ಮೂಡುಬಿದಿರೆ: ಮಂಗಳೂರು ವಿವಿ ಆಶ್ರಯದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದೊಂದಿಗೆ, ಅಸೊಸೀಯೇಷನ್ ಆಫ್ ಇಂಡಿಯನ್ ಯುನಿವರ್ಸಿಟಿಯ ಸಹಭಾಗಿತ್ವದಲ್ಲಿ
ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ನಾಲ್ಕು ದಿನಗಳ ಕಾಲ ನಡೆದ 81ನೇ ಅಖಿಲ ಭಾರತ ಅಂತರ್‌ವಿಶ್ವವಿದ್ಯಾಲಯ ಪುರುಷರ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ನಲ್ಲಿ ಮಂಗಳೂರು ವಿವಿಯು 6 ಚಿನ್ನ, 6ಬೆಳ್ಳಿ ಹಾಗೂ 4 ಕಂಚಿನ ಪದಕದೊಂದಿಗೆ 105 ಅಂಕಗಳನ್ನು ಪಡೆದು ಸಮಗ್ರ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ.
42 ಅಂಕಗಳನ್ನು ಗಳಿಸಿರುವ ಪಂಜಾಬ್ ಪಾಗ್ವಾರ್‌ನ ಲವ್ಲಿ ಪ್ರೊಫೆಷನಲ್ ವಿವಿಯು ರನ್ನರ್ ಅಫ್ ಪ್ರಶಸ್ತಿ ಹಾಗೂ ರೋಟ್ಹಾಕ್ ಮಹರ್ಷಿ ದಯಾನಂದ ವಿವಿಯು 37 ಅಂಕಗಳನ್ನು ದಾಖಲಿಸಿ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ.
ಮಂಗಳೂರು ವಿವಿಯು ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ.
ಕೂಟದಲ್ಲಿ ಪಂಜಾಬ್‌ನ ಪಟಿಯಾಲ ವಿವಿಯ ಅಕ್ಷ್ ದೀಪ್ ಸಿಂಗ್ ಉತ್ತಮ ಕ್ರೀಡಾಪಟುವಾಗಿ ಮೂಡಿ ಬಂದಿದ್ದಾರೆ.
ಶುಕ್ರವಾರ ನಡೆದ ಸಮಾರೋಪ ಸಮಾರಂಭದಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಮತ್ತು ಅಧಾನಿ ಗ್ರೂಪ್‌ನ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ಅವರು ಜಂಟಿಯಾಗಿ ಪ್ರಶಸ್ತಿ ಪ್ರಧಾನ ಮಾಡಿದರು.
ನಂತರ ಮಾತನಾಡಿದ ಅವರು “ಮುಂದಿನ ಒಲಿಂಪಿಕ್ ಕ್ರೀಡೆಗೆ ಸಹಕಾರಿಯಾಗುವಂತೆ ಕ್ರೀಡಾಪಟುಗಳನ್ನು ಆಳ್ವಾಸ್ ಸಂಸ್ಥೆಯು ವ್ಯವಸ್ಥಿತ ರೀತಿಯಲ್ಲಿ ಸಜ್ಜುಗೊಳಿಸುತ್ತಿದೆ.
ಈ ಕ್ರೀಡಾಕೂಟವು ಹಿಂದಿನ ಹಲವಾರು ರಾಷ್ಟ್ರೀಯ ದಾಖಲೆಗಳನ್ನು ಮುರಿದು ಹೊಸ ದಾಖಲೆ ಸೃಷ್ಟಿಸಿರುವುದು ಗಮನಾರ್ಹ.
ಕ್ರೀಡೆಯಲ್ಲಿ ಕ್ರೀಡಾರ್ಥಿಗಳು ತಾವು ಎಣಿಸಿದಂತೆ ನಡೆಯದೆ ಇದ್ದರೂ, ಫಲಿತಾಂಶದಲ್ಲಿ ವ್ಯತ್ಯಾಸ ಕಾಣಬಹುದು.
ಸತತ 5 ವರ್ಷಗಳಿಂದ ಕ್ರೀಡೆಯನ್ನು ಮಂಗಳೂರು ವಿವಿ ಮತ್ತು ಆಳ್ವಾಸ್ ಶಿಕ್ಷಣ ಸಂಸ್ಥೆಯು ಜಂಟಿಯಾಗಿ ಆಯೋಜಿಸುತ್ತಾ ಬರುವ ಮೂಲಕ ಕ್ರೀಡೆ ಮತ್ತು ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ” ಎಂದರು.
