Connect with us

    DAKSHINA KANNADA

    24 ಮೀನುಗಾರರನ್ನು ರಕ್ಷಣೆ ಮಾಡಿದ ಕೋಸ್ಟ್ ಗಾರ್ಡ್ ತಂಡಕ್ಕೆ ಸಂಸದ ಕಟೀಲ್ ಅಭಿನಂದನೆ

    Published

    on

    24 ಮೀನುಗಾರರನ್ನು ರಕ್ಷಣೆ ಮಾಡಿದ ಕೋಸ್ಟ್ ಗಾರ್ಡ್ ತಂಡಕ್ಕೆ ಸಂಸದ ಕಟೀಲ್ ಅಭಿನಂದನೆ

    ಮಂಗಳೂರು : ಜೀವನ್ಮರಣದ ನಡುವೆ ಹೊರಡುತ್ತಿದ್ದ ಬೋಟ್ ನಲ್ಲಿದ್ದ  24 ಮೀನುಗಾರರನ್ನು ಕೋಸ್ಟ್ ಗಾರ್ಡ್‌ ತಂಡಕ್ಕೆ ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅಭಿನಂದಿಸಿದ್ದಾರೆ.

    ಕೋಸ್ಟ್  ಗಾರ್ಡನ  ಡಿಐಜಿ ವೆಂಕಟೇಶ್ ಅವರ ತಂಡ ಈ 24 ಮೀನುಗಾರರನ್ನು ರಕ್ಷಿಸಿ  ಸುರಕ್ಷಿತವಾಗಿ ಕರೆ ತಂದಿದ್ದರು.

    ಈ ಕಾರ್ಯಾಚರಣೆಗಾಗಿ ಮತ್ತು ಪ್ರತಿಕೂಲ ಹವಾಮಾನದ ಮಧ್ಯೆಯೂ ತಂಡದ ಸಾಹಸಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್ ಅಭಿನಂದನೆ ಸಲ್ಲಿಸಿದ್ದಾರೆ.

    ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಸಮೀಪದ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಖಮರುಲ್ ಬಹಾರ್ ಹೆಸರಿನ ಬೋಟ್, ಎಂಜಿನ್ ವೈಫಲ್ಯದಿಂದ ಸಮುದ್ರದಲ್ಲಿ ಗಾಳಿ ಮಳೆ ಹೊಡೆತಕ್ಕೆ ಸಿಲುಕಿ ಅಪಾಯದಲ್ಲಿತ್ತು .

    ಬೋಟ್ ಮಾಲೀಕರು ಮೀನುಗಾರಿಕೆ ಇಲಾಖೆಗೆ ಮಾಹಿತಿ ನೀಡಿ, ರಕ್ಷಣೆಗೆ ಮನವಿ ಮಾಡಿದ್ದರು.

    ಈ ಬಗ್ಗೆ ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ಭಾರತೀಯ ತಟ ರಕ್ಷಣಾ ಪಡೆಗೆ ಮಾಹಿತಿ ರವಾನಿಸಿದ್ದರು.

    ಜೀವನ್ಮರಣದ ನಡುವೆ ಹೊರಡುತ್ತಿದ್ದ ಬೋಟ್ ನಲ್ಲಿದ್ದ 24 ಮೀನುಗಾರರನ್ನು ಕೋಸ್ಟ್  ಗಾರ್ಶ್ರೀಡ್ ಡಿಐಜಿ ವೆಂಕಟೇಶ್ ಅವರ ತಂಡ ರಕ್ಷಿಸಿದೆ. ಈ ಕಾರ್ಯಾಚರಣೆಗಾಗಿ ಸಂಸದ ನಳಿನ್ ಕುಮಾರ್ ಕಟೀಲ್ ರವರು ಅಭಿನಂದನೆಗಳನ್ನು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    DAKSHINA KANNADA

    ಶೇರು ಮಾರ್ಕೆಟ್‌ ನಲ್ಲಿ ಹಣ ತೊಡಗಿಸಿದರೆ ಅಧಿಕ ಲಾಭಾಂಶ ಆಮಿಷ

    Published

    on

    ಮಂಗಳೂರು : ವಾಟ್ಸಾಪ್‌ನಲ್ಲಿ ಪರಿಚಯವಾದ ವ್ಯಕ್ತಿಗೆ ಶೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿದರೆ ಹೆಚ್ಚಿನ ಲಾಭಾಂಶ ಸಿಗಬಹುದು ಎಂಬ ಆಮಿಷವೊಡ್ಡಿ 10 ಲಕ್ಷ ರೂಪಾಯಿ ವಂಚಿಸಿದ್ದ ಪ್ರಕರಣವೊಂದರಲ್ಲಿ ಕೇರಳ ಮೂಲದ ಯುವಕನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

