Friday, August 19, 2022

ಸುರತ್ಕಲ್‌: ಎರಡು ಮಕ್ಕಳ ತಾಯಿ ತನ್ನ ಮಕ್ಕಳೊಂದಿಗೆ ನಾಪತ್ತೆ-ದೂರು ದಾಖಲು

ಮಂಗಳೂರು: ನಗರದ ಸುರತ್ಕಲ್‌ ಹತ್ತಿರದ ಕಾಟಿಪಳ್ಳ ಗ್ರಾಮದ ಗಣೇಶಪುರದಲ್ಲಿ ವಾಸ್ತವ್ಯ ಹೂಡಿದ್ದ 2 ಮಕ್ಕಳ ತಾಯಿ ತನ್ನ ಮಕ್ಕಳೊಂದಿಗೆ ನಾಪತ್ತೆಯಾದ ಘಟನೆ ನಡೆದಿದೆ.


ಭಾರತಿ ಮಾದರ (35 ವರ್ಷ) ಮಕ್ಕಳಾದ ಅಮೃತ (11 ವರ್ಷ) ಮತ್ತು ಗಣೇಶ್ (9 ವರ್ಷ) ನಾಪತ್ತೆಯಾದವರಾಗಿದ್ದಾರೆ.
ಭಾರತಿ ತನ್ನ ಇಬ್ಬರು ಮಕ್ಕಳ ಜೊತೆ ಮಾ.21ರ ರಾತ್ರಿ ಮನೆಯಿಂದ ಹೋದವರು ಇಲ್ಲಿಯವರೆಗೆ ಹಿಂತಿರುಗಿರಲಿಲ್ಲ. ಅವರು ಕಾಣೆಯಾಗಿರುವ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಣೆಯಾದವರ ಚಹರೆ ಇಂತಿದೆ: 

ಭಾರತಿ ಮಾದರ: ಎಣ್ಣೆ ಕಪ್ಪು ಮೈಬಣ್ಣ, ಸಾಧಾರಣ ಶರೀರ, 4 ಅಡಿ 6 ಇಂಚು ಎತ್ತರ, ಬಲಗೈಯಲ್ಲಿ ಎಚ್.ಬಿ. ಎಂಬ ಹಚ್ಚೆ ಇದೆ, ಕನ್ನಡ, ಹಿಂದಿ ಮತ್ತು ತುಳು ಭಾಷೆ ಅರ್ಥವಾಗುತ್ತದೆ.

ಕಾಣೆಯಾಗುವ ಸಮಯದಲ್ಲಿ ಹಳದಿ ಬಣ್ಣದಲ್ಲಿ ಕೆಂಪು ಚುಕ್ಕೆಗಳಿರುವ ಸೀರೆ ಹಾಗೂ ಕಪ್ಪು ಬಣ್ಣದ ರವಿಕೆ ಧರಿಸಿರುತ್ತಾರೆ.

ಅಮೃತಾ: 3 ಅಡಿ 5ಇಂಚು ಎತ್ತರ, 5ನೇ ತರಗತಿ ಓದುತ್ತಿದ್ದು, ಎಣ್ಣೆ ಕಪ್ಪು ಮೈಬಣ್ಣ, ಕನ್ನಡ ಭಾಷೆ ತಿಳಿದಿರುತ್ತದೆ, ಕಪ್ಪು ಬಣ್ಣದ ಧೋತಿ ಪ್ಯಾಂಟ್ ಮತ್ತು ಕೆಂಪು ಬಣ್ಣದ ಟಾಪ್ ಧರಿಸಿರುತ್ತಾಳೆ.

ಗಣೇಶ: 3 ಅಡಿ ಎತ್ತರ, 3ನೇ ತರಗತಿ ಓದುತ್ತಿದ್ದು, ಎಣ್ಣೆ ಕಪ್ಪು ಮೈಬಣ್ಣ, ಕನ್ನಡ ಭಾಷೆ ತಿಳಿದಿರುತ್ತದೆ, ಕಪ್ಪು ಬಣ್ಣದ ಟೀ ಶರ್ಟ್ ಹಾಗೂ ನೀಲಿ ಬಣ್ಣದ ಚಡ್ಡಿ ಧರಿಸಿರುತ್ತಾರೆ.

ಈ ತಾಯಿ ಮಕ್ಕಳು ಪತ್ತೆಯಾದಲ್ಲಿ ಸುರತ್ಕಲ್ ಪೊಲೀಸ್ ಠಾಣಾ ದೂ.ಸಂಖ್ಯೆ: 0824-2220540, ಮೊ.ಸಂಖ್ಯೆ:- 9480805360, 9480802345, ಕಂಟ್ರೋಲ್ ರೂಂ: 0824-2220800 ಮೂಲಕ ಸಂಪರ್ಕಿಸುವಂತೆ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Hot Topics

1924ರ ನಂತರದ ಹೋರಾಟದಲ್ಲಿ ಸಾವರ್ಕರ್ ಭಾಗವಹಿಸಿದ ಸಾಕ್ಷಿ ಇದ್ರೆ ತೋರ್ಸಿ-ಖಾದರ್ ಸವಾಲ್

ಮಂಗಳೂರು: ಸಾವರ್ಕರ್ 1924 ರ ನಂತರ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಒಂದೇ ಒಂದು ಇತಿಹಾಸ ಇದ್ರೆ , ಇತಿಹಾಸ ಪುಸ್ತಕದಲ್ಲಿ ಅದು ಕಾಣ ಸಿಕ್ಕರೆ ಅಥವಾ ಸಾಕ್ಷಿ ಇದ್ರೆ ನನಗೆ ತೋರಿಸುತ್ತೀರಾ ಎಂದು...

ದೆಹಲಿ ಉಪ ಮುಖ್ಯಮಂತ್ರಿ ಮನೆ ಮೇಲೆ CBI ದಾಳಿ: ಶೋಧ ಕಾರ್ಯ

ನವದೆಹಲಿ: ದೆಹಲಿ ಉಪ ಮುಖ್ಯಮಂತ್ರಿ ಮನೀಶ್​ ಸಿಸೊಡಿಯಾ ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಸ್ಥಳಗಳ ಮೇಲೆ ಸಿಬಿಐ ಇಂದು ಬೆಳಗ್ಗೆ ದಾಳಿ ಮಾಡಿದ್ದು, ಶೋಧ ಕಾರ್ಯ ಮುಂದುವರಿಸಿದೆ. ದೆಹಲಿಯ ಅಬಕಾರಿ ನೀತಿಯಲ್ಲಿ ಅಕ್ರಮ ನಡೆದಿರುವ...

ಇಂದು ಉಡುಪಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ: ಭರದ ಸಿದ್ದತೆ-ನಾಳೆ ವಿಟ್ಲ ಪಿಂಡಿ

ಉಡುಪಿ: ಕೃಷ್ಣಮಠದಲ್ಲಿ ಇಂದು ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ಆ.20 ರಂದು ವಿಟ್ಲಪಿಂಡಿ ಉತ್ಸವ ನಡೆಯಲಿದ್ದು, ಪರ್ಯಾಯ ಕೃಷ್ಣಾಪುರ ಮಠದ ನೇತೃತ್ವದಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ.ಭಕ್ತರಿಗೆ ಪ್ರಸಾದವಾಗಿ ಹಂಚಲು ಚಕ್ಕುಲಿ ಹಾಗೂ ಬಗೆಬಗೆಯ ಉಂಡೆಗಳ...