ತಮಿಳುನಾಡು: ಕಳೆದ ಏಪ್ರಿಲ್ ತಿಂಗಳಿನಲ್ಲಿ ಚೆನ್ನೆೈನ ಅಪಾರ್ಟ್ ಮೆಂಟ್ವೊಂದರ ಮೇಲ್ಛಾವಣಿಯಲ್ಲಿ ಮಗು ಸಿಲುಕಿಕೊಂಡಿತ್ತು. ಆ ಮಗುವನ್ನು ಸ್ಥಳೀಯರ ನೆರವಿನಿಂದ ರಕ್ಷಿಸಲಾಗಿತ್ತು. ಆದರೀಗ ಮಗುವಿನ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳನ್ನು ಎದುರಿಸಿದ ತಾಯಿ ಸಾವಿನ ದಾರಿ ಹಿಡಿದಿದ್ದಾರೆ.
ರಮ್ಯಾ ಆತ್ಮಹತ್ಯೆ ಮಾಡಿಕೊಂಡ ತಾಯಿ. ಅನೇಕ ಟೀಕೆಗಳನ್ನು ಎದುರಿಸಿ ಅದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಮಿಳುನಾಡಿನ ಕೊಯಮತ್ತೂರಿನ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಮಗು ಬಿದ್ದ ಘಟನೆಗೆ ತಾಯಿ ರಮ್ಯಾನೇ ಕಾರಣ ಎಂದು ಟೀಕಿಸಿದ್ದರಿಂದ ನೊಂದಿದ್ದರು ಎಂದು ತಿಳಿದುಬಂದಿದೆ.
ಏನಿದು ಘಟನೆ?
ಏಪ್ರಿಲ್ 28 ರಂದು ಚೆನ್ನೆೈ ಅಪಾರ್ಟ್ ಮೆಂಟ್ ನಲ್ಲಿ ಮಗುವೊಂದು ಆಕಸ್ಮಿಕವಾಗಿ ಮೇಲ್ಛಾವಣಿಯಲ್ಲಿ ಸಿಲುಕಿತ್ತು. ಅದನ್ನು ಕಂಡ ಸ್ಥಳೀಯರು ಮಗುವಿನ ರಕ್ಷಣೆ ಮಾಡಿದ್ದರು. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಮಾತ್ರವಲ್ಲದೆ, ಮಗು ಈ ರೀತಿ ಬೀಳಲು ಮಗುವಿನ ತಾಯಿ ನಿರ್ಲಕ್ಷ್ಯ ಎಂದು ಅನೇಕರು ಸೋಷಿಯಲ್ ಮೀಡಿಯಾಗಳಲ್ಲಿ ಟೀಕೆಗಳನ್ನು ಮಾಡಿದ್ದರು. ಈ ಟೀಕೆಯಿಂದ ನೊಂದು ಮಗುವಿನ ತಾಯಿ ರಮ್ಯಾ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮಂಗಳೂರು/ಕಾನ್ಪುರ : ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರು ರೈಲು ಹತ್ತುವ ವೇಳೆ ಅಥವಾ ಇಳಿಯುವ ವೇಳೆ ಆಯತಪ್ಪಿ ಬಿದ್ದ ಘಟನೆಗಳು ಸಂಭವಿಸಿವೆ. ಕೆಲವೊಮ್ಮೆ ಅದೃಷ್ಟವಶಾತ್, ಪಾರಾಗಿರುವುದಿದೆ. ರೈಲ್ವೇ ಸಿಬ್ಬಂದಿ ರಕ್ಷಿಸಿರುವ ಘಟನೆಗಳೂ ಇವೆ. ಇಂತಹ ಹಲವು ವೀಡಿಯೋಗಳು ವೈರಲ್ ಆಗಿವೆ. ಇದೀಗ ಮತ್ತೊಂದು ಅಂತಹುದೇ ವೀಡಿಯೋ ವೈರಲ್ ಆಗಿದೆ.
