Thursday, September 29, 2022

ಆದಾಯಕ್ಕಿಂತ ಅಧಿಕ ಆಸ್ತಿ: ಮಂಗಳೂರು ಮೂಲದ ಸರ್ಕಾರಿ ಅಧಿಕಾರಿಗೆ 3 ವರ್ಷ ಜೈಲು, 50 ಲಕ್ಷ ದಂಡ

ಮಂಗಳೂರು: ಆದಾಯಕ್ಕಿಂತ ಅಧಿಕ ಪ್ರಮಾಣದ ಆಸ್ತಿ ಗಳಿಸಿದ್ದ ಚಿಕ್ಕಮಗಳೂರು ಜಿಲ್ಲಾ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಉಪನಿರ್ದೇಶಕರ ಮೇಲಿನ ಆರೋಪಕ್ಕೆ ಸಂಬಂಧಿಸಿ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯವು3 ವರ್ಷ 6 ತಿಂಗಳು ಸಾದಾ ಸಜೆ ಹಾಗೂ 50 ಲಕ್ಷ ರೂ ದಂಡ ವಿಧಿಸಿ ಆದೇಶಿಸಿದೆ.


ಬಿಜೈಯ ರತ್ನಾಕರ ನಾಯ್ಕ್‌ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಮಾಹಿತಿಯ ಆಧಾರದಲ್ಲಿ ಮಂಗಳೂರಿನ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ 2012ರ ಜು.30ರಂದು ಪ್ರಕರಣ ದಾಖಲಾಗಿತ್ತು.
ಗುರುವಾರ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಬಿ.ಬಿ. ಜಕಾತಿ ಆದೇಶ ಪ್ರಕಟಿಸಿದ್ದಾರೆ. ದಂಡ ಕಟ್ಟಲು ವಿಫಲರಾದಲ್ಲಿ ಮತ್ತೆ 6 ತಿಂಗಳ ಕಾಲ ಸಾದಾ ಸಜೆಗೆ ಆದೇಶಿಸಲಾಗಿದೆ.
ಮಂಗಳೂರು ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕ ವಿಠಲದಾಸ್ ಪೈ ತನಿಖೆ ನಡೆಸಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ಕರ್ನಾಟಕ ಲೋಕಾಯುಕ್ತದ ವಿಶೇಷ ಸಾರ್ವಜನಿಕ ಅಭಿಯೋಜಕ ರವೀಂದ್ರ ಮುನ್ನಿಪ್ಪಾಡಿ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.

LEAVE A REPLY

Please enter your comment!
Please enter your name here

Hot Topics

ಮಂಗಳೂರು: ಗೆಳೆಯನ ಸಾವಿಗೆ ಕಾರಣವಾದ ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆ-ಯುವಕನ ಏಕಾಂಗಿ ಪ್ರತಿಭಟನೆ

ಮಂಗಳೂರು: ರಾಷ್ಟ್ರೀಯ ಹೆದ್ದಾರಿ ಹಾಗೂ ನಗರದೊಳಗಿನ ರಸ್ತೆಗಳಲ್ಲಿರುವ ಯಮಗಾತ್ರದ ಗುಂಡಿಗಳ ಅವ್ಯವಸ್ಥೆಯಿಂದ ತನ್ನ ಗೆಳೆಯ ಮೃತಪಟ್ಟಿದ್ದು, ಈ ಹಿನ್ನಲೆ ರಸ್ತೆ ದುರಸ್ತಿ ಮಾಡುವಂತೆ ಆಗ್ರಹಿಸಿ ಮಂಗಳೂರು ಮಹಾನಗರ ಪಾಲಿಕೆ ಮುಂಭಾಗ ಏಕಾಂಗಿ ಪ್ರತಿಭಟನೆ...

ಮಂಗಳೂರು: ಲೋಕಕಂಟಕ ನಿವೃತ್ತಿಗಾಗಿ ವೆಂಕಟರಮಣ ದೇಗುಲದಲ್ಲಿ ಸಹಸ್ರ ಚಂಡಿಕಾ ಮಹಾಯಾಗ ಪ್ರಾರಂಭ

ಮಂಗಳೂರು: ಶಾರದಾ ಮಹೋತ್ಸವದ 100ನೇ ವರ್ಷದ ಶತಮಾನೋತ್ಸವ ಆಚರಣೆಯ ಸಂದರ್ಭದಲ್ಲಿ ಮಂಗಳೂರಿನ ಶ್ರೀ ವೆಂಕಟರಮಣ ದೇವಸ್ಥಾನದ ರಾಜಾಂಗಣದಲ್ಲಿ ಶ್ರೀ ಸಹಸ್ರ ಚಂಡಿಕಾ ಮಹಾಯಾಗ ಇಂದು ಪ್ರಾರಂಭಗೊಂಡಿತು.ಲೋಕ ಕಂಟಕ ನಿವೃತ್ತಿಗಾಗಿ ಲೋಕದಲ್ಲಿ ಉಂಟಾದ ಕ್ಷೋಭೆಯ...

ಉಡುಪಿ: ಮೊಬೈಲ್‌ ಶಾಪ್‌ನಲ್ಲಿ 1 ಲಕ್ಷ ರೂ ಮೌಲ್ಯದ ಸೊತ್ತು ಕದ್ದ ಕಳ್ಳ-ಪ್ರಕರಣ ದಾಖಲು

ಉಡುಪಿ: ಮೊಬೈಲ್ ಅಂಗಡಿಗೆ ರಾತ್ರಿ ವೇಳೆ ನುಗ್ಗಿದ ಕಳ್ಳನೊಬ್ಬ ಮೊಬೈಲ್ ಮತ್ತಿತರ ವಸ್ತುಗಳನ್ನು ಕಳವುಗೈದ ಘಟನೆ ಉಡುಪಿಯ ಮಲ್ಪೆಯ ಬಸ್ ನಿಲ್ದಾಣ ಸಮೀಪದ ಅಂಗಡಿಯಲ್ಲಿ ನಡೆದಿದೆ.ಇತ್ತೀಚಿನ ದಿನಗಳಲ್ಲಿ ಉಡುಪಿಯಲ್ಲಿ ಕಳ್ಳಕಾಕರ ಹಾವಳಿ ಮತ್ತೆ...