Home ಪ್ರಮುಖ ಸುದ್ದಿ ಕೋವಿಡ್ 19 ಸಮಯದಲ್ಲೂ ನೀಚ ರಾಜಕೀಯವೇ.?: ‘ಕೈ’ ವಿರುದ್ಧ ಉರಿದು ಬಿದ್ದ ಸಂಸದ ನಳಿನ್..

ಕೋವಿಡ್ 19 ಸಮಯದಲ್ಲೂ ನೀಚ ರಾಜಕೀಯವೇ.?: ‘ಕೈ’ ವಿರುದ್ಧ ಉರಿದು ಬಿದ್ದ ಸಂಸದ ನಳಿನ್..

ಕೋವಿಡ್ 19 ಸಮಯದಲ್ಲೂ ನೀಚ ರಾಜಕೀಯವೇ.?: ‘ಕೈ’ ವಿರುದ್ಧ ಉರಿದು ಬಿದ್ದ ಸಂಸದ ನಳಿನ್..

ಮಂಗಳೂರು: ದೇಶದ ಜನರ ದೇಣಿಗೆಯ ಪಿಎಂ ಕೇರ್ ಫಂಡ್ ಬಡವರ ಪಾಲಿಗೆ ಸೇರದೆ.. ದುರ್ಬಳಕೆ ಆಗುವ ಅವಕಾಶವೇ ಹೆಚ್ಚಿದೆ,

ಅಂತ ಪ್ರಧಾನಮಂತ್ರಿ ‘ಪಿಎಂ ಕೇರ್ ಫಂಡ್’ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ, ದಕ್ಷಿಣ ಕನ್ನಡ ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಹೇಳಿಕೆ ನೀಡಿರುವ ಅವರು, ಕೊವಿಡ್-19 ಸಮಯದಲ್ಲೂ ಕಾಂಗ್ರೆಸ್ ಪಕ್ಷದ ನೀಚ ರಾಜಕೀಯ ಖಂಡನೀಯ.

ಪ್ರಧಾನ ಮಂತ್ರಿ ಪಿಎಂ ಕೇರ್ ಫಂಡ್ ಬಗ್ಗೆ ಕಾಂಗ್ರೆಸ್ ಮಾಡಿರುವ ಟ್ವೀಟ್ ಆಧಾರ ರಹಿತ. ಕಾಂಗ್ರೆಸ್ ಪಕ್ಷದ ಬಹುತೇಕ ದಿವಾಳಿತನಕ್ಕೆ ಇದು ಸಾಕ್ಷಿ.

ಪಿಎಂ ಕೇರ್ ಫಂಡ್ ವೈಯಕ್ತಿಕ ಉದ್ದೇಶಕ್ಕೆ ಬಳಸಿದ್ದಾರೆ ಎಂದು ಟ್ಟಿಟ್ ಮಾಡಿ, ಪ್ರಧಾನ ಮಂತ್ರಿ ಬಗ್ಗೆ ಜನರಲ್ಲಿ ಅಪನಂಬಿಕೆ ಉಂಟು ಮಾಡುವ ಪ್ರಯತ್ನ ಅತ್ಯಂತ ಖಂಡನಿಯ.

ಕಾಮಾಲೆ ಕಣ್ಣಿಗೆ ಕಂಡಿದ್ದೆಲ್ಲಾ ಹಳದಿ ಎಂಬ ಗಾದೆಯಂತೆ, ಕಾಂಗ್ರೆಸ್ ಪಕ್ಷ ಮಾತನಾಡುವುದೇ ಭ್ರಷ್ಟಾಚಾರದ ಬಗ್ಗೆ ಯಾವುದೇ ಆಧಾರವಿಲ್ಲದೇ ಪುಂಖಾನು-ಪುಂಖವಾಗಿ ಮಾತನಾಡುವುದೇ ಚಾಳಿಯಾಗಿದೆ.