ರೈಲು ಬಂದು ನಿಂತಿತ್ತು. ಮಹಿಳೆ ರೈಲು ಹತ್ತಿದ್ದರು. ಆದರೆ, ಮಕ್ಕಳು ಪ್ಲಾಟ್ ಫಾರ್ಮ್ ನಲ್ಲಿಯೇ ಉಳಿದಿದ್ದರು. ಮಕ್ಕಳು ಅಲ್ಲೇ ಇರುವುದನ್ನು ನೋಡಿ ಮಹಿಳೆ ಮಕ್ಕಳನ್ನು ಕರೆದಿದ್ದಾರೆ. ಅವರು ಬರದೇ ಇದ್ದಾಗ ರೈಲಿನಿಂದ ಕೆಳಗೆ ಹಾರಲು ಯತ್ನಿಸಿದ್ದಾರೆ. ಈ ವೇಳೆ ಆಯತಪ್ಪಿ ರೈಲು ಹಾಗೂ ಪ್ಲಾರ್ಟ್ ಫಾರ್ಮ್ ನಡುವೆ ಸಿಲುಕಿಕೊಂಡಿದ್ದಾರೆ. ತಕ್ಷಣ ರೈಲ್ಬೇ ಪೊಲೀಸರು ಆಕೆಯನ್ನು ರಕ್ಷಿಸಿ ಸಂಭಾವ್ಯ ಅನಾಹುತವನ್ನು ತಪ್ಪಿಸಿದ್ದಾರೆ.
ಸದ್ಯ ಘಟನೆಯ ವೀಡಿಯೋ ವೈರಲ್ ಆಗಿದ್ದು, ಇದು ಕಾನ್ಪುರ ಸೆಂಟ್ರಲ್ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ. ಮಹಿಳೆಯನ್ನು ಜಿಆರ್‌ಪಿ ಸಬ್‌ಇನ್ಸ್‌ಪೆಕ್ಟರ್ ಶಿವ ಸಾಗರ್ ಶುಕ್ಲಾ ಮತ್ತು ಕಾನ್‌ಸ್ಟೇಬಲ್ ಅನೂಪ್ ಕುಮಾರ್ ಪ್ರಜಾಪತಿ ರಕ್ಷಿಸಿದ್ದಾರೆ.
11 ಸೆಕೆಂಡುಗಳಈ ವೀಡಿಯೋದಲ್ಲಿ ಇಬ್ಬರು ರೈಲ್ವೆ ಸಿಬ್ಬಂದಿ ರೈಲಿನಿಂದ ಜಿಗಿದ ಮಹಿಳೆಯನ್ನು ರಕ್ಷಿಸುತ್ತಿರುವುದನ್ನು ಕಾಣಬಹುದಾಗಿದೆ. ಆಕೆ ಬಿದ್ದ ಕೆಲವೇ ಕ್ಷಣಗಳಲ್ಲಿ ಜಿಆರ್‌ಪಿ ಸಿಬ್ಬಂದಿ ಆಕೆಯನ್ನು ಹಿಡಿದು ರಕ್ಷಿಸಿದ್ದು, ವ್ಯಾಪಕ ಮೆಚ್ಚುಗೆ ಗಳಿಸಿದೆ.
ಮಂಗಳೂರು/ಮಸ್ಕತ್ : ಬಿರುವ ಜವನೆರ್ ಮಸ್ಕತ್ ಆಯೋಜಿಸಿದ ಕರ್ನಾಟಕ ಪ್ರೀಮಿಯಾರ್ ಲೀಗ್ ನ 2024 ನೇ ಸಾಲಿನ ಕ್ರೀಡಾಕೂಟ ಮಸ್ಕತ್ ನ ಅಲ್ ಹೈಲ್ ಕ್ರೀಡಾಂಗಣದಲ್ಲಿ ನಡೆಯಿತು. ಕ್ರೀಡಾಕೂಟದ ಉದ್ಘಾಟನೆಯನ್ನು ಓಮನ್ ಕ್ರಿಕೆಟ್ ನ ಟಿ20 ತಂಡದ ನಾಯಕ ವಿನಾಯಕ್ ಶುಕ್ಲ ನೆರವೇರಿಸಿದರು.
ಈ ಸಂದರ್ಭ ಉತ್ತಮ್ ಕೋಟ್ಯಾನ್, ಮುಸ್ತಫಾ, ರಮಾನಂದ್ ಬಂಗೇರ, ಚಂದ್ರಕಾಂತ್ ಕೋಟ್ಯಾನ್, ದಾಮೋದರ್ ಶೆಟ್ಟಿ, ಪದ್ಮಾಕರ್ ಮೆಂಡನ್ ಮತ್ತಿತರರು ಉಪಸ್ಥಿತರಿದ್ದರು.
