Tuesday, October 26, 2021

ವಿಡಿಯೋ ಕಾಲ್‌ನಲ್ಲಿ ನಗ್ನವಾಗಿ ಪೋಸ್‌ ನೀಡುವಂತೆ ಹೇಳಿದರು: ಸಾಗರಿಕಾ ಶೋನಾ

ಮುಂಬೈ: ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್‌ ಕುಂದ್ರಾ ಬಂಧನ ಬೆನ್ನಲ್ಲೇ ಅವರ ಸಂಸ್ಥೆಯ ವೆಬ್‌ ಸಿರೀಸ್‌ ನಿರ್ಮಾಣ ಸಂಬಂಧಿಸಿ ಆನ್‌ಲೈನ್‌ನಲ್ಲಿ ನಗ್ನವಾಗಿ ಆಡಿಷನ್‌ ಕೊಡಬೇಕು ಎಂದು ಹೇಳಿದ್ದರು’ ಎಂದು ರೂಪದರ್ಶಿ ಸಾಗರಿಕಾ ಶೋನಾ ಆರೋಪಿಸಿದ್ದಾರೆ.


‘ಇಲ್ಲಿ ನಟಿಸಿದರೆ ಬಹಳ ಉನ್ನತಮಟ್ಟಕ್ಕೆ ಏರಬಹುದು ಎಂಬ ಭರವಸೆಯನ್ನೂ ಉಮೇಶ್‌ ಕಾಮತ್‌ (ರಾಜ್‌ ಕುಂದ್ರಾ ಅವರ ಸಹಾಯಕ) ಅವರು ನೀಡಿದ್ದರು. ಲಾಕ್‌ಡೌನ್‌ ಇದ್ದ ಕಾರಣ ಆಡಿಷನ್‌ಗೆ ಹೋಗಲಾಗುತ್ತಿರಲಿಲ್ಲ. ಹಾಗಾಗಿ ವಿಡಿಯೋ ಕಾಲ್‌ನಲ್ಲಿ ಸಂದರ್ಶನ ಕೊಡಲು ಎಂದು ಹೇಳಿದರು. ವಿಡಿಯೋ ಕಾಲ್‌ನಲ್ಲಿ ಸೇರಿದಾಗ ನಾನು ನಗ್ನವಾಗಿ ಪೋಸ್‌ ನೀಡುವಂತೆ ಹೇಳಿದರು. ನನಗೆ ಆಘಾತವಾಯಿತು. ನಾನು ನಿರಾಕರಿಸಿದೆ. ವಿಡಿಯೋ ಕಾಲ್‌ನಲ್ಲಿ ಮೂವರು ಇದ್ದರು. ಅವರ ಪೈಕಿ ಮುಖ ಮುಚ್ಚಿಕೊಂಡಿದ್ದ ಒಬ್ಬರು ರಾಜ್‌ ಕುಂದ್ರಾ ಅವರೇ ಇದ್ದಿರಬೇಕು. ಏಕೆಂದರೆ ಉಮೇಶ್‌ ಕಾಮತ್‌ ಅವರು ಈ ಮುಖ ಮುಚ್ಚಿಕೊಂಡಿದ್ದ ವ್ಯಕ್ತಿಯನ್ನು ರಾಜ್‌ ಕುಂದ್ರಾ ಎಂದು ಹೇಳಿ ಕರೆಯುತ್ತಿದ್ದರು. ಒಂದು ವೇಳೆ ಅವರು ಈ ದಂಧೆಯಲ್ಲಿ ತೊಡಗಿಸಿಕೊಂಡಿರುವುದೇ ನಿಜವಾದರೆ ಅವರನ್ನು ಬಂಧಿಸಿ ವಿಚಾರಣೆ ಮಾಡಬೇಕು. ಇದರಿಂದ ಎಷ್ಟೋ ಜನರ ಬದುಕು ಹಾಳಾಗಿದೆ’ ಎಂದು ಸಾಗರಿಕಾ ಹೇಳಿದ್ದಾರೆ.

Hot Topics

ಸಾಲದ ಹೊರೆ ತಾಳಲಾರದೆ ವೀಡಿಯೋ ಮೂಲಕ ಗುಡ್​ಬೈ ಹೇಳಿ ಶಿಕ್ಷಕ ದಂಪತಿ ಆತ್ಮಹತ್ಯೆ

ವಿಜಯವಾಡ: ಶಾಲೆ ನಡೆಸುತ್ತಿದ್ದ ಶಿಕ್ಷಕ ದಂಪತಿ ಸಾಲದ ಹೊರೆ ತಡೆಯಲಾರದೇ ವಿಷಸೇವಿಸಿ ಆತ್ಮಹತ್ಯೆ ಹಾದಿ ಹಿಡಿರುವ ದಾರುಣ ಘಟನೆ ಆಂಧ್ರ ಪ್ರದೇಶದ ಕರ್ನೂಲ್​ ಜಿಲ್ಲೆಯಲ್ಲಿ ನಡೆದಿದೆ. ಸಾವಿಗೂ ಮುನ್ನ ಶಿಕ್ಷಕ ದಂಪತಿ ತಮ್ಮ...

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...