Thursday, August 11, 2022

ಒಂದೇ ತಿಂಗಳಲ್ಲಿ 250 ನಾಯಿಗಳ ಮರ್ಡರ್‌: 2 ರೌಡಿ ಕೋತಿಗಳ ಅರೆಸ್ಟ್

ಮುಂಬೈ: ಕೇವಲ ಒಂದೇ ತಿಂಗಳಲ್ಲಿ ಬರೊಬ್ಬರಿ 250 ನಾಯಿಗಳನ್ನು ಕೊಂದ ಗ್ಯಾಂಗ್ ನ 2 ರೌಡಿ ಕೋತಿಗಳನ್ನು ಅರಣ್ಯಾಧಿಕಾರಿಗಳು ಸೆರೆಹಿಡಿದ ಘಟನೆ ಮಹಾರಾಷ್ಟ್ರದ ಬೀಡ್‌ ನಲ್ಲಿ ನಡೆದಿದೆ.


ಮಂಗಗಳು ನಾಯಿ ಮರಿಗಳನ್ನು ಎತ್ತರದ ಕಟ್ಟಡದ ಮೇಲೆ ಹೊತ್ತೊಯ್ದು ಅಲ್ಲಿಂದ ಕೆಳಗೆ ಎಸೆಯುತ್ತಿದ್ದು ಕೆಳಗೆ ಬಿದ್ದ ನಾಯಿಮರಿಗಳು ಮೃತಪಟ್ಟಿವೆ ಎನ್ನಲಾಗಿದೆ.

ಆಕ್ರಮಣಕಾರಿ ಕೋತಿಗಳ ಅಟ್ಟಹಾಸ ಮುಂದುವರೆದಿರುವಂತೆಯೇ ಅರಣ್ಯ ಇಲಾಖೆ ಸಿಬ್ಬಂದಿ ಬೃಹತ್ ಕಾರ್ಯಾಚರಣೆ ನಡೆಸಿ ದಾಳಿ ಮಾಡುತ್ತಿದ್ದ 2 ಕೋತಿಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಇದೀಗ ಈ ಕೋತಿಗಳನ್ನು ನಾಗ್ಪುರಕ್ಕೆ ರವಾನೆ ಮಾಡಿ ಅಲ್ಲಿಂದ ಸಮೀಪದ ಅರಣ್ಯದೊಳಗೆ ಬಿಡಲಾಗುತ್ತದೆ ಎಂದು ಬೀಡ್ ಅರಣ್ಯಾಧಿಕಾರಿ ಸಚಿನ್ ಕಂಡ್ ಹೇಳಿದ್ದಾರೆ.


ಕೋತಿಗಳ ಈ ಆಕ್ರಮಣಕಾರಿ ಸ್ವಭಾವಕ್ಕೆ ಸೇಡು ಕಾರಣ ಎಂದು ಹೇಳಲಾಗುತ್ತಿದೆ. ತಿಂಗಳ ಹಿಂದೆ ನಾಯಿಗಳ ಹಿಂಡು ಕೋತಿ ಮರಿಯನ್ನು ಅಟ್ಟಾಡಿಸಿಕೊಂಡು ನಿರ್ದಯವಾಗಿ ಕೊಂದು ಹಾಕಿತ್ತು. ಇದರಿಂದ ಆಕ್ರೋಶಗೊಂಡ ಮಂಗಗಳು ಅಲ್ಲಿನ ನಾಯಿಮರಿಗಳನ್ನು ಕೊಲ್ಲುತ್ತಾ ಬಂದಿವೆ.

LEAVE A REPLY

Please enter your comment!
Please enter your name here

Hot Topics

ತೊಕ್ಕೊಟ್ಟು ಕಾಪಿಕಾಡಿನಲ್ಲಿ ಬೈಕಿಗೆ ಕಾರು ಡಿಕ್ಕಿ : ಸವಾರರಿಗೆ ಗಾಯ – ಕಾರು ಕಮರಿಗೆ ..!

ಉಳ್ಳಾಲ : ರಾಷ್ಟ್ರೀಯ ಹೆದ್ದಾರಿ66ರ ತೊಕ್ಕೊಟ್ಟು ಕಾಪಿಕಾಡ್ ಬಳಿ ವಿರುದ್ಧ ದಿಕ್ಕಿನಲ್ಲಿ ಬಂದ ಬೈಕ್‍ಗೆ ಕಾರು ಡಿಕ್ಕಿ ಯಾಗಿ ಬೈಕ್ ಸವಾರರಿಬ್ಬರು ಗಾಯಗೊಂಡ ಘಟನೆ ಬುಧವಾರ ಸಂಜೆ ನಡೆದಿದ್ದು ಕಾರು ಮತ್ತು ಬೈಕ್...

ಸ್ಥಳೀಯರೇ ಪ್ರವೀಣ್‌ನನ್ನು ಹತ್ಯೆಗೈದಿದ್ದು, ಆರೋಪಿಗಳಿಗೆ ಎಸ್‌ಡಿಪಿಐ ಲಿಂಕ್‌ ಎಂದ ಎಡಿಜಿಪಿ

ಮಂಗಳೂರು: ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ. ಇವರೆಲ್ಲರೂ ಸ್ಥಳೀಯರೇ ಆಗಿದ್ದಾರೆ ಎಂದು ಎಡಿಜಿಪಿ ಅಲೋಕ್‌ ಕುಮಾರ್‌ ತಿಳಿಸಿದ್ದಾರೆ.ಈ ಬಗ್ಗೆ ಮಂಗಳೂರಿನ ಎಸ್‌ಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ...

ಮಂತ್ರಾಲಯದಲ್ಲಿ ರಾಯರಿಗೆ ಪೂಜೆ ಸಲ್ಲಿಸಿದ ಮಾಜಿ CM ಬಿ.ಎಸ್ ವೈ & ಕುಟುಂಬ

ರಾಯಚೂರು: ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ 351ನೇ ಆರಾಧನಾ ಮಹೋತ್ಸವ ಅಂಗವಾಗಿ ಮಾಜಿ ಮುಖ್ಯಮಂತ್ರಿಗಳಾದ ಬಿ. ಎಸ್ ಯಡಿಯೂರಪ್ಪನವರೊಂದಿಗೆ ಸಂಸದರಾದ ಬಿ. ವೈ ರಾಘವೇಂದ್ರ ಅವರು ಹಾಗೂ ಸಹೋದರ ಬಿ. ವೈ ವಿಜಯೇಂದ್ರ ಅವರು...