ನಿಜವಾಗಿ ಕೋವಿಡ್ ಸಮಯದಲ್ಲಿ ಎಲ್ಲರೂ ಒಂದಾಗಿ ಕೊರೊನಾ ವಿರುದ್ಧ ಹೊರಾಡಬೇಕು. ಅದನ್ನ ಬಿಟ್ಟು ವಲಸೆ ಕಾರ್ಮಿಕರನ್ನ ಬೀದಿಗಿಳಿಸೋದು ಹಾಗೂ ಜನರಿಗೆ ತಪ್ಪು ದಾರಿ ತೊರಿಸುವಂತಹ ಕೆಲಸವನ್ನು ಕಾಂಗ್ರೆಸ್ ಪಕ್ಷದವರು ಮಾಡ್ತಾ ಇದ್ದಾರೆ.

ಈ ರೀತಿಯ ಟ್ವೀಟ್ ಮಾಡಿದ್ದಕ್ಕೆ ಶಿವಮೊಗ್ಗ ಜಿಲ್ಲೆಯ ಸಾಗರ ಠಾಣೆಯಲ್ಲಿ ಸೋನಿಯಾ ಗಾಂಧಿ ವಿರುದ್ಧ ಪ್ರಕರಣ ದಾಖಲಾಗಿದೆ.

ಆದ್ರೆ ಕೇಸ್ ಹಿಂಪಡೆಯಬೇಕು, ಠಾಣಾ ಅಧಿಕಾರಿಯನ್ನು ಅಮಾನತು ಮಾಡಬೇಕೆಂದು ಡಿ.ಕೆ.ಶಿ ಒತ್ತಾಯಿಸಿದ್ದಾರೆ.

ಆದರೆ ಠಾಣಾ ಅಧಿಕಾರಿ ಪ್ರವೀಣ್ ಕೇಸ್ ದಾಖಲು ಮಾಡಿಕೊಂಡಿದ್ದಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೆನೆ. ಯಾವುದೇ ಕಾರಣಕ್ಕೂ ಕೇಸ್ ಹಿಂಪಡೆಯಬಾರದು.

ಸುಳ್ಳು ಸುದ್ದಿ ಹಬ್ಬಿಸುವರ ವಿರುದ್ದ ಕಠಿಣ ಕ್ರಮ ವಹಿಸಬೇಕು .ಡಿ.ಕೆ ಶಿವಕುಮಾರ್ ಗೆ ಜನರ ಮೇಲೆ ಕಾಳಜಿ ಇದ್ದರೆ ಸರಕಾರಕ್ಕೆ ಸಹಕಾರ ನೀಡಬೇಕು.

ಸೋನಿಯಾ ಗಾಂಧಿ 7 ದಶಕಗಳಿಂದ ಗಾಂಧಿ ಕುಟುಂಬವನ್ನು ಕೇರ್ ಮಾಡಿದ್ದಾರೆ ಹೊರತು, ಜನರನ್ನ ಕೇರ್ ಮಾಡಿಲ್ಲ ಎಂದು ಮಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ ಕಟೀಲ್ ವಾಗ್ದಾಳಿ ನಡೆಸಿದ್ದಾರೆ.

- Advertisment -

RECENT NEWS

ದಕ್ಷಿಣ ಅಸ್ಸಾಂನ ಬರಾಕ್ ಕಣಿವೆಯಲ್ಲಿ ಭೂಕುಸಿತ: 20ಕ್ಕೂ ಅಧಿಕ ಮಂದಿ ಜೀವಂತ ಸಮಾಧಿ..

ದಕ್ಷಿಣ ಅಸ್ಸಾಂನ ಬರಾಕ್ ಕಣಿವೆಯಲ್ಲಿ ಭೂಕುಸಿತ: 20ಕ್ಕೂ ಅಧಿಕ ಮಂದಿ ಜೀವಂತ ಸಮಾಧಿ.. ಗುವಾಹಟಿ: ದಕ್ಷಿಣ ಅಸ್ಸಾಂನ ಬರಾಕ್​ ಕಣಿವೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಭೂಕುಸಿತ ಉಂಟಾಗಿದ್ದು, ಮಹಿಳೆಯರು, ಮಕ್ಕಳು ಸೇರಿ 20ಕ್ಕೂ ಹೆಚ್ಚು ಜನ...

