Connect with us

    ಪಂಪ್ವೆಲ್ ಫ್ಲೈ ಓವರ್ ವೀಕ್ಷಿಸಲು ದಿಢೀರ್ ಭೇಟಿ ನೀಡಿದ ಸಂಸದ ಕಟೀಲ್

    Published

    on

    ಮಂಗಳೂರು: ಅಂತೂ ಇಂತೂ ಕೊನೆಯ ಹಂತದಲ್ಲಿರುವ ಪಂಪ್ವೆಲ್ ಮೇಲ್ಸೇತುವೆಯ ವೀಕ್ಷಣೆಯನ್ನು ನಡೆಸಲು ಸಂಸದ ನಳಿನ್ ಕುಮಾರ್ ಕಟೀಲ್ ದಿಢೀರ್ ಭೇಟಿ ನೀಡಿದ್ರು. ಪಂಪ್ ವೆಲ್ ಮೇಲ್ಸೇತುವೆಯ ಕಾಮಗಾರಿಯನ್ನು ವೀಕ್ಷಿಸಿದ ಸಂಸದರು, ಕಾಮಗಾರಿ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದರು. ನಿಗದಿಯಂತೆ ಜನವರಿ 31ಕ್ಕೆ ಮಹತ್ವಾಕಾಂಕ್ಷಿ ಯೋಜನೆಯ ಉದ್ಘಾಟನೆ ನೆರವೇರಿಸಿ, ವಾಹನಗಳು ಓಡಾಟ ನಡೆಸಲು ಅವಕಾಶ ಮಾಡಿಕೊಡುವ ಸಾಧ್ಯತೆ ಇದೆ.

    ಕಳೆದ ಹತ್ತು ವರುಷಗಳಿಂದ ನೆನೆಗುದಿಗೆ ಬಿದ್ದಿದ್ದ ಫ್ಲೈ ಓವರ್ ಕಾಮಗಾರಿ ಬಗ್ಗೆ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು, ಈ ವರುಷದ ಆರಂಭದಲ್ಲಿ ಉದ್ಘಾಟನೆ ದಿನ ನಿಗದಿಪಡಿಸಿದ್ದರೂ ಕಾಮಗಾರಿ ಅಪೂರ್ಣದಿಂದ ಸಾಧ್ಯವಾಗಿರಲಿಲ್ಲ. ಬಳಿಕ ಸಂಸದರು ಕಾಮಗಾರಿ ಹೊಣೆಯನ್ನು ಜಿಲ್ಲಾಧಿಕಾರಿಗೆ ವಹಿಸಿದ್ದರು. ಜಿಲ್ಲಾಡಳಿತ ಜವಾಬ್ದಾರಿ ವಹಿಸಿಕೊಂಡ ಒಂದೇ ತಿಂಗಳಲ್ಲಿ ಇದೀಗ ಪಂಪ್ವೆಲ್ ಫ್ಲೈ ಓವರ್ ಕಾಮಗಾರಿ ಸಂಪೂರ್ಣಗೊಂಡು ಜನವರಿ 31 ಕ್ಕೆ ಉದ್ಘಾಟನೆಗೆ ಸಿದ್ಧವಾಗಿದೆ.

    ಇನ್ನು ಫ್ಲೈ ಓವರ್ ವೀಕ್ಷಣೆಯ ಸಂದರ್ಭ ಶಾಸಕ ವೇದವ್ಯಾಸ್ ಕಾಮತ್, ನಗರ ಪಾಲಿಕೆ ಸದಸ್ಯ ಸುಧೀರ್ ಶೆಟ್ಟಿ ಕಣ್ಣೂರು, ಶ್ರೀ ಸಂತೋಷ್ ಕುಮಾರ್ ರೈ ಬೋಳಿಯಾರ್ ಹಾಗೂ ಇನ್ನಿತರರು ಸಂಸದರಿಗೆ ಸಾಥ್ ನೀಡಿದ್ರು.

    Click to comment

    Leave a Reply

    Your email address will not be published. Required fields are marked *

    LATEST NEWS

    ಜಗತ್ತಿನಲ್ಲಿಯೇ ಅತ್ಯಂತ ದುಬಾರಿ ವಾಚ್ ಇದು; ಇದರ ಬೆಲೆ ಕೇಳಿದ್ರೆ ತಲೆ ತಿರುಗೋದು ಗ್ಯಾರಂಟಿ..!

