ಊಹಾಪೋಹ ಹಿನ್ನಲೆ ವೆನ್ ಲಾಕ್ ಗೆ ತುರ್ತಾಗಿ ಭೇಟಿ ನೀಡಿದ ಸಂಸದ ನಳಿನ್ ಕುಮಾರ್ ಕಟೀಲ್
ಮಂಗಳೂರು: ಕೊರೊನಾ ವೈರಸ್ ಬಗ್ಗೆ ಜನರಲ್ಲಿ ಹೆಚ್ಚುತ್ತಿರುವ ಆತಂಕದ ನಡುವೆಯೂ ಕೆಲವು ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಮಂಗಳೂರಿನಲ್ಲಿರುವ ಜಿಲ್ಲಾ ಸರಕಾರಿ ಆಸ್ಪತ್ರೆ ವೆನ್ ಲಾಕ್ ಬಗ್ಗೆ ಅಪಪ್ರಚಾರ ನಡೆಸಿರುವ ಘಟನೆ ನಿನ್ನೆ (ಮಾರ್ಚ್ 23) ನಡೆದಿತ್ತು.
ಈ ಸಂದರ್ಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಅಧಿವೇಶನದ ನಿಮಿತ್ತ ದೆಹಲಿಯಲ್ಲಿದ್ದರು.
ಇದೀಗ ತಮ್ಮ ಲೋಕಸಭಾ ಕ್ಷೇತ್ರದಲ್ಲಿರುವ ಜನರು ವೆನ್ ಲಾಕ್ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರನ್ನು ಸರಿಯಾಗಿ ನೋಡಿಕೊಳ್ಳಲಾಗುತ್ತಿಲ್ಲ ಎನ್ನುವ ಊಹಾಪೋಹದ ಬಗ್ಗೆ ಗೊಂದಲ ಪಡುತ್ತಿರುವುದನ್ನು ಅರಿತುಕೊಂಡ ಸಂಸದರು,
ತಕ್ಷಣ ದೆಹಲಿಯಿಂದ ಬೆಂಗಳೂರಿಗೆ ಬಂದು ಅಲ್ಲಿಂದ ತಡಮಾಡದೇ ರಸ್ತೆ ಮಾರ್ಗವಾಗಿ ಮಂಗಳೂರಿಗೆ ಆಗಮಿಸಿದರು.
ಮಂಗಳೂರಿಗೆ ತಲುಪಿದ ಕೂಡಲೇ ನೇರವಾಗಿ ವೆನ್ ಲಾಕ್ ಆಸ್ಪತ್ರೆಗೆ ತೆರಳಿದ ನಳಿನ್ ಕುಮಾರ್ ಕಟೀಲ್ ಅವರು ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿ, ಆಸ್ಪತ್ರೆಯ ಅಧೀಕ್ಷಕಿ ಸಹಿತ ವಿವಿಧ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಸಮಾಲೋಚನೆ ನಡೆಸಿದರು.
ಸಂಸದರಿಗೆ ಸೂಕ್ತ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ಅವರು ಕೊರೊನಾ ಚಿಕಿತ್ಸೆಗಾಗಿ ಪ್ರತ್ಯೇಕ ಬ್ಲಾಕ್ ವ್ಯವಸ್ಥೆ ಮಾಡಿರುವುದನ್ನು ನಳಿನ್ ಕುಮಾರ್ ಕಟೀಲ್ ಅವರ ಗಮನಕ್ಕೆ ತಂದರು.
ಒಬ್ಬ ವ್ಯಕ್ತಿಯಲ್ಲಿ ಮಾತ್ರ ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು ಮತ್ತು ಇನ್ನೊಬ್ಬ ಕೊರೊನಾ ಶಂಕಿತ ವ್ಯಕ್ತಿಯನ್ನು ತೀವ್ರ ನಿಗಾದಲ್ಲಿ ಇಡಲಾಗಿದೆ.