ಮಂಗಳೂರು ವಿವಿಯ ರಿಜಿಸ್ಟರ್ ಕಿಶೋರ್ ಕುಮಾರ್ ಸಿ.ಕೆ, ಪುರಸಭಾ ಅಧ್ಯಕ್ಷ ಪ್ರಸಾದ್ ಕುಮಾರ್, ಮಂಗಳೂರು ಎ.ಪಿ.ಎಂ.ಸಿ ಅಧ್ಯಕ್ಷ ಕೃಷ್ಣರಾಜ್ ಹೆಗ್ಡೆ, ದ.ಕ ವಾರ್ತಾಧಿಕಾರಿ ರವಿರಾಜ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಜೈನ್ ವಿವಿಯ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಯು.ವಿ. ಶಂಕರ್, ಅಮರಾವತಿ ವಿವಿ ನಿರ್ದೇಶಕ ಡಾ. ಅವಿನಾಶ್ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ್ ಆಳ್ವ ಉಪಸ್ಥಿತರಿದ್ದರು.
ಮಂಗಳೂರು ವಿವಿಯ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಜೆರಾಲ್ಡ್ ಎಸ್. ಡಿ’ಸೋಜ ವಂದಿಸಿದರು.
ತಮಿಳುನಾಡಿನ ಎ.ಎಲ್. ಮುತ್ತು ಮತ್ತು ದೆಹಲಿಯ ರೂಬಿ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.
ಕೂಟದಲ್ಲಿ 8 ನೂತನ ದಾಖಲೆಗಳು
ನಾಲ್ಕನೇ ದಿನವಾಗಿರುವ ಶುಕ್ರವಾರದಂದು 400 ಮೀಟರ್ ರಿಲೆಯಲ್ಲಿ ಮಂಗಳೂರು ವಿವಿಯನ್ನು ಪ್ರತಿನಿಧಿಸಿರುವ ಆಳ್ವಾಸ್‌ನ ಕ್ರೀಡಾಪಟುಗಳಾದ ಶ್ರಿಜನ್ ಥೋಮಸ್, ತೀರ್ಥಶ್, ಅಭಿನ್ ದೇವಾಡಿಗ ಮತ್ತು ವಿಘ್ನೇಶ್ 40.74 ಸೆಕುಂಡುಗಳಲ್ಲಿ ಕ್ರಮಿಸಿ ನೂತನ ಕೂಟ ದಾಖಲೆಯನ್ನು ನಿರ್ಮಿಸಿದ್ದಾರೆ.
ಉಳಿದಂತೆ ಮೂರು ದಿನಗಳಲ್ಲಿ ಮಂಗಳೂರು ವಿವಿ ಆದೇಶ್ (1೦೦೦೦ ಮೀ.ಓಟ), ಪಂಜಾಬ್ ಪಟಿಯಾಲ ವಿವಿಯ ಅಕ್ಷ್ ದೀಪ್ ಸಿಂಗ್ (2೦ ಕಿಮೀ ನಡಿಗೆ), ಗುರು ನಾನಕ್ ದೇವ್ ವಿವಿಯ ಹರೇಂದ್ರ ಕುಮಾರ್( 1,500ಮೀ ಓಟ), ಕುರುಕ್ಷೇತ್ರ ವಿವಿಯ ಫ್ರಿನ್ಸ್ ( 5೦೦೦ಮೀ ಓಟ),
ಮಹಾತ್ಮಗಾಂಧಿ ವಿವಿ ಕೊಟ್ಟಾಯಂನ ಸಿದ್ಧಾರ್ಥ್ ಎ.ಕೆ.( ಫೋಲ್ ವಾಲ್ಟ್ ), ಚೌದರಿ ದೇವಿಲಾಲ್ ವಿವಿ ಸಿರ್ಸ ಹರಿಯಾಣದ ವಿಕಾಸ್ (ಚಕ್ರ ಎಸೆತ), ಮಹಾರ್ಷಿ ದಯಾನಂದ ವಿವಿಯ ಲೊಕೇಶ್ ಚೌದಾರ್ (ಸ್ಟೀಪಲ್ ಚೇಸ್ ) ಹೀಗೆ ಒಟ್ಟು 8 ಕೂಟ ದಾಖಲೆಗಳು ನಿರ್ಮಾಣವಾಗಿದೆ.