    Published

    on

    ಸಮಯ ಅನ್ನೋದು ಬೆಲೆ ಕಟ್ಟಲಾಗದ್ದು. ಆದ್ರೆ ಅದೇ ಸಮಯವನ್ನು ತಿಳಿಸುವ ವಾಚ್​ಗೆ ಲಕ್ಷ ಲಕ್ಷ ಕೋಟಿ ಕೋಟಿ ಬೆಲೆಯಿದೆ. ಅಂಬಾನಿಯ ಅಂಟಿಲಿಯಾ ಬಂಗಲೆಯಲ್ಲಿರುವ ಕಾರ್​ಗಳ ಮೌಲ್ಯದ ವಾಚ್​ಗಳು ಕೂಡ ಬಜಾರ್​ನಲ್ಲಿ ಬಂದಿವೆ.ವಾಚ್​ಗಳು ಈಗ ಕೇವಲ ಟೈಮ್​ಪೀಸ್​ ಆಗಿ ಉಳಿದಕೊಂಡಿಲ್ಲ. ಐಷಾರಾಮಿತನದ ಗುರುತಾಗಿ ಉಳಿದಕೊಂಡಿವೆ. ಹೀಗಾಗಿಯೇ ಎಲಾನ್ ಮಸ್ಕ್​, ಮಾರ್ಕ್​ ಜುಕರ್ ಬರ್ಗ್​ ಇವರು ಸಂದರ್ಶನದಲ್ಲಿ, ವಿಡಿಯೋದಲ್ಲಿ ಕಾಣಿಸಿಕೊಂಡಾಗ ಅವರು ಒಂದು ವೇಳೆ ವಾಚ್ ಧರಿಸಿದ್ದರೆ ಆ ವಾಚ್​ನ ಬ್ರ್ಯಾಂಡ್ ಯಾವುದು, ಅದರ ಬೆಲೆ ಎಷ್ಟು ಇವೆಲ್ಲ ಮಾತುಗಳು ಮುನ್ನೆಲೆಗೆ ಬರುತ್ತವೆ. ಈಗ ಅದೇ ರೀತಿ ವಿಶ್ವದ ಅತ್ಯಂತ ದುಬಾರಿ ವಾಚ್​​ನ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಚರ್ಚೆಗಳು ಆಗುತ್ತಿವೆ.

    ಸುಪ್ರೀಮ್ ಲಕ್ಸುರಿ ಗುರುತಾಗಿ, ಐಷಾರಾಮಿತನದ ಕಟ್ಟ ಕಡೆಯ ಎತ್ತರವಾಗಿ ಗುರುತಿಸಿಕೊಂಡಿದೆ ಹ್ಯಾಲುಸಿನೇಷನ್ ಎಂಬ ಈ ಡೈಮಂಡ್ ವಾಚ್. ಈ ವಾಚ್​ನ ಬೆಲೆ ಕೇಳಿದ್ರೆ ಎಂತವರ ತಲೆಯೂ ಕೂಡ ಒಮ್ಮೆ ಗಿರ್‌ ಅನ್ನದೇ ಇರಲ್ಲ. ಈ ವಾಚ್​ನ ಬೆಲೆ ಬರೋಬ್ಬರಿ 500 ಮಿಲಿಯನ್ ಡಾಲರ್​, ಅಂದ್ರೆ ಭಾರತೀಯ ರೂಪಾಯಿಗಳಲ್ಲಿ 466 ಕೋಟಿ ರೂಪಾಯಿ ಎಂದರೆ ನೀವು ನಂಬಲೇಬೇಕು.

    ಇದನ್ನು ಅಪ್ಪಟ ವಜ್ರಗಳ ಹರುಳಿನಿಂದಲೇ ತಯಾರಿಸಲಾಗಿದೆ. ಲಾರೆನ್ಸ್ ಗ್ರಾಫ್​ ಎಂಬ ಉದ್ಯಮಿ 2014ರಲ್ಲಿ ಈ ಒಂದು ಬಾಸಲ್​ವರ್ಲ್ಡ್​​ಗೆ ಕಾಲಿಟ್ಟಿದ್ದರು. ವಿಶೇಷವಾದದ್ದು ಹಾಗೆ ಅಷ್ಟೇ ಐಶಾರಾಮಿ ಹಾಗೂ ಆಕರ್ಷಕ ವಾಚ್ ಸಿದ್ಧಪಡಿಸುವ ಗುರಿ ಅವರದ್ದಿತ್ತು. ಹೀಗಾಗಿ ಹಲವು ಬಣ್ಣದ ವಜ್ರಗಳಿಂದ ಕೂಡಿದ 110 ಕ್ಯಾರೆಟ್​ನ ಈ ವಾಚ್​​ನ್ನು ಸಿದ್ಧಪಡಿಸಿದ್ದಾರೆ. ಈ ಹ್ಯಾಲುಸಿನೇಷನ್ ವಾಚ್​ ಜಗತ್ತಿನಲ್ಲಿ ಅತ್ಯಂತ ವಿರಳವಾದ ಹಾಗೂ ದುಬಾರಿಯಾದ ವಾಚ್​ನ ಪಟ್ಟಿಯಲ್ಲಿದೆ. ಹಲವು ಬಣ್ಣಗಳಲ್ಲಿ ಬರುವ ಈ ವಾಚ್ ತಿಳಿ ಗುಲಾಬಿ, ನೀಲಿ, ಹಸಿರು, ಆರೆಂಜ್​ ಹಾಗೂ ಹಳದಿ ಬಣ್ಣಗಳಲ್ಲಿ ಈ ವಾಚ್​ಗಳನ್ನು ಸಿದ್ಧಪಡಿಸಲಾಗಿದೆ.