ಸುಮಾರು 200 ಜನರನ್ನು ತೀವ್ರ ನಿಗಾ ಘಟಕದಲ್ಲಿ ಇಡುವ ವ್ಯವಸ್ಥೆ ಇದೆ. ಆದ್ದರಿಂದ ಜನರು ಭಯಭೀತರಾಗುವ ಅವಶ್ಯಕತೆ ಇಲ್ಲ ಎಂಬ ಮಾಹಿತಿ ನೀಡಿದರು.
ಸಂಸದರೂ, ಭಾ.ಜ.ಪಾ ರಾಜ್ಯಾಧ್ಯಕ್ಷರೂ ಆಗಿರುವ ನಳಿನ್ ಕುಮಾರ್ ಕಟೀಲ್ ಅವರ ಈ ಕ್ಷಿಪ್ತ ಕಾರ್ಯ ಚಟುವಟಿಕೆಯಿಂದ ಜನರಲ್ಲಿ ಇದ್ದ ಗೊಂದಲ ನಿವಾರಣೆಯಾಗಿದೆ.
ಜನರು ಊಹಾಪೋಹಗಳನ್ನು ನಂಬದಂತೆ, ಜಿಲ್ಲಾಡಳಿತ, ರಾಜ್ಯ, ರಾಷ್ಟ್ರ ಸಂಪೂರ್ಣವಾಗಿ ಜನರ ಆರೋಗ್ಯ ಕಾಳಜಿಗೆ ಕಟಿಬದ್ಧವಾಗಿದೆ ಎಂದು ನಳಿನ್ ಕುಮಾರ್ ಜನರಿಗೆ ತಿಳಿಸಿದ್ದಾರೆ.
ನಿನ್ನೆ ಆಡಿಯೋ ವೈರಲ್ ಆದ ಹಿನ್ನಲೆಯಲ್ಲಿ ವೆನ್ ಲಾಕ್ ಅಧೀಕ್ಷಕರು ಮಂಗಳೂರಿನ ಸೈಬರ್ ಪೊಲೀಸರಿಗೆ ದೂರು ನೀಡಿದ್ದರು.
ಸದ್ಯ ಸಂಸದರ ವೆನ್ ಲಾಕ್ ಭೇಟಿಯಿಂದ ಜನರಲ್ಲಿ ಮೂಡಿದ್ದ ಗೊಂದಲಕ್ಕೆ ತೆರೆ ಬಿದ್ದಂತಾಗಿದೆ.
ಪುತ್ತೂರು : ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಕೋಲಾರ ಜಿಲ್ಲೆಯ ಕೆಜಿಎಫ್ ಪ್ರೌಢ ಶಾಲೆಯಲ್ಲಿ ಜ. 8 ಮತ್ತು 9 ರಂದು ನಡೆದ ಪ್ರಾಥಮಿಕ ಶಾಲಾ ಬಾಲಕಿಯರ ವಿಭಾಗದ ತ್ರೋಬಾಲ್ ಪಂದ್ಯಾಟದಲ್ಲಿ ಪುತ್ತೂರು ದರ್ಬೆಯ ಬೆಥನಿ ಆಂಗ್ಲ ಮಾಧ್ಯಮ ಶಾಲೆಯ ಬಾಲಕಿಯರು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.
ತಂಡದಲ್ಲಿ ಆದ್ಯ ಕೆ, ಶಾನ್ವಿ ಪ್ರೀಷ್ಮ, ಫಾತಿಮಾತ್ ಮುನವರ, ಫಾತಿಮಾತ್ ಝುಲ್ಫ, ನಿರೀಕ್ಷಾ H ಶೆಟ್ಟಿ, ಸ್ನಿಗ್ಧ, ಆಯಿಷಾತ್ ಹಿಬಾ ಉತ್ತಮ ಪ್ರದರ್ಶನವನ್ನು ನೀಡಿ ಗೆಲುವಿಗೆ ಕಾರಣೀಭೂತರಾದರು. ಹಿಬಾ ಉತ್ತಮ ಆಟಗಾರ್ತಿಯಾಗಿ ವೈಯಕ್ತಿಕ ಪ್ರಶಸ್ತಿಯನ್ನು ಪಡೆದುಕೊಂಡರು.
