ಘನತ್ಯಾಜ್ಯ ನಿರ್ವಹಣೆ ಕುರಿತು ಉಸ್ತುವಾರಿ ಕಾರ್ಯದರ್ಶಿಗಳೊಂದಿಗೆ ಶಾಸಕರ ಸಭೆ..!
ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಉತ್ಪಾದನೆಯಾಗುತ್ತಿರುವ ಘನತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾದ ಪೊನ್ನುರಾಜ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಸಭೆ ನಡೆಯಿತು.
ಘನತ್ಯಾಜ್ಯವನ್ನು ಬಯೋ CNG ಮುಖಾಂತರ ವಿಲೇವಾರಿ ಮಾಡುವ ಕುರಿತು ತಾಂತ್ರಿಕ ಸಲಹೆಗಾರರು, ಅಧಿಕಾರಿಗಳು ಹಾಗೂ ಮನಪಾ ಸದಸ್ಯರೊಂದಿಗೆ ಚರ್ಚಿಸಲಾಯಿತು.
RETAP ಸಂಸ್ಥೆಗೆ ಮನಪಾ ವ್ಯಾಪ್ತಿಯ ಬಯೋ CNG ಘನತ್ಯಾಜ್ಯ ನಿರ್ವಹಣೆಯ ಬಗ್ಗೆ ವಿವರವಾದ ಮಾಹಿತಿ ಸಲ್ಲಿಸಲು ಸೂಚಿಸಲಾಯಿತು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ರಾಜೇಂದ್ರ, ಶಾಸಕರಾದ ಡಾ.ವೈ ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ಮೇಯರ್ ದಿವಾಕರ ಪಾಂಡೇಶ್ವರ, ಜಿಲ್ಲಾ ಪಂಚಾಯತ್ ಸಿಇಒ ಸೆಲ್ವಮಣಿ, ಪಾಲಿಕೆ ಆಯುಕ್ತ ಅಕ್ಷಯ್, , ಮನಪಾ ಆಡಳಿತ ಪಕ್ಷದ ಸಚೇತಕರಾದ ಪ್ರೇಮಾನಂದ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಪೂರ್ಣಿಮ, ಅಧಿಕಾರಿಗಳು ಉಪಸ್ಥಿತರಿದ್ದರು.
ಮಂಗಳೂರು/ಬೆಂಗಳೂರು: 25 ವರ್ಷದ ಯುವತಿಯೊಬ್ಬಳು ದೈ*ಹಿಕ ಸಂಪರ್ಕಕ್ಕೆ ಪೀಡಿಸಿದಕ್ಕೆ ಪೆಟ್ರೋಲ್ ಸುರಿದು, ಬೆಂ*ಕಿ ಹಚ್ಚಿಕೊಂಡು ಆ*ತ್ಮಹ*ತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಹೆಚ್‌ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.
ಆರೋಪಿ ಸಂಬಂಧದಲ್ಲಿ ಯುವತಿಗೆ ಮಾವನಾಗಬೇಕು. ಮೊದಲು ಇಬ್ಬರು ಚೆನ್ನಾಗಿದ್ದು, ಟ್ರಿಪ್ ಹೋಗುತ್ತಿದ್ದರು. ಇತ್ತೀಚೆಗೆ ಆರೋಪಿ ದೈ*ಹಿಕ ಸಂಪರ್ಕಕ್ಕೆ ಪೀಡಿಸುತ್ತಿದ್ದ. ನಗರದ ಹೋಟೆಲ್ ವೊಂದರಲ್ಲಿ ರೂಮ್ ಬುಕ್ ಮಾಡಿದ್ದ ಯುವತಿಯನ್ನು ಹೋಟೆಲ್ ರೂಮ್ ಗೆ ಬರುವಂತೆ ಕರೆದಿದ್ದಾನೆ. ಬರದಿದ್ದರೆ ಫೋಟೋ, ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದ. ಇದರಿಂದ ನೊಂದ ಯುವತಿ ಪೆ*ಟ್ರೋಲ್ ಸುರಿ*ದುಕೊಂಡು ಬೆಂ*ಕಿ ಹಚ್ಚಿಕೊಂಡು ಆ*ತ್ಮಹ*ತ್ಯೆ ಮಾಡಿಕೊಂಡಿದ್ದಾಳೆ.