ಪುದರ್ ದೀತಿಜಿ ನಾಟಕದ ಪೋಸ್ಟರ್ ಬಿಡುಗಡೆ :
ಇದೇ ಸಂದರ್ಭದಲ್ಲಿ ಜನವರಿ 10 ರಂದು ಮಸ್ಕತ್ ನ ಆಲ್ ಫಾಜಾಜ್ ಹೋಟೆಲ್ ನಲ್ಲಿ ನಡೆಯಲಿರುವ ಕಾಪಿಕಾಡ್ ಅವರ ಚಾ ಪರ್ಕ ತಂಡದ ” ಪುದರ್ ದೀತಿಜಿ ” ನಾಟಕದ ಪೋಸ್ಟರ್ ಬಿಡುಗಡೆ ಹಾಗೂ ಪ್ರಚಾರ ಅಭಿಯಾನಕ್ಕೆ ಡಾ. ದೇವದಾಸ್ ಕಾಪಿಕಾಡ್ ಹಾಗೂ ಅರ್ಜುನ್ ಕಾಪಿಕಾಡ್ ಚಾಲನೆ ನೀಡಿದರು.
ಮಂಗಳೂರು: ಕೆಲವರೆಲ್ಲಾ ಲಕ್ಷ-ಲಕ್ಷ ಕೊಟ್ಟು ಮೊಬೈಲ್ ತೆಗೆದುಕೊಳ್ಳುತ್ತಾರೆ. ಆದ್ರೆ, ಅದಕ್ಕಿಂತ ಕಡಿಮೆಯಲ್ಲಿ ಸಿಗುವ ಚಾರ್ಜರ್ ತೆಗೆದುಕೊಳ್ಳಲು ಜಿಪುಣತನ ತೋರಿಸುತ್ತಾರೆ. ಹಳೇ ಚಾರ್ಜರ್ ಗಳಿಗೆ ಗಮ್ ಟೇಪ್, ಪ್ಲಾಸ್ಟರ್ ಅಥವಾ ರಬ್ಬರ್ ಹಾಕಿ ಮೊಬೈಲ್ ಚಾರ್ಜ್ ಮಾಡುವುದರಿಂದ ಅಪಘಾತಗಳು ಸಂಭವಿಸುತ್ತಿವೆ ಎಂದು ಅಧ್ಯಯನ ಒಂದು ದೃಢ ಪಡಿಸಿದೆ.
ಇದು ತುಂಬಾ ಮನೆಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ದೃಶ್ಯವಾಗಿದೆ. ಯುನೈಟೆಡ್ ಕಿಂಗ್ ಡಮ್ ನ ಎಲೆಕ್ಟ್ರಿಕಲ್ ಸೇಫ್ಟಿ ಇನ್ ಸ್ಟಿಟ್ಯೂಟ್ ಈ ಬಗ್ಗೆ ಅಧ್ಯಯನ ನಡೆಸಿದೆ. ಕಳಪೆ ಗುಣಮಟ್ಟದ ಚಾರ್ಜರ್ ಹಾಗೂ ಚೈನೀಸ್ ಚಾರ್ಜರ್ ಗಳಿಂದಲೂ ಅಪಘಾತಗಳು ಸಂಭವಿಸುತ್ತಿವೆ. ಕಳೆದ ಐದು ವರ್ಷಗಳಲ್ಲಿ, ಅಪಘಾತಗಳಿಗೆ ಗುರಿಯಾಗುವ ಎಲೆಕ್ಟ್ರಾನಿಕ್ ಯಂತ್ರೋಪಕರಣಗಳ ಕುರಿತು ವಿವಿಧ ದೇಶಗಳಲ್ಲಿ ಅಧ್ಯಯನಗಳನ್ನು ನಡೆಸಿದೆ.
ನೀವು ಎಷ್ಟೇ ದುಬಾರಿ ಮೊಬೈಲ್ ತೆಗೆದುಕೊಂಡರು ಕೂಡ, ಕಡಿಮೆ ಬೆಲೆಯ ಚಾರ್ಜರ್ ನಿಮ್ಮ ಮೊಬೈಲ್ ಹಾಳು ಮಾಡುತ್ತವೆ. ಇನ್ನೂ, ಚಾರ್ಜರ್ ಖರೀದಿಸುವಾಗ ತೂಕವಿಲ್ಲದೆ ಹಗುರವಾಗಿ ಕಂಡರೆ ಅದು ಒಳ್ಳೆಯದಲ್ಲ. ಬದಲಾಗಿ ಅದು ಉತ್ತಮ ಗುಣಮಟ್ಟದಿಂದ ಕೂಡಿರುವುದಿಲ್ಲ. ಉತ್ತಮವಾದ ಚರ್ಜಾರ್ ಗಳು ಸ್ವಲ್ಪ ಭಾರವಾಗಿರುತ್ತದೆ.
ಇದನ್ನೂ ಓದಿ: ಮದ್ಯಪ್ರಿಯರಿಗೆ ಅಬಕಾರಿ ಇಲಾಖೆಯಿಂದ ಸಿಹಿಸುದ್ಧಿ !!
