Monday, May 23, 2022

‘ಶಿರಾಡಿ ಘಾಟಿ ರಸ್ತೆ 6 ತಿಂಗಳು ಮುಚ್ಚಿ ವಿಶ್ವದಾಖಲೆ ಮಾಡಲು ಹೊರಟಿದೆ ಬಿಜೆಪಿ’

ಮಂಗಳೂರು: ಮಂಗಳೂರು-ಬೆಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಶಿರಾಡಿ ಘಾಟಿಯನ್ನು 6 ತಿಂಗಳು ಬಂದ್ ಮಾಡಲು ಹೋಗಿ ಕೇಂದ್ರ ಬಿಜೆಪಿ ಸರ್ಕಾರ ವಿಶ್ವದಾಖಲೆ ನಿರ್ಮಿಸಲು ಹೊರಟಿದೆ ಎಂದು ವಿಧಾನಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ವ್ಯಂಗ್ಯವಾಡಿದ್ದಾರೆ.

ಈ ಹಿಂದೆಯೂ ಎರಡು ಬಾರಿ ಶಿರಾಡಿಯನ್ನು ಮುಚ್ಚಲಾಗಿತ್ತು‌. ಎಂಆರ್​​ಪಿಎಲ್, ಎನ್ಎಂಪಿಟಿ ಬಂದರು ಇರುವ ಮಂಗಳೂರಿನಿಂದ ರಾಜ್ಯ ರಾಜಧಾನಿಯನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯನ್ನು ಮುಚ್ಚಿದರೆ ಆರ್ಥಿಕ ವಹಿವಾಟಿನ ಮೇಲೆ ಹೊಡೆತ ಬೀಳಲಿದೆ. ಜನಸಾಮಾನ್ಯರು ಇದರಿಂದಾಗಿ ಸಂಕಷ್ಟ ಎದುರಿಸಲಿದ್ದಾರೆ. ಆರು ತಿಂಗಳು ಮುಚ್ಚುವುದರಿಂದ ಸಮಸ್ಯೆಯಾಗಲಿದೆ ಎಂದರು.
ಆದ್ದರಿಂದ ಕಡಿಮೆ ಅವಧಿಯಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ. ಇದನ್ನು ಸಾಧಿಸಲು ಆಧುನಿಕ ಯಂತ್ರೋಪಕರಣಗಳು, ತಂತ್ರಜ್ಞಾನಗಳು ಮತ್ತು ಸಾಮಗ್ರಿಗಳನ್ನು ಬಳಸಿಕೊಂಡು ರಸ್ತೆ ನಿರ್ಮಿಸಲು, ಏಕಕಾಲದಲ್ಲಿ ಅನೇಕ ಹಂತಗಳಲ್ಲಿ ಕೆಲಸವನ್ನು ಪ್ರಾರಂಭಿಸಲು ಮತ್ತು ಸಾಮಗ್ರಿಗಳು ಮತ್ತು ಕಾರ್ಮಿಕರಿಗೆ ಸಾಕಷ್ಟು ವ್ಯವಸ್ಥೆಗಳನ್ನು ಮಾಡಲು ತಜ್ಞರ ಸಹಾಯದಿಂದ ಕಾರ್ಯತಂತ್ರಗಳನ್ನು ಕ್ರಮಬದ್ಧವಾಗಿ ಯೋಜಿಸಲು ಸಲಹೆ ನೀಡಿದರು.