    ಇನ್ನು ಅನೇಕ ವಿನ್ಯಾಸಗಳಲ್ಲಿಯೂ ಕೂಡ ಈ ವಾಚ್ ಲಭ್ಯವಿದೆ. ಹೃದಯದ ವಿನ್ಯಾಸ, ಪೇರಳೆ ವಿನ್ಯಾಸ ಹೀಗೆ ಒಟ್ಟು ನಾಲ್ಕು ವಿನ್ಯಾಸಗಳಲ್ಲಿ ಇದು ಲಭ್ಯವಿದೆ. ಯುನಿಕ್ ಆಗಿರುವ ಶೇಪ್ ಹಾಗೂ ಕಲರ್​ನಲ್ಲಿ ಲಭ್ಯವಿದ್ದು. ನಮ್ಮ ನಿಮ್ಮಂತವರ ಕೈಗೆ ನಿಲುಕದ ಎತ್ತರದಲ್ಲಿ ಇದೆ.

    Continue Reading

    LATEST NEWS

    ವಾಟರ್ ಹೀಟರ್ ನಿಂದ ಹೊಡೆದು ವ್ಯಕ್ತಿಯ ಬರ್ಬರ ಹತ್ಯೆ

    Published

    on

    ಬೆಂಗಳೂರು: ಸ್ನೇಹಿತನನ್ನೇ ವ್ಯಕ್ತಿಯೊಬ್ಬ ವಾಟರ್ ಹೀಟರ್ ನಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಶ್ರೀನಿವಾಸಪುರದಲ್ಲಿ ನಡೆದಿದೆ.
    ನಾಗರಾಜ್ ಎಂಬಾತ ಶ್ರೀನಿವಾಸ್ ನನ್ನು ವಾಟರ್ ಹೀಟರ್ ನಿಂದ ಹೊಡೆದ ಕೊಲೆ ಮಾಡಿದ್ದಾನೆ.

    ಶ್ರೀನಿವಾಸ್ ಹಾಗೂ ನಾಗರಾಜ್ ಇಬ್ಬರು ಗಾರೆ ಕೆಲಸ ಮಾಡಿಕೊಂಡಿದ್ದರು. ಶ್ರೀನಿವಾಸ್ ಮದುವೆಯಾಗಿದ್ದರೂ ಪತ್ನಿಯನ್ನು ಬಿಟ್ಟು ಪ್ರತ್ಯೇಕವಾಗಿ ವಾಸವಾಗಿದ್ದ. ಕೊಲೆ ಆರೋಪಿ ನಾಗರಾಜ್ ಗೆ ಇನ್ನೂ ಮದುವೆಯಾಗಿರಲಿಲ್ಲ.ಇಬ್ಬರೂ ಶ್ರೀನಿವಾಸಪುರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

    ಶ್ರೀನಿವಾಸ್ ಹಾಗೂ ನಾಗರಾಜ್ ಜಗಳವಾಗಿದ್ದು, ಈ ವೇಳೆ ನಾಗರಾಜ್ ಕೋಪದ ಬರದಲ್ಲಿ ವಾಟರ್ ಹೀಟರ್ ನಿಂದ ಶ್ರೀನಿವಾಸ್ ಮೇಲೆ ಹಲ್ಲೆ ಮಾಡಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಶ್ರೀನಿವಾಸ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

    Continue Reading

    LATEST NEWS

    ಅರಂತೋಡು: ಭತ್ತದ ಲೋಡ್ ಸಾಗಿಸುತ್ತಿದ್ದ ಲಾರಿಗೆ ಆಕಸ್ಮಿಕ ಬೆಂಕಿ

    Published

    on

    ಅರಂತೋಡು: ಈಚರ್ ಲಾರಿಯೊಂದಕ್ಕೆ ಆಕಸ್ಮಿಕ ಬೆಂಕಿ ಹತ್ತಿಕೊಂಡು ಹೊತ್ತಿ ಉರಿದ ಘಟನೆ ಕೊಡಗು ಜಿಲ್ಲೆಯ ಜೋಡುಪಾಲ ಸಮೀಪ ಡಿ. 28ರ ತಡರಾತ್ರಿಯಲ್ಲಿ ನಡೆದಿದೆ.

    ಹೆಚ್.ಡಿ. ಕೋಟೆಯಿಂದ ಭತ್ತದ ಲೋಡ್ ಉಡುಪಿಗೆ ಸಾಗಿಸುತ್ತಿದ್ದ ವೇಳೆ ಲಾರಿಗೆ ದಿಢೀರ್ ಬೆಂಕಿ ಹೊತ್ತಿಕೊಂಡಿದೆ. ಇದನ್ನು ಗಮನಿಸಿದ ಚಾಲಕ ಹಾಗೂ ಕ್ಲೀನರ್ ಲಾರಿಯನ್ನು ರಸ್ತೆ ಪಕ್ಕ ನಿಲ್ಲಿಸಿ, ಕೆಳಗಿಳಿದಿದ್ದಾರೆ ಎನ್ನಲಾಗಿದೆ. ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.

    Continue Reading

    LATEST NEWS

    Trending