ಇತ್ತೀಚೆಗೆ, ಪ್ರಪಂಚದಾದ್ಯಂತ ಸೆಲ್ ಫೋನ್ ಗಳು ಸ್ಪೋಟಗೊಳ್ಳುವುದನ್ನು ಕೇಳಿರಬಹುದು. ಇದಕ್ಕೆ ಮುಖ್ಯ ಕಾರಣ ಚಾರ್ಜರ್ ಗಳು ಎಂದು ಹೇಳಿದರೆ ನೀವು ನಂಬಲೇ ಬೇಕು. ಹಳೆಯ ಚಾರ್ಜರ್ ಗಳನ್ನು ಜನರು ಬಳಸಲು ಇನ್ನೊಂದು ಕಾರಣ, ಮೊಬೈಲ್ ಕಂಪನಿಗಳು ಫೋನ್ ಜೊತೆ ಚಾರ್ಜರ್ ಕೊಡುವುದನ್ನು ನಿಲ್ಲಿಸಿದೆ. ಇದರಿಂದ ಹಳೆಯ ಚಾರ್ಜರ್ ಗಳಿಗೆ ಗಮ್ ಟೇಪ್, ಪ್ಲಾಸ್ಟರ್ ಸುತ್ತಿ ಅಥವಾ ಲಬ್ಬರ್ ಸುತ್ತಿ ಮತ್ತೆ ಮತ್ತೆ ಉಪಯೋಗಿಸುತ್ತಾರೆ. ಇಂತಹ ಚಾರ್ಜರ್ ಗಳನ್ನು ಬಳಸುವುದರಿಂದ ವಿದ್ಯುತ್ ಅಪಘಾತ ಸಂಭವಿಸಬಹುದು ಎಂದು ಅಧ್ಯಯನ ಹೇಳಿದೆ.
ಗಮ್ ಟೇಪ್ ಅಥವಾ ಪ್ಲಾಸ್ಟರ್ ಸುತ್ತಿದ ಚಾರ್ಜಿಂಗ್ ಕೇಬಲ್ ವೈರ್ ಗಳಿಂದ ಶಾರ್ಟ್ ಸರ್ಕ್ಯೂಟ್ ಉಂಟಾದ ಘಟನೆಗಳು ನಡೆದಿವೆ. ಒಂದು ವೇಳೆ ಚಾರ್ಜಿಂಗ್ ಕೇಬಲ್ ಎಲ್ಲಿಯಾದರೂ ಕತ್ತರಿಸಲ್ಪಟ್ಟರೆ ಮತ್ತು ಅದರ ಒಳ ಭಾಗವು ತುಂಬಾ ಕಾಣುತ್ತಿದ್ದರೆ, ಅದನ್ನು ಬಳಸುವುದನ್ನು ನಿಲ್ಲಿಸಿ.
ಈ ಕತ್ತರಿಸಲ್ಪಟ್ಟ ಚಾರ್ಜಿಂಗ್ ಕೇಬಲ್ ವೈರ್ ಗಳಿಂದ ಶಾರ್ಟ್ ಸರ್ಕ್ಯೂಟ್ ಗಳಂತಹ ಘಟನೆಗಳು ಸಂಭವಿಸಿದೆ. ಮೊಬೈಲ್ ಫೋನ್ ಗಳು ಮಾತ್ರವಲ್ಲದೆ, ಟ್ಯಾಬ್, ಲ್ಯಾಪ್ ಟಾಪ್, ಟ್ರಿಮ್ಮರ್ ಹಾಗೂ ಇನ್ನಿತರೆ ಯಂತ್ರೋಪಕರಣಗಳಲ್ಲಿಯೂ ಹಾನಿಗೊಳಗಾದ ಕೇಬಲ್ ಗಳಿರುವ ಹಳೆಯ ಚಾರ್ಜರ್ ಗಳನ್ನು ಉಪಯೋಗಿಸಬಾರದು.
ಆದಷ್ಟು ಉತ್ತಮ ಚಾರ್ಜರ್ ಕೇಬಲ್ ಗಳನ್ನು ಬಳಸುವುದರಿಂದ ಮೊಬೈಲ್ ಸುರಕ್ಷಿತವಾಗಿರುತ್ತದೆ ಮತ್ತು ಜಾಸ್ತಿ ಬಾಳಿಕೆ ಬರುತ್ತದೆ. ಎಲ್ಲಕ್ಕಿಂತಲೂ ಮುಖ್ಯವಾಗಿ ನೀವು ಸುರಕ್ಷಿತವಾಗಿರುತ್ತಿರ.