ಉಡುಪಿ: ಉಡುಪಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಬೂತ್ ಮಟ್ಟದ ಕಾರ್ಯಕರ್ತರನ್ನು ಸಂಘಟಿಸಲು ಆಯೋಜನೆ ಮಾಡಲಾಗಿದ್ದ ಸಭೆಯಲ್ಲಿ ಯುವ ರಾಜ್ಯಾಧ್ಯಕ್ಷ ಮೊಹಮ್ಮದ್ ನಲಪ್ಪಾಡ್ ಅವರು ತಮ್ಮ ಭಾಷಣವನ್ನು ಕೇವಲ ಖಾಲಿ ಕುರ್ಚಿಗಳಿಗೆ ಮಾಡಿದ್ದಾರೆ ಎನ್ನುವ ಟೀಕೆ ಎಲ್ಲೆಡೆ ವ್ಯಕ್ತವಾಗುತ್ತಿದೆ.
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕು ಬಂಡಿಮಠ ಬಳಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಬೆಂಗಳೂರಿನಿಂದ ಕಾರ್ಕಳಕ್ಕೆ ಆಗಮಿಸಿದ್ದ ಮಹಮ್ಮದ್ ನಲಪಾಡ್ ಭಾರೀ ಭಾಷಣ ಮಾಡಿದ್ದರು.
ಆದರೆ ಪಕ್ಷದ ಕಾರ್ಯಕರ್ತರ , ಸದಸ್ಯರ ಸಂಖ್ಯೆ ಅತ್ಯಂತ ವಿರಳವಾಗಿದ್ದು, ಭಾಷಣ ಕೇಳುವವರು ಸೀಮಿತ ಸಂಖ್ಯೆಯಲ್ಲಿದ್ದರು. ಹೀಗಿದ್ದರೂ ನಲಪ್ಪಾಡ್ ತಮ್ಮ ಭಾಷಣ ಮಾಡಿದ್ದಾರೆ.
ಸದ್ಯ ಈ ವಿಡಿಯೋ ಕರಾವಳಿಯಾದ್ಯಂತ ಭಾರಿ ವೈರಲ್ ಆಗಿದೆ. ಇನ್ನು ತಮ್ಮ ಭಾಷಣದಲ್ಲಿ ರಾಹುಲ್ ಗಾಂಧಿ ಅವರ ಪಾದಯಾತ್ರೆಯನ್ನು ನಲಪ್ಪಾಡ್ ಶ್ಲಾಘಿಸಿದರು.
ರಾಹುಲ್ ಗಾಂಧಿಯವರು ಕೇವಲ ತಮಗೋಸ್ಕರವಲ್ಲದೇ, ದೇಶಕ್ಕಾಗಿ ತಮ್ಮ ಜೀವವನ್ನು ಮುಂದಿಟ್ಟು ನಿರಂತರ ಪಾದಯಾತ್ರೆ ಮಾಡಿದ್ದಾರೆ ಎಂದರು.