Monday, May 17, 2021

ತನ್ನ ಖಾತೆಗೆ ಬಿದ್ದ ಪರ ಧನ ಬಳಕೆ: ಜೈಲು ಪಾಲಾದ ಮಹಿಳೆ..!

ಅಮೆರಿಕಾ : ತನ್ನ ಖಾತೆಗೆ ಬಂದಿದ್ದ ಬೇರೊಬ್ಬರ ಹಣವನ್ನು ಹಿಂತಿರುಗಿಸದೆ ಖರ್ಚು ಮಾಡಿದ್ದಕ್ಕಾಗಿ ಮಹಿಳೆಯೊಬ್ಬಳನ್ನು ಬಂಧಿಸಿದ ಘಟನೆ ಅಮೆರಿಕಾ ಲೂಸಿಯಾನದಲ್ಲಿ ನಡೆದಿದೆ.ನ್ಯಾಯಾಂಗ ಅಧಿಕಾರಿಯ ಸಿಬ್ಬಂದಿಯಾಗಿದ್ದ ಮಹಿಳೆಯೊಬ್ಬರು ತನ್ನ ಖಾತೆಗೆ ಬಂದಿದ್ದ ಬೇರೊಬ್ಬರ ಲಕ್ಷಾಂತರ ಡಾಲರ್ ಹಣವನ್ನು ತನ್ನ ಸ್ವಂತಕ್ಕಾಗಿ ಬಳಸಿಕೊಂಡು ಕೆಲಸವನ್ನು ಕಳೆದುಕೊಂಡದ್ದಲ್ಲದೆ ಜೈಲು ಪಾಲಾಗಿದ್ದಾರೆ.

ಆಕಸ್ಮಿಕ ತನ್ನ ಖಾತೆಗೆ ಬಿದ್ದ 1.2ದಶಲಕ್ಷ ಡಾಲರ್ ಹಣವನ್ನು ಕೆಲಿನ್ ಸ್ಪಡೂನಿ ಎನ್ನುವ ಮಹಿಳೆ ಅದನ್ನು ಹಿಂತಿರುಗಿಸದೆ ಮನ ಬಂದಂತೆ ಖರ್ಚು ಮಾಡಿದ್ದರು. ಅದೇ ಹಣದಲ್ಲಿ ಮನೆ ಮತ್ತು ಕಾರು ಖರೀದಿಸಿದ್ದರು.

ಸ್ಪಡೂನಿ ಖಾತೆಗೆ 82.56 ಡಾಲರ್ ಹಣ ಬರಬೇಕಾಗಿತ್ತು ಅದರ ಬದಲು 1.2ದಶಲಕ್ಷ ಡಾಲರ್ ಜಮೆಯಾಗಿತ್ತು.

ಆಕಸ್ಮಾತ್ ಬ್ಯಾಂಕಿನವರಿಂದಾದ ತಪ್ಪನ್ನು ಸರಿಪಡಿಸಲು ಯತ್ನಿಸುವ ಮುನ್ನವೇ ಕೆಲಿನ್ ಆ ಹಣವನ್ನು ಮತ್ತೊಂದು ಖಾತೆಗೆ ವರ್ಗಾಯಿಸಿದ್ದಳು. ಬಳಿಕ ಮನೆ ಮತ್ತು ಹೊಸ ಹ್ಯೂಂಡೈ ಜೆನೆಸಿಸ್ ಕಾರು ಖರೀದಿಸಿದ್ದಳು.
ಲೆಕ್ಕ ಪರಿಶೋಧನೆಯಿಂದಾದ ಆಕಸ್ಮಾತ್ ತಪ್ಪಿನಿಂದ ಆಕೆಯ ಖಾತೆಗೆ ಹಣ ಬಂದಿದ್ದರೂ ಆಕೆ ಅದನ್ನು ಹಿಂತಿರುಗಿಸದೆ ಇರುವದು ಅವಳ ತಪ್ಪು ಎಂದು ಬ್ಯಾಂಕ್ ಅಧಿಕಾರಿಗಳು ಹೇಳಿದ್ದಾರೆ.

ಇದೀಗ ಬ್ಯಾಂಕ್ ಕೆಲಿನ್ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿ ಕಳ್ಳತನ ಮತ್ತು ಬ್ಯಾಂಕ್ ಗೆ ವಂಚಿಸಿರುವ ಆರೋಪ ಹೊರಿಸಿದೆ. ಇದರಿಂದ ಆಕೆ ಉದ್ಯೋಗ ಮಾಡುತ್ತಿದ್ದ ಕಛೇರಿಯಿಂದಲೂ ಆಕೆಯನ್ನು ವಜಾಗೊಳಿಸಲಾಗಿದ್ದು, ಇದೀಗ ಆಕೆಯನ್ನು ಬಂಧಿಸಲಾಗಿದೆ.

Hot Topics

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...

ಫೋನಿನಲ್ಲಿ ಮಾತಾಡುತ್ತಿದ್ದ ಯುವಕ ಮೃತ್ಯು ಕೂಪಕ್ಕೆ: ವಿಟ್ಲದಲ್ಲಿ ಹೃದಯ ವಿದ್ರಾವಕ ಘಟನೆ..! 

ಫೋನಿನಲ್ಲಿ ಮಾತಾಡುತ್ತಿದ್ದ ಯುವಕ ಮೃತ್ಯು ಕೂಪಕ್ಕೆ ವಿಟ್ಲದಲ್ಲಿ ಹೃದಯ ವಿದ್ರಾವಕ ಘಟನೆ..!  ಮಂಗಳೂರು: ಟೆರೇಸ್ ನಲ್ಲಿ ಫೋನ್ ನಲ್ಲಿ ಮಾತನಾಡುತ್ತಿದ್ದ ವೇಳೆ ಆಯತಪ್ಪಿ ಕೆಳಗೆ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ವಿಟ್ಲದ ಕೇಪು ಎಂಬಲ್ಲಿ...