ಹಾಸನ ಜಿಲ್ಲೆಯಲ್ಲಿ 2006ರಲ್ಲಿ ಶ್ರವಣಬೆಳಗೊಳ ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ 100 ಕಿ.ಮೀ ರಸ್ತೆ ಕಾಮಗಾರಿ ಕೇವಲ 90 ದಿನದಲ್ಲಿ ನಡೆದಿದೆ ಎಂದು ಉದಾಹರಣೆ ನೀಡಿದರು. ಅತಿವೇಗದ ರಸ್ತೆ ನಿರ್ಮಾಣದಲ್ಲಿ ಭಾರತ ವಿಶ್ವ ದಾಖಲೆ ಹೊಂದಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿಕೆ ನೀಡಿರುವ ಮಾಧ್ಯಮ ವರದಿಯನ್ನೂ ಅವರು  ನೀಡಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಶಿರಾಡಿ ಘಾಟ್ ಅನ್ನು 6 ತಿಂಗಳ ಕಾಲ ಮುಚ್ಚುವ ಪ್ರಸ್ತಾವವನ್ನು ಮುಖ್ಯಮಂತ್ರಿಗಳು ಮರುಪರಿಶೀಲಿಸುತ್ತಾರೆ ಎಂಬ ಭರವಸೆ ನನಗಿದೆ ಎಂದರು.

LEAVE A REPLY

Please enter your comment!
Please enter your name here

Hot Topics

ಬಂಟ್ವಾಳ: ಅಡ್ಡಾದಿಡ್ಡಿ ಕಾರು ಚಾಲನೆ-ಚಾಲಕನನ್ನು ಪೊಲೀಸರಿಗೊಪ್ಪಿಸಿದ ಸಾರ್ವಜನಿಕರು

ಬಂಟ್ವಾಳ: ಮಹಿಳೆಯರನ್ನು ಕಾರಿನಲ್ಲಿ ಕರೆದುಕೊಂಡು ಹೋಗುವ ಸಂದರ್ಭ ಚಾಲಕ ಅಡ್ಡಾದಿಡ್ಡಿ ಚಲಾಯಿಸಿದ ಪರಿಣಾಮ ಕಾರಿನಲ್ಲಿದ್ದ ಪ್ರಯಾಣಿಕರು ಬೊಬ್ಬೆ ಹಾಕಿದ್ದರಿಂದ ಕಾರು ನಿಲ್ಲಿಸಿ ಚಾಲಕನನ್ನು ಪೊಲೀಸರಿಗೆ ಒಪ್ಪಿಸಿದ ಘಟನೆ ಬಂಟ್ವಾಳ ತಾಲೂಕಿನ ಸಾಲೆತ್ತೂರು ಸಮೀಪ...

ಭಾರತ ಸೇರಿದಂತೆ 15 ದೇಶಗಳಿಗೆ ಪ್ರಯಾಣ ನಿರ್ಬಂಧ ಹೇರಿದ ಸೌದಿ ಅರೇಬಿಯಾ

ಜೆದ್ದಾ: ಸೌದಿ ಅರೇಬಿಯಾದಲ್ಲಿ ಕಳೆದ ಕೆಲವು ವಾರಗಳಿಂದ ಕೋವಿಡ್ ಸೋಂಕು ಮತ್ತೆ ಏರಿಕೆ ಕಂಡುಬಂದಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ತನ್ನ ದೇಶದ ನಾಗರಿಕರು ಭಾರತ ಸೇರಿದಂತೆ ಹದಿನಾರು ದೇಶಗಳಿಗೆ ಪ್ರಯಾಣಿಸುವುದನ್ನು ನಿಷೇಧಿಸಿದೆ.ಲೆಬನಾನ್, ಸಿರಿಯಾ, ಟರ್ಕಿ,...

ಆಟೋ ರಿಕ್ಷಾ- ಪಿಕಪ್ ಢಿಕ್ಕಿ: ಓರ್ವನಿಗೆ ಗಾಯ

ಬಂಟ್ವಾಳ: ಆಟೋ ರಿಕ್ಷಾ ಮತ್ತು ಪಿಕಪ್ ವಾಹನದ ನಡುವೆ ಡಿಕ್ಕಿ ಸಂಭವಿಸಿದ ಘಟನೆ ಬಂಟ್ವಾಳ ತಾಲೂಕಿನ ವಿಟ್ಲದ ಕನ್ಯಾನ ಎಂಬಲ್ಲಿ ನಿನ್ನೆ ನಡೆದಿದೆ.ಅಪಘಾತದಿಂದಾಗಿ ಆಟೋ ಚಾಲಕ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು...