ಮಂಗಳೂರು : ಮೊದಲೆಲ್ಲಾ ಮೊನಾಲಿಸಾ ಅಂದ್ರೆ ಎಲ್ಲರಿಗೂ ನೆನಪಾಗುವುದು ಲಿಯೊನಾರ್ಡೊ ಡಾ ವಿಂಚಿ ಅವರ ಚಿತ್ರಕಲೆಯ ಹೆಣ್ಣಿನ ಚಿತ್ರ ಕಣ್ಮುಂದೆ ಬರುತ್ತಿತ್ತು. ಗೂಗಲ್‌ನಲ್ಲಿಯೂ ಇದೇ ಪೇಂಟಿಂಗ್ ಕಾಣಿಸುತ್ತಿತ್ತು. ಆದ್ರೆ ಕಳೆದ ಕೆಲವು ದಿನಗಳಿಂದ ಎಲ್ಲವೂ ಬದಲಾಗಿ ಹೋಗಿದೆ.
ಗೂಗಲ್‌ನಲ್ಲಿ ಕುಂಭಮೇಳ ಎಂದು ಸರ್ಚ್ ಮಾಡಿದ್ರೆ ಮೊದಲಿಗೆ ಕಾಣೋದೇ ಈ ನೀಲಿ ಕಣ್ಗಳ ಚೆಲುವೆ. ಸೋಷಿಯಲ್ ಮೀಡಿಯಾಗಳಲ್ಲಂತೂ ಈಕೆಯದ್ದೇ ಹವಾ.
ಮಹಾಕುಂಭಮೇಳದಲ್ಲಿ ಪಾಲ್ಗೊಳ್ಳಲು ಬಂದಿದ್ದ ಸಾವಿರಾರು ಸಾಧು-ಸಂತರ ನಡುವೆ ರುದ್ರಾಕ್ಷಿ ಮಾಲೆ ಮಾರುತ್ತಿದ್ದ ಯುವತಿ ತನ್ನ ಸೌಂದರ್ಯ ಮತ್ತು ಕಣ್ಣುಗಳಿಂದ ನೆಟ್ಟಿಗರ ಗಮನ ಸೆಳೆಯುತ್ತಿದ್ದಾಳೆ.
ಅಲ್ಲದೆ, ಈಕೆಗೆ ಇದೀಗ ಬಾಲಿವುಡ್‌ನಲ್ಲೂ ಆಫರ್ ಬರುತ್ತಿದೆ ಎನ್ನುವ ಸುದ್ದಿಗಳು ಪ್ರಸಾರವಾಗುತ್ತಿವೆ. ಇದರ ನಡುವೆ ಸ್ಯಾಂಡಲ್‌ವುಡ್‌ಗೂ ಮೊನಾಲಿಸಾ ಎಂಟ್ರಿ ಕೊಡಲಿದ್ದಾರೆ ಎನ್ನಲಾಗಿದೆ.
ಕುಂಭಮೇಳ ಸುಂದರಿಗೆ ಬಾಲಿವುಡ್‌ನಿಂದ ಆಫರ್
ಮಹಾಕುಂಭ ಮೇಳದಲ್ಲಿ ನೋಡುಗರ ಕಣ್ಮನ ಸೆಳೆದ ಮೊನಾಲಿಸಾಗೆ ಬಾಲಿವುಡ್‌ನಿಂದ ಆಫರ್‌ವೊಂದು ಬಂದಿದೆಯಂತೆ. ಬಾಲಿವುಡ್ ಸ್ಟಾರ್ ಡೈರೆಕ್ಟರ್ ಸಿನಿಮಾದಲ್ಲಿ ನಟಿಸಲು ಆಫರ್ ಬಂದಿದೆ.
ಮೊನಾಲಿಸಾ ಮುಂದಿನ ದಿನಗಳಲ್ಲಿ ಬಾಲಿವುಡ್ ಸಿನಿಮಾದಲ್ಲಿ ಮಿಂಚಲು ಸಜ್ಜಾಗಿದ್ದಾರಂತೆ. ಡೈರೆಕ್ಟರ್ ಸನೋಜ್ ಮಿಶ್ರಾರಿಂದ ಮೊನಾಲಿಸಾ ಆಫರ್ ಹೋಗಿದೆಯಂತೆ.