ಸಮಗ್ರ ಚಾಂಪಿಯನ್ ಶಿಫ್‌ಗೆ ಪ್ರಶಸ್ತಿ ಸಹಿತ 50,000, ರನ್ನರ್ ಅಫ್‌ಗೆ 30,000, ತೃತೀಯ ಪ್ರಶಸ್ತಿಗೆ 20,000 ಕೂಟ ದಾಖಲೆ ಮಾಡಿರುವ ಕ್ರೀಡಾಪಟುಗಳಿಗೆ ತಲಾ 25,000ದಂತೆ 2ಲಕ್ಷ ರೂ.ವನ್ನು ಹಾಗೂ ಎಲ್ಲಾ ವಿಜೇತ ಕ್ರೀಡಾಪಟುಗಳಿಗೆ
ಪ್ರಥಮ-25,000, ದ್ವಿತೀಯ-15000 ಹಾಗೂ ತೃತೀಯ ಸ್ಥಾನಕ್ಕೆ 10,000 ನಗದು ಪುರಸ್ಕಾರವನ್ನು ನೀಡುವ ಮೂಲಕ ಆಳ್ವಾಸ್ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಕ್ರೀಡಾಪಟುಗಳಿಗೆ ಆರ್ಥಿಕವಾಗಿ ಪ್ರೋತ್ಸಾಹ ನೀಡಿರುವುದು ಗಮನಾರ್ಹ.
ಹಾಗೂ ಆಳ್ವಾಸ್ ಶಿಕ್ಷಣ ಸಂಸ್ಥೆಯು 5ನೇ ಬಾರಿಗೆ ಅಖಿಲ ಭಾರತ ಅಂತರ್ ವಿವಿ ಅಥ್ಲೆಟಿಕ್ ಚಾಂಪಿಯನ್ ಶಿಫ್ ಆಯೋಜನೆ ಮಾಡಿರುವುದು ಶ್ಲಾಘನೀಯ.
ಸಂಜೆ ಕ್ರೀಡಾ ಸ್ಪರ್ಧೆಗಳು ಮುಗಿದ ಬಳಿಕ ಜಾಗೋ ಭಾರತ್ ಕಲಾವಿದರಿಂದ ರಾಷ್ಟ್ರ ಭಕ್ತಿಗೀತೆಗಳ ಗಾಯನ ಮತ್ತು ಆಳ್ವಾಸ್ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮೆರಗು ನೀಡಿದವು.
400 ವಿವಿಯಿಂದ 4000ಕ್ಕೂ ಅಧಿಕ ಕ್ರೀಡಾಪಟುಗಳು, 1,000ಕ್ಕೂ ಅಧಿಕ ಕ್ರೀಡಾಧಿಕಾರಿಗಳು ಈ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದರು.
ಮಂಗಳೂರು : ಈ ವರ್ಷದ ಕಂಬಳ ಸೀಸನ್ ನ ಮೊದಲ ಕಂಬಳ ನವೆಂಬರ್ 22 ಮತ್ತು 23 ರಂದು ಸಿದ್ದಕಟ್ಟೆಯಲ್ಲಿ ನಡೆಯಿತು. ಇದು ಎರಡನೇ ವರ್ಷದ ಸಿದ್ಧಕಟ್ಟೆ ಕೊಡಂಗೆ ‘ವೀರ – ವಿಕ್ರಮ’ ಜೋಡುಕರೆ ಕಂಬಳ ಆಗಿದ್ದು, ಬರೋಬ್ಬರಿ 166 ಜೊತೆ ಕೋಣಗಳು ಭಾಗವಹಿಸಿದ್ದವು. ಕನೆಹಲಗೆ 6 ಜೊತೆ, ಅಡ್ಡಹಲಗೆ 6 ಜೊತೆ, ಹಗ್ಗ ಹಿರಿಯ 15 ಜೊತೆ, ನೇಗಿಲು ಹಿರಿಯ 34 ಜೊತೆ, ಹಗ್ಗ ಕಿರಿಯ 27 ಜೊತೆ, ನೇಗಿಲು ಕಿರಿಯ 78 ಜೊತೆ ಕೋಣಗಳು ಪಾಲ್ಗೊಂಡಿದ್ದವು.
