Connect with us

    NATIONAL

    ಹೊಸ ಚರ್ಚೆಗೆ ನಾಂದಿ ಹಾಡಿದ ಶೋಭಾ ಕರಂದ್ಲಾಜೆಯವರ ಟ್ವೀಟ್..!

    Published

    on

    ಹೊಸ ಚರ್ಚೆಗೆ ನಾಂದಿ ಹಾಡಿದ ಶೋಭಾ ಕರಂದ್ಲಾಜೆಯವರ ಟ್ವೀಟ್..!

    ಬೆಂಗಳೂರು: ರಾಮ ಮಂದಿರ ನಿರ್ಮಾಣಕ್ಕಾಗಿ ಅಯೋಧ್ಯೆಯಲ್ಲಿ ಇಂದು ಭೂಮಿಪೂಜೆ ಕಾರ್ಯಕ್ರಮ ನಡೆದಿದೆ. ಆದರೆ ಸಂಸದೆ ಶೋಭಾ ಕರಂದ್ಲಾಜೆ ಮಾಡಿರುವ ಟ್ವೀಟ್‌ವೊಂದು ನಾಡಿನಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ.

    ಅಯೋಧ್ಯೆ ತನ್ನ ಪ್ರೀತಿಯ ರಾಜನನ್ನು ಮರಳಿ ಮನೆಗೆ ಸ್ವಾಗತಿಸಲು ಸಜ್ಜಾಗಿದೆ.. ಎಂಬ ಸಾಲುಗಳ ಮೂಲಕ ಶೋಭಾ ಕರಂದ್ಲಾಜೆ ಅವರು ಟ್ವಿಟ್ಟರಿನಲ್ಲಿ ಚಿತ್ರ ಹಂಚಿಕೊಂಡಿದ್ದರು.

    ಚಿತ್ರದಲ್ಲಿ, ಮೋದಿ ರಾಮನ ಕೈಹಿಡಿದು ದೇಗುಲಕ್ಕೆ ಕರೆದುಕೊಂಡು ಹೋಗುತ್ತಿರುವಂತೆ ಬಿಂಬಿಸಲಾಗಿದೆ.ಚಿತ್ರದಲ್ಲಿ ರಾಮನನ್ನು ಬಾಲಕನನ್ನಾಗಿಯೂ, ಪ್ರಧಾನಿ ಮೋದಿಯವರನ್ನು ಹಿರಿಯರಂತೆಯೂ ತೋರಿಸಲಾಗಿದೆ.

    ಈ ಚಿತ್ರ ಸದ್ಯ ಸಾಮಾಜಿಕ ತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಮೋದಿ ರಾಮನಿಗಿಂತಲೂ ದೊಡ್ಡವರೇ? ಮೋದಿ ರಾಮನನ್ನು ಮೀರಿದವರೇ ಎಂಬಿತ್ಯಾದಿ ಪ್ರಶ್ನೆಗಳು ಕೇಳಿಬಂದಿವೆ..

    ಕೆಲವರು ಈ ಸಂದೇಶವನ್ನು ಸ್ವಾಗತಿಸಿ ಬೆಂಬಲಿಸಿದರೆ ಮತ್ತೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    https://twitter.com/ShobhaBJP/status/1290702374294523906?s=20

    DAKSHINA KANNADA

    ದಿ।ಮನಮೋಹನ್ ಸಿಂಗ್ ಸಹಿ ಇರುವ ರೂ 1ರ ನೋಟು ರೂ.100 ಕ್ಕೆ ಮಾರಾಟ…!

    Published

    on

    ಮಂಗಳೂರು : ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನದೊಂದಿಗೆ ಅವರೊಂದಿಗೆ ನಂಟು ಬೆಸೆದುಕೊಂಡಿರುವ ಭಾರತೀಯ ನೋಟುಗಳಿಗೆ ಭಾರಿ ಬೇಡಿಕೆ ಬಂದಿದೆ. ಮನಮೋಹನ್ ಸಿಂಗ್ ಅವರ ಸಹಿ ಇರುವ ನೋಟುಗಳನ್ನು ಜನರು ಆನ್‌ಲೈನ್ ಮೂಲಕ ಖರೀದಿ ಮಾಡುತ್ತಿದ್ದಾರೆ.