    ಕೇರಳದ ತ್ರಿಶೂರ್‌ನ ಮಟ್ಟೂರು ನೂಲುವ್ಯಾಲಿಯ ಕೈಪುಝ ಹೌಸ್‌ ನಿವಾಸಿ ನಿಧಿನ್‌ ಕುಮಾರ್‌ ಕೆ.ಎಸ್‌ ಬಂಧಿತ ಆರೋಪಿ. ಈ ಪ್ರಕರಣದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರುವ ಶಂಕೆ ಇದ್ದು, ಅವರಿಗಾಗಿ ಶೋಧ ನಡೆದಿದೆ.

    ಈತ ಕಳೆದ ವರ್ಷ ಶೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿದರೆ ಹೆಚ್ಚಿನ ಲಾಭಾಂಶ ಸಿಗ ಬಹುದೆಂದು ನಂಬಿಸಿ ವ್ಯಕ್ತಿಯೊಬ್ಬರಿಂದ 10,32,000 ರೂಪಾಯಿಗಳನ್ನು ಹಂತಹಂತವಾಗಿ ಪಡೆದುಕೊಂಡಿದ್ದ. ಈ ಬಗ್ಗೆ ಮಂಗಳೂರಿನ ಸೆನ್‌ ಕ್ರೈಮ್‌ ಪೊಲೀಸರು ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೆತ್ತಿಕೊಂಡಿದ್ದರು.

    ಇದನ್ನೂ ಓದಿ: ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಬಳಿ ದುರಂತ 

    ಪ್ರಕರಣಕ್ಕೆ ಸಂಬಂಧಿಸಿ ದೂರುದಾರರ ವಿವಿಧ ಬ್ಯಾಂಕ್‌ ಖಾತೆಗಳಿಂದ ಹಣ ವರ್ಗಾವಣೆಯಾದ ಬಗ್ಗೆ ಮತ್ತು ಅದು ಯಾರ ಖಾತೆಗೆ ಪಾವತಿಯಾಗಿದೆ ಎಂಬಿತ್ಯಾದಿ ವಿವರಗಳನ್ನು ಸಂಗ್ರಹಿಸಿ ಪೊಲೀಸರು ತನಿಖೆಯನ್ನು ನಡೆಸಿದ್ದರು. ಆರೋಪಿಯ ಬ್ಯಾಂಕ್‌ ಖಾತೆಗೆ 1 ಲಕ್ಷ ರೂಪಾಯಿ. ಬಂದಿದ್ದು, ಆತನ ಸ್ನೇಹಿತ ತಿಳಿಸಿದಂತೆ ವಿವಿಧ ಬ್ಯಾಂಕ್‌ ಖಾತೆಗಳಿಗೆ ಕಮಿಷನ್‌ ಪಡೆದುಕೊಂಡು ಹಣವನ್ನು ವರ್ಗಾವಣೆ ಮಾಡಿದ್ದಾಗಿ ತಿಳಿದು ಬಂದಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

    ಮಂಗಳೂರು ನಗರ ಪೊಲೀಸ್‌ ಆಯುಕ್ತ ಅನುಪಮ್‌ ಅಗರ್ವಾಲ್‌, ಡಿಸಿಪಿಗಳಾದ ಸಿದ್ದಾರ್ಥ ಗೋಯಲ್‌, ರವಿಶಂಕರ್‌ ನಿರ್ದೇಶನದಂತೆ ಸೆನ್‌ ಎಸಿಪಿ ರವೀಶ್‌ ನಾಯಕ್‌, ಇನ್‌ಸ್ಪೆಕ್ಟರ್‌ ಸತೀಶ್‌ ಎಂ.ಪಿ ಹಾಗೂ ಎಸ್‌ಐ ಗುರಪ್ಪ ಕಾಂತಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

    Continue Reading

    DAKSHINA KANNADA

    ಜ.11 ಹಾಗೂ 12 ರಂದು ಬೆಂಗಳೂರಿನಲ್ಲಿ ಅಬ್ಬರಿಸಲಿದೆ ‘ದಸ್ಕತ್’

