ಸೌದಿ ಅರೇಬಿಯಾದ ರಿಯಾದ್‌ನಲ್ಲಿ ನಡೆದ ಭೀಕರ ಕಾರು ಅಪಘಾತದಲ್ಲಿ ಕೇರಳ ಮೂಲದ ಮಗು ಮತ್ತು ತಾಯಿ ದಾರುಣ ಅಂತ್ಯ ಕಂಡಿದ್ದಾರೆ.
ರಿಯಾದ್ : ಸೌದಿ ಅರೇಬಿಯಾದ ರಿಯಾದ್‌ನಲ್ಲಿ ನಡೆದ ಭೀಕರ ಕಾರು ಅಪಘಾತದಲ್ಲಿ ಕೇರಳ ಮೂಲದ ಮಗು ಮತ್ತು ತಾಯಿ ದಾರುಣ ಅಂತ್ಯ ಕಂಡಿದ್ದಾರೆ.
ಮೃತರನ್ನು ಮಲಪ್ಪುರಂ ಜಿಲ್ಲೆಯ ಮುಂಡಿಯಂಕಾವ್‌ನ ಉಲ್ಲಂ ಉತ್ತರದಲ್ಲಿರುವ ಚೆರಚನ್ ಮನೆಯಲ್ಲಿ ಇಶಾನ್ ಮತ್ತು ಫಾತಿಮಾ ರೂಬಿ ದಂಪತಿಯ ಪುತ್ರಿ ಫಾತಿಮಾ ಸೈಷಾ (ಮೂರು) ಹಾಗೂ ಮಲಪ್ಪುರಂ ಜಿಲ್ಲೆಯ ಕೊಡಕ್ಕಾಡ್ ಅಲಿನ್ ಚುವಾಡ್ ಪುಜಕಲಕಾಟ್‌ನ ಮೊಹಮ್ಮದ್ ರಫಿ ಅವರ ಪತ್ನಿ ಮುಹ್ಸಿನಾ (32) ಎಂದು ಗುರುತಿಸಲಾಗಿದೆ.
ರಿಯಾದ್ ಸಮೀಪದ ಅಲ್ ಕಾಸಿರಾದಲ್ಲಿ ಸೋಮವಾರ ಈ ದುರ್ಘಟನೆ ಸಂಭವಿಸಿದೆ.
ಜೆದ್ದಾದಿಂದ ರಿಯಾದ್‌ಗೆ ಬರುತ್ತಿದ್ದ ಅವರ ಕಾರು ರಿಯಾದ್‌ನಿಂದ 350 ಕಿಲೋಮೀಟರ್ ದೂರದಲ್ಲಿರುವ ಅಲ್ ಕಾಸಿರಾ ಎಂಬಲ್ಲಿ I ಪಲ್ಟಿಯಾಗಿದೆ.
ಈ ಸಂದರ್ಭ ಕಾರಿನಲ್ಲಿದ್ದ ತಾಯಿ ಮತ್ತು ಮಗು ಗಂಭೀರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.