    ದೇಶದಲ್ಲಿ ನೋಟುಗಳ ಮೇಲೆ ಸಹಿ ಮಾಡಿರುವ ಏಕೈಕ ಪ್ರಧಾನಿ ಮನಮೋಹನ್ ಸಿಂಗ್. ಅದರಲ್ಲೂ ಒಂದು ರೂಪಾಯಿಂದ ಹಿಡಿದು ಎಲ್ಲಾ ಮುಖಬೆಲೆಯ ನೋಟುಗಳ ಮೇಲೆ ಸಹಿ ಮಾಡಿದ ಏಕೈಕ ವ್ಯಕ್ತಿ ಕೂಡಾ ಮನಮೋಹನ್ ಸಿಂಗ್. 1976 ರಲ್ಲಿ ದೇಶದ ಹಣಕಾಸು ಕಾರ್ಯದರ್ಶಿಯಾಗಿದ್ದ ಮನಮೋಹನ್ ಸಿಂಗ್ ಅವರು 1982 ರಿಂದ 1985 ರ ತನಕ ಭಾರತೀಯ ರಿಸರ್ವ ಬ್ಯಾಂಕ್‌ ನ ಗವರ್ನರ್ ಆಗಿ ಸೇವೆ ಸಲ್ಲಿಸಿದ್ದರು.


    1976 ರಲ್ಲಿ ಹಣಕಾಸು ಕಾರ್ಯದರ್ಶಿ ಆಗಿದ್ದ ಸಂದರ್ಭದಲ್ಲಿ ಮನಮೋಹನ್ ಸಿಂಗ್ ಅವರು ಒಂದು ರೂಪಾಯಿ ಮುಖಬೆಲೆಯ ನೋಟುಗಳಿಗೆ ಸಹಿ ಮಾಡಿದ್ದರು. ಈ ಒಂದು ರೂಪಾಯಿಗಳ ನೋಟಿನ ಮೇಲೆ ಸಹಿ ಮಾಡುವ ಅಧಿಕಾರ ಕೇವಲ ಹಣಕಾಸು ಕಾರ್ಯದರ್ಶಿಗೆ ಮಾತ್ರ ಇರುತ್ತದೆ. ಇದಾದ ಬಳಿಕ 1982 ರಲ್ಲಿ ರಿಸರ್ವ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಆದ ಮನಮೋಹನ್ ಸಿಂಗ್ ಅವರು ಗವರ್ನರ್ ಗೆ ಇರುವ ಅಧಿಕಾರದಂತೆ ಉಳಿದ ಎಲ್ಲಾ ಮುಖಬೆಲೆಯ ಕರೆನ್ಸಿಗೆ ಸಹಿ ಮಾಡಿದ್ದರು.


    ಡಿಸೆಂಬರ್ 26 ರಂದು ತಮ್ಮ 92 ನೇ ವಯಸ್ಸಿನಲ್ಲಿ ನಿಧನರಾದ ಮನಮೋಹನ್ ಸಿಂಗ್ ಅವರ ಸಹಿ ಇರುವ ನೋಟಿಗೆ ಈಗ ಬೇಡಿಕೆ ಬಂದಿದೆ. ಆನ್‌ಲೈನ್‌ನಲ್ಲಿ ಪುರಾತನ ನಾಣ್ಯಗಳು ಮತ್ತು ನೋಟುಗಳನ್ನು ಮಾರಾಟ ಮಾಡುವ ವೇದಿಕೆಯಾದ ಬಿಡ್ ಕಯೂರಿಯೋಸ್‌ ನಲ್ಲಿ ಮನಮೋಹನ್ ಸಿಂಗ್ ಅವರ ಸಹಿ ಇರುವ ನೋಟುಗಳು ಮಾರಾಟ ಮಾಡಲಾಗುತ್ತಿದೆ. ಅದರಲ್ಲೂ ಒಂದು ರೂಪಾಯಿ ಮುಖಬೆಲೆಯ ನೋಟುಗಳು ನೂರು ರೂಪಾಯಿಗಳಿಗೆ ಮಾರಾಟವಾಗುತ್ತಿದೆ.

    Continue Reading

    LATEST NEWS

    ಪತ್ನಿ, ಮಗುವನ್ನು ಕೊಂ*ದು ಪತಿ ಕ*ತ್ತು ಸೀ*ಳಿ ಆ*ತ್ಮಹ*ತ್ಯೆಗೆ ಯತ್ನ

    Published

    on

    ಮಂಗಳೂರು/ಗುಜರಾತ್ : ವ್ಯಕ್ತಿಯೊಬ್ಬ ಹೆಂಡತಿ, ಮಗುವನ್ನು ಕೊಂದು ಹೆತ್ತವರ ಮೇಲೆ ಹ*ಲ್ಲೆ ನಡೆಸಿ ತಾನೂ ಕ*ತ್ತು ಸೀ*ಳಿಕೊಂಡು ಆ*ತ್ಮಹ*ತ್ಯೆಗೆ ಯತ್ನಿಸಿರುವ ಘಟನೆ ಗುಜರಾತ್​ ಸೂರತ್‌ನ ಸರ್ತಾನಾ ಪ್ರದೇಶದಲ್ಲಿ ನಡೆದಿದ್ದು, ಈ ಭೀ*ಕರ ಸಾಮೂಹಿಕ ಹ*ತ್ಯೆ ಘಟನೆ ಇಡೀ ನಗರವನ್ನು ಬೆ*ಚ್ಚಿ ಬೀಳಿಸಿದೆ.