ಪ್ರಶಸ್ತಿ ವಿವರ :
ಕನೆಹಲಗೆ ವಿಭಾಗದಲ್ಲಿ ಬೋಳಾರ ತ್ರಿಶಾಲ್ ಕೆ. ಪೂಜಾರಿ ಪ್ರಥಮ, ವಾಮಂಜೂರು ತಿರುವೈಲು ಗುತ್ತು ಅಭಿಷೇಕ್ ನವೀನ್ ಚಂದ್ರ ಆಳ್ವ ದ್ವಿತೀಯ ಸ್ಥಾನ ಪಡೆದರು. ಅಡ್ಡ ಹಲಗೆ ವಿಭಾಗದಲ್ಲಿ ನಾರಾವಿ ಯುವರಾಜ್ ಜೈನ್ ಪ್ರಥಮ ಹಾಗೂ ಆಲದ ಪದವು ಮೇಗಿನ ಮನೆ ಅಜ್ಜಾಡಿ ಬಾಬು ರಾಜೇಂದ್ರ ಶೆಟ್ಟಿ ‘ಬಿ’ ಅವರು ದ್ವಿತೀಯ ಸ್ಥಾನಿಯಾದರು.
ಹಗ್ಗ ಹಿರಿಯ ವಿಭಾಗದಲ್ಲಿ ನಂದಳಿಕೆ ಶ್ರೀಕಾಂತ್ ಭಟ್ ‘ಎ’ ಕೋಣಗಳು ಪ್ರಥಮ ಹಾಗೂ ಕೊಳಕೆ ಇರ್ವತ್ತೂರು ಭಾಸ್ಕರ ಎಸ್ ಕೋಟ್ಯಾನ್ ದ್ವಿತೀಯ ಸ್ಥಾನ ಪಡೆದರು. ಹಗ್ಗ ಕಿರಿಯ ವಿಭಾಗದಲ್ಲಿ ಬೆಳುವಾಯಿ ಪೆರೋಡಿ ಪುತ್ತಿಗೆ ಗುತ್ತು ಕೌಶಿಕ್ ದಿನಕರ ಬಿ. ಶೆಟ್ಟಿ ಪ್ರಥಮ, ಸುರತ್ಕಲ್ ಪಾಂಚಜನ್ಯ ಯೋಗೀಶ್ ಪೂಜಾರಿ ‘ಎ’ ಕೋಣಗಳು ದ್ವಿತೀಯ ಸ್ಥಾನ ಪಡೆದಿವೆ.
ನೇಗಿಲು ಹಿರಿಯ ವಿಭಾಗದಲ್ಲಿ ಹೊಸ್ಮಾರು ಸೂರ್ಯ ಶ್ರೀ ರತ್ನ ಸದಾಶಿವ ಶೆಟ್ಟಿ ಪ್ರಥಮ ಹಾಗೂ ಕಕ್ಕೆಪದವು ಪೆಂರ್ಗಾಲು ಬಾಬು ತನಿಯಪ್ಪ ಗೌಡ ದ್ವಿತೀಯ ಸ್ಥಾನ ಗೆದ್ದಿದ್ದಾರೆ. ನೇಗಿಲು ಕಿರಿಯ ವಿಭಾಗದಲ್ಲಿ ಮುನಿಯಾಲು ಉದಯ ಕುಮಾರ್ ಶೆಟ್ಟಿ ಪ್ರಥಮ ಹಾಗೂ ಎರ್ಮಾಳ್ ಪುಚ್ಚೊಟ್ಟು ಬೀಡು ಬಾಲಚಂದ್ರ ಲೋಕಯ್ಯ ಶೆಟ್ಟಿ ‘ಎ’ ಕೋಣಗಳು ದ್ವಿತೀಯ ಸ್ಥಾನ ಪಡೆದಿವೆ.
ಮಂಗಳೂರು/ಮಸ್ಕತ್ : ಬಿರುವ ಜವನೆರ್ ಮಸ್ಕತ್ ಆಯೋಜಿಸಿದ ಕರ್ನಾಟಕ ಪ್ರೀಮಿಯಾರ್ ಲೀಗ್ ನ 2024 ನೇ ಸಾಲಿನ ಕ್ರೀಡಾಕೂಟ ಮಸ್ಕತ್ ನ ಅಲ್ ಹೈಲ್ ಕ್ರೀಡಾಂಗಣದಲ್ಲಿ ನಡೆಯಿತು. ಕ್ರೀಡಾಕೂಟದ ಉದ್ಘಾಟನೆಯನ್ನು ಓಮನ್ ಕ್ರಿಕೆಟ್ ನ ಟಿ20 ತಂಡದ ನಾಯಕ ವಿನಾಯಕ್ ಶುಕ್ಲ ನೆರವೇರಿಸಿದರು.