ಇನ್ನೂ, ಸನೋಜ್ ಮಿಶ್ರಾರ ಬಹು ನಿರೀಕ್ಷಿತ ಚಿತ್ರ ‘ಡೈರಿ ಆಫ್ ಮಣಿಪುರ’. ಈ ಸಿನಿಮಾಗಾಗಿ ಮುಗ್ದೆಯ ಪಾತ್ರಕ್ಕಾಗಿ ನಟಿಯನ್ನ ಹುಡುಕುತ್ತಿದ್ದಾರಂತೆ. ಇಂದೋರ್‌ಗೆ ತೆರಳಿ ಮೊನಾಲಿಸಾ ಜೊತೆ ಚರ್ಚಿಸಲಿದ್ದಾರಂತೆ. ಆಕೆಗೆ ಆ್ಯಕ್ಟಿಂಗ್ ಕ್ಲಾಸ್ ಕೊಡಿಸಿ, ಚಿತ್ರದಲ್ಲಿ ಚಾನ್ಸ್ ನೀಡುವ ಸಾಧ್ಯತೆ ಇದೆಯಂತೆ. ಶೀಘ್ರದಲ್ಲೇ ಡೈರೆಕ್ಟರ್ ಮೊನಾಲಿಸಾ ಅವರನ್ನು ಭೇಟಿಯಾಗಲಿದ್ದಾರಂತೆ. ಇನ್ನು ಮೊನಾಲಿಸಾಗೆ ಕನ್ನಡ ಸಿನಿಮಾದಲ್ಲೂ ಅವಕಾಶ ಸಿಕ್ಕಿದೆ ಎನ್ನಲಾಗಿದೆ.
ಸ್ಯಾಂಡಲ್‌ವುಡ್‌ಗೂ ಮೊನಾಲಿಸಾ ಎಂಟ್ರಿ
ಮೊನಾಲಿಸಾಗೆ ಕನ್ನಡ ಸಿನಿಮಾದಲ್ಲೂ ಆಫರ್‌ಗಳು ಬರುತ್ತಿವೆ ಎಂದು ಹೇಳಲಾಗಿದೆ. ಡಾ. ಶಿವರಾಜ್‌ಕುಮಾರ್ ಅವರ ಮುಂಬರುವ ಸಿನಿಮಾದಲ್ಲಿ ನೈಜ ಸುಂದರಿ, ಮುಖ್ಯಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಬುಚ್ಚಿ ಬಾಬು ಸನಾ ನಿರ್ದೇಶನದ ‘ಆರ್‌ಸಿ 16’ ಎಂಬ ತೆಲುಗು ಚಿತ್ರದಲ್ಲಿ ನಟ ಶಿವರಾಜ್‌ಕುಮಾರ್ ಹಾಗೂ ರಾಮ್ ಚರಣ್ ನಟಿಸುತ್ತಿದ್ದಾರೆ. ಈಗಾಗಲೇ ಈ ಚಿತ್ರದ ನಾಯಕಿಯಾಗಿ ಜಾನ್ವಿ ಕಪೂರ್ ಫಿಕ್ಸ್ ಆಗಿದ್ದಾರೆ. ಇದೀಗ ಮಧ್ಯಪ್ರದೇಶದ ಇಂದೋರ್‌ನ ಮೊನಾಲಿಸಾ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಸಿನಿಮಾದ ಎರಡನೇ ಶೆಡ್ಯೂಲ್ ಜನವರಿ 27ರಿಂದ ಪ್ರಾರಂಭವಾಗಲಿದ್ದು, ದಸರಾಗೆ ಚಿತ್ರ ಬಿಡುಗಡೆ ಮಾಡಲು ನಿರ್ಮಾಪಕರು ಮುಂದಾಗಿದ್ದಾರೆ. ಇದೇ ಚಿತ್ರದಲ್ಲಿ ಮೊನಾಲಿಸಾ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
ಮೊನ್ನೆ ಕುಂಭಮೇಳದಲ್ಲಿ ರುದ್ರಾಕ್ಷಿ ಮಾಲೆ ಮಾರಲು ಬಂದಿದ್ದ ಮೊನಾಲಿಸಾ ಚಿತ್ರರಂಗಕ್ಕೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಇದೇ ಅಲ್ವಾ ಲಕ್ ಅಂದ್ರೆ. ಯಾರ್ಯಾರ ಜೀವನ ಯಾವಾಗ ಚೇಂಜ್ ಆಗುತ್ತೆ ಅಂತ ಯಾರಿಗೂ ಹೇಳೋದಕ್ಕೆ ಆಗೋದಿಲ್ಲ.
