ಮಂಗಳೂರು: ‘ಈ ಶತಮಾನದ ಚಾರಿತ್ರಿಕ ಕಾರ್ಯಕ್ರಮದಲ್ಲಿ ಸಂಮಾನಿತರಾಗುವ ಯಕ್ಷಗಾನ ಕಲಾವಿದರು ಧನ್ಯರು’ ಎಂದು ಮಂಗಳೂರಿನ ಮಹಾಮಾಯಾ ದೇವಸ್ಥಾನದ ಅರ್ಚಕ ವಾಸುದೇವ ಭಟ್ ಹೇಳಿದರು.
ಅವರು ಶ್ರೀ ವಾಗೀಶ್ವರೀ ಶತಮಾನೋತ್ಸವ ಸಂಮಾನ- 3 ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿದ ಹಿರಿಯ ಕಲಾವಿದ ಮೋಹನ ಬಂಗೇರ ಅವರನ್ನು ಅಭಿನಂದಿಸಿ ಮಾತನಾಡಿದರು.
ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸಹಭಾಗಿತ್ವದಲ್ಲಿ 50 ಭಾನುವಾರ ನಿರಂತರ “ಸಂಮಾನ ,ಸಂಸ್ಮರಣೆ ಮತ್ತು ತಾಳಮದ್ದಳೆ “ಯು ಮಹಾಮಾಯಾ ದೇವಸ್ಥಾನದ ಅಂಗಣದಲ್ಲಿ ನಡೆಯುತ್ತಿದೆ.
ಕಳೆದ ಐದು ದಶಕಗಳಿಂದ ಮಂಗಳೂರು ಪರಿಸರದ ಬಿಕ್ಕರ್ನಕಟ್ಟೆ ಕೈಕಂಬದ ಶ್ರೀ ಸುಬ್ರಮ್ಮಣ್ಯೇಶ್ವರ ಸಂಘ, ಪಾಂಡೇಶ್ವರದ ಶ್ರೀ ಮಹಾಲಿಂಗೇಶ್ವರ ಸಂಘ ಹಾಗೂ ಪರಿಸರದ ಹವ್ಯಾಸಿ ಸಂಘಟನೆಗಳಲ್ಲಿ ಪ್ರಧಾನ ವೇಷಧಾರಿ, ಅರ್ಥಧಾರಿಯಾಗಿ, ಹಾಗೂ ನಿರ್ದೇಶಕನಾಗಿ, ಸಂಘಟಕರಾಗಿ ಕಲಾಸೇವೆ ಗೈದ 70 ವರ್ಷದ ಹಿರಿಯ ಹವ್ಯಾಸಿ ಕಲಾವಿದ ರಂಗನಟ, ಸಂಘಟಕ ಮೋಹನ ಬಂಗೇರ ಅವರನ್ನು ಸಂಮಾನಿಸಲಾಯಿತು.
ಬಂಗೇರ ಅವರು ಮಹಿಷಾಸುರ ,ಕೋಟಿ ,ಭಸ್ಮಾಸುರ ಮೊದಲಾದ ಪಾತ್ರಗಳಲ್ಲಿ ವೇಷಧಾರಿಯಾಗಿ , ತಾಳಮದ್ದಳೆಗಳಲ್ಲಿ ಸ್ರೀ ಪಾತ್ರಗಳ ನಿರ್ವಹಣೆಯಲ್ಲಿ ಸಿದ್ದಿ ಪ್ರಸಿದ್ದಿ ಪಡೆದಿದ್ದರು. ನಿವೃತ್ತ ಉಪನ್ಯಾಸಕ ಜಿ.ಕೆ.ಭಟ್ ಸೇರಾಜೆ ಅಂಭಿನಂದಿಸಿದರು.
ಸೋಮಪ್ಪ ಸನಿಲ್ ಸಂಸ್ಮರಣೆ
ವಾಗೀಶ್ವರೀ ಯಕ್ಷಗಾನ ಕಲಾವರ್ಧಕ ಸಂಘದ ಹಿರಿಯ ಅರ್ಥಧಾರಿಗಳಾಗಿ ಪರಿಸರದ ಹಲವು ಸಂಘಗಳಲ್ಲಿ ಸುಮಾರು ಏಳು ದಶಕಗಳ ಕಾಲ ಅರ್ಥಧಾರಿಯಾಗಿ ,ವೇಷಧಾರಿಯಾಗಿ ” ಪುರಾಣ ಸೋಂಪಣ್ಣ” ಎಂಬ ಖ್ಯಾತಿ ಪಡೆದಿದ್ದ ಸೋಮಪ್ಪ ಸನಿಲ್ ಅವರ ಸಂಸ್ಮರಣೆ ಮಾಡಲಾಯಿತು. ಸೋಮಪ್ಪನವರು 25 ವರ್ಷ ನಿರಂತರವಾಗಿ ಪ್ರತೀ ಭಾನುವಾರ ಕೊಲ್ಲೂರು ಮೂಕಾಂಬಿಕೆಯ ದರ್ಶನಮಾಡಿ ಸಂಜೆ ಸಂಘದ ತಾಳಮದ್ದಳೆಯಲ್ಲಿ ಅರ್ಥ ಹೇಳುತ್ತಿದ್ದರು.