ಈ ಸಂದರ್ಭ ಉತ್ತಮ್ ಕೋಟ್ಯಾನ್, ಮುಸ್ತಫಾ, ರಮಾನಂದ್ ಬಂಗೇರ, ಚಂದ್ರಕಾಂತ್ ಕೋಟ್ಯಾನ್, ದಾಮೋದರ್ ಶೆಟ್ಟಿ, ಪದ್ಮಾಕರ್ ಮೆಂಡನ್ ಮತ್ತಿತರರು ಉಪಸ್ಥಿತರಿದ್ದರು.
ಪುದರ್ ದೀತಿಜಿ ನಾಟಕದ ಪೋಸ್ಟರ್ ಬಿಡುಗಡೆ :
ಇದೇ ಸಂದರ್ಭದಲ್ಲಿ ಜನವರಿ 10 ರಂದು ಮಸ್ಕತ್ ನ ಆಲ್ ಫಾಜಾಜ್ ಹೋಟೆಲ್ ನಲ್ಲಿ ನಡೆಯಲಿರುವ ಕಾಪಿಕಾಡ್ ಅವರ ಚಾ ಪರ್ಕ ತಂಡದ ” ಪುದರ್ ದೀತಿಜಿ ” ನಾಟಕದ ಪೋಸ್ಟರ್ ಬಿಡುಗಡೆ ಹಾಗೂ ಪ್ರಚಾರ ಅಭಿಯಾನಕ್ಕೆ ಡಾ. ದೇವದಾಸ್ ಕಾಪಿಕಾಡ್ ಹಾಗೂ ಅರ್ಜುನ್ ಕಾಪಿಕಾಡ್ ಚಾಲನೆ ನೀಡಿದರು.
ಉಡುಪಿ : ರಿಷಬ್ ಶೆಟ್ಟಿ ಅಭಿನಯ ಮತ್ತು ನಿರ್ದೇಶನದ ಕಾಂತಾರ ಸಿನಿಮಾ ಕಲಾವಿದರಿದ್ದ ಬಸ್ ಪ*ಲ್ಟಿಯಾಗಿದ್ದು, ಆರು ಮಂದಿ ಗಂ*ಭೀರ ಗಾ*ಯಗೊಂಡಿರುವ ಘಟನೆ ಉಡುಪಿ ಜಿಲ್ಲೆಯ ಕುಂದಾಪುರದ ಮುದೂರಿನಲ್ಲಿ ನಡೆದಿದೆ.
ಕರಾವಳಿ ಭಾಗದ ಬೇರೆ ಬೇರೆ ಕಡೆಗಳಲ್ಲಿ ‘ಕಾಂತಾರ ಚಾಪ್ಟರ್ 1’ ಸಿನಿಮಾಗೆ ಶೂಟಿಂಗ್ ಮಾಡಲಾಗುತ್ತಿದೆ. ವಿವಿಧ ಕಲಾವಿದರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮುದೂರಿನಲ್ಲಿ ಚಿತ್ರೀಕರಣ ಮುಗಿಸಿ ಕಲಾವಿದರು ಕೊಲ್ಲೂರಿಗೆ ಹೋಗುತ್ತಿದ್ದ ವೇಳೆ ಅ*ಪಘಾತ ಸಂಭವಿಸಿದೆ. ‘ಹೊಂಬಾಳೆ ಫಿಲ್ಮ್ಸ್’ ಮೂಲಕ ವಿಜಯ್ ಕಿರಗಂದೂರು ಅವರು ‘ಕಾಂತಾರ: ಚಾಪ್ಟರ್ 1’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ರಿಷಬ್ ಶೆಟ್ಟಿ ಅವರು ನಿರ್ದೇಶನ ಮಾಡುವುದರ ಜೊತೆಗೆ ಮುಖ್ಯ ಭೂಮಿಕೆಯಲ್ಲೂ ನಟಿಸುತ್ತಿದ್ದಾರೆ. ‘ಕಾಂತಾರ’ ಚಿತ್ರದ ಪ್ರೀಕ್ವೆಲ್ ಆಗಿ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಮೂಡಿಬರುತ್ತಿದೆ. ಬಸ್ ಪ*ಲ್ಟಿ ಆಗಿದ್ದರಿಂದ ಚಿತ್ರತಂಡದಲ್ಲಿ ಬೇಸರ ಆವರಿಸಿದೆ.