ಮಂಗಳೂರು/ಹೈದರಾಬಾದ್: ಬಾಯ್‌ಫ್ರೆಂಡ್ ಜೊತೆ ಚಾಟ್ ಮಾಡುತ್ತಿದ್ದ ವಿಷಯ ಮನೆಯವರಿಗೆ ಗೊತ್ತಾಯಿತು ಎಂದು ಹೆದರಿ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಆ*ತ್ಮಹ*ತ್ಯೆಗೆ ಶರಣಾಗಿರುವ ಘಟನೆ ಮಂಗಳವಾರ (ಜ.21ರಂದು) ಹೈದರಾಬಾದ್‌ನಲ್ಲಿ ನಡೆದಿದೆ.
ಭಾರ್ಗವಿ (19) ಆ*ತ್ಮಹ*ತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ.
ಇಂಟರ್ ಮೀಡಿಯೇಟ್ ದ್ವಿತೀಯ ವರ್ಷದ ವಿದ್ಯಾರ್ಥಿನಿಯಾಗಿದ್ದ ಭಾರ್ಗವಿ ಹೈದರಬಾದ್‌ನ ಸಿದ್ದಿಪೇಟೆ ಜಿಲ್ಲೆಯ ಹಾಸ್ಟೆಲ್‌ನಲ್ಲಿ ವಾಸವಾಗಿದ್ದಳು.
ಭಾರ್ಗವಿ ಪ್ರಿಯಕರನ ಜತೆ ಮೊಬೈಲ್‌ನಲ್ಲಿ ಚಾಟ್ ಮಾಡುತ್ತಿದ್ದ ವಿಚಾರವನ್ನು ಆಕೆಯ ಸಹೋದರಿ ನೋಡಿದ್ದಾಳೆ. ಸಹೋದರಿ ಇದನ್ನು ಅಪ್ಪ – ಅಮ್ಮನಿಗೆ ಹೇಳುತ್ತಾಳೆ ಎನ್ನುವ ಭೀತಿಯಲ್ಲಿ ಭಾರ್ಗವಿ ಚಲಿಸುತ್ತಿರುವ ರೈಲಿನಿಂದ ಹಾರಿ ಪ್ರಾಣ ಕಳೆದುಕೊಂಡಿದ್ದಾಳೆ.
ಜಮೈ ಉಸ್ಮಾನಿಯಾ ರೈಲು ಹಳಿಯಲ್ಲಿ ಈ ಘಟನೆ ಸಂಭವಿಸಿದ್ದು, ಪೊಲೀಸರು ಘಟನೆ ಸಂಬಂಧ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಆದರೂ, ಏನು ನಡೆಯದೆಯೇ ಕ್ಷುಲ್ಲಕ ಕಾರಣಕ್ಕೆ ಸು*ಸೈಡ್ ಮಾಡಿಕೊಂಡ ಭಾರ್ಗವಿ ಕಥೆ ದುಡುಕಿನ ಫಲವೇ ಸರಿ.
ಮಂಗಳೂರು/ಬೆಂಗಳೂರು : ‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಅದ್ದೂರಿ ಗ್ರ್ಯಾಂಡ್ ಫಿನಾಲೆ ಇದೇ ವಾರದಲ್ಲಿ ನಡೆಯಲಿದೆ. ಸದ್ಯ ಬಿಗ್ ಮನೆಯಲ್ಲಿ ಒಟ್ಟು 6 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಇವರಲ್ಲಿ ಒಬ್ಬರು ಬಿಗ್ ಬಾಸ್‌ನ ಫಿನಾಲೆ ವಾರದಲ್ಲೇ ಹೊರಬರ್ತಾರೆ ಎಂಬ ಕುತೂಹಲ ಮನೆ ಮಾಡಿದೆ.
