Home ಪ್ರಮುಖ ಸುದ್ದಿ ನಾಳೆ ಕರ್ಫ್ಯೂ ಸಡಿಲಿಸಿದಾಗ ಪಾಲಿಸಬೇಕಾದ ಅಗತ್ಯಗಳ ಬಗ್ಗೆ ಶಾಸಕ ಕಾಮತ್ ಮನವಿ

ನಾಳೆ ಕರ್ಫ್ಯೂ ಸಡಿಲಿಸಿದಾಗ ಪಾಲಿಸಬೇಕಾದ ಅಗತ್ಯಗಳ ಬಗ್ಗೆ ಶಾಸಕ ಕಾಮತ್ ಮನವಿ

ನಾಳೆ ಕರ್ಫ್ಯೂ ಸಡಿಲಿಸಿದಾಗ ಪಾಲಿಸಬೇಕಾದ ಅಗತ್ಯಗಳ ಬಗ್ಗೆ ಶಾಸಕ ಕಾಮತ್ ಮನವಿ

ಮಂಗಳೂರು: ಕರಾವಳಿ ಮೇಲೂ ಕೊರೋನಾ ಕರಿಛಾಯೆಯನ್ನು ಬೀರಿದ್ದು, 7 ಮಂದಿಯಲ್ಲಿ ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.

ಸಾವಿರಾರು ಮಂದಿಯನ್ನು ಕ್ಯಾರಂಟೈನ್‍ನಲ್ಲಿ ಇಡಲಾಗಿದೆ.

ಇನ್ನು ಗಡಿ ಜಿಲ್ಲೆ ಕಾಸರಗೋಡು, ಉಡುಪಿಯನ್ನೂ ಕೊರೋನಾ ಸೋಂಕು ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲಾದ್ಯಂತ 3 ದಿನಗಳಿಂದ ಸಂಪೂರ್ಣ ಲಾಕ್‍ಡೌನ್ ಆಚರಿಸಲಾಗಿದೆ.

ಇನ್ನು ಮಾರ್ಚ್ 31ರ ಮಂಗಳವಾರ, ಬೆಳಿಗ್ಗೆ 6 ಗಂಟೆಯಿಂದ 3 ಗಂಟೆವರೆಗೆ ಲಾಕ್ಡೌನ್ ಸಡಿಲತೆ ಇರಲಿದ್ದು, ಜನರು ಸಹಕರಿಸಬೇಕು ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಮನವಿ ಮಾಡಿದ್ದಾರೆ.

ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು ಹೋಗಬೇಕು. ಅನಗತ್ಯವಾಗಿ ಮಾರ್ಕೆಟ್‍ಗಳಲ್ಲಿ ವಸ್ತಗಳನ್ನು ಸ್ಪರ್ಶಿಸಬಾರದು.

ಅಕ್ಕಿ, ಸಕ್ಕರೆ, ದಾಲ್, ಉಪ್ಪು, ಟೀ ಪೌಡರ್, ಬೇಳೆಕಾಳುಗಳು, ಬಟ್ಟೆ ಒಗೆಯುವ ಪುಡಿ, ಪಾತ್ರೆಗಳನ್ನು ತೊಳೆಯುವ ಪುಡಿ, ಆಲ್ ಔಟ್ , ಬಿಸ್ಕತ್ತುಗಳು, ಬ್ರೆಡ್, ಎಣ್ಣೆ, ಮೈದಾ ಮೊದಲಾದ ಅಗತ್ಯ ವಸ್ತುಗಳು ಲಭ್ಯವಿರುತ್ತದೆ.

ಶಾಪ್‍ಗಳಲ್ಲಿ ವ್ಯಕ್ತಿಯಿಂದ ವ್ಯಕ್ತಿಗೆ ಕನಿಷ್ಟ 2.5 ಮೀಟರ್ ಅಂತರ ಕಾಯ್ದುಕೊಳ್ಳಬೇಕು. ಮನೆಗೆ ತಲುಪಿದ ಮೇಲೆ ಕಡ್ಡಾಯವಾಗಿ ಸ್ನಾನ ಮಾಡಬೇಕು ಮತ್ತು ಬಟ್ಟೆಯನ್ನು ಬಿಸಿ ನೀರಿನಿಂದ ತೊಳೆಯಬೇಕು.

ಡೆಲಿವರಿ ವ್ಯವಸ್ಥೆಯಿದ್ದು, ಈಗಾಗಲೇ ಪಾಸ್ ನೀಡಲಾಗಿದೆ. ಹೊರಹೋಗುವಾಗ ಸ್ನೇಹಿತರು ಅಥವಾ ಯಾವುದೇ ಸಂಬಂಧಿಕರೊಂದಿಗೆ ಮಾತುಕತೆ ನಡೆಸಬಾರದು.

