಾಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಕಡಬ , ಸುಬ್ರಹ್ಮಣ್ಯ, ಬೆಳ್ಳಾರೆ, ಉಪ್ಪಿನಂಗಡಿ ಪೊಲೀಸ್ ಠಾಣಾಧಿಕಾರಿಗಳಿಗೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.
ಮಂಗಳೂರು : ಕೃಷಿ ಮಾಡುವಾಗ ಭೂಮಿಯಲ್ಲಿ ನಿಧಿ ಸಿಕ್ಕಿದೆ. ನಮಗೆ ತುರ್ತಾಗಿ ಹಣ ಬೇಕಾದ ಕಾರಣ ಕಡಿಮೆಯಲ್ಲಿ ಚಿನ್ನ ಕೊಡ್ತೇವೆ … ಹೀಗಂತ ಯಾರಾದರೂ ನಿಮ್ಮ ಬಳಿ ಬಂದು ಹೇಳಿದ್ರೆ ಎಚ್ಚರವಾಗಿರಿ.
ಯಾಕಂದ್ರೆ ಇಂತಹ ಕಥೆ ಹೇಳಿ ನಕಲಿ ಚಿನ್ನ ನೀಡಿ ವಂಚಿಸುವ ತಂಡವೊಂದು ಮಂಗಳೂರಿನಲ್ಲಿ ಕಾರ್ಯಾಚರಿಸುತ್ತಿದೆ. ನಗರದ ನಾಗುರಿ ಬಳಿ ಇದೇ ಕಥೆ ಹೇಳಿಕೊಂಡು ಅಂಗಡಿಯವರೊಬ್ಬರನ್ನು ವಂಚಿಸಲು ಪ್ರಯತ್ನಿಸಿದ್ದಾರೆ.
ಮಹಿಳೆ ಹಾಗೂ ನಾಲ್ವರು ಯುವಕರ ತಂಡ ಈ ಪ್ರಯತ್ನ ಮಾಡಿ ತಗಲಾಕೊಂಡಿದ್ದಾರೆ. ಮೊದಲಿಗೆ ಅಸಲಿ ಚಿನ್ನ ನೀಡಿ ಪರೀಕ್ಷಿಸಲು ಹೇಳಿದ್ದು ಪರೀಕ್ಷೆ ವೇಳೆ ಅದು ಅಸಲಿಯೇ ಆಗಿತ್ತು. 2 ಲಕ್ಷಕ್ಕೆ ಮತ್ತೊಂದು ಚಿನ್ನ ನೀಡಿದ್ದು ಅದು ನಕಲಿಯಾಗಿತ್ತು.
ಆದರೆ ಇಂತಹ ವಂಚನೆ ಬಗ್ಗೆ ಮೊದಲೇ ಅನುಮಾನ ಇದ್ದ ಅಂಗಡಿಯವರು ಈ ಚಿನ್ನ ಕೂಡಾ ಪರೀಕ್ಷೆ ಮಾಡುವುದಾಗಿ ಹೇಳಿದ್ದಾರೆ. ಈ ವೇಳೆ ಬಂಡವಾಳ ಬಯಲಾಗುತ್ತದೆ ಎಂದು ನಾಲ್ವರು ಯುವಕರು ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ಆದರೆ ಜೊತೆಯಲ್ಲಿದ್ದ ಮಹಿಳೆಯನ್ನು ಅಂಗಡಿಯವರು ಹಿಡಿದಿಟ್ಟು ಪೊಲೀಸರಿಗೆ ಒಪ್ಪಿಸಿದ್ದಾರೆ.
ಕಡಿಮೆ ಬೆಲೆಗೆ ಇಂತಹ ಮೋಸದ ಕಥೆ ಹೆಣೆದು ಚಿನ್ನದ ಆಸೆ ತೋರಿಸಿ ವಂಚಿಸೋ ದೊಡ್ಡ ತಂಡವೇ ಇಲ್ಲಿ ಕಾರ್ಯಾಚರಿಸ್ತಾ ಇದೆ. ಹೀಗಾಗಿ ಸಾರ್ವಜನಿಕರು ಇಂತವರ ಬಗ್ಗೆ ಎಚ್ಚರವಾಗಿರುವುದು ಒಳ್ಳೆಯದು.