ಸದ್ಯ ಅತಿ ದೊಡ್ಡ ಬಿಗ್ ಬಾಸ್ ಮನೆಯಲ್ಲಿ ಕೇವಲ ಆರು ಸ್ಪರ್ಧಿಗಳು ಮಾತ್ರ ಉಳಿದುಕೊಂಡಿದ್ದಾರೆ. ಈ ಆರು ಸ್ಪರ್ಧಿಗಳಲ್ಲಿ ಮೊದಲು ಬಿಗ್‌ಬಾಸ್ ಮನೆಯಿಂದ ಆಚೆ ಬರೋರು ಯಾರು ಅಂತ ಚರ್ಚೆ ಶುರುವಾಗಿದೆ.
ಹನುಮಂತ ಟಾಸ್ಕ್ ಗೆದ್ದು ನೇರವಾಗಿ ಫಿನಾಲೆಗೆ ತಲುಪಿದ್ದರು. ಈ ಬೆನ್ನಲ್ಲೇ ಹನುಮಂತು ಸೇಫ್ ಮಾಡಿರುವ ಕಾರಣದಿಂದ ಮೋಕ್ಷಿತಾ ಕೂಡ ಫಿನಾಲೆಗೆ ತಲುಪಿದ್ದರು. ಅದಾದ ಬಳಿಕ ತ್ರಿವಿಕ್ರಮ್ ಅವರು ಕೂಡ ಫಿನಾಲೆಗೆ ಎಂಟ್ರಿ ಕೊಟ್ಟರು.
ಆದರೆ ಇನ್ನು ಉಳಿದಿರುವ ಭವ್ಯಾ, ಉಗ್ರಂ ಮಂಜು ಹಾಗೂ ರಜತ್ ನಡುವೆ ಯಾರು ಫಿನಾಲೆ ವಾರದಲ್ಲಿರುವಾಗಲೇ ಹೊರ ಹೋಗುತ್ತಾರೆ ಎಂದು ಕಾದು ನೋಡಬೇಕಿದೆ.
ಇದರಲ್ಲಿ ಹೆಚ್ಚಾಗಿ ಕೇಳಿಬರುತ್ತಿರುವ ಹೆಸರು ಭವ್ಯಾ. ಧನರಾಜ್ ಹೊರ ಹೋದಾಗಲೂ ವೀಕ್ಷಕರು ಅಸಮಾಧಾನ ಹೊರ ಹಾಕಿದ್ದರು. ಧನರಾಜ್ ಬದಲು ಭವ್ಯಾ ಹೊರಹೋಗಬೇಕಿತ್ತು ಎನ್ನುವ ಮಾತುಗಳು ಕೇಳಿಬರುತ್ತಿತ್ತು.
ಹೀಗಾಗಿ ಫಿನಾಲೆ ವಾರದಲ್ಲಿ ಭವ್ಯಾ ಅವರು ಹೊರ ಬರಬಹುದು ಎಂಬುದು ಬಿಗ್ ಬಾಸ್ ವೀಕ್ಷಕರ ಅಭಿಪ್ರಾಯವಾಗಿದೆ. ಇಷ್ಟು ದಿನ ಬಿಗ್‌ಬಾಸ್ ಮನೆಯಲ್ಲಿ ಇದ್ದುಕೊಂಡು ಇನ್ನೇನೂ ಕೊನೆಯ ಕ್ಷಣದಲ್ಲಿ ಎಲಿಮಿನೇಟ್ ಆಗೋದು ಯಾರು ಅಂತ ಭಾನುವಾರದ ಎಪಿಸೋಡ್‌ನಲ್ಲಿ ಗೊತ್ತಾಗಲಿದೆ.