    Published

    on

    ಮಂಗಳೂರು/ಬೆಂಗಳೂರು : ಅದ್ದೂರಿಯಾಗಿ ತೆರೆಕಂಡು ಜನ ಮನ ಗೆದ್ದು, ತುಳು ಚಿತ್ರರಂಗದಲ್ಲೇ ಇತಿಹಾಸ ನಿರ್ಮಿಸಿರುವ ‘ದಸ್ಕತ್’ ಸಿನಿಮಾ ಜ.11, 12 (ಶನಿವಾರ ಮತ್ತು ಭಾನುವಾರ) ಬೆಂಗಳೂರಿನ ತುಳುವರಿಗಾಗಿ ಪ್ರದರ್ಶನ ಆಯೋಜಿಸಲಾಗಿದೆ.

    ರಾಘವೇಂದ್ರ ಕುಡ್ಡ ನಿರ್ಮಾಣದಲ್ಲಿ ರೂಪುಗೊಂಡಿರುವ ಈ ಚಲನಚಿತ್ರವು ಶನಿವಾರ ಸಂಜೆ 7.30 ಹಾಗೂ ಜ.12ರ ಭಾನುವಾರದಂದು ಬೆ.11, ಮಧ್ಯಾಹ್ನ 2.30 ಹಾಗೂ ಸಂಜೆ 6 ಗಂಟೆಗೆ ಪ್ರದರ್ಶನಗೊಳ್ಳಲಿದೆ. ಚಿತ್ರರಂಗದ ಅನುಭವವಿಲ್ಲದವರೇ ಇರುವ ಈ ತುಳು ಭಾಷಾ ಚಲನಚಿತ್ರವು ಕರಾವಳಿಯ ಕಲೆ, ಸಂಸ್ಕೃತಿ, ಆಚಾರ ವಿಚಾರಗಳನ್ನು ಸುಂದರವಾಗಿ ನಿರೂಪಿಸಿದೆ. ಕರಾವಳಿಯ ಚಿತ್ರಪ್ರೇಮಿಗಳಿಗಾಗಿ ಮತ್ತು ತುಳು ಸಂಸ್ಕೃತಿಯನ್ನು ಅರಿಯುವ ಮನಸ್ಸುಳ್ಳ ಎಲ್ಲರಿಗಾಗಿ ಚಾಮರಾಜಪೇಟೆಯ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದ ಡಾ. ರಾಜ್‌ಕುಮಾರ್ ಭವನದ ಡಾ.ಅಂಬರೀಷ್ ಆಡಿಟೋರಿಯಂನಲ್ಲಿ ಚಲನಚಿತ್ರದ ಪ್ರದರ್ಶನ ಏರ್ಪಾಟಾಗಿದೆ.

    ಗ್ರಾಮೀಣ ಬದುಕಿನ ನೂರಾರು ಸಂಗತಿಗಳನ್ನು ಆಯ್ದುಕೊಂಡು ಅವುಗಳನ್ನು ಬಿಡಿಬಿಡಿಯಾಗಿ ಬಿಡಿಸಿಕೊಂಡು ಒಂದೊಂದು ಸಂಗತಿಯನ್ನೂ ರೂಪಕದ ಹಾಗೆ ಸೃಷ್ಟಿಸುತ್ತಾ ಹೋಗಿದ್ದಾರೆ. ತಂತ್ರಜ್ಞಾನ, ಕ್ಯಾಮರಾ, ನಟ ನಟಿಯರು, ನಿರ್ಮಾಪಕ, ವ್ಯವಹಾರ, ಕಲಾತ್ಮಕತೆ, ಆರ್ಥಿಕ ಲಾಭ ಎಲ್ಲವನ್ನೂ ಲೆಕ್ಕಾಚಾರ ಮಾಡುವ ಈ ದಿನಗಳಲ್ಲಿ, ಅದೂ ತುಳು ಭಾಷೆಯಲ್ಲಿ ಒಂದು ವಿಶಿಷ್ಟ ಬಗೆಯ ಪ್ರಯತ್ನ ನಡೆದಿದೆ. ಪ್ರಮುಖ ಕಥಾ ಪಾತ್ರವೊಂದು ನಾಯಕನೂ ಅಲ್ಲದ ಖಳನೂ ಅಲ್ಲದ ಮತ್ತು ಅದು ಎರಡೂ ಆಗಿರುವ ನಟನೊಬ್ಬನ ನಟನಾಶಕ್ತಿಯನ್ನು ಈ ಸಿನಿಮಾದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗಿದೆ ಎಂದು ವಿಮರ್ಶಿಸಿದ್ದಾರೆ.

