Friday, May 27, 2022

ಪೋಪ್ ಭೇಟಿಯಾದ ನರೇಂದ್ರ ಮೋದಿ: ಭಾರತಕ್ಕೆ ಆಹ್ವಾನ

ವ್ಯಾಟಿಕನ್: ರೋಮ್​ ಪ್ರವಾಸದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ವ್ಯಾಟಿಕನ್ ನಗರಕ್ಕೆ ತೆರಳಿ, ಅಲ್ಲಿ ಕ್ರೈಸ್ತರ ಪರಮೋಚ್ಛ ಧರ್ಮಗುರು ಪೋಪ್​ ಫ್ರಾನ್ಸಿಸ್​​ರನ್ನು ಭೇಟಿಯಾದರು. ಹಾಗೇ, ಭಾರತಕ್ಕೆ ಬರುವಂತೆ ಅವರಿಗೆ ಆಮಂತ್ರಣ ನೀಡಿದರು.

ಇವರಿಬ್ಬರ ಮಧ್ಯೆ ಸುಮಾರು 1 ತಾಸು ಚರ್ಚೆ ನಡೆದಿದೆ. 1999ರಲ್ಲಿ ಅಟಲ್​ ಬಿಹಾರಿ ವಾಜಪೇಯಿ ಅವರು ಪ್ರಧಾನಮಂತ್ರಿಯಾಗಿದ್ದಾಗ ಅಂದಿನ ಪೋಪ್​ ಜಾನ್​ ಪೌಲ್​ II ಭೇಟಿ ನೀಡಿದ್ದರು. ಅದಾದ ಮೇಲೆ ಪೋಪ್​ ಭೇಟಿ ಈಗಲೇ ಆಗಿದೆ.

ಹಾಗೇ, ಪ್ರಧಾನಿ ಮೋದಿ ಮತ್ತು ಪೋಪ್​ ಫ್ರಾನ್ಸಿಸ್​​ರ ಮೊದಲ ಭೇಟಿಯಾಗಿದೆ. ಬಳಿಕ ಟ್ವೀಟ್​ ಮಾಡಿರುವ ಪ್ರಧಾನಿ ಮೋದಿ ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದಾರೆ.

ನಾನಿಂದು ಪೋಪ್ ಫ್ರಾನ್ಸಿಸ್​​​ ಅವರನ್ನು ಇಂದು ಭೇಟಿಯಾಗಿ, ವಿವಿಧ ವಿಷಯಗಳನ್ನು ಚರ್ಚಿಸುವ ಅವಕಾಶ ಸಿಕ್ಕಿತು ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here

Hot Topics