ಕೇವಲ ಹೋಗಿ, ಶಾಪ್ ಮಾಡಿ ಮತ್ತು ಮನೆಗೆ ಹಿಂತಿರುಗಿ. ಈ ನಿಯಮಗಳನ್ನು ಅನುಸರಿಸಿ ಮಂಗಳೂರಿಗರ ಆರೋಗ್ಯ ಕಾಪಾಡಲು ಎಲ್ಲರೂ ಸಹಕರಿಸಬೇಕು ಎಂದು ಶಾಸಕ ವೇದವ್ಯಾಸ್ ಕಾಮತ್ ವಿನಂತಿಸಿದ್ದಾರೆ.

video..

- Advertisment -

RECENT NEWS

ಮಂಗಳೂರು ಧರ್ಮಪ್ರಾಂತ್ಯದ ಚರ್ಚ್ ಗಳಲ್ಲಿ ಜೂ 13 ರಿಂದ ಪ್ರಾರ್ಥನೆಗೆ ಅವಕಾಶ

ಚರ್ಚ್ ಗಳಲ್ಲಿ ನಡೆಯುತ್ತಿದೆ ಭರದ ಸಿದ್ದತೆ ಮಂಗಳೂರು: ಮಂಗಳೂರು ಧರ್ಮಪ್ರಾಂತ್ಯದಲ್ಲಿ ಜೂ 13ರಿಂದ ಸರಕಾರದ ನಿಯಮಗಳನ್ನು ಪಾಲಿಸಿ ಚರ್ಚ್ ಗಳಲ್ಲಿ ಪ್ರಾರ್ಥನೆಗಳನ್ನು ಆರಂಭಿಸಲಾಗುವುದು ಎಂದು ಧರ್ಮಾಧ್ಯಕ್ಷರಾದ ಡಾ. ಪೀಟರ್ ಪಾವ್ಲ್ ಸಲ್ದಾನ್ಹಾ ತಿಳಿಸಿದ್ದಾರೆ. ಈ ಕುರಿತು...

ಜೂನ್ 8 ರಿಂದ ಮಸೀದಿಗಳಲ್ಲಿ ಪ್ರಾರ್ಥನೆಗೆ ಅವಕಾಶ….!!

 ಶೀತ, ಕೆಮ್ಮು ಇದ್ದವರಿಗೆ ನಮಾಝ್ ಗೆ ಪ್ರವೇಶ ನಿರಾಕರಣೆ ಮಂಗಳೂರು : ರಾಜ್ಯ ಸರಕಾರ ಜೂನ್‌ 8 ರಿಂದ ಧಾರ್ಮಿಕ ಕೇಂದ್ರಗಳನ್ನು ತೆರೆಯಲು ಅವಕಾಶ ನೀಡಿರುವ ಹಿನ್ನಲೆ ಜೂನ್ 8 ರಿಂದ ಮಸೀದಿಗಳಲ್ಲಿ...

ಜುಲೈವರೆಗೆ ಉಡುಪಿ ಕೃಷ್ಣನ ದರ್ಶನ ಭಾಗ್ಯ ಇಲ್ಲ

20 ರಿಂದ 30 ದಿನಗಳ ನಂತರ ಪರಿಸ್ಥಿತಿ ನೋಡಿ ಅವಕಾಶ ಉಡುಪಿ: ರಾಜ್ಯ ಸರಕಾರ ಈಗಾಗಲೇ ಜೂನ್ 8ರ ನಂತರ ಧಾರ್ಮಿಕ ಕೇಂದ್ರಗಳನ್ನು ತೆರೆಯಲು ಅವಕಾಶ ನೀಡಿದೆ. ಅದರಂತೆ ಈಗಾಗಲೇ ರಾಜ್ಯದ ಮುಜರಾಯಿ ಇಲಾಖೆ...

ಕೃಷ್ಣನಗರಿಯಲ್ಲಿ ನಿಲ್ಲದ ಕೊರೊನಾ ಪ್ರವಾಹ: ಇಂದು ಮತ್ತೆ 121 ಮಂದಿಗೆ ಪಾಸಿಟಿವ್..!

ಉಡುಪಿಗೆ ಕಂಟಕವಾದ ಮಹಾರಾಷ್ಟ್ರ: ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 889ಕ್ಕೆ ಏರಿಕೆ..! ಉಡುಪಿ: ಕೃಷ್ಣನಗರಿ ಉಡುಪಿಯಲ್ಲಿ ಹೆಮ್ಮಾರಿ ಕೊರೊನಾ ಪ್ರವಾಹ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ದಿನೇ ದಿನೇ ಕೋವಿಡ್-19 ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಇಂದು ಮತ್ತೆ 121...