ಉಡುಪಿ: ಪಡುಬಿದ್ರೆ ಎರ್ಮಾಳು ಮೂಲದ ವ್ಯಕ್ತಿಯೊಬ್ಬರು ಬಹರೈನ್‌ನಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ ಘಟನೆ ಭಾನುವಾರ ನಡೆದಿದೆ.
ದಿ.ಕೊರಗಪ್ಪ ಪುತ್ರನ್ ಹಾಗೂ ದಿ.ಆನಂದಿ ಪುತ್ರನ್ ದಂಪತಿ ಪುತ್ರ ಎರ್ಮಾಳು ತೆಂಕ ಚಂದ್ರದ ತೀರ್ಥ ಕೆ. ಸುವರ್ಣ(63) ಮೃತ ವ್ಯಕ್ತಿ.
ಘಟನೆ ವಿವರ
35 ವರ್ಷಗಳಿಂದ ಅವರು ಬಹರೈನ್‌ನಲ್ಲಿ ಉದ್ಯೋಗದಲ್ಲಿದ್ದರು. ಭಾನುವಾರ ರಾತ್ರಿ ಹೃದಯಾಘಾತದಿಂದ ನಿಧನ ಹೊಂದಿದರು. ಅತ್ಯುತ್ತಮ ಕ್ರೀಡಾಪಟುವಾಗಿದ್ದ ತೀರ್ಥ ಕೆ. ಸುವರ್ಣ ಅವರು ಎರ್ಮಾಳು ತೆಂಕ ಯುವಕ ಮಂಡಲದ ಸದಸ್ಯರಾಗಿದ್ದರು.
ಮೊಗವೀರ ಬಹ್ರೈನ್ ಸಂಸ್ಥೆಯ ಸ್ಥಾಪಕ ಸದಸ್ಯರಾಗಿ, ಉಪಾಧ್ಯಕ್ಷರಾಗಿ, ಕನ್ನಡ ಸಂಘದ ಸದಸ್ಯರಾಗಿ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು.
ಇವರ ಪಾರ್ಥಿವ ಶರೀರ ಎರ್ಮಾಳಿಗೆ ತರುವ ಪ್ರಕ್ರಿಯೆ ಮುಂದುವರಿದಿದ್ದು, ಇಂದು ರಾತ್ರಿ ಬರುವ ನಿರೀಕ್ಷೆ ಇದೆ.
ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.