Saturday, May 21, 2022

Mollywoodನ ಹಿರಿಯ ನಟಿ ಕೋಯಿಕೋಡ್​ ಶಾರದಾ ನಿಧನ

ಕ್ಯಾಲಿಕಟ್: ಮಲಯಾಳಂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಹಿರಿಯ ನಟಿ ಕೋಯಿಕೋಡ್​ ಶಾರದಾ ಅವರು ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರಿಗೆ 84 ವರ್ಷ ವಯಸ್ಸಾಗಿತ್ತು.


ನಿನ್ನೆ ಅವರಿಗೆ ಹೃದಯಾಘಾತವಾದ ಬಳಿಕ ಕೇರಳದ ಕೋಳಿಕೋಡ್​ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು.

ಆದರೆ ಅವರು ಚಿಕಿತ್ಸೆ ಫಲಕಾರಿಯಾಗಿದೆ ಸಾವನ್ನಪ್ಪಿದ್ದಾರೆ. ಅವರ ನಿಧನಕ್ಕೆ ಸೆಲೆಬ್ರಿಟಿಗಳು, ಅಭಿಮಾನಿಗಳು ಕಂಬನಿ ಮಿಡಿದ್ದಾರೆ.


ರಂಗಭೂಮಿಯಲ್ಲಿನ ಅಪಾರ ಅನುಭವ ಇಟ್ಟುಕೊಂಡು ಚಿತ್ರರಂಗಕ್ಕೆ ಕಾಲಿಟ್ಟವರು ಶಾರದಾ. ಮಲಯಾಳಂ ಸಿನಿಮಾಗಳ ಮೂಲಕ ಅವರು ಹೆಚ್ಚು ಜನಪ್ರಿಯತೆ ಗಳಿಸಿದ್ದರು.

‘ಅಂಗಕ್ಕುರಿ’ ಸಿನಿಮಾ ಮೂಲಕ 1979ರಲ್ಲಿ ಚಿತ್ರರಂಗಕ್ಕೆ ಶಾರದಾ ಪಾದಾರ್ಪಣೆ ಮಾಡಿದ್ದರು.
40 ವರ್ಷಗಳ ಕಾಲ ಅವರು ಸಿನಿಮಾ ಜಗತ್ತಿನಲ್ಲಿ ಸಕ್ರಿಯರಾಗಿದ್ದರು.

90ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ ಖ್ಯಾತಿ ಅವರದ್ದು. ಹೆಚ್ಚಾಗಿ ತಾಯಿ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು.

ಆ ಮೂಲಕ ಅವರು ಸಿನಿಪ್ರಿಯರನ್ನು ರಂಜಿಸಿದ್ದರು. ಮಾಡಿದ್ದೆಲ್ಲವೂ ಚಿಕ್ಕ-ಪುಟ್ಟ ಪಾತ್ರಗಳಾದರೂ ಅವರ ನಟನೆ ಗಮನಾರ್ಹವಾಗಿತ್ತು.


ಮಲಯಾಳಂ ಕಿರುತೆರೆಯ ಕೆಲವು ಧಾರಾವಾಹಿಗಳಲ್ಲೂ ಶಾರದಾ ಬಣ್ಣ ಹಚ್ಚಿದ್ದರು.

ಅನುಬಂಧಂ, ಸಾದಯಂ, ನಂದನಂ ಮುಂತಾದವು ಶಾರದಾ ನಟಿಸಿದ ಪ್ರಮುಖ ಸಿನಿಮಾಗಳು. ನಾಲ್ವರು ಮಕ್ಕಳನ್ನು ಅವರು ಅಗಲಿದ್ದಾರೆ.
ಪೃಥ್ವಿರಾಜ್​ ಸುಕುಮಾರನ್​ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಶಾರದಾ ನಿಧನಕ್ಕೆ ಕಂಬನಿ ಮಿಡಿದ್ದಾರೆ.

ಕೇರಳ ಅಸೆಂಬ್ಲಿ ಸ್ಪೀಕರ್​ ಎಂಬಿ ರಾಜೇಶ್​, ಸಚಿವರಾದ ಮೊಹಮ್ಮದ್​ ರಿಯಾಸ್​, ಸಾಜಿ ಚೆರಿಯನ್​ ಮುಂತಾದ ರಾಜಕೀಯ ಗಣ್ಯರು ಕೂಡ ಸಂತಾಪ ಸೂಚಿಸಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಪಠ್ಯಪುಸ್ತಕದಲ್ಲಿ ನಾರಾಯಣ ಗುರು ವಿಷಯ ಕೈಬಿಟ್ಟಿಲ್ಲ: ಸುಳ್ಳು ವದಂತಿ ನಂಬಬೇಡಿ ಎಂದ ಸಚಿವ ಕೋಟ

ಬೆಂಗಳೂರು: ಶಾಲಾ ಪಠ್ಯಪುಸ್ತಕದಲ್ಲಿ ನಾರಾಯಣ ಗುರು ವಿಷಯ ಕೈಬಿಟ್ಟಿಲ್ಲ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಸ್ಪಷ್ಟನೆ ನೀಡಿದ್ದಾರೆ.ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು...

ಮಳೆಯ ನೀರಿನಿಂದ ಕೆರೆಯಂತಾದ ಬಿ.ಸಿ ರೋಡ್ ಬಸ್ ನಿಲ್ದಾಣ

ಬಂಟ್ವಾಳ: ಬಿ.ಸಿರೋಡಿನಿಂದ ಮಂಗಳೂರು ಭಾಗಕ್ಕೆ ತೆರಳುವ ಬಸ್ಸುಗಳು ನಿಲ್ಲುವ ಸ್ಥಳದಲ್ಲಿ ಕೃತಕ ನೀರು ನಿಂತು ಪ್ರಯಾಣಿಕರು ಅದೇ ನೀರಿನಲ್ಲಿ ನಿಂತು ಬಸ್ಸಿಗಾಗಿ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ.ಪುತ್ತೂರು, ಧರ್ಮಸ್ಥಳ, ಉಪ್ಪಿನಂಗಡಿ, ವಿಟ್ಲ ಭಾಗದಿಂದ ಆಗಮಿಸುವ...

ಪಶುವೈದ್ಯೆಯ ಅತ್ಯಾಚಾರದ ಆರೋಪಿಗಳ ಎನ್‌ಕೌಂಟರ್‌ ‘ಪೊಲೀಸರ ಸೃಷ್ಟಿ’: ಮಾನವ ಹಕ್ಕುಗಳ ಆಯೋಗ

ಹೊಸದಿಲ್ಲಿ: ತೆಲಂಗಾಣದ ಪಶುವೈದ್ಯೆಯ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಅಮಾನುಷ ಹತ್ಯೆ ಹಾಗೂ ಅದರ ಬಳಿಕ ನಡೆದಿದ್ದ ಆರೋಪಿಗಳ ಎನ್‌ಕೌಂಟರ್‌ 'ಪೊಲೀಸರ ಸೃಷ್ಟಿ' ಎಂದು ಮಾನವ ಹಕ್ಕುಗಳ ಆಯೋಗ ವರದಿಯಲ್ಲಿ ಉಲ್ಲೇಖಿಸಿದೆ.ಎನ್‌ಕೌಂಟ್ ಘಟನೆಯ...