ಲಾಕ್ ಡೌನ್ ನಿಯಮ ಗಾಳಿಗೆ ತೂರಿ ಸೈಂಟ್ ಮೇರಿಸ್ ದ್ವೀಪದಲ್ಲಿ ಪಾರ್ಟಿ ಮಾಡಿದವರ ವಿರುದ್ಧ ತನಿಖೆ..

ಲಾಕ್ ಡೌನ್ ನಿಯಮ ಗಾಳಿಗೆ ತೂರಿ ಸೈಂಟ್ ಮೇರಿಸ್ ದ್ವೀಪದಲ್ಲಿ ಪಾರ್ಟಿ ಮಾಡಿದವರ ವಿರುದ್ಧ ತನಿಖೆ.. ಉಡುಪಿ: ಕೋವಿಡ್- 19 ಲಾಕ್ ಡೌನ್ ನಿಯಮ ಉಲ್ಲಂಘಿಸಿ, ಮಲ್ಪೆ ಸೈಂಟ್ ಮೇರಿಸ್ ದ್ವೀಪದಲ್ಲಿ ಮೇ 9ರಂದು...

ಕರ್ನಾಟಕ ಕಲ್ಚರಲ್ ಫೌಂಡೇಶನ್ ಸೌದಿ ಅರೇಬಿಯ ವತಿಯಿಂದ ನೂತನ ಮನೆ ಹಸ್ತಾಂತರ

ಕರ್ನಾಟಕ ಕಲ್ಚರಲ್ ಫೌಂಡೇಶನ್ ಸೌದಿ ಅರೇಬಿಯ ವತಿಯಿಂದ ನೂತನ ಮನೆ ಹಸ್ತಾಂತರ ಬೆಳ್ತಂಗಡಿ: ಕರ್ನಾಟಕ ಕಲ್ಚರಲ್ ಫೌಂಡೇಶನ್ ಸೌದಿ ಅರೇಬಿಯ ಇದರ ವತಿಯಿಂದ ಬೆಳ್ತಂಗಡಿ ತಾಲೂಕಿನ ಬೆದ್ರಬೆಟ್ಟುವಿನಲ್ಲಿ ನಿರ್ಮಿಸಲಾದ ಮನೆಯ ಕೀಲಿ ಕೈ ಹಸ್ತಾಂತರ...

ದಿಟ್ಟ ಕ್ರಮಗಳಿಂದ ಸರಕಾರವನ್ನು ತಟ್ಟಿ ಕೇಳಿದ್ದ ಹಿರಿಯ ಕೆಎಎಸ್ ಅಧಿಕಾರಿ ಕೆ.ಮಥಾಯಿ ಸೇವೆಯಿಂದ ನಿವೃತ್ತಿ

ದಿಟ್ಟ ಕ್ರಮಗಳಿಂದ ಸರಕಾರವನ್ನು ತಟ್ಟಿ ಕೇಳಿದ್ದ ಹಿರಿಯ ಕೆಎಎಸ್ ಅಧಿಕಾರಿ ಕೆ.ಮಥಾಯಿ ಸೇವೆಯಿಂದ ನಿವೃತ್ತಿ ಬೆಂಗಳೂರು: ಹಲವಾರು ದಿಟ್ಟ ಕ್ರಮಗಳಿಂದ ಸರಕಾರವನ್ನು ಹಲವು ಬಾರಿ ಎದುರು ಹಾಕಿಕೊಂಡಿದ್ದ ಹಿರಿಯ ಕೆಎಎಸ್ ಅಧಿಕಾರಿ ಕೆ.ಮಥಾಯಿ ಅವರು...