ತಂಡಕ್ಕೆ ದೈಹಿಕ ಶಿಕ್ಷಕರಾದ ನಿರಂಜನ್ ಹಾಗೂ ಅಕ್ಷಯ್ ತರಬೇತಿಯನ್ನು ನೀಡಿದ್ದಾರೆ. ತಂಡದ ವ್ಯವಸ್ಥಾಪಕಿಯಾಗಿ ಅನಿತಾಸಿಯ ಗೋನ್ಸಲ್ವಸ್ ಇವರು ತಂಡವನ್ನು ಮುನ್ನಡೆಸಿದರು ಎಂಬುದಾಗಿ ಶಾಲಾ ಮುಖ್ಯ ಶಿಕ್ಷಕಿ ಭಗಿಣಿ ಸೆಲಿನ್ ಪೇತ್ರ ಮಾಹಿತಿ ನೀಡಿದ್ದಾರೆ.
ಮಂಗಳೂರು/ಗದಗ : ಶಿರಹಟ್ಟಿ ಬಿಜೆಪಿ ಶಾಸಕ ಡಾ.ಚಂದ್ರು ಲಮಾಣಿಯ ಕಾರು ಚಾಲಕ ನೇ*ಣಿಗೆ ಶರಣಾಗಿದ್ದಾರೆ. ಸುನಿಲ್ ಲಮಾಣಿ(25) ಆತ್ಮಹ*ತ್ಯೆ ಮಾಡಿಕೊಂಡವರು. ಸುನಿಲ್ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಮಲ್ಲಾಡ್ ಕಾಲೋನಿಯಲ್ಲಿ ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ. ಆತ್ಮಹ*ತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಸುನೀಲ್ ಲಮಾಣಿ ಆತ್ಮಹ*ತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಶಾಸಕ ಚಂದ್ರು ಲಮಾಣಿ ಇತ್ತೀಚೆಗೆ ಖರೀದಿಸಿದ್ದ ಮನೆಯಲ್ಲಿ ಸುನೀಲ್ ಆತ್ಮಹ*ತ್ಯೆ ಮಾಡಿಕೊಂಡಿದ್ದು, ಆತ ಚಂದ್ರು ಅವರ ಸಂಬಂಧಿ ಎಂದು ತಿಳಿದುಬಂದಿದೆ . ಮನೆ ಕಟ್ಟುವ ವಿಚಾರದಲ್ಲಿ ಸಹೋದರರ ನಡುವೆ ಕಲಹ ಉಂಟಾಗಿತ್ತು ಎನ್ನಲಾಗಿದೆ. ಇದೇ ವಿಚಾರವಾಗಿ ಸುನಿಲ್ ಆತ್ಮಹ*ತ್ಯೆ ಮಾಡಿಕೊಂಡಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.
ನೀವು ಚಿಕ್ಕವರಾಗಿರಲಿ ಅಥವಾ ವಯಸ್ಸಾದವರಾಗಿರಲಿ ಸಿಹಿತಿಂಡಿ ಸೇವಿಸಿದ ನಂತರ ಹಲ್ಲುಗಳನ್ನ ಸ್ವಚ್ಛಗೊಳಿಸುವಲ್ಲಿನ ಅಜಾಗರೂಕತೆಯು ಹಲ್ಲುಗಳಿಗೆ ಸೋಂಕು ತಗುಲಿಸಬಹುದು. ಇದು ಇಡೀ ಹಲ್ಲನ್ನು ಹಾನಿಗೊಳಿಸುತ್ತದೆ. ಅಂತಹ ಸಂದರ್ಭಗಳಲ್ಲಿ, ಜನರು ದಂತವೈದ್ಯರ ಬಳಿಗೆ ಹೋಗುತ್ತಾರೆ ಮತ್ತು ಆಗಾಗ್ಗೆ ಹಲ್ಲುಗಳನ್ನ ಕೀಳಬೇಕಾಗುತ್ತದೆ. ಯಾಕಂದ್ರೆ, ಇದು ಇತರ ಹಲ್ಲುಗಳಿಗೆ ಹಾನಿ ಮಾಡುವ ಅಪಾಯವನ್ನ ಹೆಚ್ಚಿಸುತ್ತದೆ.