    ಸ್ಮಿತ್ ಜಿಯಾನಿ ಆರೋಪಿ ಎಂದು ಗುರುತಿಸಲಾಗಿದೆ.

    ಸ್ಮಿತ್ ತನ್ನ ಇಡೀ ಕುಟುಂಬಕ್ಕೆ ಚಾ*ಕುವಿನಿಂದ *ಹಲ್ಲೆ ನಡೆಸಿ, ಪತ್ನಿ ಮತ್ತು ಮಗುವನ್ನು ಕೊಂ*ದು, ಪೋಷಕರನ್ನು ಗಂ*ಭೀರವಾಗಿ ಗಾ*ಯಗೊಳಿಸಿದ್ದಾನೆ. ನಂತರ ತನ್ನ ಕು*ತ್ತಿಗೆಯನ್ನು ಸೀ*ಳಿಕೊಂಡು ತನ್ನ ಜೀವನವನ್ನು ಅಂ*ತ್ಯಗೊಳಿಸಲು ಪ್ರಯತ್ನಿಸಿದ್ದಾನೆ. ಸ್ಮಿತ್ ನ ಪೋಷಕರು ತಮ್ಮ ಗಾ*ಯಗಳಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಪತ್ನಿ ಮತ್ತು ಮಗು ಸಾ*ವನ್ನಪ್ಪಿದ್ದಾರೆ. ಘಟನೆಯ ಕುರಿತು ಸಾರ್ಥನಾ ಪೊಲೀಸರು ತನಿಖೆ ಆರಂಭಿಸಿದ್ದು, ಈ ದು*ರಂತ ಕೃ*ತ್ಯಕ್ಕೆ ಕಾರಣವೇನು ಎಂಬುದರ ಕುರಿತು ತನಿಖೆ ನಡೆಸುತ್ತಿದ್ದಾರೆ.

    Continue Reading

    LATEST NEWS

    ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ಗೆ ಅಂತಿಮ ನಮನ ಸಲ್ಲಿಸಿದ ಮೋದಿ

    Published

    on

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ದೆಹಲಿಯ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿವಾಸಕ್ಕೆ ತೆರಳಿ ಅಂತಿಮ ನಮನ ಸಲ್ಲಿಸಿದರು. ಕೇಂದ್ರ ಸಚಿವರಾದ ಅಮಿತ್ ಶಾ ಮತ್ತು ಜೆಪಿ ನಡ್ಡಾ ಅವರ ಜೊತೆಗಿದ್ದರು.

    2004 ರಿಂದ 2014 ರವರೆಗೆ ಅಧಿಕಾರದಲ್ಲಿದ್ದ ಸಿಂಗ್ ಅವರು ಗುರುವಾರ ತಮ್ಮ 92 ನೇ ವಯಸ್ಸಿನಲ್ಲಿ ನಿಧನರಾದರು. ಅವರು ಪತ್ನಿ ಗುರುಚರಣ್ ಸಿಂಗ್ ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ. ಪಿಎಂ ಮೋದಿ ಅವರು ಗುರುವಾರ ಎಕ್ಸ್‌ಪೋಸ್ಟ್‌ನಲ್ಲಿ ಸಿಂಗ್ ಅವರನ್ನು “ಅತ್ಯಂತ ಪ್ರತಿಷ್ಠಿತ ನಾಯಕರು” ಎಂದು ಕರೆದಿದ್ದಾರೆ.

    “ವಿನಮ್ರ ಮೂಲದಿಂದ ಏರಿದ ಅವರು ಗೌರವಾನ್ವಿತ ಅರ್ಥಶಾಸ್ತ್ರಜ್ಞರಾದರು. ಅವರು ಹಣಕಾಸು ಸಚಿವರಾಗಿಯೂ ಸೇರಿದಂತೆ ವಿವಿಧ ಸರ್ಕಾರಿ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದರು, ವರ್ಷಗಳಲ್ಲಿ ನಮ್ಮ ಆರ್ಥಿಕ ನೀತಿಯ ಮೇಲೆ ಬಲವಾದ ಮುದ್ರೆ ಹಾಕಿದರು. ಸಂಸತ್ತಿನಲ್ಲಿ ಅವರ ಮಧ್ಯಸ್ಥಿಕೆಗಳು ಸಹ ಒಳನೋಟವುಳ್ಳದ್ದಾಗಿದೆ. ಮಾಜಿ ಪ್ರಧಾನಿ, ಅವರು ಜನರ ಜೀವನವನ್ನು ಸುಧಾರಿಸಲು ವ್ಯಾಪಕವಾದ ಪ್ರಯತ್ನಗಳನ್ನು ಮಾಡಿದರು, ”ಎಂದು ಪಿಎಂ ಮೋದಿ ಹೇಳಿದರು.

    Continue Reading

    LATEST NEWS

    Trending