ಮಂಗಳೂರು/ಉತ್ತರ ಪ್ರದೇಶ : ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಮುಸ್ಲೀಮರು ಬಂದು ನದಿಯಲ್ಲಿ ಮಿಂದರೆ ಅದರ ಪಾವಿತ್ರ್ಯತೆ ಹಾಳಾಗುತ್ತದೆ ಎಂದು ನಿಷಿದ್ಧವಿತ್ತು. ಈ ನಡುವೆಯೂ ಮೊಹಮ್ಮದ್ ಕೈಫ್ ತ್ರಿವೇಣಿ ಸಂಗಮದ ಪುಣ್ಯ ಕ್ಷೇತ್ರಕ್ಕೆ ಭೇಟಿ ನೀಡಿದ್ದು, ಆ ವೇಳೆ ಯಮನಾ ನದಿಯಲ್ಲಿ ಸ್ನಾನ ಮಾಡಿದ್ದು ಸಾಧು ಸಂತರೇ ಇದಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ಪ್ರಯಾಗರಾಜ್ ನಲ್ಲಿ ವಿಶ್ವದ ಅತೀ ದೊಡ್ಡ ಧಾರ್ಮಿಕ ಹಬ್ಬ ಮಹಾಕುಂಭ ಮೇಳ ಆರಂಭವಾಗಿದ್ದು, ಬಹಳ ಸಂಭ್ರಮದಿಂದ ಸಾಗುತ್ತಿದೆ. ಅನೇಕ ನಟ-ಟಿಯರು, ಸಾಧು-ಸಂತರು ಆಗಮಿಸಿ ಪುಣ್ಯಸ್ನಾನದಲ್ಲಿ ಬಾಗಿಯಾಗುತ್ತಿದ್ದಾರೆ. ಈ ನಡೆವೆ ಮಾಜಿ ಕ್ರಿಕೆಟರ್ ಮೊಹಮ್ಮದ್ ಕೈಫ್ ಯಮುನಾ ನದಿಯಲ್ಲಿ ಮಿಂದ ಸುದ್ಧಿ ಭಾರೀ ವೈರಲ್ ಆಗುತ್ತಿದೆ. “ಏ.. ಇದೇ ಯಮುನಾ ನದಿಯಲ್ಲಿ ನಾನು ಈಜು ಕಲಿತದ್ದು’ ಎಂಬ ಶೀರ್ಷಿಕೆ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಯಮುನಾ ನದಿ ಮತ್ತು ತಮ್ಮ ಬಾಲ್ಯದ ನೆನಪನ್ನು ಸ್ಮರಿಸಿಕೊಂಡು ಕೈಫ್, ನದಿಯಲ್ಲಿ ಈಜಾಡುವ ಪೋಸ್ಟ್ ಸಾಕಷ್ಟು ಜನರ ಮೆಚ್ಚುಗೆಗೂ ಕಾರಣವಾಗಿದೆ.
ಪ್ರಯಾಗ್ರಾಜ್ನಲ್ಲೇ ಹುಟ್ಟಿ ಬೆಳೆದಿದ್ದ ಮೊಹಮ್ಮದ್ ಕೈಫ್ ಯಮುನಾ ನದಿಯಲ್ಲಿ ಮಹಾಕುಂಭ ಮೇಳದ ನಿಮಿತ್ತ ಸ್ನಾನ ಮಾಡಿದ್ದು ಮಾತ್ರವಲ್ಲದೇ ತಮ್ಮ ಮಗನನ್ನೂ ಕರೆದುಕೊಂಡು ಹೋಗಿದ್ದಾರೆ. ಯಾವ ಕುಂಭಮೇಳಕ್ಕೆ ಮುಸ್ಲೀಮರು ಬರಬಾರದೆಂದು ಹೇಳಲಾಗಿತ್ತೋ, ಇವಾಗ ಅದೇ ಕುಂಭಮೇಳದಲ್ಲಿ ಸ್ಥಳೀಯ ಮುಸ್ಲೀಮರೆಲ್ಲಾ ಬಂದು ಸ್ನಾನ ಮಾಡಿ ಹೋಗುತ್ತಿರುವುದು ಗಮನಾರ್ಹವಾಗಿದೆ.