    ನಾಯಕ ನಟನಾಗಿ ದೀಕ್ಷೀತ್ ಅಂಡಿಂಜೆ ಸಿನಿಮಾದಲ್ಲಿ ಉತ್ತಮ ಅಭಿನಯದ ಮೂಲಕ ಮಿಂಚಿದ್ದಾರೆ. ದಸ್ಕತ್ ಚಿತ್ರಕ್ಕೆ ಅನೀಶ್ ಪೂಜಾರಿ ವೇಣೂರು ನಿರ್ದೇಶನ ಮಾಡಿದ್ದು, ಸಂತೋಷ್ ಆಚಾರ್ಯ ಗುಂಪಲಾಜೆಯ ಛಾಯಾಗ್ರಹಣ ಗಮನ ಸೆಳೆದಿದೆ. ಸಮರ್ಥನ್ ಎಸ್.ರಾವ್ ಸಂಗೀತವಿದ್ದು, ಹೊಸಬರ ನಟನೆಯಲ್ಲಿ ಸುಂದರವಾಗಿ ಮೂಡಿಬಂದಿದೆ. ಈಗಾಗಲೇ ಎಂಟನೇ ಪರಿಚ್ಛೇದಕ್ಕೆ ಸೇರಬೇಕು ಎಂಬ ಆಗ್ರಹ ಕೇಳಿಬರುತ್ತಿರುವ ತುಳು ಭಾಷೆಯ ವೈವಿಧ್ಯವೂ ಈ ಚಿತ್ರದ ಮೂಲಕ ಬಿಂಬಿತವಾಗಿದೆ.

    Continue Reading

    DAKSHINA KANNADA

    ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಬಳಿ ದುರಂತ

    Published

    on

    ಮುಲ್ಕಿ : ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಬಸ್ ನಿಲ್ದಾಣ ಜಂಕ್ಷನ್ ಬಳಿ ಬೈಕ್ ಗೆ ತಡೆರಹಿತ ಬಸ್ ಡಿಕ್ಕಿಯಾಗಿ ಸವಾರ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಗಾಯಗೊಂಡವರನ್ನು ಮುಲ್ಕಿ ಅಂಚೆ ಕಚೇರಿಯ ಅಂಚೆಪಾಲಕ ಕೊಲ್ಲೂರು ನಿವಾಸಿ ಪಾಂಡುರಂಗ ರಾವ್ ಎಂದು ಗುರುತಿಸಲಾಗಿದೆ. ಗಾಯಾಳು ಪಾಂಡುರಂಗ ರಾವ್ ತಮ್ಮ ಬೈಕ್ ನಲ್ಲಿ ರಾಷ್ಟ್ರೀಯ ಹೆದ್ದಾರಿ ಮುಲ್ಕಿ ಜಂಕ್ಷನ್ ಬಳಿ ಹೆದ್ದಾರಿ ಕ್ರಾಸ್ ಮಾಡುತ್ತಿದ್ದಾಗ ಉಡುಪಿ ಕಡೆಯಿಂದ ಸರ್ವಿಸ್ ರಸ್ತೆಯಲ್ಲಿ ಬಂದ ತಡೆರಹಿತ ಬಸ್ ಬೈಕ್ ಗೆ ಡಿಕ್ಕಿ ಹೊಡೆದಿದೆ.

    ಇದನ್ನೂ ಓದಿ: ಅಕ್ರಮ ಮರಳು ಅಡ್ಡೆಯ ಮೇಲೆ ಪೊಲೀಸರ ದಾಳಿ

    ಅಪಘಾತದ ಸಂದರ್ಭ ಸಮಾರ ಪಾಂಡುರಂಗ ರಾವ್ ರವರ ತಲೆಗೆ, ಕಾಲಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಪಘಾತದ ಭೀಕರ ದೃಶ್ಯ ಸ್ಥಳೀಯ ಅಂಗಡಿ ಸಿ ಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    Continue Reading

    LATEST NEWS

    Trending