ಉದ್ಯಮಿ ಶ್ರೀನಾಥ್ ಪ್ರಭು ಕದ್ರಿ ಅಧ್ಯಕ್ಷತೆ ವಹಿಸಿದ್ದರು.
ಶತಮಾನೋತ್ಸವ ಸಮಿತಿಯ ಗೌರವಾಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ , ಅಧ್ಯಕ್ಷ ಸಿ.ಎಸ್.ಭಂಢಾರಿ , ಉದ್ಯಮಿ ಶಿವಪ್ರಸಾದ್ ಪ್ರಭು , ಸಂಜಯ ಕುಮಾರ್ ರಾವ್ ,ಸದಾನಂದ ಸೊಮಪ್ಪ ಅಂಚನ್,ಅಶೋಕ ಬೋಳೂರು ಉಪಸ್ಥಿತರಿದ್ದರು. ಪ್ರಧಾನ ಸಂಚಾಲಕ ಕದ್ರಿ ನವನೀತ ಶೆಟ್ಟಿ ನಿರೂಪಿಸಿದರು.
ಸಂಘದ ಕಲಾವಿದರಿಂದ ಶ್ರೀರಾಮ ಚರಿತಾಮೃತ ಸರಣಿ ಯ ” ತಾಟಕಿ ಸಂಹಾರ ” ತಾಳಮದ್ದಳೆ ನಡೆಯಿತು.
ಮಂಗಳೂರು: ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ ಬೆನ್ನಲ್ಲೇ ಕಾಂಗ್ರೆಸ್ ಕಾರ್ಯಕರ್ತರು, ಮಲ್ಲಿಕಟ್ಟೆಯಲ್ಲಿರುವ ಕಚೇರಿಯೆದುರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ಜಮೀರ್ ಅಹಮದ್ ಖಾನ್ ಪರ ಘೋಷಣೆ ಕೂ
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಪೂಜಾರಿ ಮಾತನಾಡಿ, ‘ರಾಜ್ಯದ ಮೂರು ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶವು ರಾಜ್ಯ ಸರ್ಕಾರದ ಜನಪರ ಕಾರ್ಯಕ್ರಮಗಳಿಗೆ ಹಿಡಿದ ಕನ್ನಡಿಯಾಗಿದೆ. ಕಾಂಗ್ರೆಸ್ ಕಾರ್ಯಕರ್ತರಿಗೆ ಗೆಲುವಿನ ನಿರೀಕ್ಷೆ ಇತ್ತು. ಆದರೆ, ಚುನಾವಣೋತ್ತರ ಸಮೀಕ್ಷೆಗಳು ಹೇಳಿದ್ದ ಫಲಿತಾಂಶ ತಲೆಕೆಳಗಾಗಿದೆ’ ಎಂದರು.