ಇಂದಿಗೂ ಸಹ ನಾವು ನಮ್ಮ ಹಿರಿಯರ ಹಳೆಯ ಪರಿಹಾರಗಳನ್ನ ಅನುಸರಿಸುವ ಮೂಲಕ ಹಲ್ಲಿನ ಹುಳುಗಳನ್ನ ತೊಡೆದು ಹಾಕಬಹುದು. ಇಂದು ನಾನು ನಿಮಗೆ ಅಂತಹ ಮನೆಮದ್ದನ್ನ ಹೇಳಲಿದ್ದೇನೆ, ಅದನ್ನು ಬಳಸಿಕೊಂಡು ನೀವು ದಂತವೈದ್ಯರ ಬಳಿಗೆ ಹೋಗದೆ ಹಲ್ಲಿನ ಹುಳುಗಳನ್ನ ತೊಡೆದು ಹಾಕಬಹುದು.
ಚಾಕೊಲೇಟ್ ತಿನ್ನುವುದರಿಂದ ಮಕ್ಕಳ ಹಲ್ಲುಗಳು ಹಾನಿಗೊಳಗಾಗುತ್ತವೆ. ಆಹಾರ ಅಥವಾ ಸಿಹಿತಿಂಡಿಗಳನ್ನು ಸೇವಿಸಿದ ನಂತರ ನಾವು ತೊಳೆಯುವುದಿಲ್ಲ. 10 ರಿಂದ 12 ವರ್ಷ ವಯಸ್ಸಿನಲ್ಲಿ, ಕುಳಿಗಳಿಂದಾಗಿ ಮಕ್ಕಳ ಹಲ್ಲುಗಳು ಕ್ಷೀಣಿಸಲು ಪ್ರಾರಂಭಿಸುತ್ತವೆ.
ಇದನ್ನು ತಡೆಗಟ್ಟಲು ಸುಲಭ ಮಾರ್ಗವಿದೆ. ಯಾರಿಗಾದರೂ ಹಲ್ಲಿನಲ್ಲಿ ಕುಳಿ ಇದ್ದರೆ, ನೀವು ಅದನ್ನು ಮನೆಯಲ್ಲಿಯೇ ತೆಗೆದುಹಾಕಬಹುದು. ಮೊದಲಿಗೆ, ಈರುಳ್ಳಿ ಬೀಜಗಳನ್ನ ಮಾರುಕಟ್ಟೆಯಿಂದ ತರಬೇಕು. ನಂತರ ಬೆಂಕಿಯನ್ನ ಹೊತ್ತಿಸಿ ಕೆಂಡದ ಮೇಲೆ ಈರುಳ್ಳಿ ಬೀಜಗಳನ್ನ ಹಾಕಿ ಬಂದ ಹೊಗೆಯನ್ನ ಬಾಯಿಯಲ್ಲಿ ಶೇಖರಿಸಿ ನಂತ್ರ ಮುಚ್ಚಿ. ಈ ಪ್ರಕ್ರಿಯೆಯನ್ನ ಎರಡರಿಂದ ಮೂರು ಬಾರಿ ಮಾಡಿ. ಈಗ ನಿಮ್ಮ ಬಾಯಿಯಲ್ಲಿ ನೀರು ಹಾಕಿಕೊಂಡು ಮುಕ್ಕಳಿಸಿ ಆ ಬಟ್ಟಲಿನಲ್ಲಿ ಉಗುಳಿ. ಈಗ ಆ ಬಟ್ಟಲಿನಲ್ಲಿರುವ ನೀರಿನಲ್ಲಿ ಎಲ್ಲಾ ಹುಳುಗಳು ಗೋಚರಿಸುತ್ತವೆ.