ಮಂಗಳೂರು/ಮುಂಬೈ : ಸೈಫ್ ಅಲಿ ಖಾನ್ ಮೇಲೆ ನಡೆದ ಚೂ*ರಿ ಇ*ರಿತ ಪ್ರಕರಣ ಇಡೀ ಬಾಲಿವುಡನ್ನೇ ಬೆಚ್ಚಿ ಬೀಳಿಸಿದೆ. ಆರು ಕಡೆಗಳಿಗೆ ಚೂ*ರಿ ಇರಿ*ತಕ್ಕೊಳಗಾಗಿ ತೀ*ವ್ರ ರ*ಕ್ತಸ್ರಾವವಾಗಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಪ್ರಾ*ಣಾಪಾಯದಿಂದ ಅವರು ಪಾರಾಗಿದ್ದಾರೆ. ಘಟನೆ ಸಂಬಂಧ ಓರ್ವನನ್ನು ಬಂಧಿಸಲಾಗಿದೆ ಎಂಬ ಮಾಹಿತಿ ಇದೆ.
ಆಟೋದಲ್ಲಿ ಆಸ್ಪತ್ರೆಗೆ ಹೋದ್ರಾ ಸೈಫ್?
ಸದ್ಯ ಈ ಪ್ರಕರಣ ಹಲವು ಅನುಮಾನ ಹುಟ್ಟು ಹಾಕಿದೆ. ಏನೇನೋ ವದಂತಿಗಳು ಹರಿದಾಡುತ್ತಿವೆ. ಈ ನಡುವೆ ಗಮನಕ್ಕೆ ಬಂದ ಮತ್ತೊಂದು ವಿಚಾರವಂದ್ರೆ ಅದು ಸೈಫ್ ಆಸ್ಪತ್ರೆ ಸೇರಿದ್ದು ಹೇಗೆ ಎಂಬುದು.
ಹೇಳಿ ಕೇಳಿ ಸಿನಿಮಾ ನಟ. ಅದರಲ್ಲೂ ಶ್ರೀಮಂತ ಮನೆತನದ ನಟ. ಭವ್ಯವಾದ ಮನೆ, ಆಳು ಕಾಳು ಇದ್ದಾರೆ. ಸಿನಿಮಾ ಮಂದಿಗೆ ಕಾರಿನ ಕ್ರೇಜ್ ಇದ್ದೇ ಇದೆ. ಸೈಫ್ ಬಳಿಯೂ ಕೋಟಿಗಟ್ಟಲೆ ಬೆಲೆ ಬಾಳುವ ಕಾರುಗಳಿವೆ. ಆದ್ರೆ, ಹ*ಲ್ಲೆಗೊಳಗಾದ ವೇಳೆ ಅವರು ಆಟೋದಲ್ಲಿ ಆಸ್ಪತ್ರೆಗೆ ಹೋಗಿದ್ದಾರೆ ಎನ್ನಲಾಗಿದೆ.
ಸದ್ಯ ವೀಡಿಯೋವೊಂದು ವೈರಲ್ ಆಗಿದ್ದು, ಅದರಲ್ಲಿ ಆಟೋ ಹಾಗೂ ಅದರ ಪಕ್ಕದಲ್ಲಿ ಕರೀನಾ ಕಪೂರ್ ನಿಂತಿರೋದನ್ನು ಕಾಣಬಹುದಾಗಿದೆ. ವರದಿಗಳ ಪ್ರಕಾರ, ಸೈಫ್ ಅಲಿ ಖಾನ್ ದಾ*ಳಿಗೊಳಗಾದಾಗ ಕಾರು ರೆಡಿ ಇರಲಿಲ್ಲ. ತೀವ್ರ ರ*ಕ್ತಸ್ರಾವದಿಂದ ಪರದಾಡುತ್ತಿದ್ದಾಗ ಆಟೋ ಹಿಡಿದು ಆಸ್ಪತ್ರೆಗೆ ಹೋಗಿದ್ದಾರೆ ಎನ್ನಲಾಗಿದೆ.
ಸೈಫ್ ಹಿರಿಯ ಪುತ್ರ ಇಬ್ರಾಹಿಂ ಸೈಫ್ ಆಸ್ಪತ್ರೆಗೆ ದಾಖಲಿಸಲು ನೆರವಾಗಿದ್ದು, ಕಾರಿನಲ್ಲಿ ಹೋದ್ರೆ ಹೆಚ್ಚು ಸಮಯವಾಗುತ್ತೆ ಎಂಬ ಕಾರಣಕ್ಕೆ ಈ ನಿರ್ಧಾರ ತಳೆಯಲಾಗಿತ್ತು ಎಂದೂ ಹೇಳಲಾಗಿದೆ.