‘ಇಬ್ಬರು ಮಾಜಿ ಮುಖ್ಯಮಂತ್ರಿಗಳ ಪುತ್ರರು ಚುನಾವಣೆಯಲ್ಲಿ ಸೋತಿದ್ದಾರೆ. ಇದು ರಾಜ್ಯದ ಜನರು ಕಾಂಗ್ರೆಸ್ ಮೇಲೆ ಇಟ್ಟಿರುವ ವಿಶ್ವಾಸ ಮತ್ತು ಬಿಜೆಪಿ ಮೈತ್ರಿಕೂಟದ ಬಗೆಗಿರುವ ಅಪನಂಬಿಕೆಗೆ ಸಾಕ್ಷಿಯಾಗಿದೆ. ಇನ್ನಾದರೂ ಬಿಜೆಪಿ ಜಾತಿ, ಧರ್ಮಗಳ ನಡುವೆ ದ್ವೇಷ ಬಿತ್ತುವ ಕೆಲಸ ಬಿಟ್ಟು, ಅಭಿವೃದ್ಧಿ ಬಗ್ಗೆ ಯೋಚಿಸಲಿ’ ಎಂದು ಹೇಳಿದರು
ಮಂಗಳೂರು: ಕಂಬಳ ಕರಾವಳಿ ಕರ್ನಾಟಕದ ಜನಪದ ಕ್ರೀಡೆ. ಈ ಹಿಂದೆ ನಿಷೇಧಕ್ಕೆ ಒಳಪಟ್ಟರೂ ನಂತರ ಕಂಬಳ ನಡೆಸುವುದಕ್ಕೆ ಅನುಮತಿ ಸಿಕ್ಕಿತ್ತು. ಆದರೆ ಈಗ ಸರ್ಕಾರಿ ಪ್ರಾಯೋಜಿತ ಮೊದಲ ಕಂಬಳಕ್ಕೆ ಪ್ರಾಣಿ ಪ್ರಿಯರ ವಿರೋಧ ವ್ಯಕ್ತವಾಗಿದೆ. ಇದರ ನಡುವೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಕಳೆದ ಹತ್ತು ವರ್ಷಗಳಿಂದ ನಿಂತು ಹೋಗಿದ್ದ ಪಿಲಿಕುಳದ ಸರ್ಕಾರಿ ಕಂಬಳ ಈ ಬಾರಿ ಮತ್ತೆ ಆಯೋಜಿಸಲು ಜಿಲ್ಲಾಡಳಿತ ಮುಂದಾಗಿದೆ. ಹೀಗಾಗಿ ಪಿಲಿಕುಳದ ಗುತ್ತಿನ ಮನೆಯ ಮುಂದೆ ಕಂಬಳ ಕರೆ ನಿರ್ಮಾಣ ಮಾಡಿ ಕಂಬಳದ ದಿನಾಂಕ ಕೂಡಾ ಘೋಷಣೆ ಮಾಡಿತ್ತು. ನವೆಂಬರ್ 9 ರಂದು ನಿಗದಿಯಾಗಿದ್ದ ಈ ಕಂಬಳ, ಪಂಚಾಯತ್ ಉಪಚುನಾವಣೆಯ ನೀತಿ ಸಂಹಿತೆ ಕಾರಣದಿಂದ ಮುಂದೂಡಲಾಗಿತ್ತು.
ಇದನ್ನೂ ಓದಿ: 30 ವರ್ಷಕ್ಕೆ ಮದುವೆಯಾಗುವ ಯೋಚನೆ ಮಾಡಿದ್ರೆ ಇದನ್ನು ಓದಲೇ ಬೇಕು !!
ಈ ನಡುವೆ ಪೆಟಾದವರು ಬೆಂಗಳೂರು ಕಂಬಳ ಹಾಗೂ ಪಿಲಿಕುಳ ಕಂಬಳದ ಆಯೋಜನೆಯ ಬಗ್ಗೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಬೆಂಗಳೂರು ಕಂಬಳ ಇನ್ನೂ ದಿನ ನಿಗದಿಯಾಗದೇ ಇದ್ದರೂ ಕಂಬಳ ನಡೆಸಲು ಅನುಮತಿ ನೀಡಬಾರದೆಂದು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಪೆಟಾ ಸಲ್ಲಿಸಿದ ಈ ಅರ್ಜಿಗೆ ಬೆಂಗಳೂರು ಕಂಬಳ ಆಯೋಜಿಸಿದ್ದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ವಕೀಲರ ಮೂಲಕ ವಾದ ಮಂಡಿಸಿದ್ದಾರೆ. ಆದ್ರೇ ಪಿಲಿಕುಳದ ಸರ್ಕಾರಿ ಕಂಬಳದ ವಿಚಾರವಾಗಿ ಯಾವುದೇ ಅರ್ಜಿ ಹೈಕೋರ್ಟ್‌ಗೆ ಸಲ್ಲಿಕೆಯಾಗಿಲ್ಲ.
ಹೀಗಾಗಿ ಪಿಲಿಕುಳ ಕಂಬಳ ನಡೆಯುತ್ತದೆಯೋ ಇಲ್ಲವೋ ಎಂಬ ಅನುಮಾನ ಕಾಡಿದೆ. ಮಂಗಳೂರು ನಗರದಲ್ಲಿ ಕಂಬಳ ನಡೆಯದೇ ಇದ್ದ ಸಂದರ್ಭದಲ್ಲಿ ಪಿಲಿಕುಳದಲ್ಲಿ ಸರ್ಕಾರದ ವತಿಯಿಂದ ಕಂಬಳ ಆರಂಭಿಸಲಾಗಿತ್ತು. ಕಾರಣಾಂತರಗಳಿಂದ ನಿಂತು ಹೋಗಿದ್ದ ಕಂಬಳ ಮತ್ತೆ ಆರಂಭವಾದ ಕಾರಣ ಕಂಬಳ ಪ್ರೇಮಿಗಳು ಸಂತಸಗೊಂಡಿದ್ದರು. ಆದ್ರೆ ಇದೀಗ ಪೆಟಾ ಪಿಲಿಕುಳ ಕಂಬಳಕ್ಕೆ ಅಪಸ್ವರ ಎತ್ತಿದ್ದು, ಇಲ್ಲಿ ನಡೆಯುವ ಗದ್ದಲದಿಂದ ಪಿಲಿಕುಳದ ಪ್ರಾಣಿ ಸಂಗ್ರಹಾಲಯದಲ್ಲಿ ಇರುವ ಪ್ರಾಣಿಗಳಿಗೆ ತೊಂದರೆ ಆಗಲಿದೆ ಎಂಬ ವಾದವನ್ನು ನ್ಯಾಯಾಲಯದ ಮುಂದೆ ಇಟ್ಟಿದೆ.
ಮಂಗಳೂರು: ತಂದೆಯನ್ನು ಮನೆಗೆ ಕರೆದು ತಂದೆಯ ಎದುರಿನಲ್ಲಿ ಪತಿ ನನಗೆ ತ್ರಿವಳಿ ತಲಾಕ್ ನೀಡಿದ್ದಾರೆ ಎಂದು ಮಹಿಳೆಯೊಬ್ಬರು ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದಾರೆ.
ಉಳ್ಳಾಲದ ಸಮ್ಮರ್ ಸ್ಯಾಂಡ್ ಬಳಿಯ ನಿವಾಸಿಯಾಗಿರುವ ಮಹಮ್ಮದ್ ದಿಲ್ಫಾಜ್ ಎಂಬವರ ವಿರುದ್ಧ ಈ ದೂರು ದಾಖಲಾಗಿದೆ. 2019 ರಲ್ಲಿ ಪ್ರೀತಿಸಿ ಮದುವೆಯಾಗಿದ್ದು, ಕೆಲ ಕಾಲ ಚೆನ್ನಾಗಿ ಸಂಸಾರ ಕೂಡಾ ನಡೆಸಿ ಬಳಿಕ ಪತಿ ಪರ ಸ್ತ್ರೀಯ ಜೊತೆ ಸಂಬಂಧ ಬೆಳೆಸಿದ್ದಾಗಿ ಆರೋಪಿಸಲಾಗಿದೆ.
ಈ ವಿಚಾರವನ್ನು ಪ್ರಶ್ನೆ ಮಾಡಿದ ಪತ್ನಿಗೆ ದೈಹಿಕ ಹಿಂ*ಸೆ ನೀಡಲಾಗಿದ್ದು, ನಿರಂತರ ಕಿ*ರುಕುಳ ನೀಡಲಾದ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಬಗ್ಗೆ ಎರಡೂ ಮನೆಯವರೂ ರಾಜಿ ಪಂಚಾಯತಿ ನಡೆಸಿದ್ದರೂ ಸಂಸಾರ ಸರಿ ಹೋಗಿರಲಿಲ್ಲ. ಇದೀಗ ಹಣಕ್ಕಾಗಿ ಬೇಡಿಕೆ ಇಟ್ಟು ತಂದೆಯನ್ನು ಮನೆಗೆ ಕರೆಸಿ ಅವರ ಸಮ್ಮುಖದಲ್ಲಿ ಮೂರ ಬಾರಿ ತಲಾಕ್ ಹೇಳಿ ತವರು ಮನೆಗೆ ಕಳುಹಿಸಲಾಗಿದೆ ಎಂದು ನೊಂದ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಎಫ್‌ಐಆರ್ ದಾಖಲಿಸಿಕೊಂಡಿರುವ ಪಾಂಡೇಶ್ವರ ಮಹಿಳಾ ಠಾಣಾ ಪೊಲೀಸರು ತನಿಖೆ ಆರಂಭಿಸಿದ್ದಾರೆ. ತ್ರಿವಳಿ ತಲಾಕ್ ಕಾನೂನನ್ನು ಕೇಂದ್ರ ಸರ್ಕಾರ ರದ್ದು ಮಾಡಿರುವುದರಿಂದ ಈ ದೂರಿಗೆ ಪೊಲೀಸರು ಹೆಚ್ಚಿನ ಮಾನ್ಯತೆ ನೀಡಿ ವಿಚಾರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.