ಹೈದರಾಬಾದ್: ಗಾಂಜಾ ವ್ಯಸನಿಯಾಗಿದ್ದ ಅಪ್ರಾಪ್ತ ಮಗನನ್ನು ತಾಯಿಯೊಬ್ಬರು ವಿದ್ಯುತ್ ಕಂಬಕ್ಕೆ ಕಟ್ಟಿ, ಆತನ ಮುಖಕ್ಕೆ ಮೆಣಸಿನ ಪುಡಿ ಎರಚಿ ಹಿಗ್ಗಾಮುಗ್ಗ ಥಳಿಸಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಈ ವೀಡಿಯೋ ವೈರಲ್ ಆಗಿದೆ.
ಮಗ ಗಾಂಜಾ ವ್ಯಸನಿ ಆಗಿರುವುದನ್ನು ನೋಡಿ ಸಹಿಸಲಾಗದೇ ಆತನ ತಾಯಿ ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಆತನಿಗೆ ಥಳಿಸಲಾಗಿದೆ.
ಗಾಂಜಾ ಸೇವನೆ ನಿಲ್ಲಿಸುವುದಾಗಿ ಭರವಸೆ ನೀಡಿದ ನಂತರ ಆತನನ್ನು ಬಿಡಲಾಗಿದೆ. ಇದೀಗ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.