ಪಲ್ಟಿಯಾದ ಹಿನ್ನಲೆ ಚಾಲಕನ ಮೇಲೆ ಹಲ್ಲೆಗೆ ವಾಹನದಲ್ಲಿದ್ದ ಹುಡುಗರು ಮುಂದಾಗಿದ್ದಾರೆ . ಬಸ್ ನಲ್ಲಿ ಹುಡುಗರು ವಾಹನ ಚಾಲಕ ನಿರ್ಲಕ್ಷದಿಂದ ವಾಹನ ಚಲಾಯಿಸಿದ್ದಾನೆ ಎಂದು ಆರೋಪಿಸಿ ಹ*ಲ್ಲೆ ನಡೆಸಿದ್ದಾರೆ. ಲೋಕಲ್ ಚಾಲಕನ ಮೇಲೆ ಹ*ಲ್ಲೆಯಾದ ಹಿನ್ನೆಲೆ ಸ್ಥಳೀಯರ ಅಕ್ರೋಶ, ರಿಷಬ್ ಶೆಟ್ಟಿ ಮಧ್ಯವರ್ತಿಯಲ್ಲಿ ಸಂಧಾನ ನಡೆದಿದ್ದು, ಎಲ್ಲರಿಗೂ ಕರೆದು ಮಾತನಾಡುತ್ತೇನೆ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ಕಾಂತಾರ ಚಿತ್ರವು ದೈವ ಹಾಗೂ ದೈವಾರಾಧನೆಗೆ ಸಂಬಂಧಿಸಿದ ಕಥಾ ಹಂದರವನ್ನುಹೊಂದಿದ್ದು, ಈ ಚಿತ್ರ ಬಿಡುಗಡೆಗೊಂಡು ಬಹಳಷ್ಟು ಮೆಚ್ಚುಗೆಯನ್ನು ಗಳಿಸಿತ್ತು. ಚಿತ್ರ ಬಿಡುಗಡೆಗೊಂಡ ಬಳಿಕ ಹಲವುಕಡೆ ದೈವದ ವೇಷವನ್ನುಅಸಭ್ಯವಾಗಿ ತೊಟ್ಟು ಅಭಿಮಾನಿಗಳು ನರ್ತಿಸಿ ದೈವಕ್ಕೆ ಅಪಮಾನ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದ್ದು, ದೈವಾರಾಧಕರು ಚಿತ್ರದ ವಿರುದ್ಧ ಅಸಮಧಾನ ಹೊಂದಿದ್ದಾರೆ.
ಕಾಂತಾರ ಯಶಸ್ಸಿನ ಬಳಿಕ ರಿಷಬ್ ಶೆಟ್ಟಿ ‘ಕಾಂತಾರ ಚಾಪ್ಟರ್ – 1’ ಮಾಡುವುದಾಗಿ ಘೋಷಿಸಿದ ಬಳಿಕ ತುಳುನಾಡಿನ್ಲಿ ತೀವ್ರ ಆಕ್ರೋಷ ಕೇಳಿ ಬಂದಿತ್ತು. ಚಿತ್ರತಂಡವು ಚಿತ್ರೀಕರಣ ನಡೆಸುವ ಈ ಸಂದರ್ಭ ಹಲವು ವಿಘ್ನಗಳು ಎದುರಾಗುತ್ತಿದ್ದು, ಇದು ದೈವದ ಕೋಪವೋ, ಇಲ್ಲ ದೈವನರ್ತಕರ ಶಾಪವಿರಬೇಕು ಎಂಬ ಗುಮನಿಗಳು ಶುರುವಾಗಿದೆ.
ಚಿತ್ರೀಕರಣ ಮುಗಿಸಿ ತೆರಳುವಾಗ ಕೊಲ್ಲೂರು ಮಾರ್ಗದಲ್ಲಿ ಈ ದು*ರ್ಘಟನೆ ಸಂಭವಿಸಿದ್ದು, ಬಸ್‌ನಲ್ಲಿ 25 ಕಲಾವಿದರಿದ್ದರು. ಹಲವರು ಸಣ್ನ ಪುಟ್ಟ ಗಾ*ಯಗಳಿಂದ ಪಾರಾಗಿದ್ದರೆ, ಆರು ಜನರಿಗೆ ಗಂಭೀರ ಗಾ*ಯವಾಗಿದೆ. ಗಾಯಾಳುಗಳನ್ನು ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು. ಸ್ಥಳಕ್ಕೆ ಕೊಲ್ಲೂರು ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.