ಸೈಫ್ ಔಟ್ ಆಫ್ ಡೇಂ*ಜರ್ :
ಸದ್ಯ ಲೀಲಾವತಿ ಆಸ್ಪತ್ರೆಯಲ್ಲಿ ಸೈಫ್ ಚೇತರಿಸಿಕೊಳ್ಳುತ್ತಿದ್ದಾರೆ. ಖಾನ್ ಅವರ ದೇಹಕ್ಕೆ 6 ಬಾರಿ ಇರಿಯಲಾಗಿದೆ. ಎರಡು ಕಡೆ ಆಳವಾದ ಗಾ*ಯಗಳಾಗಿದ್ದು, ತುರ್ತು ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ಜೀ*ವಕ್ಕೆ ಯಾವುದೇ ಅ*ಪಾಯವಿಲ್ಲ.
ಬೆನ್ನು ಮೂಳೆಯಿಂದ ಚಾ*ಕುವಿನ ತುದಿಯನ್ನು ಹೊರತೆಗೆಯಲಾಗಿದೆ. ಖಾನ್ ಆರೋಗ್ಯ ಸ್ಥಿರವಾಗಿದೆ. ನಾಳೆ ಬೆಳಿಗ್ಗೆ ಐಸಿಯುವಿನಿಂದ ಹೊರತರುತ್ತೇವೆ ಎಂದು ಆಸ್ಪತ್ರೆಯ ವೈದ್ಯ ನಿತಿನ್ ಡಾಂಗೆ ಮಾಹಿತಿ ನೀಡಿದ್ದಾರೆ.
ಮಂಗಳೂರು/ಚಿಕ್ಕಮಗಳೂರು: ಮಗು ಹುಟ್ಟಿದ ಎರಡನೇ ದಿನವೇ ಹೆತ್ತ ತಾಯಿ ಕಾಫಿ ತೋಟದಲ್ಲಿ ಕಂದಮ್ಮನನ್ನು ಬಿಟ್ಟು ಹೋಗಿರುವ ಘಟನೆ ಚಿಕ್ಕಮಗಳೂರು ತಾಲ್ಲೂಕಿನ ಅಲ್ಲಂಪುರ ಗ್ರಾಮದಲ್ಲಿ ನಡೆದಿದೆ.
ಮನೆಯ ಪಕ್ಕದಲ್ಲಿರುವ ಕಾಫಿ ತೋಟದಲ್ಲಿ ಚಂದ್ರಮ್ಮ ಎಂಬುವವರು ಹುಟ್ಟಿದ ಎರಡೇ ದಿನಕ್ಕೆ ಪುಟ್ಟ ಪಾಪುವನ್ನು ಬಿಟ್ಟು ಹೋಗಿದ್ದು, ಇಂದು (ಜ.16) ಬೆಳಗ್ಗಿನ ಜಾವ 6 ಗಂಟೆಯ ಸಮಯದಲ್ಲಿ ಸ್ಥಳೀಯ ಮಹಿಳೆಯೊಬ್ಬಳಿಗೆ ಮಗು ಅಳುವ ಸದ್ದು ಕೇಳಿಸಿದೆ. ಗಂಟೆಗಳು ಕಳೆದರೂ ಕೂಡ ಮಗುವಿನ ಅಳು ನಿಲ್ಲದಿದ್ದಾಗ ತೋಟಕ್ಕೆ ಬಂದು ನೋಡಲು ಮೈ ಮೇಲೆ ಬಟ್ಟೆಯೇ ಇಲ್ಲದೆ ತೋಟದ ಒಂದು ಮೂಲೆಯಲ್ಲಿ ಅಳುತ್ತಿರುವ ಮಗು ಕಂಡು ಬಂದಿದೆ.
ಮಗುವನ್ನು ಕರೆತಂದು ತಮ್ಮ ಮನೆಯಲ್ಲಿ ಹಾಲು ಕುಡಿಸಿ ಆರೈಕೆ ಮಾಡಿದ್ದಾರೆ. ನಂತರ ಗ್ರಾಮದ ಆಯಾಗೆ ವಿಷಯ ತಿಳಿಸಿ ಸ್ಥಳಕ್ಕೆ ಡಾಕ್ಟರನ್ನು ಕರೆಸಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಅಧಿಕಾರಿಗಳು ಮಗುವನ್ನು ತಮ್ಮ ಜೊತೆ ಕರೆದುಕೊಂಡು ಹೋಗಿದ್ದಾರೆ.